PM Modi In Mangaluru: ಯಡಿಯೂರಪ್ಪರನ್ನು ಬಳಿ ಕರೆದು ಕೂರಿಸಿಕೊಂಡ ಮೋದಿ! ಎಲೆಕ್ಷನ್ ಹೊತ್ತಿಗೆ ಬಿಎಸ್​​ವೈ ಅನಿವಾರ್ಯವಾದ್ರಾ?

ಮಂಗಳೂರಿನಲ್ಲಿ ಪ್ರಧಾನಿ ಮೋದಿ ವೇದಿಕೆಗೆ ಬರುತ್ತಿದ್ದಂತೆ ಮಾಜಿ ಸಿಎಂ ಯಡಿಯೂರಪ್ಪರನ್ನು ವೇದಿಕೆಗೆ ಕರೆದರು. ಬಳಿಕ ವೇದಿಕೆಯಲ್ಲಿ ತಮ್ಮ ಸಾಲಿನಲ್ಲೇ ಕೂರಿಸಿದರು. ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಪ್ರಧಾನಿ ಮೋದಿ ಕಾರ್ಯಕ್ರಮದ ವೇದಿಕೆಗೆ ಯಡಿಯೂರಪ್ಪರಿಗೆ ಆಹ್ವಾನ ಇರಲಿಲ್ಲ.

ಯಡಿಯೂರಪ್ಪ-ಮೋದಿ

ಯಡಿಯೂರಪ್ಪ-ಮೋದಿ

  • Share this:
ಕಡಲನಗರಿ ಮಂಗಳೂರಿನಲ್ಲಿ ಪ್ರಧಾನಿ ಮೋದಿ ಮೇನಿಯಾ (Modi) ಜೋರಾಗಿತ್ತು. ಮೋದಿ 3,700 ಕೋಟಿಯ ಯೋಜನೆಗಳಿಗೆ ಚಾಲನೆ ಕೊಟ್ಟರು. ಬಳಿಕ ಮೋದಿ ಮಾತನಾಡಿ ಕರ್ನಾಟಕ ಸರ್ಕಾರದ (Karnataka Government) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ (Double Engine Government) ಲಾಭವಾಗಿದೆ. ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದೆ ಅಂತಾ ಮೋದಿ ಹೇಳಿದರು. ಇದೇ ವೇಳೆ ಯಡಿಯೂರಪ್ಪರನ್ನು(Yediyurappa)  ಪ್ರಧಾನಿ ಮೋದಿ ಬಳಿ ಕರೆದು ತಮ್ಮ ಸಾಲಿನಲ್ಲೇ ಕೂರಿಸಿಕೊಂಡರು. ಇಷ್ಟು ದಿನದ ಪ್ರಧಾನಿ ಕಾರ್ಯಕ್ರಮಕ್ಕೆ ಯಡಿಯೂರಪ್ಪರವರಿಗೆ ಆಹ್ವಾನ ಇರಲಿಲ್ಲ. ಇದೀಗ ಚುನಾವಣೆ ಹತ್ತಿರವಾಗ್ತಿದ್ದಂತೆ ಮತ್ತೆ ರಾಜ್ಯ ಬಿಜೆಪಿಗೆ (BJP) ಯಡಿಯೂರಪ್ಪರೇ ಅನಿವಾರ್ಯವಾದಂತೆ ಭಾಸವಾಗ್ತಿದೆ.

ಮಂಗಳೂರಿನಲ್ಲಿ ಪ್ರಧಾನಿ ಮೋದಿ ವೇದಿಕೆಗೆ ಬರುತ್ತಿದ್ದಂತೆ ಮಾಜಿ ಸಿಎಂ ಯಡಿಯೂರಪ್ಪರನ್ನು ವೇದಿಕೆಗೆ ಕರೆದರು. ಬಳಿಕ ವೇದಿಕೆಯಲ್ಲಿ ತಮ್ಮ ಸಾಲಿನಲ್ಲೇ ಕೂರಿಸಿದರು. ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಪ್ರಧಾನಿ ಮೋದಿ ಕಾರ್ಯಕ್ರಮದ ವೇದಿಕೆಗೆ ಯಡಿಯೂರಪ್ಪರಿಗೆ ಆಹ್ವಾನ ಇರಲಿಲ್ಲ. ಯಡಿಯೂರಪ್ಪ ಅಧಿಕಾರದಿಂದ ಇಳಿದ ನಂತರ ಮೋದಿಯವರ ಮೊದಲ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕಾಣಿಸಿಕೊಂಡರು.

ಮೋದಿಗೆ ಉಡುಪಿ ಶ್ರೀಕೃಷ್ಣ ವಿಗ್ರಹ ನೀಡಿ ಗೌರವ
ಇದೀಗ ಚುನಾವಣೆ ಹತ್ತಿರವಾಗ್ತಿದ್ದಂತೆ ಬಿಜೆಪಿಗೆ ಯಡಿಯೂರಪ್ಪ ಮತ್ತಷ್ಟು ಅನಿವಾರ್ಯ ಆಗ್ತಿದ್ದಾರೆ. ಇದೇ ಸುಳಿವಲ್ಲೋ ಏನೋ ಮೋದಿಯವರು ತಮ್ಮ ಜೊತೆಯ ಮೊದಲ ಸಾಲಿನಲ್ಲೇ ಬಿಎಸ್​​ವೈಗೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟರು. ಇನ್ನು ಪ್ರಧಾನಿ ಮೋದಿಗೆ ಉಡುಪಿ ಶ್ರೀಕೃಷ್ಣ ವಿಗ್ರಹ ನೀಡಿ ಗೌರವಿಸಲಾಯ್ತು.

ಇದನ್ನೂ ಓದಿ: ಮಂಗಳೂರಿನಲ್ಲಿ ನಮೋ ಮೇನಿಯಾ, ಮೋದಿ ಭಾಷಣದ ಹೈಲೈಟ್ಸ್

ಡಬಲ್ ಇಂಜಿನ್ ಸರ್ಕಾರದಿಂದ ಲಾಭ
ದೇಶದ ಜನರ ಆಶಯ ಈಡೇರಿಸಲು ಪಣ ತೊಟ್ಟಿದ್ದೇವೆ. ದೇಶದ ಜನರಿಗಾಗಿ ಡಬಲ್ ಇಂಜಿನ್ ಸರ್ಕಾರ ಪಣ ತೊಟ್ಟಿದೆ. ಜನರ ಆಶಯಗಳೇ ನಮ್ಮ ಸರ್ಕಾರಕ್ಕೆ ಆದೇಶ ಎಂದರು. ಡಬಲ್ ಇಂಜಿನ್ ಸರ್ಕಾರದ ಬಗ್ಗೆ ದನಿಎತ್ತುತ್ತಿರುವ ವಿಪಕ್ಷಗಳಿಗೆ ಮೋದಿ ಮತ್ತೊಮ್ಮೆ ಟಾಂಗ್ ಕೊಟ್ಟರು.

ಮೆಟ್ರೋ ನಗರಗಳ ಸಂಖ್ಯೆ 4 ಪಟ್ಟು ಹೆಚ್ಚಳ
ದೇಶದ ಮೂಲೆಮೂಲೆಯಲ್ಲಿ ಆಧುನಿಕ ಮೂಲಭೂತ ಸೌಕರ್ಯ ಹೆಚ್ಚು ಮಾಡಲಾಗ್ತಿದೆ. 8 ವರ್ಷಗಳಲ್ಲಿ ಮೆಟ್ರೋ ನಗರಗಳ ಸಂಖ್ಯೆ 4 ಪಟ್ಟು ಹೆಚ್ಚಳವಾಗಿದೆ. ಉಡಾನ್ ಯೋಜನೆ ಅಡಿಯಲ್ಲಿ ಈವರೆಗೆ 1 ಕೋಟಿಗೂ ಹೆಚ್ಚು ಜನ ಪ್ರಯಾಣ ಮಾಡಿದ್ದಾರೆ ಅಂತಾ ಹೇಳಿದ್ರು.

ಡಿಜಿಟಲ್ ಪೇಮೆಂಟ್ ಹೆಚ್ಚು ಪ್ರಚಲಿತ
ಡಿಜಿಟಲ್ ಪೇಮೆಂಟ್ ಇಂದು ಹೆಚ್ಚು ಪ್ರಚಲಿತದಲ್ಲಿದೆ. ಜನ ಇಂದು ಕಡಿಮೆ ಬೆಲೆಯ ವೇಗದ ಇಂಟರ್ನೆಟ್ ಬಯಸುತ್ತಾರೆ. 6 ಲಕ್ಷ ಕಿ.ಮೀ ಆಪ್ಟಿಕಲ್ ಫೈಬರ್ ಮೂಲಕ ಗ್ರಾಮಗಳ ಜೋಡಣೆ ಮಾಡಲಾಗ್ತಿದೆ. 5ಜಿ ಮೂಲಕ ದೇಶದಲ್ಲಿ ಹೊಸ ಕ್ರಾಂತಿ ಆಗಲಿದೆ ಅಂತಾ ತಿಳಿಸಿದರು.

ಇದನ್ನೂ ಓದಿ: ಮಂಗಳೂರಲ್ಲಿ ಪ್ರಧಾನಿ ಮೋದಿ; ಲೇಟೆಸ್ಟ್ ಅಪ್​ಡೇಟ್ ಇಲ್ಲಿದೆ

ಕರಾವಳಿ, ಪಶ್ಚಿಮಘಟ್ಟ ಪ್ರವಾಸಿಗರನ್ನ ಸೆಳೆಯುತ್ತಿವೆ. ಭಾರತದಲ್ಲಿ ಮಧ್ಯಮ ವರ್ಗದ ಶಕ್ತಿ ಹೆಚ್ಚುತ್ತಿದೆ. ಕ್ರೂಸ್ ಟೂರಿಸಂ ಕೂಡ ಹೆಚ್ಚಳವಾಗ್ತಿದೆ. ಪ್ರವಾಸೋದ್ಯಮ ಹೆಚ್ಚಳವಾದಂತೆ ಸಣ್ಣ ವ್ಯಾಪಾರಿಗಳಿಗೆ ಲಾಭ. ಹೊಸ ಮಂಗಳೂರು ಏರ್ಪೋರ್ಟ್ನಿಂದ ಕ್ರೂಸ್ ಟೂರಿಸಂ ಏರಿಕೆಯಾಗಿದೆ ಎಂದರು.

ಭಾರತ ಕಷ್ಟಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿದೆ

ಕೊರೊನಾ ಸಂದರ್ಭದಲ್ಲಿ ಕಷ್ಟಗಳನ್ನು ಅವಕಾಶಗಳಾಗಿಸುವಂತೆ ಹೇಳಿದ್ದೆ. ಇಂದು ಭಾರತ ಕಷ್ಟಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿದೆ. ಕೊರೊನಾ ವೇಳೆ ಭಾರತದ ನಿರ್ಧಾರಗಳು ಪ್ರಮುಖವಾದವು ಅಂತಾ ಹೇಳಿದರು.

ಕರಾವಳಿಗೆ ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ- ಸಿಎಂ ಬಸವರಾಜ್ ಬೊಮ್ಮಾಯಿ
ಕರಾವಳಿ ಭಾಗದಲ್ಲಿ ಇವತ್ತು ಅಭಿವೃದ್ಧಿ ಬಗ್ಗೆ ಸುವರ್ಣಕ್ಷಾರದಲ್ಲಿ ಬರೆದಿರುವ ದಿನ ಎಂದು ಭಾವಿಸುತ್ತೇನೆ. 8 ವರ್ಷದ ಯೋಜನೆಗಳಿಗೆ ಇವತ್ತು ಪ್ರತಿಫಲ ಸಿಕ್ತಿದೆ. ಬರುವಂತ ದಿನಗಳಲ್ಲಿ ಸಮಗ್ರ ಕರ್ನಾಟಕ ಅಭಿವೃದ್ಧಿ ಆಗಲಿದೆ ಅಂತಾ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಡಬಲ್ ಇಂಜಿನ್ ಸರ್ಕಾರದಿಂದ ಏನು ಆಗ್ತಿದೆ ಎಂದು ಕೇಳ್ತಾರೆ. ಅವರ ಪ್ರಶ್ನೆಗೆ ಈ ಯೋಜನೆ ಗಳಿಂದ ಉತ್ತರ ಸಿಕ್ತಿದೆ. ಈ ಯೋಜನೆ ಜಾರಿಗೊಳಿಸಲು ಡಬಲ್ ಇಂಜಿನ್ ಸರ್ಕಾರವೇ ಕಾರಣ. ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಕೊಡ್ತಿದ್ದೇವೆ. ಡಬಲ್ ಇಂಜಿನ್ ಸರ್ಕಾರ ಕರ್ನಾಟಕವನ್ನು ಮುನ್ನಡೆಸೋದಲ್ಲದೇ ಇಡೀ ಭಾರತವನ್ನು ಮುನ್ನಡೆಸುತ್ತಿದೆ ಅಂತಾ ಬೊಮ್ಮಾಯಿ ತಿರುಗೇಟು ಕೊಟ್ಟರು.
Published by:Thara Kemmara
First published: