HOME » NEWS » State » NATIONAL HIGHWAY AT AVARSA IN UTTARA KANNADA BECOMES NOTORIOUS FOR ACCIDENTS HK

ಉತ್ತರ ಕನ್ನಡದ ಅವರ್ಸಾದಲ್ಲಿ ಮೃತ್ಯುಕೂಪವಾದ ರಾಷ್ಟ್ರೀಯ ಹೆದ್ದಾರಿ; ರಸ್ತೆಯಲ್ಲಿ ಸಂಚರಿಸಲು ಹೆದರುವ ಜನರು

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಯೋಜನೆಯಲ್ಲಿ ಅವರ್ಸಾ ವ್ಯಾಪ್ತಿಯಲ್ಲಿ ಸುಮಾರು ಒಂದು ಕಿ.ಮೀ ನಷ್ಟು ದೂರ ಅವೈಜ್ಞಾನಿಕವಾಗಿ ಅಪಾಯಕಾರಿ ರಸ್ತೆ ನಿರ್ಮಾಣ ಮಾಡಲಾಗಿದೆ. ಈ‌ ಹಿನ್ನೆಲೆಯಲ್ಲಿ ಇಲ್ಲಿ ದಿನನಿತ್ಯವೂ ಅಪಘಾತ ಸಂಭವಿಸುತ್ತಿವೆ.

news18-kannada
Updated:February 25, 2020, 8:37 PM IST
ಉತ್ತರ ಕನ್ನಡದ ಅವರ್ಸಾದಲ್ಲಿ ಮೃತ್ಯುಕೂಪವಾದ ರಾಷ್ಟ್ರೀಯ ಹೆದ್ದಾರಿ; ರಸ್ತೆಯಲ್ಲಿ ಸಂಚರಿಸಲು ಹೆದರುವ ಜನರು
ಹೆದ್ದಾರಿಯಲ್ಲಿ ಓಡಾಡುತ್ತಿರುವ ಜನರು
  • Share this:
ಕಾರವಾರ(ಫೆ.25): ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದ್ದು ಜನ ಅಪಾಯದಲ್ಲಿ ವಾಹನ ಚಲಾಯಿಸುವ ಸ್ಥಿತಿ ಬಂದೊದಗಿದೆ.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅದರಲ್ಲೂ ಅವರ್ಸಾ ಗ್ರಾಮದ ವ್ಯಾಪ್ತಿಯಲ್ಲಿ ಸಂಚರಿಸಬೇಕೆಂದರೆ ಮೈ ಕಣ್ಣಾಗಿ ಇರಬೇಕು ಸ್ವಲ್ಪ ಎಚ್ಚರ ತಪ್ಪಿದ್ದರೂ ಅಪಘಾತ ಕಟ್ಟಿಟ್ಟ ಬುತ್ತಿ. ಇತ್ತೀಚೆಗೆ ಅಲ್ಲಿ ನಡೆಯುತ್ತಿರುವ ಸರಣಿ ಅಪಘಾತಕ್ಕೆ ಜನ ಕಂಗಾಲಾಗಿದ್ದಾರೆ. ಅವರ್ಸಾ ಗ್ರಾಮದ ಮಧ್ಯದಿಂದ ಹಾದು ಹೋಗಿರುವ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ‌ ಜನರ ಪ್ರಾಣ ಹಿಂಡುವ ಮೃತ್ಯು ಕೂಪವಾಗಿದೆ. ಮತ್ತೊಂದೆಡೆ ಹೆದ್ದಾರಿ ಮಧ್ಯೆ ಗೋಡೆಯಂತಿರುವ ಡಿವೈಡರ್ ಬಳಿ ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುತ್ತಿರುವ ಗ್ರಾಮಸ್ಥರ ದಿನನಿತ್ಯದ ಗೋಳು ಕೇಳುವವರಿಲ್ಲ

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಯೋಜನೆಯಲ್ಲಿ ಅವರ್ಸಾ ವ್ಯಾಪ್ತಿಯಲ್ಲಿ ಸುಮಾರು ಒಂದು ಕಿ.ಮೀ ನಷ್ಟು ದೂರ ಅವೈಜ್ಞಾನಿಕವಾಗಿ ಅಪಾಯಕಾರಿ ರಸ್ತೆ ನಿರ್ಮಾಣ ಮಾಡಲಾಗಿದೆ. ಈ‌ ಹಿನ್ನೆಲೆಯಲ್ಲಿ ಇಲ್ಲಿ ದಿನನಿತ್ಯವೂ ಅಪಘಾತ ಸಂಭವಿಸುತ್ತಿವೆ.

ಯಾವುದೇ ಸರ್ವಿಸ್ ರಸ್ತೆ ಇಲ್ಲ

ಇನ್ನು ಅವರ್ಸಾ ಗ್ರಾಮದಲ್ಲಿ ಹಾದು ಹೋಗಿರುವ ಹೆದ್ದಾರಿ 45 ಮೀಟರ್ ಅಗಲಿಕರಣ ಮಾಡಲು ಸರಕಾರ ಅಸ್ತು ಹೇಳಿತ್ತು. ಆದರೆ, ಇಲ್ಲಿನ‌ ಕೆಲ ಒತ್ತಡಕ್ಕೆ ಮಣಿದ ಗುತ್ತಿಗೆ ಪಡೆದ ಐಆರ್​ಬಿ ಕಂಪನಿಯವರು ಇದನ್ನ 30 ಮೀಟರ್​ಗೆ ಸೀಮಿತ ಮಾಡಿ ಯಾವುದೇ ಸರ್ವೀಸ್ ರಸ್ತೆ ಕೂಡಾ ನಿರ್ಮಾಣ ಮಾಡದೆ ಕೈ ತೊಳೆದುಕೊಂಡಿದ್ದಾರೆ. ಈ ರೀತಿಯಾದ ಅಪಾಯಕಾರಿ ರಸ್ತೆ ನಿರ್ಮಾಣದಿಂದ ಇಲ್ಲಿ ಕನಿಷ್ಠ ವಾರದಲ್ಲಿ ನಾಲ್ಕೈದು ಅಪಘಾತಗಳು ಸಂಭವಿಸುತ್ತಿದ್ದು, ಗ್ರಾಮಸ್ಥರು ರಸ್ತೆಯಲ್ಲಿ ಓಡಾಡಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ..

ಅವರ್ಸಾ ಗ್ರಾಮದ ಜನರು ಕಾಮಗಾರಿ ಆರಂಭದಲ್ಲೇ ಸರ್ವೀಸ್ ರಸ್ತೆ ಕೊಡಿ ಎಂದು ಸಾಕಷ್ಟು ಬಾರಿ ಹೋರಾಟ ಮಾಡಿದರು. ಆದರೆ, ಇಲ್ಲಿನ ಕೆಲ ಪ್ರಭಾವಿಗಳ ಒತ್ತಡಕ್ಕೆ ಮಣಿದ ಗುತ್ತಿಗೆ ಪಡೆದ ಕಂಪನಿ ಇಲ್ಲಿನ‌ ಜನ ಸಾಮಾನ್ಯರ ಸಮಸ್ಯೆ ಆಲಿಸದೆ ಅಪಾಯಕಾರಿಯಾಗಿ ರಸ್ತೆ ನಿರ್ಮಾಣ ಮಾಡಿದೆ. ಈಗ ಇಲ್ಲಿ‌ ನಿತ್ಯವೂ ಅಪಘಾತಗಳದ್ದೇ ತಲೆನೋವು.

ಇದನ್ನೂ ಓದಿ :  ಕಾರವಾರ ಮೇಲ್ಸೇತುವೆ ಕಾಮಗಾರಿ ವಿಳಂಬ; ಐಆರ್​​ಬಿ ಕಂಪನಿ ನಿರ್ಲಕ್ಷ್ಯಕ್ಕೆ ಬೇಸತ್ತ ಜನರಿಂದ ಛೀಮಾರಿಒಟ್ಟಾರೆ ಹೆದ್ದಾರಿ ಅಗಲೀಕರಣವನ್ನ ಕೈಗೊಂಡಿರುವ ಐಆರ್‌ಬಿ ಕಂಪನಿ ಅವರ್ಸಾ ಗ್ರಾಮದಲ್ಲಿ ಮಾತ್ರ ಸರ್ವಿಸ್ ರಸ್ತೆ ನಿರ್ಮಿಸದೆ ಎಡವಟ್ಟು ಮಾಡಿದ್ದು ಸಂಬಂಧಪಟ್ಟವರು ಇತ್ತ ಗಮನಹರಿಸಿ ಗ್ರಾಮಸ್ಥರಿಗೆ ಹೆದ್ದಾರಿಯಿಂದ ಉಂಟಾಗುತ್ತಿರುವ ಆತಂಕಕ್ಕೆ ಪರಿಹಾರ ಒದಗಿಸಿಕೊಡಬೇಕಿದೆ.

(ವರದಿ : ದರ್ಶನ್ ನಾಯ್ಕ)
First published: February 25, 2020, 8:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories