ಬೆಂಗಳೂರು ಜನ 6 ತಿಂಗಳೊಳಗೆ ಇಡೀ ಜಗತ್ತನ್ನೇ ಗೆಲ್ಲಬಲ್ಲರು ಆದರೆ, ಸರ್ಕಾರ ಹಾಗೆ ಕೆಲಸ ಮಾಡುತ್ತಿಲ್ಲ; ಚಾಟಿ ಬೀಸಿದ ಹಸಿರುಪೀಠ

ಮಾಲಿನ್ಯ ನೀರನ್ನು ಶುಚಿಗೊಳಿಸದೆ ಕೆರೆಗೆ ಹರಿಸಬಾರದು. ಕೊಳಚೆ ನೀರನ್ನು ಕೃಷಿ ಚಟುವಟಿಕೆಗಳಿಗೂ ಬಳಸಬಾರದು. ಕೆಮಿಕಲ್ ಮಿಶ್ರಿತ ನೀರು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ಈ ವಿಚಾರದ ಬಗ್ಗೆ ಯಾವ ಸಮರ್ಥನೆಯನ್ನೂ ನೀಡಬೇಡಿ. ಕೆರೆಗಳ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಹಸಿರು ನ್ಯಾಯಾಧೀಕರಣ ಚಾಟಿ ಬೀಸಿದೆ.

news18-kannada
Updated:December 11, 2019, 11:45 AM IST
ಬೆಂಗಳೂರು ಜನ 6 ತಿಂಗಳೊಳಗೆ ಇಡೀ ಜಗತ್ತನ್ನೇ ಗೆಲ್ಲಬಲ್ಲರು ಆದರೆ, ಸರ್ಕಾರ ಹಾಗೆ ಕೆಲಸ ಮಾಡುತ್ತಿಲ್ಲ; ಚಾಟಿ ಬೀಸಿದ ಹಸಿರುಪೀಠ
ಮಾಲಿನ್ಯಗೊಂಡಿರುವ ವರ್ತೂರು ಕೆರೆ.
  • Share this:
ನವ ದೆಹಲಿ (ಡಿಸೆಂಬರ್ 11); ಬೆಂಗಳೂರಿನ ಜನ 6 ತಿಂಗಳೊಳಗೆ ಇಡೀ ಜಗತ್ತನ್ನೇ ಗೆಲ್ಲಬಲ್ಲರು. ಆದರೆ, ರಾಜ್ಯ ಸರ್ಕಾರ ಮಾತ್ರ ಆ ವೇಗಕ್ಕೆ ಕೆಲಸ ಮಾಡುತ್ತಿಲ್ಲ. ಜಾಗತಿಕವಾಗಿ ಸ್ಪರ್ಧೆಯನ್ನೊಡ್ಡುವ ಜನರನ್ನು ಇರಿಸಿಕೊಂಡು ಕೆರೆ ಅಭಿವೃದ್ಧಿಯಂತಹ ಕೆಲಸವನ್ನು ನೀವು ಬೇರೆಯವರಿಗೆ ಒಪ್ಪಿಸಿದ್ದೀರ ಎಂದು ಹಸಿರು ನ್ಯಾಯಪೀಠ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳಿಗೆ ಚಾಟಿ ಬೀಸಿದೆ.

ಬೆಂಗಳೂರಿನ ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ಮಾಲಿನ್ಯದ ವಿಚಾರ ಇತ್ತೀಚೆಗೆ ರಾಜ್ಯದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಹೀಗಾಗಿ ಈ ಕೆರೆಗಳನ್ನು ಅಭಿವೃದ್ಧಿಪಡಿಸಲು ಕೋರಿ ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿಯನ್ನು ಇಂದು ಪರಿಶೀಲನೆಗೊಳಪಡಿಸಿದ ಹಸಿರು ನ್ಯಾಯಪೀಠ,

“ಪ್ರಸ್ತುತ ದಿನಗಳಲ್ಲಿ ಕೆರೆ ಮತ್ತು ಜಲಮಾಲಿನ್ಯ ಗಂಭೀರವಾದ ವಿಚಾರ. ಮಾಲಿನ್ಯ ವಿಚಾರವನ್ನು ಕರ್ನಾಟಕ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜೀವ ಜಲಕ್ಕೆ ಇಡೀ ದೇಶದಲ್ಲಿ ಇಂದು ತತ್ವಾರ ಇದೆ. ಪರಿಣಾಮ ಭವಿಷ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉದ್ಭವಿಸಿದರೂ ಅಚ್ಚರಿ ಇಲ್ಲ. ಹೀಗಾಗಿ ನೀರನ್ನು ಸರಿಯಾಗಿ ಬಳಸಿಕೊಳ್ಳುವುದನ್ನು ಕಲಿತುಕೊಳ್ಳಬೇಕು” ಎಂದು ಹಸಿರು ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಕಿವಿ ಮಾತು ಹೇಳಿದೆ.

gal15-bellanduru-foam-3
ಮಾಲಿನ್ಯಗೊಂಡಿರುವ ವರ್ತೂರು ಕೆರೆ.


ಅಲ್ಲದೆ, “ಮಾಲಿನ್ಯ ನೀರನ್ನು ಶುಚಿಗೊಳಿಸದೆ ಕೆರೆಗೆ ಹರಿಸಬಾರದು. ಕೊಳಚೆ ನೀರನ್ನು ಕೃಷಿ ಚಟುವಟಿಕೆಗಳಿಗೂ ಬಳಸಬಾರದು. ಕೆಮಿಕಲ್ ಮಿಶ್ರಿತ ನೀರು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ಈ ವಿಚಾರದ ಬಗ್ಗೆ ಯಾವ ಸಮರ್ಥನೆಯನ್ನೂ ನೀಡಬೇಡಿ. ಕೆರೆಗಳ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳಿ.

ತಮಿಳುನಾಡಿನ ಮೆರಿನಾ ಬೀಚ್ ಹೀಗೆ ಹಾಳಾಗಿದೆ. ನೀವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ ಇದ್ದರೆ ಬೆಂಗಳೂರಿನ ಕೆರೆಗಳ ಸ್ಥಿತಿಯೂ ಹಾಗೆ ಆಗಲಿದೆ. 2022ರ ಮಾರ್ಚ್ ಅಂತ್ಯದೊಳಗೆ ಕೆರೆಗಳ ಪುನಶ್ಚೇತನ ಕಾರ್ಯ ಪೂರ್ಣಗೊಳಿಸಿ. ಅಲ್ಲದೆ, ಎಲ್ಲಾ ಕೆರೆಗಳ ಹೂಳು ತೆಗೆಯುವ ಕೆಲಸಕ್ಕೆ ಚಾಲನೆ ನೀಡಿ ಕೆರೆಗಳನ್ನು ಉಳಿಸಿ” ಎಂದು ಎಚ್ಚರಿಕೆ ನೀಡಿದೆ.


First published: December 11, 2019, 11:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading