HOME » NEWS » State » NATIONAL HORTICULTURE FEST 2021 PEOPLE BOUGHT VARIOUS PLANTS AT HORTICULTURE FEST ANLM LG

2021ರ ರಾಷ್ಟ್ರೀಯ ತೋಟಗಾರಿಕಾ ಮೇಳ; ವಿವಿಧ ತಳಿಯ ಸಸಿಗಳನ್ನು ಖರೀದಿಸಿದ ಜನರು

ಅರ್ಕಾ ಅಭೇದ್ ತಳಿಯ ವಿಶೇಷತೆ ಎಂದರೆ ಟೊಮೇಟೊ ತೋಟಕ್ಕೆ ಪ್ರವಾಹದ ನೀರು ನುಗ್ಗಿದರೂ, ಟೊಮೇಟೊ ಗಿಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರವಾಹದ ನೀರಿನಲ್ಲಿ ಸತತ ಆರು ದಿನ ಇದ್ದರೂ ಗಿಡ ಕೊಳೆಯುವುದಿಲ್ಲ ಮತ್ತು ಬಾಡುವುದಿಲ್ಲ. ಇತರ ಟೊಮೇಟೊ ತಳಿಗಳು ಕೇವಲ 24 ಗಂಟೆಯಲ್ಲಿ ಕೊಳೆಯುತ್ತೆ ಮತ್ತು ಬಾಡಿ ಹೋಗುತ್ತದೆ.

news18-kannada
Updated:February 12, 2021, 9:53 AM IST
2021ರ ರಾಷ್ಟ್ರೀಯ ತೋಟಗಾರಿಕಾ ಮೇಳ; ವಿವಿಧ ತಳಿಯ ಸಸಿಗಳನ್ನು ಖರೀದಿಸಿದ ಜನರು
ತೋಟಗಾರಿಕಾ ಮೇಳ
  • Share this:
ನೆಲಮಂಗಲ(ಫೆ.12): ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ- ಐಐಹೆಚ್ ಆರ್ ನಲ್ಲಿ "ಸ್ಟಾರ್ಟ್ ಆಫ್ ಸ್ಟಾಂಡ್ ಆನ್" ಶೀರ್ಷಿಕೆಯಡಿ 2021ರ ರಾಷ್ಟ್ರೀಯ ತೋಟಗಾರಿಕೆ ಮೇಳ ನಡೆಯುತ್ತಿದೆ. ಮೇಳ ಹಲವು ವಿಶೇಷಗಳಿಗೆ ಸಾಕ್ಷಿಯಾಗಿತ್ತು ಅದ್ರಲ್ಲೂ ಐಐಹೆಚ್ ಆರ್ ವಿಶೇಷ ಆಕ್ರಾ ಬ್ರಾಂಡ್ ನಲ್ಲಿ ಹಲವು ಸಸಿಗಳು, ತಳಿಗಳು ಗಮನ ಸೆಳೆಯಿತು.  ಹಲವು ಬಗೆಯ ಟೆಮೊಟೊ, ಹೈಬ್ರಿಡ್ ಟೆಮೊಟೊ, ರೋಗ ನಿರೋಧಕ ಟೆಮೊಟೊ ಹಾಗೂ ನೀರು ಹೆಚ್ಚಾಗಿ, ಪ್ರವಾಹದ ಸಮಯದಲ್ಲಿಯೂ ಟೆಮೊಟೊ ಬೆಳೆಗೆ ಹಾನಿಯಾಗದಂತಹ ಟೆಕ್ನಾಲಜಿ ಬಳಸಲಾಗಿತ್ತು. 2-3 ಅಡಿಯುದ್ದ ಅಲಸಂಧಿ, ಉತ್ತಮ ಗುಣಮಟ್ಟದ ಬಟಾಣಿ, ಫ್ರೆಂಚ್ ಬೀನ್ಸ್, ಕೊತ್ತಂಬರಿ, ಪಾಲಕ್ ಬೆಳೆಯಲಾಗಿತ್ತು, ಮೇಳದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದು ವಿವಿಧ ತಳಿಯ ಹೂ ಗಿಡಗಳು, ಅದರಲ್ಲೂ ತರಹೇವಾರಿ ಗುಲಾಬಿ ಹೂಗಳು ಎಲ್ಲರ‌ ಮನ ಗೆದ್ದವು.

ಕೃಷಿ, ಆಧುನಿಕ ಬೇಸಾಯ ಪದ್ದತಿ ಎಲ್ಲರ ಗಮನ ಸೆಳೆದ್ರೆ,  ವಿವಿಧ ಸ್ಟಾಲ್ ಗಳು ಕೃಷಿಗೆ ಸಂಬಂದಿಸಿದ ವಸ್ತುಗಳ ಪ್ರದರ್ಶನ ಹೆಚ್ಚು ಗಮನ ಸೆಳೆಯಿತು, ಐಐಹೆಚ್ ಆರ್ ನಲ್ಲಿಯೇ ಸಂಶೋಧಿಸಿದ್ದ ವಿವಿಧ ಪ್ರಭೇದಗಳ ಸಸಿಗಳನ್ನು ಜನ ಖರೀದಿಸೊದ್ರಲ್ಲಿ ಬ್ಯುಸಿಯಾಗಿದ್ರು. ಈ ಭಾರಿ ಮೇಳದಲ್ಲಿ 257 ಕೃಷಿ ತಂತ್ರಜ್ಞಾನ ಮತ್ತು ತಳಿಗಳ ಅವಿಷ್ಕಾರ ಮಾಡಿದೆ. ವಿಶೇಷವಾಗಿ ಬದನೆಕಾಯಿ ಅರ್ಕಾ ನೀಲಕಂಠ್ ತಳಿಗೆ ಟೊಮೇಟೊದ ಅರ್ಕಾ ಅಭೇದ್ ತಳಿಯನ್ನ ಕಸಿ ಮಾಡಿರುವ ತಳಿ ಮೇಳದ ಆಕರ್ಷಣೆಯಲ್ಲಿ ಒಂದಾಗಿದೆ.

Junior Chiru: ಪ್ರೇಮಿಗಳ ದಿನದಂದು ಜೂನಿಯರ್​ ಚಿರುಗೆ ಹಾಯ್​ ಹೇಳಿ: ಇಲ್ಲಿದೆ ವಿಡಿಯೋ..!

ಅರ್ಕಾ ಅಭೇದ್ ತಳಿಯ ವಿಶೇಷತೆ ಎಂದರೆ ಟೊಮೇಟೊ ತೋಟಕ್ಕೆ ಪ್ರವಾಹದ ನೀರು ನುಗ್ಗಿದರೂ, ಟೊಮೇಟೊ ಗಿಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರವಾಹದ ನೀರಿನಲ್ಲಿ ಸತತ ಆರು ದಿನ ಇದ್ದರೂ ಗಿಡ ಕೊಳೆಯುವುದಿಲ್ಲ ಮತ್ತು ಬಾಡುವುದಿಲ್ಲ. ಇತರ ಟೊಮೇಟೊ ತಳಿಗಳು ಕೇವಲ 24 ಗಂಟೆಯಲ್ಲಿ ಕೊಳೆಯುತ್ತೆ ಮತ್ತು ಬಾಡಿ ಹೋಗುತ್ತದೆ. ಪ್ರವಾಹ ಮತ್ತು ಜೌಗು ಪ್ರದೇಶದಲ್ಲಿ ಅರ್ಕಾ ಅಭೇದ್ ಉತ್ತಮ ತಳಿಯಾಗಿದೆ.ಇದರ ಜೋತೆ ತಾರಸಿ, ರೂಫ್ ಟಾಪ್ ಕೃಷಿಗೆ ಮಹಿಳೆಯರು, ಗೃಹಿಣಿಯರು ಫಿದಾ ಆಗಿದ್ರು, ಮೂರನೇ ದಿನವಾದ ಇಂದು ತೋಟಗಾರಿಕಾ ಸಚಿವ ಆರ್.ಶಂಕರ್ ಮೇಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಐಐಹೆಚ್ ಆರ್ ನಲ್ಲಿ ನಡೆಯುತ್ತಿರುವ ವಿಶೇಷ ತೋಟಗಾರಿಕೆ ಮೇಳ ಯುವ ಪೀಳಿಗೆಯನ್ನ ಕೃಷಿಗೆ ಆಕರ್ಷಿಸಿದ್ರೆ, ವಿವಿಧ ಬಗೆಯ ಔಷಧ ಹಾಗೂ ರೋಗನಿರೋಧಕ ಬೆಳೆಗಳು ರೈತರ ಪಾಲಿಗೆ ಹೊಸ ದಾರಿ ಕಾಣಿಸುವಂತಿತ್ತು. ಇನ್ನು ತಳ್ಳುಗಾಡಿಯಲ್ಲಿ ಹಣ್ಣು ಮತ್ತು ತರಕಾರಿ ಮಾರುವ ವ್ಯಾಪಾರಿಗಳಿಗೆ ಅನುಕೂಲವಾಗುವಂತಹ ಗಾಡಿಯನ್ನು ಐಐಹೆಚ್​ಆರ್ ಸಂಸ್ಥೆ ಆವಿಷ್ಕಾರ ಮಾಡಿದೆ. ಸೌರಶಕ್ತಿ ಚಾಲಿತ ತ್ರಿಚಕ್ರ ಗಾಡಿ ಒಮ್ಮೆ ಚಾರ್ಚ್ ಆದರೆ 20 ಕಿ.ಮೀ ದೂರ ಆಯಾಸವಿಲ್ಲದೇ ಆರಾಮವಾಗಿ ಸಾಗುತ್ತದೆ. ಒಟ್ಟು ಐದು ದಿನಗಳ ಮೇಳ ಇದಾಗಿದ್ದು, ನಾಳೆ ಒಂದೇ ದಿನ ಈ ಮೇಳ ನಡೆಯಲಿದ್ದು ಮಿಸ್ ಮಾಡದೆ ಒಮ್ಮೆ ಭೇಟಿ ಕೊಡಿ.
Published by: Latha CG
First published: February 12, 2021, 9:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories