ನಟಸಾರ್ವಭೌಮ ಚಿತ್ರೀಕರಣಕ್ಕೆ ಅಪಸ್ವರ : ಕಾರಣ ಏನು ಗೊತ್ತಾ ? ಈ ಸ್ಟೋರಿ ನೋಡಿ

news18
Updated:July 14, 2018, 7:30 PM IST
ನಟಸಾರ್ವಭೌಮ ಚಿತ್ರೀಕರಣಕ್ಕೆ ಅಪಸ್ವರ : ಕಾರಣ ಏನು ಗೊತ್ತಾ ? ಈ ಸ್ಟೋರಿ ನೋಡಿ
news18
Updated: July 14, 2018, 7:30 PM IST
- ರಾಚಪ್ಪ ಬನ್ನಿದಿನ್ನಿ. ನ್ಯೂಸ್ 18 ಕನ್ನಡ 

ಬಾಗಲಕೋಟೆ(  ಜುಲೈ 14) :  ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರೋ ಮಹಾಕೂಟದಲ್ಲಿ ಪುನೀತ್ ಅಭಿನಯದ ನಟ ಸಾರ್ವಭೌಮ ಚಲನಚಿತ್ರ ಶೂಟಿಂಗ್ ಗೆ ಅಪಸ್ವರ ಕೇಳಿಬಂದಿದೆ. ಚಿತ್ರ ತಂಡದ ಎಡವಟ್ಟಿನಿಂದ ಹೋರಾಟಗಾರರ, ಭಕ್ತರ ಕಣ್ಣು ಕೆಂಪು ಆಗುವಂತೆ ಮಾಡಿದೆ. ಚಲನಚಿತ್ರ ಶೂಟಿಂಗ್ ಗೆ ಯಾಕೆ ಅಪಸ್ವರ ಕೇಳಿಬಂದಿದೆ ಅಂತೀರಾ ಹಾಗಾದರೆ ಈ ಸ್ಟೋರಿ ಓದಿ..

ಪವನ್ ಒಡೆಯರ ನಿರ್ದೇಶನದ ನಟ ಸಾರ್ವಭೌಮ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸ್ತಿದ್ದಾರೆ. ಇಂದು ರಾತ್ರಿ ಚಲನಚಿತ್ರ ದ ಕ್ಲೈಮಾಕ್ಸ್ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಪುಷ್ಕರಣಿಯಲ್ಲಿ ಡಿಗ್ಗಿಂಗ್ ಮೂಲಕ ತಗ್ಗು ತೋಡಿ ಸಟ್ ಹಾಕಿದ್ದಾರೆ. ಇಲ್ಲಿನ ಕಲ್ಲುಗಳನ್ನು ಸಹಿತ ಹೊರತಗೆದಿದ್ದಾರಂತೆ. ಇದ್ರಿಂದ ಅಂತರ್ಜಲ ಸೆಲೆ ಮುಚ್ಚೋ ಆತಂಕ ಭಕ್ತರದು. ಇನ್ನು ಚಲನಚಿತ್ರ ಶೂಟಿಂಗ್ ಗೆ ನಮ್ಮದೇನು ತಕಾರರು ಇಲ್ಲ ಆದ್ರೆ ಪುಷ್ಕರಣೆಯಲ್ಲಿ ಸಟ್ ಹಾಕಿ ಅಂತರ್ಜಲ ಧಕ್ಕೆ ಮಾಡ್ತಿರೋದು ನೋವಾಗಿದೆ ಅಂತಾರೆ ಇಲ್ಲಿನ ಹೋರಾಟಗಾರರು.

ಇನ್ನೂ ಎಂಥ ಭೀಕರ ಬರಗಾಲ ಬಿದ್ರೂ ಪುಷ್ಕರಣೆಯಲ್ಲಿನ ಅಂತರ್ಜಲಕ್ಕೆ ತೊಂದ್ರೆಯಾಗಿಲ್ಲ. ಅಲ್ದೆ ಇಲ್ಲಿ ನೈಸರ್ಗಿಕ ಸೆಲೆಯಿದೆ. ಈ ರೀತಿ ಚಿತ್ರೀಕರಣ ಕ್ಕೆ ಪುಷ್ಕರಣೆಯಲ್ಲಿ ತಗ್ಗು ತೋಡಿ ಸಟ್ ಹಾಕಿರೋದು ಸರಿಯಲ್ಲಂತಿದ್ದಾರೆ ಇತಿಹಾಸಾಕ್ತರು. ಇನ್ನೂ ಸಟ್ ಹಾಕೋಕೆ ಅನುಮತಿ ಯಾಕೆ ಕೊಟ್ಟರಿ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳನ್ನ ಕೇಳಿದ್ರೆ ಮಹಾಕೂಟದಲ್ಲಿರೋ ಪುಷ್ಕರಣೆ ನಮ್ಮ ವ್ಯಾಪ್ತಿಗೆ ಬರೋಲ್ಲ. ದೇವಸ್ಥಾನ ಟ್ರಸ್ಟ್​ನವರ ವ್ಯಾಪ್ತಿಗೆ ಬರುತ್ತೆ ಎಂದು ಹೇಳಿ ನುಣಚಿಕೊಳ್ತಿದ್ದಾರೆ. ಪುಷ್ಕರಣೆಯಲ್ಲಿ ಸಟ್ ಹಾಕಿ ಚಿತ್ರೀಕರಣ ಮಾಡೋದನ್ನ ನಿಷೇದಿಸಬೇಕೆಂದು ಹೇಳ್ತಾರೆ ಭಕ್ತರು.

ಮಹಾಕೂಟ ಸೇರಿದಂತೆ ಸುತ್ತಲಿನ ಐತಿಹಾಸಿಕ ತಾಣಗಳಲ್ಲಿ ನಟ ಸಾರ್ವಭೌಮ ಸಿನಿಮಾ 10 ದಿನಗಳ ಕಾಲ ಶೂಟಿಂಗ್ ನಡೆಯಲಿದೆ ಅಂತ ಹೇಳಲಾಗ್ತಿದೆ. ಆದರೆ ಐತಿಹಾಸಿಕ ಪುಷ್ಕರಣೆಯಲ್ಲಿ ಚಿತ್ರ ತಂಡ ಸಟ್ ಹಾಕೋ ಮೂಲಕ ನೈಸರ್ಗಿಕ ಸೆಲೆಗೆ ಧಕ್ಕೆ ತಂದಿರೋದು ವಿಪರ್ಯಾಸ. ಇನ್ಮೇಲಾದರೂ ಚಿತ್ರತಂಡ ಎಚ್ಚೆತ್ತುಕೊಂಡು ಐತಿಹಾಸಿಕ ಪುಷ್ಕರಣೆಗೆ ಧಕ್ಕೆಯಾಗದಂತೆ ನೋಡುಕೊಳ್ಳಬೇಕಿದೆ.

 
First published:July 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ