• Home
  • »
  • News
  • »
  • state
  • »
  •  Udupi ಕಾರ್ಕಳದ ರಸ್ತೆಯೊಂದರ ಫಲಕದಲ್ಲಿ ನಾಥೂರಾಮ್ ಗೋಡ್ಸೆ ಹೆಸರು ಪ್ರತ್ಯಕ್ಷ; ಪೊಲೀಸರಿಂದ ತೆರವು

 Udupi ಕಾರ್ಕಳದ ರಸ್ತೆಯೊಂದರ ಫಲಕದಲ್ಲಿ ನಾಥೂರಾಮ್ ಗೋಡ್ಸೆ ಹೆಸರು ಪ್ರತ್ಯಕ್ಷ; ಪೊಲೀಸರಿಂದ ತೆರವು

ನಾಥೂರಾಮ್ ಗೋಡ್ಸೆ ಹೆಸರಿನ ಬೋರ್ಡ್

ನಾಥೂರಾಮ್ ಗೋಡ್ಸೆ ಹೆಸರಿನ ಬೋರ್ಡ್

ನಾಥೂರಾಮ್ ಗೋಡ್ಸೆ ಹೆಸರಿನ ನಾಮಫಲಕ ತೆರವುಗೊಳಿಸದಿದ್ರೆ ಕಾರ್ಕಳ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ರು. ಫೋಟೋ ವೈರಲ್ ಆಗುತ್ತಿದ್ದಂತೆ ಕಾರ್ಯಾಚರಣೆಗಿಳಿದು ಬೋರ್ಡ್ ತೆರವುಗೊಳಿಸಿದ್ದಾರೆ.

  • Share this:

ಉಡುಪಿ ಜಿಲ್ಲೆಯ ಕಾರ್ಕಳ (Karkala, Udupi) ತಾಲೂಕಿ‌ನ ಬೋಳ ಗ್ರಾಮ ಪಂಚಾಯತ್ (Bola Gram Panchayat) ವ್ಯಾಪ್ತಿಯಲ್ಲಿಯ ಪಡುಗಿರಿ  ರಸ್ತೆಯ ನಾಮಫಲಕದಲ್ಲಿ ನಾಥೂರಾಮ್ ಗೋಡ್ಸೆ (Nathuram Godse) ಹೆಸರು ಪ್ರತ್ಯಕ್ಷವಾಗಿತ್ತು. ನಾಥೂರಾಮ್ ಗೋಡ್ಸೆ ಹೆಸರು ಇರೀ ನಾಮಫಲಕ ತೆರವುಗೊಳಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು (Congress Activist) ಮನವಿ ಮಾಡಿಕೊಂಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪಂಚಾಯತ್ ಅಧಿಕಾರಿಗಳು ಹಾಗೂ ಕಾರ್ಕಳ ಪೊಲೀಸರು (Karkal Police) ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬೋಳ ಪಂಚಾಯ್ತಿ ಸದಸ್ಯರ ಸಮ್ಮುಖದಲ್ಲಿಯೇ ವಿವಾದಾಸ್ಪದ ಬೋರ್ಡ್ ತೆರವುಗೊಳಿಸಲಾಗಿದೆ.


ನಾಥೂರಾಮ್ ಗೋಡ್ಸೆ ಹೆಸರಿನ ನಾಮಫಲಕ ತೆರವುಗೊಳಿಸದಿದ್ರೆ ಕಾರ್ಕಳ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ರು. ಫೋಟೋ ವೈರಲ್ ಆಗುತ್ತಿದ್ದಂತೆ ಕಾರ್ಯಾಚರಣೆಗಿಳಿದು ಬೋರ್ಡ್ ತೆರವುಗೊಳಿಸಿದ್ದಾರೆ.


ಕಾಂಗ್ರೆಸ್ ಕಾರ್ಯಕರ್ತರ ಕೆಲಸಕ್ಕೆ ಸಲಾಂ ಎಂದ ಹರಿಪ್ರಸಾದ್


ಇನ್ನೂ ಗೋಡ್ಸೆ ನಾಮಫಲಕದ ಬಗ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ಈ ನೆಲದಲ್ಲಿ ಗೋಡ್ಸೆ ಸಂತತಿಗಳನ್ನ ಬುಡ ಸಮೇತ ಕಿತ್ತು ಹಾಕಬೇಕು. ಅದು ಥೇಟ್ ಕಾರ್ಕಳದ ರಸ್ತೆಗೆ ಇಟ್ಟಿದ್ದ ಗೋಡ್ಸೆಯ ನಾಮಫಲಕವನ್ನ ಕಿತ್ತು ಹಾಕಿದಂತೆ.


ಇದನ್ನೂ ಓದಿ:  2A Reservation: ಸರ್ಕಾರಕ್ಕೆ ಗಡುವು ನೀಡಿದ ಜಯಮೃತ್ಯುಂಜಯ ಸ್ವಾಮೀಜಿ


ನಾಮ ಫಲಕ ತೆರವುಗೊಳಿಸಿ ಅದೇ ಜಾಗದಲ್ಲಿ ಶ್ರೀ ನಾರಾಯಣ ಗುರುಗಳ ಹೆಸರಿಡಲು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿರುವ ಯುವ ಕಾಂಗ್ರೆಸ್ ಕಾರ್ಯಕರ್ತರ ಕೆಲಸಕ್ಕೆ ಸಲಾಂ ಎಂದು ಬರೆದು ಟ್ವೀಟ್ ಮಾಡಿದ್ದಾರೆ.


ಹಿಜಾಬ್ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದ ಯು.ಟಿ.ಖಾದರ್


ಮಂಗಳೂರಿನಲ್ಲಿ ಹಿಜಬ್ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ಉಪ ನಾಯಕ, ಮಾಜಿ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದರು. ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ. ಪಾಕಿಸ್ತಾನ, ಸೌದಿಯಂತಹ ದೇಶಗಳಿಗೆ ಹೋಗಲಿ. ಆಗ ನಮ್ಮ‌ ದೇಶದ ಮಹತ್ವ ಗೊತ್ತಾಗುತ್ತದೆ ಎಂದರು.


ಇಲ್ಲಿ ಬೇಕಾದ ಹಾಗೆ ಮಾತನಾಡೋದು, ಜಿಲ್ಲಾಧಿಕಾರಿಯನ್ನು ಭೇಟಿಯಾಗೋದು, ಪ್ರೆಸ್ ಮೀಟ್ ಎಲ್ಲಾ ಮಾಡಬಹುದು. ಆದರೆ ಅದನ್ನೇ ವಿದೇಶಕ್ಕೆ ಹೋಗಿ ಮಾತನಾಡಲಿ. ಇಲ್ಲಿ‌ ಹುಲಿಯ ಹಾಗೆ ಇದ್ದವರು ಅಲ್ಲಿ ಬೆಕ್ಕಿನ ತರಹ ಆಗುತ್ತಾರೆ. ನಮ್ಮ ದೇಶದ ಕಾನೂನು ನೀಡಿದ ಅವಕಾಶದ ಮಹತ್ವ ಗೊತ್ತಾಗುತ್ತದೆ. ಇಲ್ಲಿ ಸಿಗುವ ಲಿಬರ್ಟಿಯ ಅರಿವು ಆಗುತ್ತದೆ ಎಂದು ಹಿಜಾಬ್ ವಿದ್ಯಾರ್ಥಿನಿಯರಿಗೆ ಯು.ಟಿ.ಖಾದರ್ ಸಲಹೆ ನೀಡಿದರು.


ವರದಿಗಾರ ಶಾಲು ಎಳೆದ ಅಂತಾ ಸುಳ್ಳು ದೂರು ನೀಡಿದ ಹಿಜಾಬ್ ವಿದ್ಯಾರ್ಥಿನಿ


ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿನಲ್ಲಿ (Government Degree College, Uppinangadi) ನಡೆದ ಹಿಜಾಬ್ ಪ್ರಕರಣಕ್ಕೆ (Hijab Row) ಸಂಬಂಧಿಸಿದಂತೆ ಉಪ್ಪಿನಂಗಡಿ ಠಾಣಾ ಪೊಲೀಸರು (Police) ಪತ್ರಕರ್ತರ (Journalist) ವಿರುದ್ಧ ಸುಳ್ಳು ಕೇಸು ದಾಖಲಿಸಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.


ಜೂನ್ ಎರಡನೇ ತಾರೀಕು ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಜೋರಾದ ಹಿನ್ನೆಲೆಯಲ್ಲಿ ಸ್ಥಳೀಯ ವರದಿಗಾರರು (Local Reporters) ಕಾಲೇಜ್ ಹೋಗಿದ್ದರು. ಪ್ರಾಂಶುಪಾಲರ ಅಧಿಕೃತವಾದ ಮಾಹಿತಿಯನ್ನು ಪಡೆದು ಹೊರಗೆ ಬರುವಂತೆ ಸಂದರ್ಭದಲ್ಲಿ ಒಂದು ಸಮುದಾಯದ ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು (Students)ವರದಿಗಾರರನ್ನು ತಡೆದು ಹಲ್ಲೆಗೆ ಮುಂದಾಗಿದ್ದಾರೆ. ಕಾಲೇಜಿನ ಯಾವುದೇ ವಿಡಿಯೋಗಳನ್ನು (Video) ತೆಗೆಯಬಾರದು ವಿದ್ಯಾರ್ಥಿನಿಯರ ದಾಖಲೀಕರಣ ಮಾಡಬಾರದು ಅಂತ ತಾಕೀತು ಮಾಡಿದ್ದಾರೆ.


ಇದನ್ನೂ ಓದಿ:  Karnataka Politics: ಇಬ್ರಾಹಿಂಗೆ ಮಾನ ಮರ್ಯಾದೆ ಇಲ್ಲ; ಪ್ರತಾಪ್ ಸಿಂಹಗೆ ಸಿದ್ದರಾಮಯ್ಯ ಸವಾಲ್


ಕ್ಯಾಮೆರಾ ಕಿತ್ಕೊಂಡು ವಿಡಿಯೋ ಡಿಲೀಟ್


ಈ ವೇಳೆ ಆಕ್ರೋಶಭರಿತರಾಗಿ ವಿದ್ಯಾರ್ಥಿಗಳ ಗುಂಪು ವರದಿಗಾರರ ಕ್ಯಾಮೆರಾಗಳನ್ನು ಕಿತ್ತು ಬಲವಂತವಾಗಿ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಎಲ್ಲ ಘಟನೆಗಳಿಗೆ ಉಪ್ಪಿನಂಗಡಿ ಠಾಣಾ ಪೊಲೀಸರು ಸಾಕ್ಷರಾಗಿದ್ದು ವರದಿಗಾರರು ಸಂಕಷ್ಟಕ್ಕೆ ಸಿಲುಕಿದ್ದರೂ ರಕ್ಷಣೆ ಮಾಡದೆ ಕಾಲೇಜ್ ಒಳಭಾಗಕ್ಕೆ ಪೊಲೀಸರು ಪ್ರವೇಶ ಮಾಡುವಂತಿಲ್ಲ ಅಂತ ಅಸಹಾಯಕತೆ ತೋರಿದ್ದರು. ಬಳಿಕ ವರದಿಗಾರರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರನ್ನು ನೀಡಿದ್ದರು.

Published by:Mahmadrafik K
First published: