Student Arrest: ಎಕ್ಸಾಂ ಮುಂದೂಡಲು ಬಾಂಬ್​ ಬೆದರಿಕೆ; ಅದೇ ಶಾಲೆಯ ಬಾಲಕ ಪೊಲೀಸ್​ ವಶಕ್ಕೆ

ಬಾಂಬ್ ಬೆದರಿಕೆ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಆತನ ಹೆಸರು ಬಹಿರಂಗಪಡಿಸಲಾಗದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ

ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ

  • Share this:
ಬೆಂಗಳೂರು (ಜು 19):  ನ್ಯಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಸ್ಕೂಲ್​ಗೆ (National Hill View Public School ) ನಿನ್ನೆ ಬಾಂಬ್​ ಬೆದರಿಕೆ (Bomb Threat) ಇ-ಮೇಲ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ (New Twist)​  ಸಿಕ್ಕಿದೆ.  ಹುಚ್ಚ ವೆಂಕಟ್ ಹೆಸರಲ್ಲಿ ಶಾಲೆಗೆ ಬಾಂಬ್​ ಇಟ್ಟಿರೋದಾಗಿ ಹುಸಿ ಬೆದರಿಕೆ ಮೇಲ್​ ಮಾಡಿದ್ರು ಅದೇ ಶಾಲೆಯ ವಿದ್ಯಾರ್ಥಿ, ​ ಅದೇ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯಿಂದ (Student) ಕೃತ್ಯ ನಡೆದಿದ್ದು, ಪರೀಕ್ಷೆ (Exam) ಮುಂದೂಡಲೆಂದು ವಿದ್ಯಾರ್ಥಿ ಬಾಂಬ್​ ಬೆದರಿಕೆ  ಮೇಲ್ ಮಾಡಿದ್ದಾನೆ. ಪೊಲೀಸರು ವಿದ್ಯಾರ್ಥಿಯನ್ನ ವಿಚಾರಣೆ ಮಾಡಿ ಬಾಲ ಅಪರಾಧಿಗಳ ಪುನಶ್ಚೇತನ ಕೇಂದ್ರಕ್ಕೆ ಕಳುಹಿಸಿದ್ದಾರೆ. 

ಬಾಂಬ್​ ಬೆದರಿಕೆ ಮೇಲ್​

ಬೆಳಿಗ್ಗೆ 9 ಗಂಟೆ ಸುಮಾರಿಗೆ ಶಾಲಾ ಸಿಬ್ಬಂದಿ, ಇ-ಮೇಲ್ ಪರಿಶೀಲಿಸುತ್ತಿದ್ದರು. ಇದೇ ವೇಳೆ ಅಪರಿಚಿತರೊಬ್ಬರು ಕಳುಹಿಸಿದ್ದ ಇ-ಮೇಲ್ ತೆರೆದಿದ್ದರು. ನಿಮ್ಮ ಶಾಲೆಯಲ್ಲಿ ಬಾಂಬ್ ಇರಿಸಲಾಗಿದೆ. ಸದ್ಯದಲ್ಲೇ ಅದು ಸ್ಫೋಟ ಆಗಲಿದೆ ಎಂದು ಬೆದರಿಕೆ ಹಾಕಲಾಗಿತ್ತು. ಆತಂಕಗೊಂಡ ಶಾಲಾ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.

ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ

ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ, ಮಕ್ಕಳನ್ನು ಬೇರೆ ಸ್ಥಳಾಂತರಿಸಿ ಶೋಧ ಮಾಡಿದ್ದರು. ಹುಸಿ ಬಾಂಬ್ ಎಂದು ಪೊಲೀಸರು ಘೋಷಿಸಿದ್ದರು. ‘ಬಾಂಬ್ ಬೆದರಿಕೆ ಸಂಬಂಧ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಆತನ ಹೆಸರು ಬಹಿರಂಗಪಡಿಸಲಾಗದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ಇದನ್ನೂ ಓದಿ: Husband Torture: ಪ್ರೀತಿಸಿ ಮದುವೆಯಾಗಿ ಅಶ್ಲೀಲ ಚಿತ್ರ ತೋರಿಸಿ ಟಾರ್ಚರ್; 5 ಬಾರಿ ಗರ್ಭಪಾತ ಮಾಡಿಸಿ ಹಿಂಸೆ ಕೊಟ್ಟ ಪಾಪಿ!

ಪೋಷಕರು, ಮಕ್ಕಳಲ್ಲಿ ಆತಂಕ ಸೃಷ್ಟಿಸಿದ್ದ ಬೆದರಿಕೆ ಮೇಲ್​

ಬಾಂಬ್ ಇಟ್ಟಿದ್ದಾರಂತೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿತ್ತು. ಸುದ್ದಿ ತಿಳಿದ ಪೋಷಕರು ಆತಂಕದಿಂದಲೇ ಶಾಲೆಗೆ ಓಡೋಡಿ ಬಂದಿದ್ದಾರೆ. ಇನ್ನು ಶಾಲಾ ಸಿಬ್ಬಂದಿ ಯೂನಿಟ್ 1 ನಿಂದ ಯೂನಿಟ್ 2ಕ್ಕೆ ಮಕ್ಕಳನ್ನ ಶಿಫ್ಟ್ ಮಾಡಲಾಗಿತ್ತು.  ಶಾಲೆಗೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ, ಪರಿಶೀಲನೆ ಕೂಡ ನಡೆಸಿದ್ರು.

ಇದನ್ನೂ ಓದಿ: Bomb Threat: ಹುಚ್ಚ ವೆಂಕಟ್​ ಹೆಸರಲ್ಲಿ ಬಾಂಬ್ ಬೆದರಿಕೆ ಎಂದ್ರು ಡಿಕೆಶಿ; ಆತಂಕಪಡುವ ಅಗತ್ಯವಿಲ್ಲ-ಐಶ್ವರ್ಯಾ

ಶಾಲೆಗೆ ದೌಡಾಯಿಸಿದ ಡಿಕೆಶಿ ಪುತ್ರಿ ಐಶ್ವರ್ಯ

ತಮ್ಮ ಮಾಲೀಕತ್ವದ ಶಾಲೆಯಲ್ಲಿ ಬಾಂಬ್ ಇಟ್ಟಿದ್ದಾರೆ ಎಂಬ ಇಮೇಲ್ ವಿಚಾರ ತಿಳಿಯುತ್ತಿದ್ದಂತೆ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಕೂಡ ಶಾಲೆಗೆ ದೌಡಾಯಿಸಿದ್ದರು. ಶಾಲಾ ಸಿಬ್ಬಂದಿಯಿಂದ ಐಶ್ವರ್ಯಾ ಮಾಹಿತಿ ಪಡೆದ್ರು.

ಡಿಕೆ ಶಿವಕುಮಾರ್​ ಪ್ರತಿಕ್ರಿಯೆ

ಈ ಬಗ್ಗೆ ಪ್ರತಿಕ್ರಿಯಿಸಿದ  ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್​ ಹುಚ್ವ ವೆಂಕಟ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಬಾಂಬ್ ಬೆದರಿಕೆ ಪತ್ರ ಬಂದಿದೆ ಎಂದು ತಿಳಿಸಿದ್ದಾರೆ. ಭಾನುವಾರ ರಾತ್ರಿ ಇ-ಮೇಲ್ ಮೂಲಕ ಬೆದರಿಕೆ ಬಂದಿತ್ತು. ಸೋಮವಾರ ಬೆಳಿಗ್ಗೆ ಶಿಕ್ಷಕರು ಮತ್ತು ಸಿಬ್ಬಂದಿ ಶಾಲೆಗೆ ಬಂದ ಬಳಿಕ ವಿಷಯ ಗೊತ್ತಾಯಿತು. ಅಷ್ಟರಲ್ಲಾಗಲೇ ಮಕ್ಕಳು ಶಾಲೆಗೆ ಬಂದಿದ್ದರು ಎಂದರು. ವಿದ್ಯಾರ್ಥಿಗಳನ್ನು ಶಾಲೆಯಿಂದ ಸ್ಥಳಾಂತರ ಮಾಡಲಾಗಿದೆ. ಪೊಲೀಸರುಶೋಧ ನಡೆಸುತ್ತಿದ್ದಾರೆ ಎಂದು ಡಿಕೆಶಿ ಹೇಳಿದ್ರು.

ವಿಡಿಯೋ ಮೂಲಕ  ಹುಚ್ಚ ವೆಂಕಟ್​ ಸ್ಪಷ್ಟನೆ
 ಹುಚ್ಚ ವೆಂಕಟ್ ಹೆಸರಲ್ಲಿ ಬಾಂಬ್ ಬೆದರಿಕೆ ಇಮೇಲ್ ಹಿನ್ನಲೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಹುಚ್ಚ ವೆಂಕಟ್, ಇದು ಕೆಲವರಿಗೆ ಹೇಳ್ತಾ ಇರೋದು. ನನ್ನ ಹೆಸರನ್ನ ಯಾವುದೇ ಕಾರಣಕ್ಕು ಮಿಸ್ ಯೂಸ್ ಮಾಡಿಕೊಳ್ಳಬೇಡಿ. ಅಥವಾ ನನ್ನ ಹೆಸರಲ್ಲಿ ಮೇಲ್ ಕಳಿಸೋದಾಗ್ಲಿ, ಏನು ಮಾಡಬೇಡಿ. ಇದನ್ನು ನಾನು ಹೇಳ್ತಾ ಇರೋದು ಯಾರು ನನ್ನ ಹೆಸರು ಮಿಸ್ ಯೂಸ್ ಮಾಡಿಕೊಳ್ತಾರೋ ಅವರಿಗೆ ಎಂದು ಹುಚ್ಚ ವೆಂಕಟ್​ ಹೇಳಿದ್ದಾರೆ. ಕಿಡಿಗೇಡಿಗಳು ಹುಚ್ಚ ವೆಂಕಟ್ ಹೆಸರಲ್ಲಿ ಬಾಂಬ್ ಬೆದರಿಕೆ ಮೇಲ್ ಕಳುಹಿಸಿದ್ದಾರೆ. ‘
Published by:Pavana HS
First published: