ಫೆ.18ಕ್ಕೆ ಮೋದಿ, 20ಕ್ಕೆ ಅಮಿತ್ ಶಾ: ಕರ್ನಾಟಕದಲ್ಲಿ ಕೇಸರಿ ದಿಗ್ಗಜರ ಚುನಾವಣಾ ರಣಕಹಳೆ


Updated:February 14, 2018, 8:21 PM IST
ಫೆ.18ಕ್ಕೆ ಮೋದಿ, 20ಕ್ಕೆ ಅಮಿತ್ ಶಾ: ಕರ್ನಾಟಕದಲ್ಲಿ ಕೇಸರಿ ದಿಗ್ಗಜರ ಚುನಾವಣಾ ರಣಕಹಳೆ

Updated: February 14, 2018, 8:21 PM IST
ಬೆಂಗಳೂರು(ಫೆ.14): ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿ ಪ್ರಚಾರ ಭರಟೆ ತೀವ್ರಗೊಳಿಸಿದ್ದಾರೆ. ಫೆ.18ಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಕೇಸರಿ ಪಡೆಯ ಚುನಾವಣಾ ಚಟುವಟಿಕೆಗೆ ಮತ್ತಷ್ಟು ಬಿರುಸು ನೀಡಲಿದ್ದಾರೆ.

ಫೆ.18ಕ್ಕೆ ಮೈಸೂರಿಗೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರಮೋದಿ, ಫೆ. 19ರಂದು ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಶ್ರವಣಬೆಳಗೊಳಕ್ಕೆ ತೆರಳಲಿದ್ದಾರೆ. ಮಹಾಮಸ್ತಾಭಿಷೇಕದ ಸಂಭ್ರಮ ಕಣ್ತುಂಬಿಸಿಕೊಂಡ ಬಳಿಕ ರೈಲ್ವೇ ಇಲಾಖೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಎರಡು ದಿನ ಮೈಸೂರಿನಲ್ಲಿ ನರೇಂದ್ರಮೋದಿ ಪ್ರವಾಸ ಮಾಡಲಿದ್ದಾರೆ. ಹೋಟೆಲ್ ಲಲಿತ ಮಹಲ್ ಪ್ಯಾಲೇಸ್​ನಲ್ಲಿ ಉಳಿದುಕೊಳ್ಳಲಿರುವ ನರೇಂದ್ರಮೋದಿ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಯಾರ ಜೊತೆ ಎಂಬ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಹೀಗಾಗಿ, ನರೇಂದ್ರಮೋದಿ ವಿಡಿಯೋ ಕಾನ್ಫರೆನ್ಸ್ ಭಾರಿ ಕುತೂಹಲ ಮೂಡಿಸಿದೆ.
ಫೆ.18ರಂದು ನರೇಂದ್ರಮೋದಿ ಭೇಟಿ ಹಿನ್ನೆಲೆಯಲ್ಲಿ ಅಮಿತ್ ಶಾ ಪ್ರವಾಸವನ್ನ ಕೆಲ ದಿನಗಳ ಕಾಲ ಮುಂದೂಡಲಾಗಿದ್ದು, ಫೆಬ್ರವರಿ 20 ರಂದು ಅಮಿತ್ ಶಾ ಮಂಗಳೂರಿಗೆ ಆಗಮಿಸುತ್ತಿದ್ದಾರೆ. 21, 22ರಂದು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭೇಟಿ ನಿಗದಿಯಾಗಿದೆ.

ಫೆ.20ಕ್ಕೆ ಮಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ ಕುಕ್ಕೆ ಸುಬ್ರಮಣ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. 20 ಮತ್ತು 21ರಂದು ಎರಡು ದಿನ‌ ಮಂಗಳೂರು ಪ್ರವಾಸ‌ ಮಾಡುತ್ತಾರೆ. ದೀಪಕ್ ರಾವ್ ಮನೆಗೆ ಭೇಟಿ, ಕರಾವಳಿ ಮೀನುಗಾರರ ಸಮಾವೇಶ, ನವಶಕ್ತಿ ಸಮಾವೇಶದಲ್ಲಿ ಅಮಿತ್ ಷಾ ಭಾಗಿಯಾಗಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹತ್ಯೆಗೀಡಾದ ಪರೇಶ್ ಮೇಸ್ತಾ ಮನೆಗೆ ಭೇಟಿ ನಿಗದಿಯಾಗಿದೆ.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ