ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ (Prime Minister Narendra Modi's brother) ಪ್ರಹ್ಲಾದ್ ಮೋದಿ (Prahlad Modi) ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ (Car Accident) ಒಳಗಾಗಿದೆ. ಕರ್ನಾಟಕಕ್ಕೆ (Karnataka) ಬಂದಿದ್ದ ಪ್ರಹ್ಲಾದ್ ಮೋದಿ, ಮೈಸೂರಿನಿಂದ ಚಾಮರಾಜನಗರದ (Mysuru to Chamarajanagar) ಬಂಡೀಪುರಕ್ಕೆ (Bandipur) ತೆರಳುತ್ತಾ ಇದ್ದರು. ಈ ವೇಳೆ ಮಾರ್ಗ ಮಧ್ಯೆ ಪ್ರಹ್ಲಾದ್ ಮೋದಿಯವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ.
ನರೇಂದ್ರ ಮೋದಿ ಸಹೋದರನ ಕಾರು ಅಪಘಾತ
ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಮೈಸೂರು ತಾಲೂಕು ಕಡಕೊಳ ಬಳಿ ಪ್ರಹ್ಲಾದ್ ಮೋದಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ.
ಬೆಂಗಳೂರಿನಿಂದ ಬಂಡಿಪುರಕ್ಕೆ ತೆರಳುವಾಗ ಅಪಘಾತ
ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಬಂಡೀಪುರಕ್ಕೆ ಪ್ರಹ್ಲಾದ್ ಮೋದಿ ತೆರಳುತ್ತಾ ಇದ್ದರು ಎನ್ನಲಾಗಿದೆ. ಈ ವೇಳೆ ಪ್ರಹ್ಲಾದ್ ಮೋದಿ ಕಾರು ಅಪಘಾತಕ್ಕೆ ಒಳಗಾಗಿದೆ.
ಇದನ್ನೂ ಓದಿ: Mann Ki Baat: ಮೋದಿ ಮನ್ ಕಿ ಬಾತ್ನಲ್ಲಿ ಕೊರೊನಾ ಬಗ್ಗೆ ಜಾಗೃತಿ, ಶಿವಮೊಗ್ಗ ದಂಪತಿ ಬಗ್ಗೆ ಪ್ರಧಾನಿ ಮೆಚ್ಚುಗೆ!
ಪ್ರಹ್ಲಾದ್ ಮೋದಿ, ಮಗ ಹಾಗೂ ಸೊಸೆಗೆ ಗಾಯ
ಕಾರಿನಲ್ಲಿ ಪ್ರಹ್ಲಾದ್ ಮೋದಿ, ಅವರ ಪುತ್ರ ಹಾಗೂ ಸೊಸೆ ಪ್ರಯಾಣಿಸುತ್ತಾ ಇದ್ದರು ಎನ್ನಲಾಗಿದೆ. ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುವಾಗ ಮೈಸೂರಿನ ಕಡಕೋಳ ಎಂಬಲ್ಲಿ ಕಾರು ಅಪಘಾತಕ್ಕೆ ಒಳಗಾಗಿದೆ. ಘಟನೆಯಲ್ಲಿ ಪ್ರಹ್ಲಾದ್ ಮೋದಿ, ಅವರ ಪುತ್ರ ಹಾಗೂ ಸೊಸೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಮೈಸೂರು ಎಸ್ಪಿ ಸೀಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನರೇಂದ್ರ ಮೋದಿ ಕಿರಿಯ ಸಹೋದರ ಪ್ರಹ್ಲಾದ್ ಮೋದಿ
ಪ್ರಹ್ಲಾದ್ ಮೋದಿಯವರು ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರ. ದಾಮೋದರದಾಸ್ ಮೋದಿ ಮತ್ತು ಹೀರಾ ಬೆನ್ ಮೋದಿಗೆ ಜನಿಸಿದ ಆರು ಮಕ್ಕಳಲ್ಲಿ ಪ್ರಹ್ಲಾದ್ ನಾಲ್ಕನೇಯವರು. ಸದ್ಯ 69 ವರ್ಷ ವಯಸ್ಸಿನ ಪ್ರಹ್ಲಾದ್ ಮೋದಿಯವರು ಅಖಿಲ ಭಾರತ ನ್ಯಾಯಬೆಲೆ ಅಂಗಡಿ ಡೀಲರ್ಸ್ ಫೆಡರೇಶನ್ನ (ಎಐಎಫ್ಪಿಎಸ್ಡಿಎಫ್) ಉಪಾಧ್ಯಕ್ಷರಾಗಿದ್ದರು. ಜೊತೆಗೆ ಗುಜರಾತ್ ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ ಅಧ್ಯಕ್ಷರೂ ಆಗಿದ್ದಾರೆ.
ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದ ಪ್ರಹ್ಲಾದ್ ಮೋದಿ
ಪ್ರಹ್ಲಾದ್ ಮೋದಿ ಅವರು ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದರು, ಆದರೆ ವಯಸ್ಸಿನ ಕಾರಣದಿಂದ ಅದನ್ನೂ ಬಿಟ್ಟು, ವಿಶ್ರಾಂತ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ನ್ಯಾಯಬೆಲೆ ಅಂಗಡಿಗಾಗಿ ಹಲವಾರು ಪ್ರತಿಭಟನೆ
ಪ್ರಹ್ಲಾದ್ ಮೋದಿಯವರು ಹೋರಾಟದಲ್ಲೂ ಕಾಣಿಸಿಕೊಂಡಿದ್ದರು ಪ್ರಹ್ಲಾದ್ ಮೋದಿ ಅವರು ಹಲವಾರು ವರ್ಷಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಜರಾತ್ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರಸ್ತಾಪಿಸುತ್ತಿದ್ದಾರೆ. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಈ ವಿಷಯಗಳ ಕುರಿತು ಮೋದಿ ಅವರನ್ನು ಭೇಟಿ ಮಾಡಿದ ನಿಯೋಗದ ನೇತೃತ್ವವನ್ನೂ ಅವರು ವಹಿಸಿದ್ದರು.
ಇದನ್ನೂ ಓದಿ: Narendra Modi: ಮಾಸ್ಕ್ ಹಾಕೋಬೇಕು, ದೂರ ನಿಂತ್ಕೋಬೇಕು! ಕೊರೊನಾ ತಡೆಗೆ '3T' ಸೂತ್ರ ಕೊಟ್ಟ ಮೋದಿ
ಸರ್ಕಾರದ ವಿರುದ್ಧವೇ ಪ್ರತಿಭಟಿಸಿದ್ದ ಪ್ರಹ್ಲಾದ್ ಮೋದಿ
ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧವೇ ಪ್ರಹ್ಲಾದ್ ಮೋದಿ ಪ್ರತಿಭಟನೆ ನಡೆಸಿದ್ದರು. ನ್ಯಾಯಬೆಲೆ ಅಂಗಡಿ ವಿತರಕರು ತಮ್ಮ ಕಮಿಷನ್ ಹೆಚ್ಚಳದ ಬೇಡಿಕೆಯಂತಹ ವಿಷಯಗಳ ಕುರಿತು ರಾಜ್ಯ ರಾಜಧಾನಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಪ್ರಹ್ಲಾದ್ ಮೋದಿಯವರು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಇದಕ್ಕೂ ಮುನ್ನ ಫೆಬ್ರವರಿ 2021 ರಲ್ಲಿ, ಉತ್ತರ ಪ್ರದೇಶದಲ್ಲಿ ತಮ್ಮ ಬೆಂಬಲಿಗರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಪ್ರಹ್ಲಾದ್ ಮೋದಿ ಅವರು ಉತ್ತರ ಪ್ರದೇಶದ ಲಕ್ನೋ ವಿಮಾನ ನಿಲ್ದಾಣದಲ್ಲಿ ಧರಣಿ ನಡೆಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ