ರಾಷ್ಟ್ರೀಯ ಯುವ ದಿನ 2023: ಭಾರತ ಕಂಡ ಶ್ರೇಷ್ಠ ನಾಯಕ, ಯುವಕರೇ ದೇಶದ ದೊಡ್ಡ ಆಸ್ತಿ ಎಂದು ನಂಬಿದ್ದ ದೊಡ್ಡ ಶಕ್ತಿ ಸ್ವಾಮಿ ವಿವೇಕಾನಂದರ (Swami Vivekananda) ಜನ್ಮದಿನವನ್ನು ಗೌರವಿಸಲು ಪ್ರತಿ ವರ್ಷ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು (Swami Vivekananda Jayanti) ಆಚರಿಸಲಾಗುತ್ತದೆ. ಯುವ ದಿವಸ್ (National Youth Day 2023) ಅನ್ನು ದೇಶದ ಯುವಕರು ಉತ್ತಮ ವ್ಯಕ್ತಿಯಾಗಲು, ದೇಶದ ಅಭಿವೃದ್ಧಿಗಾಗಿ ಶ್ರಮಿಸಲು ಮತ್ತು ಗೌರವಾನ್ವಿತ ಜೀವನವನ್ನು ನಡೆಸಲು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಆಚರಿಸಲಾಗುತ್ತದೆ.
ರಾಷ್ಟ್ರೀಯ ಯುವ ದಿನ: ಇತಿಹಾಸ
1984 ರಲ್ಲಿ, ಭಾರತ ಸರ್ಕಾರವು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಅಲ್ಲಿಂದ ಇಲ್ಲಿಯವರೆಗೂ ಯುವಕರ ಸ್ಪೂರ್ತಿ ಚಿಲುಮೆ ಸ್ವಾಮಿ ವಿವೇಕಾನಂದ ಅವರ ಹುಟ್ಟಿದ ದಿನವನ್ನು ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ.
ಶಿಕ್ಷಣ ಮತ್ತು ಮಾನವ ಸಬಲೀಕರಣವನ್ನು ಎತ್ತಿಹಿಡಿದರು. ನಿಸ್ವಾರ್ಥತೆ ಮತ್ತು ಮಾನವೀಯತೆಯ ಸೇವೆಯ ಮೂಲಕ ಮಾತ್ರ ಒಬ್ಬರು ನಿಜವಾಗಿಯೂ ಧರ್ಮ ಮತ್ತು ದೇವರನ್ನು ಕಂಡುಕೊಳ್ಳಬಹುದು ಎಂದು ಅವರು ನಂಬಿದ್ದರು ಮತ್ತು ಅದನ್ನೇ ಜನತೆಗೂ ಮನನ ಮಾಡಿಸುತ್ತಿದ್ದರು.
ಶ್ರೀ ರಾಮಕೃಷ್ಣ ಪರಮಹಂಸರ ಕಟ್ಟಾ ಶಿಷ್ಯ
ವಿವೇಕಾನಂದರು ಶ್ರೀ ರಾಮಕೃಷ್ಣ ಪರಮಹಂಸರ ಕಟ್ಟಾ ಶಿಷ್ಯರಾಗಿದ್ದರು ಮತ್ತು ಅವರು ತಮ್ಮ ಉಪನ್ಯಾಸಗಳ ಮೂಲಕ ದೇಶದಾದ್ಯಂತ ಯುವ ಪ್ರಜ್ಞೆಯನ್ನು ಹೆಚ್ಚಿಸಲು ಸಹಾಯ ಮಾಡಿದರು.
ವಿವೇಕಾನಂದರು 1893 ರಲ್ಲಿ ಶಿಕಾಗೋದಲ್ಲಿ ವಿಶ್ವ ಧರ್ಮ ಸಂಸತ್ತಿನಲ್ಲಿ ನೀಡಿದ ಭಾಷಣವು ಇನ್ನೂ ಕೂಡ ಪ್ರಸಿದ್ಧ ಭಾಷಣವಾಗಿ ಉಳಿದಿದೆ.
ಸ್ವಾಮಿ ವಿವೇಕಾನಂದರು ಅಪಾರ ಜ್ಞಾನವನ್ನು ಹೊಂದಿದ್ದರು. ವಿವೇಕಾನಂದರ ಮರಣದ ನಂತರ 1984 ರಲ್ಲಿ ಭಾರತ ಸರ್ಕಾರವು ಅವರನ್ನು ಗೌರವಿಸಲು ಮತ್ತು ಅವನ ಬೋಧನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಅವರ ಜನ್ಮದಿನವಾದ ಜನವರಿ 12 ಅನ್ನು ರಾಷ್ಟ್ರೀಯ ಯುವ ದಿನವೆಂದು ಘೋಷಿಸಿತು.
ರಾಷ್ಟ್ರೀಯ ಯುವ ದಿನವನ್ನು ಹೇಗೆ ಆಚರಿಸಲಾಗುತ್ತದೆ?
ಈ ದಿನದಂದು, ಭಾರತದಲ್ಲಿನ ವಿಭಿನ್ನ ಥೀಮ್ಗಳೊಂದಿಗೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ದಿನದಂದು, ಉತ್ತರ ಪ್ರದೇಶದಲ್ಲಿ ಸ್ವಾಮಿ ವಿವೇಕಾನಂದರ ಬೋಧನೆಗಳೊಂದಿಗೆ ಯುವಜನರನ್ನು ಪ್ರೇರೇಪಿಸಲು "ಮಿಷನ್ ಭಾರತಿಯಮ್" ಮತ್ತು "ಬಸ್ತಿ ಯುವೋ ಮಹೋತ್ಸವ" ಎಂಬ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
ಅದೇ ರೀತಿ, ಕೆಲವು ಸಂಸ್ಥೆಗಳು ಪ್ರಾರ್ಥನೆಗಳು, ಭಕ್ತಿ ಕಾರ್ಯಕ್ರಮಗಳು, ಧ್ಯಾನ ಅವಧಿಗಳು ಮತ್ತು ಇತರ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ರಾಷ್ಟ್ರೀಯ ಯುವ ದಿನವನ್ನು ಆಚರಿಸುತ್ತವೆ.
ಇದನ್ನೂ ಓದಿ: Bengaluru Airport Terminal 2: ಜ.15ಕ್ಕೆ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಕಾರ್ಯಾರಂಭ, ಮೊದಲ ವಿಮಾನ ಎಲ್ಲಿಗೆ?
ರಾಷ್ಟ್ರೀಯ ಯುವ ಸೆಮಿನಾರ್ಗಳನ್ನು ಸ್ಥಳೀಯ ಕ್ಲಬ್ಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಹ ನಡೆಸಲಾಗುತ್ತದೆ. ಹಾಗೆಯೇ ಅನೇಕ ಕ್ಲಬ್ಗಳು ರಕ್ತದಾನ ಶಿಬಿರಗಳನ್ನು ಸಹ ಆಯೋಜಿಸುತ್ತವೆ.
ಥೀಮ್
ಸಾಮಾಜಿಕ ಸೇವೆ, ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಯಂತಹ ಕ್ಷೇತ್ರಗಳಲ್ಲಿ ಕ್ರಮ ತೆಗೆದುಕೊಳ್ಳಲು ಯುವಜನರನ್ನು ಪ್ರೇರೇಪಿಸುವ ಕಲ್ಪನೆಯಲ್ಲಿ ಪ್ರತಿವರ್ಷ ಯುವ ದಿನದ ಥೀಮ್ ಸಿದ್ಧಗೊಳ್ಳುತ್ತದೆ.
ರಾಷ್ಟ್ರೀಯ ಯುವ ದಿನದ ಥೀಮ್ ಅನ್ನು ಸಾಮಾನ್ಯವಾಗಿ ಸರ್ಕಾರವು ಆಯ್ಕೆಮಾಡುತ್ತದೆ. ರಾಷ್ಟ್ರೀಯ ಯುವ ದಿನ 2022ರಲ್ಲಿ 'ಇಟ್ಸ್ ಆಲ್ ಇನ್ ದಿ ಮೈಂಡ್' ಎಂಬುದು ಥೀಮ್ ಆಗಿತ್ತು.
"ಸ್ವಚ್ಛ ಮತ್ತು ಹಸಿರು ಪರಿಸರಕ್ಕಾಗಿ ಯುವಕರು", "ಗ್ರಾಮೀಣ ಅಭಿವೃದ್ಧಿಗಾಗಿ ಯುವಕರು," ಮತ್ತು "ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಗಾಗಿ ಯುವಕರು" ಹೀಗೆ ಪ್ರತಿವರ್ಷ ಒಂದೊಂದು ಥೀಮ್ ಅನ್ನು ಸರ್ಕಾರ ನೀಡಿ ಅದಕ್ಕೆ ತಕ್ಕಂತೆ ಕೆಲಸಗಳನ್ನು ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ