• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Narendra Modi: ನಂಜುಂಡೇಶ್ವರನಿಗೆ 'ನಮೋ' ಎಂದ ಪ್ರಧಾನಿ, ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಕೆ

Narendra Modi: ನಂಜುಂಡೇಶ್ವರನಿಗೆ 'ನಮೋ' ಎಂದ ಪ್ರಧಾನಿ, ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಕೆ

ನರೇಂದ್ರ ಮೋದಿ

ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಇಂದು ನಂಜನಗೂಡಿನ ನಂಜುಂಡೇಶ್ವರನ ದರ್ಶನ ಪಡೆದರು. ದೇಗುಲದ ಆವರಣದಲ್ಲಿರುವ ಶಕ್ತಿ ಗಣಪತಿಗೆ ಮೊದಲು ಪೂಜೆ ಸಲ್ಲಿಸಿದರು. ಬಳಿಕ ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.

  • News18 Kannada
  • 4-MIN READ
  • Last Updated :
  • Nanjangud, India
  • Share this:

ಮೈಸೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ (Prime Minister Narendra Modi) ಅಬ್ಬರದ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಇಂದು ನಂಜನಗೂಡಿನ ನಂಜುಂಡೇಶ್ವರನ (Nanjundeshwar) ದರ್ಶನ ಪಡೆದರು. ನಂಜನಗೂಡಿನಲ್ಲಿ (Nanjangud) ಸಮಾವೇಶದಲ್ಲಿ ಭಾಗಿಯಾದ ನರೇಂದ್ರ ಮೋದಿ, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು. ಬಳಿಕ ನಂಜನಗೂಡಿಗೆ ತೆರಳಿ ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಮಾವೇಶದ ಬಳಿಕ ನಂಜನಗೂಡು ದೇವಸ್ಥಾನಕ್ಕೆ ಆಗಮಿಸಿದ ಮೋದಿ, ದೇಗುಲದ ಆವರಣದಲ್ಲಿರುವ ಶಕ್ತಿ ಗಣಪತಿಗೆ ಮೊದಲು ಪೂಜೆ ಸಲ್ಲಿಸಿದರು. ಬಳಿಕ ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಬಿಲ್ವಪತ್ರೆ ಹಿಡಿದು ಪ್ರಧಾನಿ ಮೋದಿ ಸಂಕಲ್ಪ ಮಾಡಿಕೊಂಡರು.


ನಂಜುಂಡೇಶ್ವರನ ಸನ್ನಿಧಿಯಲ್ಲಿ ಮೋದಿ ಧ್ಯಾನ


ನರೇಂದ್ರ ಮೋದಿ ನಂಜನಗೂಡು ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಬಿಜೆಪಿಗೆ ಗೆಲುವು ನೀಡುವಂತೆ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಶಾಲು ಹೊದೆಸಿ, ಹೂವಿನ ಹಾರ ಹಾಕಿದ ಅರ್ಚಕರು, ಮೋದಿಯವಕರಿಗೆ ಆಶೀರ್ವದಿಸಿದರು.  ದೇಗುಲದ ಪ್ರಧಾನ ಅರ್ಚಕ ನೀಲಕಂಠ ದೀಕ್ಷಿತ್ ಪೂಜೆ ನೆರವೇರಿಸಿ, ಮೋದಿಗೆ ತಾಂಬೂಲ ಪ್ರಸಾದ ವಿತರಿಸಿದರು. ಸುಮಾರು 30 ನಿಮಿಷಗಳೂ ಹೆಚ್ಚು ಕಾಲ ದೇಗುದಲ್ಲಿದ್ದ ಮೋದಿ ಪ್ರಸಾದ ಪಡೆದು, ಕೆಲ ಸಮಯ ಧ್ಯಾನ ಮಾಡಿದ್ರು.


ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ


ಇದಕ್ಕೂ ಮುನ್ನ  ನಂಜನಗೂಡಿನ ಎಲಚಗೆರೆಬೋರೆಯಲ್ಲಿ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿ, ಕಾಂಗ್ರೆಸ್ ವಿರುದ್ಧ ಗುಡುಗಿದರು. ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ದಕ್ಷಿಣ ಕಾಶಿ ನಂಜನಗೂಡಿ ಜನತೆಗೆ ನನ್ನ ನಮಸ್ಕಾರಗಳು, ಚಾಮುಂಡೇಶ್ವರಿ ದೇವಿಯ ಸನ್ನಿದಿಗೆ ಬಂದಿರೋದು ನನ್ನ ಸೌಭಾಗ್ಯ. ಮಲೆ ಮಹದೇಶ್ವರ ಸ್ವಾಮಿ ಹಾಗೂ ಸುತ್ತೂರು ಮಠ, ಆದಿ ಚುಂಚನಗಿರಿ ಮಠ, ದೇವನೂರು ಮಲ್ಲೇಶ ಮಠಕ್ಕೆ, ಕಪಿಲಾ‌ನದಿಗೆ ಪ್ರಣಾಮಗಳು ಅಂತ ನಮಿಸಿದರು.



ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ


ಭಾಷಣದ ಉದ್ದಕ್ಕೂ ಕಾಂಗ್ರೆಸ್ ವಿರುದ್ಧ ಗುಡುಗಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್​ನವರು ಹಣ ಲೂಟಿ ಮಾಡಿಕೊಂಡು ಆರಾಮವಾಗಿ ಇದ್ದರು. ಬಡವರ ಹೆಸರಿನಲ್ಲಿ ಕಾಂಗ್ರೆಸ್​ನವರು ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಈಗಲೂ ಅದೇ ರೀತಿಯ ಸುಳ್ಳು ಹೇಳಿಕೊಂಡು ಹೆಸರಿನಲ್ಲಿ ಚುನಾವಣೆಯಲ್ಲಿ ಭರವಸೆ ನೀಡುತ್ತಿದ್ದಾರೆ. ಅವರ ಭರವಸೆಯನ್ನು ನಂಬಬೇಡಿ ಅಂತ ಮನವಿ ಮಾಡಿದ್ರು.




ಇದನ್ನೂ ಓದಿ: Narendra Modi: ಮೋದಿಯವರ 'ಡಬಲ್ ಇಂಜಿನ್ ಸರ್ಕಾರ', ಬದಲಾಯಿಸಿತಾ ರಾಜ್ಯ ರಾಜಕೀಯದ ಲೆಕ್ಕಾಚಾರ?


ಬಿಜೆಪಿ ಗೆಲುವಿನ ಬಗ್ಗೆ ಮೋದಿ ಭರವಸೆ

top videos


    ಇದು ಕರ್ನಾಟಕದ ಜನಕ್ಕೆ ಹೊಸ ಇತಿಹಾಸ ಬರೆಯುವ ಚುನಾವಣೆಯಾಗಿದ್ದು, ಇದು ಕರ್ನಾಟಕ ನಂಬರ್ 1 ಮಾಡುವ ಚುನಾವಣೆಯಾಗಿದೆ ಅಂತ ಹೇಳಿದ್ರು. ಈ ಬಾರಿ ರಾಜ್ಯದ ಜನರು ಡಬಲ್ ಇಂಜಿನ್ ಸರ್ಕಾರ ಬಗ್ಗೆ ಭರವಸೆ ಇಟ್ಟಿದ್ದಾರೆ ಅಂತ ವಿಶ್ವಾಸದ ಮಾತುಗಳನ್ನು ಮೋದಿ ಆಡಿದ್ರು.

    First published: