HOME » NEWS » State » NCB DROPS CHARGES AGAINST BINEESH KODIYERI IN DRUGS CASE GVTV SNVS

ಕೇರಳ ಮಾಜಿ ಗೃಹ ಸಚಿವರ ಮಗ ಬಿನೀಶ್ ಡ್ರಗ್ ಕೇಸ್​ನಲ್ಲಿ ಬಚಾವ್; ಮನಿ ಲಾಂಡ್ರಿಂಗ್ ಕೇಸ್​ನಲ್ಲಿ ಫಿಕ್ಸ್

ಕೇರಳದ ಮಾಜಿ ಗೃಹ ಸಚಿವರ ಮಗ ಬಿನೀಶ್ ಕೊಡಿಯೇರಿ ವಿರುದ್ಧ ಡ್ರಗ್ಸ್ ಪ್ರಕರಣದಲ್ಲಿ ದಾಖಲಾಗಿದ್ದ ಆರೋಪಗಳನ್ನ ಎನ್​ಸಿಬಿ ಕೈಬಿಟ್ಟಿದೆ. ಪ್ರಕರಣದಲ್ಲಿ ಆತನ ಪಾತ್ರ ಇಲ್ಲದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಚಾರ್ಜ್​ಶೀಟ್​ನಲ್ಲಿ ಹೆಸರು ಕೈಬಿಡಲಾಗಿದೆ.

news18-kannada
Updated:February 26, 2021, 9:12 AM IST
ಕೇರಳ ಮಾಜಿ ಗೃಹ ಸಚಿವರ ಮಗ ಬಿನೀಶ್ ಡ್ರಗ್ ಕೇಸ್​ನಲ್ಲಿ ಬಚಾವ್; ಮನಿ ಲಾಂಡ್ರಿಂಗ್ ಕೇಸ್​ನಲ್ಲಿ ಫಿಕ್ಸ್
ಬಿನೀಶ್ ಕೋಡಿಯೇರಿ
  • Share this:
ಬೆಂಗಳೂರು: ಡ್ರಗ್ ಕೇಸ್​ನಿಂದ ಕೇರಳ ಮಾಜಿ ಗೃಹ ಸಚಿವರ ಪುತ್ರ ಬಚಾವ್ ಆಗಿದ್ದಾರೆ. ಬಿನೀಶ್ ಕೊಡಿಯೇರಿ ಅವರು ಮನಿ ಲಾಂಡ್ರಿಂಗ್ ಕೇಸ್​ನಲ್ಲಿ ಮಾತ್ರ ಸಿಲುಕಿದ್ದಾರೆ. ಡ್ರಗ್ ಕೇಸ್ ನಲ್ಲಿ ಪಾತ್ರ ಕಂಡು ಬರದ ಹಿನ್ನೆಲೆ ಚಾರ್ಜ್ ಶೀಟ್ ನಲ್ಲಿ ಬಿನೀಶ್ ಕೊಡಿಯೇರಿ ಹೆಸರನ್ನ ಅಧಿಕಾರಿಗಳು ಕೈಬಿಟ್ಟಿದ್ದಾರೆ. ಇಡಿ ಕಸ್ಟಡಿಯಲ್ಲಿದ್ದಾಗಲೇ ಬಿನೀಶ್​ನನ್ನ ಎನ್​ಸಿಬಿ ಟೀಂ ವಿಚಾರಣೆ ಮಾಡಿತ್ತು. ಎರಡನೇ ಪ್ರಮುಖ ಆರೋಪಿ (ಎ2) ಅನೂಪ್ ಸಂಪರ್ಕದ ಹಿನ್ನೆಲೆಯಲ್ಲಿ ಬಿನೀಶ್​ನನ್ನು ತೀವ್ರ ವಿಚಾರಣೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಿನೀಶ್ ಪಾತ್ರ ಇಲ್ಲದ ಕಾರಣ ಚಾರ್ಜ್ ಶೀಟ್​ನಲ್ಲಿ ಎನ್​ಸಿಬಿ ಅಧಿಕಾರಿಗಳು ಆತನ ಹೆಸರನ್ನ ಪ್ರಸ್ತಾಪಿಸಲಿಲ್ಲ.

ಏನಿದು ಪ್ರಕರಣ?

ದೆಹಲಿ ಡ್ರಗ್ ಪ್ರಕರಣದ ಬೆನ್ನಲ್ಲೇ ಆಗಸ್ಟ್ 21 ರಂದು ಬೆಂಗಳೂರಿನ ಕೊತ್ತನೂರಿನ ಬಳಿ ಡ್ರಗ್ ಕೇಸ್​ನಲ್ಲಿ ಅನಿಕಾಳನ್ನ ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಅನಿಕಾ ವಿಚಾರಣೆ ಬೆನ್ನಲ್ಲೇ ಕೇರಳದ ಮೊಹಮ್ಮದ್ ಅನೂಪ್ ಮತ್ತು ರವೀಂದ್ರನ್ ಅವರನ್ನು ಸಹ ಬಂಧಿಸಲಾಗಿತ್ತು. ಮೂವರಿಂದಲೂ ನಗರದಲ್ಲಿ ಹೆಚ್ಚು ಡ್ರಗ್ ಸಪ್ಲೈ ಆಗುತ್ತಿದ್ದ ಹಿನ್ನೆಲೆ ತೀವ್ರ ವಿಚಾರಣೆ ಮಾಡಲಾಗಿತ್ತು. ಅನಿಕಾ ಬಳಿ ಡೈರಿ ಸಿಕ್ಕಿದ್ದು, ಯಾರ್ಯಾರಿಗೆ ಕೊಟ್ಟಿದ್ದೆ ಎಂಬುದನ್ನ ಕೂಡಾ ಬರೆದಿದ್ದಳು. ಅನಿಕಾ ಬಂಧನದ ಬಳಿಕ ಸ್ಯಾಂಡಲ್​ವುಡ್ ಡ್ರಗ್ ಕೇಸ್ ಸದ್ದು ಮಾಡಿತ್ತು. ಅದನ್ನ ಸಿಸಿಬಿಯಿಂದ ತನಿಖೆ ನಡೆಸಲಾಗಿತ್ತು. ಸದ್ಯ ಫೆ. 18 ರಂದು ಸಿಟಿ ಸಿವಿಲ್ ಕೋರ್ಟ್​ನ ಎನ್​ಡಿಪಿಎಸ್ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಎನ್​ಸಿಬಿ ಬೆಂಗಳೂರು ತಂಡದಿಂದ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಹತ್ತು ಮಂದಿ ಆರೋಪಿಗಳನ್ನ ಚಾರ್ಜ್ ಶೀಟ್​ನಲ್ಲಿ ಸೇರಿಸಲಾಗಿದೆ. A1 ಆರೋಪಿ ಅನಿಕಾ, A2 ಮೊಹಮ್ಮದ್ ಅನೂಪ್, A3 ರವೀಂದ್ರನ್ ಸದ್ಯ ಜೈಲಲ್ಲಿದ್ರೆ, ಉಳಿದ ಏಳು ಮಂದಿ ಆರೋಪಿಗಳು ಜಾಮೀನು ಪಡೆದಿದ್ದಾರೆ.

ಇದನ್ನೂ ಓದಿ: ಇಂಧನ ಬೆಲೆ ಏರಿಕೆ ಬಿಸಿ: ಇಂದು ದೇಶಾದ್ಯಂತ ಲಾರಿ ಮುಷ್ಕರ; ರಾಜ್ಯದಲ್ಲೂ ಬೆಂಬಲ

ಇನ್ನು ಚಾರ್ಚ್ ಶೀಟ್​ನಲ್ಲಿ ಡ್ರಗ್ ಮಜಲುಗಳ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ. ಎ1 ಆರೋಪಿ ಅನಿಕಾ ವಿಚಾರಣೆ ವೇಳೆ ಬೆಂಗಳೂರಿನಲ್ಲಿ ಆಫ್ರಿಕನ್ ಮಾಫಿಯಾ ಬಗ್ಗೆ ಮಾಹಿತಿ ಸಿಕ್ಕಿದೆ. ಬಹಳ ವರ್ಷಗಳಿಂದ ರಾಜಧಾನಿಯಲ್ಲಿ ಡ್ರಗ್ ನೆಟ್ವರ್ಕ್ ನಲ್ಲಿ ಅನಿಕಾ ಪ್ರಮುಖ ಪಾತ್ರವಹಿಸಿದ್ದಾಳೆ. ಸಾಕಷ್ಟು ಮಂದಿ ನೈಜೀರಿಯನ್​ಗಳ ಜೊತೆ ಸಂಪರ್ಕ ಸಹ ಹೊಂದಿದ್ದು, ಡೋಗ್ಲಾಸ್, ಸ್ಯಾಮ್ ಟಾಮ್ ಎಂಬ ಇಬ್ಬರು ನೈಜೀರಿಯನ್ ಗಳಿಂದ ಡ್ರಗ್ ಖರೀದಿ ಮಾಡುತ್ತಿದ್ದಳೆನ್ನಲಾಗಿದೆ.

ಎಂಡಿಎಂಎ, ಎಕ್ಸ್​ಟಸಿ (Ecstasy), ಕೊಕೇನ್ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದಳು. ಇಷ್ಟೇ ಅಲ್ದೆ ಸಾಕಷ್ಟು ಮಂದಿ ಯಂಗ್​ಸ್ಟರ್ಸ್ ಹೆಸರು ಬಾಯ್ಬಿಟ್ಟಿದ್ದಾಳೆ. ಡ್ರಗ್ ಸೇವಿಸುತ್ತಿದ್ದುದಲ್ಲದೆ, ಅದನ್ನ ಖರೀದಿ ಮಾಡಿ ಮಾಡುತ್ತಿದ್ದ ಅನೇಕ ಯುವಕರ ಹೆಸರು ಪ್ರಸ್ತಾಪಿಸಿದ್ದಾಳೆ. ಹಲವರ ಪೋನ್ ನಂಬರ್​ಗಳನ್ನ ಸಹ ರಿಕವರಿ ಮಾಡಲಾಗಿದೆ. ಇನ್ನು ನೋಟೀಸ್ ಕೊಟ್ರೂ ವಿಚಾರಣೆಗೆ ಬರದೆ ತಡ ಮಾಡ್ತಿರೋ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.

ವರದಿ: ಗಂಗಾಧರ ವಾಗಟ
Published by: Vijayasarthy SN
First published: February 26, 2021, 9:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories