ಕೆ.ಎಚ್​​ ಮುನಿಯಪ್ಪ ತೀವ್ರ ವಿರೋಧದ ನಡುವೆಯೂ ನಾಸೀರ್​ ಅಹ್ಮದ್​​ಗೆ ಎಂಎಲ್​ಸಿ ಟಿಕೆಟ್​​​

ನಾಸೀರ್​​ ಅಹ್ಮದ್​ ಆಯ್ಕೆ ಹಿಂದೆ ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಹಿಡಿದಿಟ್ಟುಕೊಳ್ಳುವ ತಂತ್ರ ಅಡಗಿದೆ ಎನ್ನಲಾಗುತ್ತಿದೆ.

ನಾಸೀರ್ ಅಹ್ಮದ್

ನಾಸೀರ್ ಅಹ್ಮದ್

  • Share this:
ಕೋಲಾರ(ಜೂ.18): ರಾಜ್ಯ ವಿಧಾನ ಪರಿಷತ್​​ ಚುನಾವಣೆಗೆ ಆಖಾಡ ಸಿದ್ದವಾಗಿದೆ. ಬಿಜೆಪಿ, ಹೊರತುಪಡಿಸಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈಗಾಗಲೇ ಬುಧವಾರ ಅಭ್ಯರ್ಥಿಗಳನ್ನ ಅಂತಿಮಗೊಳಿಸಿದೆ. ಇತ್ತ ಕೋಲಾರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಉದ್ಯಮಿ ಗೋವಿಂದರಾಜು ಹೆಸರು ಫೈನಲ್​​ ಮಾಡಿದರೇ, ಅತ್ತ ಕಾಂಗ್ರೆಸ್​ನಿಂದ ಕೆಜಿಎಫ್​​​ನ ನಾಸೀರ್​​ ಅಹ್ಮದ್​​​ರನ್ನು ಕಾಂಗ್ರೆಸ್​​​ ಹೈಕಮಾಂಡ್​​ ಅಂತಿಮಗೊಳಿಸಿದೆ. 

ಕಾಂಗ್ರೆಸ್​ ಹೈಕಮಾಂಡ್​​ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್​​ ಮತ್ತು ಕೋಲಾರದ ಅಲ್ಪಸಂಖ್ಯಾತ ಸಮುದಾಯದ ನಾಯಕ ನಾಸೀರ್​​ ಅಹ್ಮದ್​ ಅವರನ್ನು ಅಂತಿಮಗೊಳಿಸಿದೆ. ಆದರೀ, ಕಾಂಗ್ರೆಸ್​​ನ ಮಾಜಿ ಸಂಸದ ಕೆ.ಎಚ್​​ ಮುನಿಯಪ್ಪ ನಾಸೀರ್​ ಅಹ್ಮದ್​​ಗೆ ಟಿಕೆಟ್​ ನೀಡದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಬಳಿ ಪಟ್ಟು ಹಿಡಿದಿದ್ದರು. ಹೀಗಿದ್ದರೂ ನಾಸೀರ್​​​ ಹೈಕಮಾಂಡ್​​ ಬಳಿ ಎಂಲ್​ಸಿ ಟಿಕೆಟ್​​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

ರಮೇಶ್ ಕುಮಾರ್ ಸಾರಥ್ಯ, ಸಿದ್ದರಾಮಯ್ಯ ಬೆಂಬಲ, ಕೆ.ಎಚ್ ಮುನಿಯಪ್ಪಗೆ ನಿರಾಸೆ

ನಾಸೀರ್ ಅಹ್ಮದ್​ ಆಯ್ಕೆಗಾಗಿ ಖುದ್ದು ಮಾಜಿ ಸ್ಪೀಕರ್ ರಮೇಶ್ ಕುಮಾರ್​​ ಅವರೇ ನಡೆಸಿದ ಪ್ರಯತ್ನ ಫಲಿಸಿದೆ ಎನ್ನಲಾಗುತ್ತಿದೆ. ಕೆ.ಎಚ್ ಮುನಿಯಪ್ಪನವರ ತೀವ್ರ ವಿರೋಧದ ನಡುವೆಯೂ ಅಖಾಡಕ್ಕಿಳಿದ ಮಾಜಿ ಸ್ಪೀಕರ್​ ರಮೇಶ್​​ ಕುಮಾರ್ ಸಿದ್ದರಾಮಯ್ಯ ಜತೆಗೆ ಚರ್ಚಿಸಿ​​ ನಾಸೀರ್​​ ಅಹ್ಮದ್​ಗೆ ಟಿಕೆಟ್​​ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಸಿದ್ದರಾಮಯ್ಯನವರೇ ಹೈಕಮಾಂಡ್​​ ಬಳಿ ಮಾತಾಡಿದ ಕಾರಣ ನಾಸೀರ್​​ ಅಹ್ಮದ್​ಗೆ ಟಿಕೆಟ್​ ಸಿಕ್ಕಿದೇ ಎನ್ನಲಾಗುತ್ತಿದೆ.

ನಾಸೀರ್​​ ಅಹ್ಮದ್​ ಆಯ್ಕೆ ಹಿಂದೆ ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಹಿಡಿದಿಟ್ಟುಕೊಳ್ಳುವ ತಂತ್ರ ಅಡಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಪರಿಷತ್ ಚುನಾವಣೆ; ಬಿ.ಕೆ. ಹರಿಪ್ರಸಾದ್, ನಾಸೀರ್ ಅಹ್ಮದ್ ಕಾಂಗ್ರೆಸ್ ಅಭ್ಯರ್ಥಿಗಳು

2019ರ ಲೋಕಸಭೆ ಚುನಾವಣೆಯಲ್ಲಿ ಕೆ.ಎಚ್ ಮುನಿಯಪ್ಪ ವಿರುದ್ದ ರಮೇಶ್ ಕುಮಾರ್, ಎಸ್​​.ಎನ್ ನಾರಾಯಣಸ್ವಾಮಿ, ನಾಸೀರ್ ಅಹ್ಮದ್​​ ಕೆಲಸ ಮಾಡಿದ್ದರು. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಇವರನ್ನು ಕಾಂಗ್ರೆಸ್​​ನಿಂದ ಉಚ್ಚಾಟನೆ ಮಾಡುವಂತೆ ಸೋನಿಯಾ ಗಾಂಧಿಗೆ ಮುನಿಯಪ್ಪ ದೂರು ನೀಡಿದ್ದರೂ ಸಹ ಏನು ಪ್ರಯೋಜನವಾಗಲಿಲ್ಲ.

ಬಳಿಕ ಸಿದ್ದರಾಮಯ್ಯ, ರಮೇಶ್ ಕುಮಾರ್ ಜತೆ ಜೊತೆಗೆ ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಪ್ರಚಾರದಲ್ಲಿ ಕಾಣಿಸಿಕೊಂಡ ಕಾರಣ ಬಹಿರಂಗವಾಗಿ ಕೆ.ಎಚ್ ಮುನಿಯಪ್ಪ ಕಿಡಿಕಾರಿದ್ದರು. ಈಗ ತಮ್ಮ ವಿರುದ್ದ ಕೆಲಸ ಮಾಡಿದವರಿಗೆ ಸ್ಥಾನಮಾನ ನೀಡಲು ಪಕ್ಷ ಮುಂದಾಗಿದ್ದು, ಇದಕ್ಕೆ ಮುನಿಯಪ್ಪ ಹೇಗೆ ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕಿದೆ.

ನಾಸೀರ್ ಅಹ್ಮದ್​​ ಯಾರು?

ಕೋಲಾರ ಜಿಲ್ಲೆಯ ಕೆಜಿಎಫ್​​​ ನಿವಾಸಿಯಾಗಿರುವ ನಾಸೀರ್ ಅಹ್ಮದ್​​ ಮೂಲತಃ ಉದ್ಯಮಿ. ಈಗ ನಾಲ್ಕನೇ ಬಾರಿಗೆ ಪರಿಷತ್ ಶಾಸಕರಾಗಿ ಆಯ್ಕೆಯಾಗಲಿದ್ದಾರೆ. ಯೂತ್ ಕಾಂಗ್ರೆಸ್ ನಾಯಕರಾಗಿದ್ದ ಇವರು ಈ ಮಟ್ಟಕ್ಕೆ ಬೆಳೆದಿದ್ದಾರೆ. ಮೊದಲು ಕೋಲಾರ ವಿಧಾನಸಭೆಗೆ  ಸ್ಪರ್ಧಿಸಿ ಸೋತರು. ಬಳಿಕ  ಬೆಂಗಳೂರಿನ ಬಿನ್ನಿಪೇಟೆ ಕಾಂಗ್ರೆಸ್​​ ಶಾಸಕರಾಗಿ ಗೆದ್ದು ಒಂದು ಬಾರಿ ಮಂತ್ರಿಯೂ ಆಗಿದ್ದರು. ನಂತರ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡರು. ಆದರೂ ತಮಗಿದ್ದ ವರ್ಚಸ್ಸಿಂದ ಪರಿಷತ್​​ಗೆ ಆಯ್ಕೆಯಾಗುತ್ತಲೆ ಇದ್ದಾರೆ.
First published: