• Home
 • »
 • News
 • »
 • state
 • »
 • National Youth Festival 2023: ಇಂದು ಗಂಡುಮೆಟ್ಟಿದ ನಾಡಲ್ಲಿ ಮೋದಿ ಘರ್ಜನೆ; ಭರ್ಜರಿ ರೋಡ್​ ಶೋ, ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ ಪ್ರಧಾನಿ?

National Youth Festival 2023: ಇಂದು ಗಂಡುಮೆಟ್ಟಿದ ನಾಡಲ್ಲಿ ಮೋದಿ ಘರ್ಜನೆ; ಭರ್ಜರಿ ರೋಡ್​ ಶೋ, ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ ಪ್ರಧಾನಿ?

ಪ್ರಧಾನಿ ಮೋದಿ ಕರ್ನಾಟಕ ಭೇಟಿ

ಪ್ರಧಾನಿ ಮೋದಿ ಕರ್ನಾಟಕ ಭೇಟಿ

ಇಂದು ಪ್ರಧಾನಿ ನರೇಂದ್ರ ಮೋದು ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ರೋಡ್​ಶೋ ಮಾಡುವುದು ಫೈನಲ್​ ಆಗಿದೆ. ಅವಳಿ ನಗರದಲ್ಲಿ ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಯುವಜನೋತ್ಸವ ನಡೆಯುತ್ತಿದೆ.

 • News18 Kannada
 • 5-MIN READ
 • Last Updated :
 • Hubli-Dharwad (Hubli), India
 • Share this:

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನು ನಡೆಸಿರುವ ಕಾಂಗ್ರೆಸ್ ನಿನ್ನೆಯಷ್ಟೇ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿತ್ತು. ಇತ್ತ ಜೆಡಿಎಸ್ ಕೂಡ ಅಧಿಕಾರಕ್ಕೆ ಬಂದರೇ ಪ್ರತಿ ಮನೆಗೊಂದು ​ ಉದ್ಯೋಗದ ನೀಡುವುದಾಗಿ ಭರವಸೆ ನೀಡಿತ್ತು. ಹಾಗಿದ್ರೆ ರಾಜ್ಯ ಬಿಜೆಪಿ ನಾಯಕರು ಏನ್​ ಕೊಡ್ತಾರೆ? ಏನ್​ ಘೋಷಣೆ ಮಾಡ್ತಾರೆ? ಎಂಬ ಕುತೂಹಲ ಹಲವರನ್ನು ಕಾಡುತ್ತಿದೆ. ಈ ನಡುವೆ ಇಂದು ಪ್ರಧಾನಿ ನರೇಂದ್ರ ಮೋದು ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ರೋಡ್​ಶೋ ಮಾಡುವುದು ಫೈನಲ್​ ಆಗಿದೆ. ಅವಳಿ ನಗರದಲ್ಲಿ ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಯುವಜನೋತ್ಸವ ನಡೆಯುತ್ತಿದೆ. 5 ದಿನಗಳ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ನೆಹರೂ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ. ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹುಬ್ಬಳ್ಳಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.


ಮೋದಿ ಕಾರ್ಯಕ್ರಮದಿಂದ ಶೆಟ್ಟರ್​​ ಔಟ್​, ತಪ್ಪಿನ ಅರಿವಾಗಿ ಕೊನೇ ಕ್ಷಣದಲ್ಲಿ ಆಹ್ವಾನ


ಸೆಂಟ್ರಲ್ ಕ್ಷೇತ್ರದ ಶಾಸಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ರನ್ನು ವೇದಿಕೆ ಮೇಲೆ ಕೈಬಿಟ್ಟ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪ್ರಧಾನಿಗಳ ಕಾರ್ಯಕ್ರಮದಲ್ಲಿ ಭಾಗಿಯಾಗೋಕೆ ಅಂತಿಮ ಕ್ಷಣದಲ್ಲಿ ಜಗದೀಶ್​ ಶೆಟ್ಟರ್​ಗೆ ಆಹ್ವಾನ ಹೋಗಿದೆ. ಶೆಟ್ಟರ್​ಗೆ ಆಹ್ವಾನ ಕೊಟ್ಟಿಲ್ಲ ಅನ್ನೋದು ಅಧಿಕಾರಿಗಳ ಎಡವಟ್ಟು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹೇಳಿದ್ದರು.ಇದನ್ನೂ ಓದಿ: Karnataka Election 2023: ಕಾಂಗ್ರೆಸ್​​​​ ಅಧಿಕಾರಕ್ಕೆ ಬಂದ್ರೆ ಕರೆಂಟ್​ ಫ್ರೀ; ರಾಜ್ಯದ ಪ್ರತಿಮನೆಗೂ 200 ಯೂನಿಟ್​ ಉಚಿತ


2023 ಅಜೆಂಡಾ ಹುಬ್ಬಳ್ಳಿಯಲ್ಲಿ ಮೋದಿ ರೋಡ್​ಶೋ


2023ರ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದೆ ಬಿಜೆಪಿ. ಹಾಗಾಗಿ ಪ್ರಧಾನಿ ಮೋದಿ ಎಂಬ ಮ್ಯಾಜಿಕ್​ಮೆನ್​​ರನ್ನ ಕರೆಸಿ ಸಮಾವೇಶ ನಡೆಸುತ್ತಿದೆ. ಬರೀ ಸಮಾವೇಶ ಅಲ್ಲ, ಇಂದು ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿಯವ್ರ ರೋಡ್​ಶೋ ಕೂಡ ನಡೆಯೋದು ಖಚಿತವಾಗಿದೆ.


ಪ್ರಧಾನಿ ಮೋದಿ ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ?


ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸ್ತಾರೆ. ಏರ್​ಪೋರ್ಟ್​​ನಿಂದ ನೆಹರೂ ಮೈದಾನದವರೆಗೆ ಅಂದ್ರೆ ಬರೋಬ್ಬರಿ ಏಳುವರೆ ಕಿಲೋಮೀಟರ್​ ರೋಡ್​​ಶೋನಲ್ಲಿ ಪ್ರಧಾನಿ ಮೋದಿ ಭಾಗಿಯಾಗುತ್ತಾರೆ.


ಇದನ್ನೂ ಓದಿ: Siddaramaiah: MLC + ಮಂತ್ರಿಗಿರಿ? ಶ್ರೀನಿವಾಸಗೌಡರ ಕ್ಷೇತ್ರ ತ್ಯಾಗದ ಹಿಂದಿನ ಅಸಲಿಯತ್ತು ಏನು? ಆಡಿಯೋ ವೈರಲ್


ಸಂಜೆ 4 ಗಂಟೆಗೆ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟನೆ ಆಗಲಿದೆ. ರೋಡ್ ಶೋ ನಡೆಯೋ ಮಾರ್ಗದುದ್ದಕ್ಕೂ ಪೊಲೀಸ್ ನಿಗಾವಹಿಸಿದ್ದಾರೆ. ಭದ್ರತಾ ದೃಷ್ಟಿಯಿಂದ ಹುಬ್ಬಳ್ಳಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಯುವ ಜನೋತ್ಸವದಲ್ಲಿ 25,000+ ಯುವಕರಿಗೆ ಸ್ಥಳಾವಕಾಶ ಇದ್ದು ಸಮಾವೇಶದಲ್ಲಿ ಅಂದಾಜು 2 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ.


ಇನ್ನು, ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸ್ವಾಮಿ ವಿವೇಕಾನಂದರ ಜಯಂತಿಯಂದು ನಾನು ಹುಬ್ಬಳ್ಳಿಯಲ್ಲಿ 26 ನೇ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಲು ಕರ್ನಾಟಕಕ್ಕೆ ಬರುತ್ತೇನೆ. ಸ್ವಾಮಿ ವಿವೇಕಾನಂದರ ಆದರ್ಶಗಳು ನಮ್ಮ ಯುವಕರಿಗೆ ಮಾರ್ಗದರ್ಶನ ನೀಡುತ್ತಿರಲಿ ಮತ್ತು ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರೇರೇಪಿಸಲಿ ಎಂದು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.ಮೋದಿಯವರನ್ನ ಸ್ವಾಗತಿಸೋಕೆ ಸಿಎಂ ಬೊಮ್ಮಾಯಿ ಸೇರಿದಂತೆ ಇಡೀ ಸರ್ಕಾರವೇ ಹುಬ್ಬಳ್ಳಿಗೆ ಆಗಮಿಸುತ್ತಿದೆ. ಮೋದಿ ಆಗಮನ ಹುಬ್ಬಳ್ಳಿ ಧಾರವಾಡದ ಜೊತೆ ಉತ್ತರ ಕರ್ನಾಟಕದಲ್ಲೂ ಬಿಜೆಪಿಗೆ ಭರ್ಜರಿ ತಂದುಕೊಡುವ ನಿರೀಕ್ಷೆ ಕಮಲ ಕಲಿಗಳದ್ದಾಗಿದೆ. ಇತ್ತ ಇತ್ತೀಚೆಗಷ್ಟೇ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಿದ್ದರು. ಇಂದಿನ ಕಾರ್ಯಕ್ರಮ ಹೊರತು ಪಡಿಸಿದರೆ ಮುಂದಿನ ತಿಂಗಳಿನಲ್ಲೂ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಈ ಹಿಂದೆ ತಾವೇ ಶಂಕು ಸ್ಥಾಪನೆ ಮಾಡಿದ್ದ ತುಮಕೂರಿನ ಎಚ್‌ಎಎಲ್‌ ಹೆಲಿಕಾಪ್ಟರ್‌ ಘಟಕವನ್ನು ಫೆಬ್ರವರಿ 12ರಂದು ಉದ್ಘಾಟನ ಮಾಡಲಿದ್ದಾರೆ.

Published by:Sumanth SN
First published: