ಪಂಜಾಬ್ ಸಿಧು, ಕರ್ನಾಟಕ ಸಿದ್ದು ಇಬ್ಬರಿಂದಲೂ ಕಾಂಗ್ರೆಸ್ ಗೆ ನಷ್ಟ: ಕೋಲಾರದಲ್ಲಿ ಮಾಜಿ ಸಿಎಂ Jagadish Shettar

ವಿಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಭಾವಿ ನಾಯಕರಾಗಿದ್ದು, ದೇಶದಲ್ಲಿ ಮೋದಿಯವರಿಗೆ ಸರಿಸಾಟಿಯಾದ ನಾಯಕರು ಇಲ್ಲವಾಗಿದೆ, ಕಾಂಗ್ರೆಸ್ ಪಕ್ಷ ವಿನಾಕಾರಣ ಆರೋಪ ಮಾಡುವುದನ್ನ ರೂಡಿಸಿಕೊಂಡಿದೆ ಎಂದು ಕಾಂಗ್ರೆಸ್ ವಿರುದ್ದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್

ಮಾಜಿ ಸಿಎಂ ಜಗದೀಶ್ ಶೆಟ್ಟರ್

  • Share this:
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಆಯೋಜಿಸಿದ್ದ  ಬಿಜೆಪಿ ಪಕ್ಷದ ಜನ ಸ್ವರಾಜ್ ಯಾತ್ರೆ (BJP Jan Swaraj Yatre ಸಮಾವೇಶಕ್ಕೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar)  ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಬಿಜೆಪಿ ನಾಯಕರು (BJP Leaders),  ಮಾಲೂರು ತಾಲೂಕಿನ (Maluru)  ಪ್ರಸಿದ್ದ ಚಿಕ್ಕತಿರುಪತಿಯ ಪ್ರಸನ್ನ ಶ್ರೀ ವೆಂಕಟೇಶ್ವರ ಸ್ವಾಮಿ  ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇಗುಲ ಪೂಜೆ ವೇಳೆ ಮಾಜಿ ಸಿಎಂ  ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಎ ನಾರಾಯಣಸ್ವಾಮಿ (A Narayanaswamy), ಸಂಸದ ಮುನಿಸ್ವಾಮಿ (Muniswamy) ಭಾಗಿಯಾಗಿದ್ದರು.

ಬಳಿಕ ಮಾಲೂರಿನ ಕೋಡಿಹಳ್ಳಿ ಗೇಟ್ ನ ಕೆ ಎನ್ ಎನ್  ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜನಸ್ವರಾಜ್ ಯಾತ್ರೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರ ದಂಡೇ ಭಾಗಿಯಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಸಚಿವರಾದ ಅಶ್ವಥ್ ನಾರಾಯಣ (Ashwath Narayan), ಸುಧಾಕರ್ (K Sudhakar), ಮುನಿರತ್ನ (Munirathna) , ಗೋಪಾಲಯ್ಯ, (Gopalaiah) ಸಂಸದ ಮುನಿಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra)  ಭಾಗಿಯಾಗಿದ್ದರು.

ಸಿಧು, ಸಿದ್ದು ಅವರಿಂದ ಕಾಂಗ್ರೆಸ್ ನಾಶವಾಗಲಿದೆ

ಕಾರ್ಯಕ್ರಮಕ್ಕು ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ರಾಜ್ಯ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.  ರಾಷ್ಟ್ರೀಯ ಪಕ್ಷ ಎನ್ನುವ ಕಾಂಗ್ರೆಸ್ ಕೆಲವೆಡೆ ಮಾತ್ರ ಇದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಸಮನ್ವಯತೆ ಇಲ್ಲ. ಪಂಜಾಬ್ ನ ಸಿಧು ಹಾಗೂ ರಾಜ್ಯದ ಸಿದ್ದು ಅವರಿಂದ ಕಾಂಗ್ರೆಸ್ ವಿನಾಶ ಆಗಲಿದೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ:  ಮಳೆಯಿಂದ ಜನ ಸಂಕಷ್ಟದಲ್ಲಿದ್ದರೆ, BJPಯವರಿಗೆ ಪರಿಷತ್ ಚುನಾವಣೆಯದ್ದೇ ಚಿಂತೆ; HDK ಟೀಕೆ

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದೆ. ರಾಜ್ಯ ಕಾಂಗ್ರೆಸ್ ನಲ್ಲಿ ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣಗಳ ಮಧ್ಯೆ ಜಟಾಪಟಿ ಶುರುವಾಗಿದೆ.  ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಹೆಚ್ಚು ದಿನ ಉಳಿಯೊಲ್ಲ. ಅಧಿಕಾರಕ್ಕಾಗಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷವನ್ನ ಸರ್ವನಾಶ ಮಾಡಿಯೇ ಹೋಗಿತ್ತಾರೆ  ಎಂದು ವ್ಯಂಗ್ಯವಾಡಿದರು.

ಇನ್ನು ಕೃಷಿ ಕಾಯ್ದೆಯನ್ನು ಪ್ರಧಾನಿ ಮೋದಿ ಹಿಂಪಡೆದಿರುವ ಬಗ್ಗೆ ಮಾತನಾಡಿದ ಜಗದೀಶ್ ಶೆಟ್ಟರ್, ಪ್ರಧಾನಿ ಮೋದಿಯವರನ್ನ ಹಾಡಿ ಹೊಗಳಿದ್ದಾರೆ. ಮೋದಿಯವರು ವಿಶ್ವದ ಶ್ರೇಷ್ಠ ನಾಯಕರಲ್ಲಿ ಮುಂಚೂಣಿಯಲ್ಲಿದ್ದಾರೆ. ಇಷ್ಟು ದಿನ ಕಾಂಗ್ರೆಸ್ ಗೆ ಮೋದಿ ವಿರುದ್ದ ಮಾತನಾಡಲು ಯಾವುದೇ ವಿಚಾರ ಇರಲಿಲ್ಲ.

ಇದನ್ನೂ ಓದಿ: ರೈತರ ಹೋರಾಟ ನೋಡಿದ ಮೇಲೆ, ಅವರ ಹಿತದೃಷ್ಟಿಯಿಂದ ಪ್ರಧಾನಿ ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದಾರೆ; BSY

ಕೃಷಿ ಕಾಯ್ದೆಗಳು ರೈತರ ಪರವಾಗಿತ್ತು. ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತಿಲ್ಲ. ಹಾಗಾಗಿ ಈ ಕಾಯ್ದೆಗಳು ತಂದಿದ್ದಾರೆ.  ರೈತರ ಆದಾಯ ದ್ವಿಗುಣಗೊಳಿಸುವ ಮಾತನ್ನ ಮೋದಿಯವರು ಹೇಳಿದ್ದರು. ಕೃಷಿ ಕಾಯ್ದೆಯು ರೈತರು ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗಿತ್ತು,

ಮತಕ್ಕಾಗಿ ರೈತರನ್ನು ಕಾಂಗ್ರೆಸ್ ಬಳಸಿಕೊಂಡಿದೆ

ದೇಶದಲ್ಲಿನ ರೈತರು ಶೋಷಿತ ವರ್ಗಕ್ಕೆ ಸೇರಿರೋರು. 60 ವರ್ಷದಿಂದ ಕಾಂಗ್ರೆಸ್ ನವರು ಶೋಷಣೆ ಮಾಡಿ ವೋಟಿಗಾಗಿ ರೈತರನ್ನು ಬಳಸಿಕೊಂಡಿದ್ದಾರೆ. ರೈತರ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿಕೊಂಡು ಬಂದಿದೆ. ಮೋದಿ ವಿರುದ್ಧ ಮಾತನಾಡೋದಕ್ಕೆ ಬೇರೆ ಯಾವುದೇ ವಿಷಯವಿಲ್ಲ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಪ್ರಧಾನಿ ಮೋದಿಯವರ ಸರಿಸಾಟಿ ನಾಯಕರಿಲ್ಲ, ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷವಾಗಿದೆ ಎಂದು, ಕೋಲಾರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಎಲ್ಲಿದೆ?

ಪ್ರಧಾನಿ ಮೋದಿಯವರು ವಿಶ್ವದ ಪ್ರಭಾವಿ ನಾಯಕರಾಗಿದ್ದಾರೆ, ಭಾರತದಲ್ಲಿ ಬಿಜೆಪಿ ಅತ್ಯಧಿಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ, ಕಾಂಗ್ರೆಸ್ ಪಕ್ಷ ಕೇವಲ ಬೆರಳೆಣಿಕೆ ರಾಜ್ಯದಲ್ಲಿ ಅಧಿಕಾರದಲ್ಲಿ ಇದೆ. ಮೋದಿಯವರಿಗೆ ಸಮಾನವಾದ ನಾಯಕರು ದೇಶದಲ್ಲಿ ಇಲ್ಲ, ಕಾಂಗ್ರೆಸ್ ಪಕ್ಷ ಎಲ್ಲಿದೆ ಎಂದು ಹುಡುಕುವಂತಾಗಿದೆ ಎಂದು ವ್ಯಂಗ್ಯವಾಡಿದ್ರು,

ಇನ್ನು ಕೊರೊನಾ ಮೊದಲನೇ ಹಾಗೂ ಎರಡನೇ ಅಲೆ ಬಂದಂತಹ ಸಂಧರ್ಬದಲ್ಲಿ ಸಮರ್ಥವಾಗಿ ಎದುರಿಸಿದ ಕಾರಣ ನಾವೆಲ್ಲ ಇಂದು ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿಯವರನ್ನ ಹಾಡಿ ಹೊಗಳಿದರು.

ಬಿಟ್ ಕಾಯಿನ್ ಹಗರಣ

ಇನ್ನು ಬಿಟ್ ಕಾಯಿನ್ ಹಗರಣ ವಿಚಾರವಾಗಿ ಕಾಂಗ್ರೆಸ್ ಪಕ್ಷ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಕೋಲಾರದಲ್ಲಿ ಮಾಜಿ ಸಿಎಂ ಜಗದೀರ್ಶ ಶೆಟ್ಟರ್ ಕಿಡಿಕಾರಿದ್ದಾರೆ. ಕೋಲಾರದ ಚಿಕ್ಕತಿರುಪತಿ ಗ್ರಾಮದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶೆಟ್ಟರ್, ನಾನು ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ಹೊಗಿದ್ದೆ, ಕಾಂಗ್ರೆಸ್‍ಗೆ ಬಿಜೆಪಿ ವಿರುದ್ದ ಮಾತನಾಡಲು ಯಾವುದೇ ವಿಚಾರವಿಲ್ಲ, ಹಾಗಾಗಿ ಖಾಲಿ ಪುಕ್ಕಟ್ಟೆ ಮಾತಾಡ್ತಿದ್ದಾರೆ.

ಇದು ಕೇವಲ ಅಪಪ್ರಚಾರ ಎಂದು ಹೇಳಿಕೆ ನೀಡಿದ್ದಾರೆ, ಇದೇ ವಿಚಾರವಾಗಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ತನಿಖೆಯ ಹಂತದಲ್ಲಿ ಹೇಳಿಕೆ ಕೊಡುವುದು ಸರಿಯಲ್ಲ, ತನಿಖೆಯಲ್ಲಿ ಯಾರನ್ನು ರಕ್ಷಿಸುವ ಅಗತ್ಯವಿಲ್ಲ, ಅದು ನಮ್ಮ ಪಕ್ಷದವು ಆಗಿದ್ದರು ತನಿಖೆಯಾಗಲಿ, ಬಿಟ್ ಖಾಯಿನ್ ವಿಚಾರವಾಗಿ ಸಿಎಂ ಬದಲಾವಣೆ ಚರ್ಚೆಯೇ ಇಲ್ಲ, ವಿನಾಕಾರಣ ಆರೋಪ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ ತಿರುಗೇಟು ನೀಡಿದ್ದಾರೆ.
Published by:Mahmadrafik K
First published: