ಬೆಂಗಳೂರು (ಮೇ. 5): ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಹೇಗಿದೆ. ಹೇಗೆ ನಿರ್ವಹಣೆಯಾಗುತ್ತಿದೆ. ರೋಗಿಗಳಿಗೆ ಬೇಕಾದ ಹಾಸಿಗೆ, ಆಕ್ಸಿಜನ್ ಸಿಗುತ್ತಿಲ್ಲ. ರಾಜ್ಯಕ್ಕೆ ಸಿಗಬೇಕಾದ ಆಕ್ಸಿಜನ್, ಲಸಿಕೆ ಇನ್ನು ಬಂದಿಲ್ಲ. ಇವುಗಳ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದ ಬೇಕಾದ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆಯುವ ಹೈ ಡ್ರಾಮಾ ಮಾಡಿದ್ದಾರೆ. ಈ ಮೂಲಕ ಅವರ ಪಕ್ಷದ ಆಡಳಿತದ ವಿರುದ್ಧವೇ ಮಾಡಿದ್ದಾರೆ. ಬಿಬಿಎಂಬಿ ಕಾರ್ಯ ನಿರ್ವಹಿಸುತ್ತಿರುವುದು ರಾಜ್ಯ ಸರ್ಕಾರದ ಆಡಳಿತದ ಅಡಿ. ಈ ದಂಧೆ ಬಯಲು ಮಾಡುವ ಮೂಲಕ ತಮ್ಮ ಪಕ್ಷದ ಆಡಳಿತ ಸರಿಯಿಲ್ಲ ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ವಾಗ್ದಾಳಿ ನಡೆಸಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆ ಏಕೆ ನಡೆಸಿದರು?
ರಾಜ್ಯದಲ್ಲಿ ಸೋಂಕು ಉಲ್ಬಣವಾಗುತ್ತಿದ್ದರೂ ಇವರು ಯಾಕೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿದರು. ಈ ಬಗ್ಗೆ ಯಾಕೆ ತೇಜಸ್ವಿ ಸೂರ್ಯ ಮಾತನಾಡುವುದಿಲ್ಲ. ಇದರಿಂದ ಸೋಂಕು ಹಬ್ಬಿಲ್ಲವೇ ಎಂದು ಇದೇ ವೇಳೆ ಪ್ರಶ್ನಿಸಿದರು. ಉತ್ತರ ಪ್ರದೇಶದಿಂದ ಗುಜರಾತ್ ಗೆ ವಾಪಸ್ ಹೋದವರ ಪೈಕಿ ಶೇ. 88 ರಷ್ಟು ಜನರಿಗೆ ಕೋವಿಡ್ ವೈರಸ್ ಸೋಂಕು ತಗುಲಿದೆ. ಅದರ ಬಗ್ಗೆ ಯಾಕೆ ತೇಜಸ್ವಿ ಸೂರ್ಯ ಮಾತಾಡಲ್ಲ ಎಂದು ಪ್ರಶ್ನಿಸಿದರು
ಕೋಮುವಾದಕ್ಕೆ ಲಸಿಕೆ
ತೇಜಸ್ವಿ ಸೂರ್ಯ ಚೀಪ್ ಪಬ್ಲಿಸಿಟಿಗೋಸ್ಕರ ಫೇಕ್ ಟ್ವೀಟ್ ಮಾಡುತ್ತಾರೆ. ಅವರು ಟ್ವೀಟ್ನಲ್ಲಿ ಝೀರೋ ಬೆಡ್ ಇತ್ತು. ನಾನು ಹೋಗಿ ವಿಚಾರಿಸಿದಾಗ 2000 ಬೆಡ್ ಖಾಲಿ ಇದೆ ಎಂದು ತೋರಿಸುತ್ತಿದ್ದಾರೆ. ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ನಿನ್ನೆಯೇ 2015 ಬೆಡ್ ಖಾಲಿ ಇರುವುದಾಗಿ ತೋರಿಸಿದ್ದಾರೆ. ಆದರೆ, ತೇಜಸ್ವಿ ಸೂರ್ಯ ತಮ್ಮ ಪ್ರಚಾರಕ್ಕಾಗಿ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಸಂಸದರ ವಿರುದ್ಧ ಕಿಡಿಕಾರಿದರು.
ಮುಂದುವರೆದು ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೊರೋನಾಗಷ್ಟೇ ಅಲ್ಲ, ಈ ತೇಜಸ್ವಿ ಸೂರ್ಯನಂತವರ ಮನಸ್ಸಿನಲ್ಲಿರುವ ಕಮ್ಯುನಲ್ ವೈರಸ್ ಗೆ ವ್ಯಾಕ್ಸಿನ್ ಬೇಕಾಗಿದೆ. ತೇಜಸ್ವಿ ಮನಸ್ಸಿನಲ್ಲಿರೋ ಕಮ್ಯುನಲ್ ವೈರಸ್ ಸಾಯಿಸಲು ಅದರ ವಿರುದ್ಧ ವ್ಯಾಕ್ಸಿನ್ ಕಂಡು ಹಿಡಿಯಬೇಕಿದೆ ಎಂದರು.
ತಪ್ಪು ಯಾರೇ ಮಾಡಿದ್ದರೂ ಜಾತಿ, ಮತ, ಧರ್ಮ ಹಾಗೂ ವರ್ಣಗಳ ಭೇದವಿಲ್ಲದೇ ಶಿಕ್ಷೆ ಆಗಬೇಕು. ಆದರೆ ಸಂಸದ ತೇಜಸ್ವಿ ಸೂರ್ಯ ಈ 17 ಜನರ ಹೆಸರನ್ನು ಮಾತ್ರ ಹೇಗೆ ತೆಗೆದುಕೊಂಡರು ಎನ್ನುವುದು ಸಾರ್ವಜನಿಕರಿಗೆ ಗೊತ್ತಾಗಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ದಂಧೆ ನಡೆದರೆ ತನಿಖೆ ಆಗಲಿ
ಬೆಡ್ ಅಕ್ರಮ ನಡೆದಿದ್ದರೆ ತನಿಖೆ ಆಗಲಿ. ಸರ್ಕಾರದಲ್ಲಿ ಬಿಬಿಎಂಪಿಯ ಜವಾಬ್ದಾರಿ ಹೊತ್ತಿರುವವರು ರಾಜೀನಾಮೆ ನೀಡಲಿ. ಬೆಡ್ ಬ್ಲಾಕಿಂಗ್ ದಂಧೆ ನಡೆದಿದೆ ಎಂದರೆ ಅದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಬಿಬಿಎಂಪಿ ವಾರ್ ರೂಂ ನಡೆಸಲು ಕಾರಣರಾದವರು. ಸರ್ಕಾರದಲ್ಲಿ ಬಿಬಿಎಂಪಿಯ ಜವಾಬ್ದಾರಿ ಹೊತ್ತಿರುವವರು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಸಂವಿಧಾನ ನಮಗೆಲ್ಲಾ ಸಮಾನತೆ ಹಕ್ಕು ನೀಡಿರುವಾಗ ಒಂದು ಕೋಮಿನ 17 ಜನರ ಹೆಸರು ಪಟ್ಟಿ ಹಿಡಿದು ಮಾತ್ರ ಅವರು ಓದಿದರು. ಇದು ರಾಜಧರ್ಮ ಪಾಲನೆಯೇ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು.
ಚಾಮರಾಜನಗರ ಪ್ರಕರಣ ತಿರುಗಿಸಲು ತೇಜಸ್ವಿ ಸೂರ್ಯ ಈ ಪ್ರಹಸನ ಮಾಡಿದ್ದಾರೆ. ತೇಜಸ್ವಿ ಸೂರ್ಯ ಸರ್ಕಾರದ ಮೇಲೆ ದಾಳಿ ಮಾಡುವ ಮೂಲಕ ಸಿಎಂ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇಪ್ಪತ್ತು ಸಾವಿರ ತೆಗೆದುಕೊಂಡಿರುವವರ ಬಗ್ಗೆ ಅವರು ಮಾತನಾಡುತ್ತಾರೆ. ಆದರೆ ಸರ್ಕಾರ ಕೋಟಿ ಕೋಟಿ ಅವ್ಯವಹಾರ ಮಾಡಿದೆ. ಅದರ ಬಗ್ಗೆ ಮಾತಾಡಿಲ್ಲ. ತೇಜಸ್ವಿ ಸೂರ್ಯ ಒಂದು ಟ್ರಸ್ಟ್ ನಡೆಸುತ್ತಿದ್ದಾರೆ. ಟ್ರಸ್ಟ್ ಕೆಲಸ ಏನು ಎಂದರೆ, ತಮಗೆ ಬೇಕಾದವರಿಗೆ ಬೆಡ್ ಕೊಡಿಸುವುದು. ಇದಕ್ಕಾಗಿ ಸರ್ಕಾರವನ್ನು ಬ್ಯಾಕ್ ಮೇಲ್ ಮಾಡಲಾಗುತ್ತಿದೆ. ಬೆಡ್ ಗಳು ಒಂದೇ ಕೋಮುನವರಿಗೆ ಕೊಡಿಸುವ ಕೆಲಸ ನಡೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ