• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಒಂದೇ ದಿನ ಮೆಗಾ ಲೋಕ ಅದಾಲತ್ ಮೂಲಕ 3.88 ಲಕ್ಷ ಕೇಸ್​ಗಳು ಇತ್ಯರ್ಥ; ನ್ಯಾ.ಅರವಿಂದ ಕುಮಾರ್

ಒಂದೇ ದಿನ ಮೆಗಾ ಲೋಕ ಅದಾಲತ್ ಮೂಲಕ 3.88 ಲಕ್ಷ ಕೇಸ್​ಗಳು ಇತ್ಯರ್ಥ; ನ್ಯಾ.ಅರವಿಂದ ಕುಮಾರ್

ಕರ್ನಾಟಕ ಹೈಕೋರ್ಟ್ (ಚಿತ್ರ ಕೃಪೆ- ಗೂಗಲ್)

ಕರ್ನಾಟಕ ಹೈಕೋರ್ಟ್ (ಚಿತ್ರ ಕೃಪೆ- ಗೂಗಲ್)

ಲೋಕ ಅದಾಲತ್ ಮೂಲಕ 1166 ವೈವಾಹಿಕ ಪ್ರಕರಣಗಳ ಇತ್ಯರ್ಥಗೊಂಡಿವೆ. ರಾಜಿ ಸಂಧಾನದ ಮೂಲಕ 74 ದಂಪತಿಗಳು ಪುನಃ ಒಂದಾಗಿವೆ. ವಿಚ್ಚೇದನ ಪಡೆದ ದಂಪತಿ ಲೋಕ ಅದಾಲತ್ ಸಲಹೆಯಂತೆ ಮರುವಿವಾಹ ಆಗಿದ್ದಾರೆ ಎಂದು ಮಾಹಿತಿ ನೀಡಿದರು.

  • Share this:

ಬೆಂಗಳೂರು: ಆಗಸ್ಟ್ 14ರಂದು ರಾಜ್ಯದಲ್ಲಿ ನಡೆದ ಮೆಗಾ ಅದಾಲತ್ ನಡೆಯಿತು. ಒಂದೇ ದಿನ ಲೋಕ ಅದಾಲತ್ ಮೂಲಕ 3.88 ಲಕ್ಷ ಕೇಸ್ ಗಳು ಇತ್ಯರ್ಥವಾಗಿವೆ. ಕ್ರಿಮಿನಲ್‌ ಕೇಸ್ ಗಳಲ್ಲಿ 25.75 ಕೋಟಿ ದಂಡ ವಸೂಲಿಯಾಗಿದೆ. ದಂಡ ವಸೂಲಿ ಸೇರಿ ಸರ್ಕಾರಕ್ಕೆ 177.94 ಕೋಟಿ ಉಳಿತಾಯವಾಗಿದೆ. ಚೇಕ್ ಬೌನ್ಸ್ ಕೇಸ್ ಗಳ ಇತ್ಯರ್ಥ ಸಂಬಂಧ ಸದ್ಯದಲ್ಲೆ ಮತ್ತೊಂದು ಲೋಕಾ ಅದಾಲತ್ ಗೆ ಚಿಂತನೆ ನಡೆಸಲಾಗಿದೆ. ಲೋಕಾ ಅದಾಲತ್ ಗೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಉತ್ತಮ‌ ಸ್ಪಂದನೆ ಸಿಗುವುದಕ್ಕೆ ಮಾಧ್ಯಮಗಳ ಸಹಕಾರ ದೊಡ್ಡದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಹೇಳಿದರು.


ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾ.ಅರವಿಂದ್ ಕುಮಾರ್ ಅವರು, ಲೋಕಾ ಅದಾಲತ್ ಮೂಲಕ 1166 ವೈವಾಹಿಕ ಪ್ರಕರಣಗಳ ಇತ್ಯರ್ಥಗೊಂಡಿವೆ. ರಾಜಿ ಸಂಧಾನದ ಮೂಲಕ 74 ದಂಪತಿಗಳು ಪುನಃ ಒಂದಾಗಿವೆ. ವಿಚ್ಚೇದನ ಪಡೆದ ದಂಪತಿ ಲೋಕ ಅದಾಲತ್ ಸಲಹೆಯಂತೆ ಮರುವಿವಾಹ ಆಗಿದ್ದಾರೆ. 2884 ಪಾಲುದಾರಿಕೆಯ ಪ್ರಕರಣ ಗಳು ಇತ್ಯರ್ಥಗೊಂಡಿವೆ. ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 72 ಲಕ್ಷ ಪರಿಹಾರ ನೀಡಲಾಗಿದೆ. ರಾಜಿ ಮೂಲಕ ವಿಮಾ ಕಂಪನಿ ಕೊಟ್ಟ ದೊಡ್ಡ ಮೊತ್ತ ಪರಿಹಾರ ಇದು. ಒಟ್ಟು 114 ವಾಣಿಜ್ಯ ಪ್ರಕರಣಗಳು ಇತ್ಯರ್ಥಗೊಂಡಿವೆ. ಮೆಗಾ ಲೋಕ್ ಅದಾಲತ್ ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.


ಇದನ್ನು ಓದಿ: ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಿ; ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು

First published: