ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ (Karnataka Youth Congress) ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Nalapad) ವಿರುದ್ಧ ಸ್ನೇಹಿತರೇ ದೂರು ದಾಖಲಿಸಿದ್ದಾರೆ. ಬೆಂಗಳೂರಿನ (Bengaluru) ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ (Cubbon Park Police Station) ನಲಪಾಡ್ ವಿರುದ್ಧ ದೂರು ದಾಖಲು ಮಾಡಿದ್ದು, ಉದ್ಯಮಿ ( Businessman) ನಬ್ ಮೊಹಮ್ಮದ್ ನಜೀರ್ ಎಂಬವರು ದೂರು ನೀಡಿದ್ದಾರೆ. ಆದರೆ ಪ್ರಕರಣ ಗಂಭೀರವಲ್ಲ ಪ್ರಕರಣ ಆಗಿರುವುದರಿಂದ ಕಬ್ಬನ್ ಪಾರ್ಕ್ ಪೊಲೀಸರು ಎನ್ಆರ್ಸಿ (NCR) ದಾಖಲು ಮಾಡಿದ್ದಾರೆ.
ಏನಿದು ಪ್ರಕರಣ?
ಯೂಥ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಚುನಾವಣೆಯ ಹಿನ್ನೆಯಲ್ಲಿ ಸ್ನೇಹಿತನ ಫಾರ್ಚೂನರ್ ಕಾರನ್ನು ಪಡೆದು ವಾಪಸ್ ಕೊಡದೇ ಕೊಲೆ ಬೆದರಿಕೆ ಹಾಕಿದ್ದಾರಂತೆ. ದೂರು ನೀಡಿರುವ ವ್ಯಕ್ತಿಯಲ್ಲಿ ಕಾರು ನೋಂದಾಣಿಯಾಗಿದ್ದು, ಅವರೇ ಈಗ ಕಾರಿನ ಇಐಎಂ ಪಾವತಿ ಮಾಡುತ್ತಿದ್ದರಂತೆ. ಆದ್ದರಿಂದ ನಲಪಾಡ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದೆ.
ಯೂಥ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ನೇಹಿತನ ಫಾರ್ಚೂನರ್ ಕಾರನ್ನ ನಲಪಾಡ್ ಪಡೆದಿದ್ದರಂತೆ. ಆದರೆಸ್ನೇಹಿತ ನಜೀರ್ ಕಾರನ್ನು, ವಾಪಸ್ ಕೇಳಿದಾಗ ಹಿಂದಿರುಗಿಸದೆ ಬೆದರಿಕೆ ಹಾಕಿದ್ದಾರಂತೆ. ಸದ್ಯ ನಜೀರ್ ದೂರಿನ ಆಧಾರದ ಮೇಲೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ನಲಪಾಡ್ ಅವರನ್ನು ವಿಚಾರಣೆಗೆ ಕರೆಯಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Karnataka Assembly Elections: ಶಾಂತಿನಗರ ಕ್ಷೇತ್ರದಲ್ಲಿ ಹೇಗಿದೆ ಚುನಾವಣಾ ರಣಕಣ? ಕೈ-ಕಮಲ-ದಳ ನಡುವೆ ನಡೆಯುತ್ತಾ ಫೈಟ್?
ವಿಚಾರಣೆಗೆ ಪೊಲೀಸರ ಸಿದ್ಧತೆ
ಇದಕ್ಕೂ ಮುನ್ನ ಮೊಹಮ್ಮದ್ ನಲಪಾಡ್ ವಿರುದ್ಧ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಟ್ರಯಲ್ ಸದ್ಯ ಆರಂಭವಾಗಿದೆ. ಕಾಂಗ್ರೆಸ್ ಪಕ್ಷದ ಚುನಾವಣೆಯ ಸಂದರ್ಭದಲ್ಲಿ ವಯಾಲಿಕಾವಲ್ ನಲ್ಲಿ ಯುವಕರ ಮೇಲೆ ಹಲ್ಲೆ ಮಾಡಿದ ಬಗ್ಗೆ ಆರೋಪ ಕೇಳಿ ಬಂದಿದ್ದ ಕಾರಣ ಪ್ರಕರಣ ದಾಖಲಾಗಿತ್ತು. ಇದರ ಬೆನಲ್ಲೇ ನಲಪಾಡ್ ಸ್ನೇಹಿತರೆ ಮತ್ತೊಂದು ಪ್ರಕರಣವನ್ನು ದಾಖಲು ಮಾಡಿ, ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣ ಸತ್ಯಾಸತ್ಯತೆ ಏನಿದೆ ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸಿ, ಸತ್ಯಾಂಶವನ್ನು ಬೆಳಕಿಗೆ ತರಬೇಕಿದೆ.
ಇದನ್ನೂ ಓದಿ: Karnataka Election 2023: ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುತ್ತಾ? ಡಿಕೆಶಿ ಹೇಳಿದ್ದೇನು?
ನಾನು ಬದಲಾಗಿದ್ದೇನೆ ಎಂದಿದ್ದ ನಲಪಾಡ್
ಇನ್ನು, ಕೆಲ ಸಮಯದಿಂದ ತಾನು ಆಯ್ತು ತನ್ನ ಕೆಲಸ ಆಯ್ತು ಎಂದು ಕೊಂಡಿದ್ದ ನಲಪಾಡ್ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ತಮ್ಮ ಮೇಲಿನ ಪ್ರಕರಣದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಲಪಾಡ್, ವಿದ್ವತ್ ಹಲ್ಲೆ ಘಟನೆ ನಂತರ ತಾನು ಸಾಕಷ್ಟು ಬದಲಾಗಿದ್ದೇನೆ. ಆದರೆ ಈಗಲೂ ಕೂಡ ಗೂಂಡಾ ಎಂದು ನನ್ನನ್ನ ಕರೆಯುತ್ತೀರಿ. ನನಗೇನೂ ಮನಸ್ಸಿಲ್ವಾ? ನಾನೇನೂ ಮನುಷ್ಯನಲ್ಲವಾ? ಈ ಬೆಳವಣಿಗೆಯ ಹಿಂದೆ ಯಾವ ವ್ಯಕ್ತಿಗಳು ಇದ್ದಾರೆ ಎಂಬುದು ಗೊತ್ತಿದೆ. ನಾನು ನ್ಯಾಯಾಲಯದಲ್ಲಿ ಫೈಟ್ ಮಾಡುತ್ತೇನೆ ಎಂದು ಗದ್ಗದಿತರಾಗಿ ಮಾತನಾಡಿದ್ದರು.
ಅಪಘಾತ ಪ್ರಕರಣದಲ್ಲಿ ಪೊಲೀಸರ ವಿಚಾರಣೆಗೆ ಸದಾಶಿವನಗರ ಪೊಲೀಸ್ ಠಾಣೆಗೆ ಆಗಮಿಸಿದ ಸಂದರ್ಭದಲ್ಲಿ ನಲಪಾಡ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಆ ಬಳಿಕ ನಡೆದ ಬೆಳಕಣಿಗೆಗಳಲ್ಲಿ ಕಾಂಗ್ರೆಸ್ ಪಕ್ಷದ ಕರ್ನಾಟಕ ಯೂಥ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅಧ್ಯಕ್ಷರಾದ ಬಳಿಕ ರಾಜ್ಯದ ಹಲವು ಪ್ರದೇಶಗಳಿಗೆ ಭೇಟಿ ನೀಡಿ, ಯೂಥ್ ಕಾಂಗ್ರೆಸ್ ವತಿಯಿಂದ ಕಾರ್ಯಕ್ರಮಗಳನ್ನು ನಡೆಸುತ್ತಾ ಪಕ್ಷ ಸಂಘಟನೆ ಮಾಡುವ ಕಾರ್ಯ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ