• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • NCVT ITI Result 2021: ಫಲಿತಾಂಶಕ್ಕೆ ಲಿಂಕ್ ಇಲ್ಲಿದೆ, ಅಂಕಪಟ್ಟಿಯನ್ನು ಪಡೆಯುವುದು ಸುಲಭ

NCVT ITI Result 2021: ಫಲಿತಾಂಶಕ್ಕೆ ಲಿಂಕ್ ಇಲ್ಲಿದೆ, ಅಂಕಪಟ್ಟಿಯನ್ನು ಪಡೆಯುವುದು ಸುಲಭ

ಅಧಿಕೃತ ವೆಬ್​​ಸೈಟ್​

ಅಧಿಕೃತ ವೆಬ್​​ಸೈಟ್​

ಎಂಐಎಸ್‌ ಐಟಿಐ ಪರೀಕ್ಷೆ ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗುವ ಮೂಲಕ ಫಲಿತಾಂಶ ಚೆಕ್‌ ಮಾಡಬಹುದು.

  • Share this:

ನ್ಯಾಷನಲ್ ಕೌನ್ಸಿಲ್‌ ಆಫ್ ವೊಕೇಷನಲ್ ಟ್ರೈನಿಂಗ್, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌(ITI) ಫಲಿತಾಂಶ ಪ್ರಕಟಿಸಿದೆ. 4 ಸೆಮಿಸ್ಟರ್​ಗಳ ಫಲಿತಾಂಶವನ್ನು ತಮ್ಮ ಅಧಿಕೃತ ವೆಬ್​​ ಸೈಟ್​ನಲ್ಲಿ ಪ್ರಕಟಿಸಿದೆ. ಎಂಐಎಸ್‌ ಐಟಿಐ ಪರೀಕ್ಷೆ ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗುವ ಮೂಲಕ ಫಲಿತಾಂಶ ಚೆಕ್‌ ಮಾಡಬಹುದು.


NCVT ITI 2020 ಫಲಿತಾಂಶ ಚೆಕ್‌ ಮಾಡುವುದು ಹೇಗೆ?

ಅಭ್ಯರ್ಥಿಗಳು ತಮ್ಮ ಫಲಿತಾಂಶ ಚೆಕ್‌ ಮಾಡಲು ಮತ್ತು ಡೌನ್‌ಲೋಡ್ ಮಾಡಲು ಈ ಕೆಳಗಿನ ಸುಲಭ ಸ್ಟೆಪ್‌ಗಳನ್ನು ಫಾಲೋ ಮಾಡಿ.
1. ಎನ್‌ಸಿವಿಟಿ ಅಧಿಕೃತ ವೆಬ್‌ಸೈಟ್‌ ncvtmis.gov.in ಗೆ ಭೇಟಿ ನೀಡಿ.
2. ಹೋಮ್‌ಪೇಜ್‌ನಲ್ಲಿರುವ ಫಲಿತಾಂಶ ಸೆಕ್ಷನ್‌ ಮೇಲೆ ಕ್ಲಿಕ್ ಮಾಡಿ.
3. ನಂತರ ಅಭ್ಯರ್ಥಿಯು ತನ್ನ ರಾಜ್ಯಕ್ಕೆ ಸಂಬಂಧಿಸಿದ ಫಲಿತಾಂಶ ಲಿಂಕ್‌ ಮೇಲೆ ಕ್ಲಿಕ್ ಮಾಡಬೇಕು. ಹೊಸ ಪೇಜ್‌ ಓಪನ್‌ ಆಗುತ್ತದೆ.
4. ರಿಜಿಸ್ಟ್ರೇಷನ್‌ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ನೀಡಿ


'Submit' ಬಟನ್‌ ಮೇಲೆ ಕ್ಲಿಕ್ ಮಾಡಿ.
5. NCVT MIS ITI 2021 ಫಲಿತಾಂಶ ಪ್ರದರ್ಶನವಾಗುತ್ತದೆ. ಚೆಕ್‌ ಮಾಡಿಕೊಂಡು ಡೌನ್‌ಲೋಡ್‌ ಮಾಡಿಕೊಳ್ಳಿ.
6. ಮುಂದಿನ ಉಪಯೋಗಕ್ಕಾಗಿ ಪ್ರಿಂಟ್‌ ತೆಗೆದುಕೊಳ್ಳಿ.


ಇದನ್ನೂ ಓದಿ: Karnataka Rain: ಕೇರಳದಲ್ಲಿ ಜೂನ್ 3ಕ್ಕೆ ಮುಂಗಾರು ಪ್ರವೇಶ; ನಾಳೆಯಿಂದ ಕರ್ನಾಟಕದಲ್ಲಿ ಭಾರೀ ಮಳೆ


ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,52,734 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,80,47,534ಕ್ಕೆ ಏರಿಕೆ ಆಗಿದೆ.‌ ಶುಕ್ರವಾರ 3,128 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,29,100ಕ್ಕೆ ಏರಿಕೆ ಆಗಿದೆ. ದೇಶದಲ್ಲಿ ಇನ್ನೂ 20,26,092 ಆಕ್ಟಿವ್ ಕೇಸುಗಳಿವೆ. ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 21 ಕೋಟಿ ದಾಟಿದೆ.‌ ಈವರೆಗೆ 21,31,54,129 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ಈವರೆಗೆ 2,56,92,342 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,38,022 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸತತವಾಗಿ 18ನೇ ದಿನವೂ ದೈನಂದಿನ ಹೊಸ ಪ್ರಕರಣಗಳಿಗಿಂತ ಗುಣ ಆಗುವವರ ಸಂಖ್ಯೆ ಹೆಚ್ಚಾಗಿದೆ. ಸದ್ಯದ ಪಾಸಿಟಿವಿಟಿ ದರ ಶೇಖಡಾ 91.60ರಷ್ಟಾಗಿದೆ. ಸಾಪ್ತಾಹಿಕ ಪಾಸಿಟಿವಿಟಿ ದರ ಪ್ರಸ್ತುತ 9.04ರಷ್ಟಾಗಿದೆ‌.‌ ದೈನಂದಿನ ಪಾಸಿಟಿವಿಟಿ ದರ 9.07ರಷ್ಟಾಗಿದ್ದು ಸತತವಾಗಿ 7 ದಿನಗಳವರೆಗೆ ಶೇಕಡಾ 10ಕ್ಕಿಂತ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ‌. 


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

top videos
    First published: