ನಾರಾಯಣ ಗುರುಗಳ ಕೊಡುಗೆಯನ್ನು ಹೊಸಪೀಳಿಗೆಗೆ ತಲುಪಿಸಬೇಕು; ಸಿಎಂ ಕುಮಾರಸ್ವಾಮಿ

news18
Updated:August 28, 2018, 6:23 PM IST
ನಾರಾಯಣ ಗುರುಗಳ ಕೊಡುಗೆಯನ್ನು ಹೊಸಪೀಳಿಗೆಗೆ ತಲುಪಿಸಬೇಕು; ಸಿಎಂ ಕುಮಾರಸ್ವಾಮಿ
news18
Updated: August 28, 2018, 6:23 PM IST
ನ್ಯೂಸ್ 18 ಕನ್ನಡ

ಬೆಂಗಳೂರು ( ಆಗಸ್ಟ್ 27) :  ನಾರಾಯಣ ಗುರುಗಳ ಸಾಮಾಜಿಕ ಕೊಡುಗೆಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯಕ್ಕೆ ಸರ್ಕಾರ ಬದ್ದವಾಗಿದೆ. ಈ ಹಿನ್ನೆಲೆಯಲ್ಲಿ ನಾರಾಯಣಗುರುಗಳ ಪ್ರತಿಮೆ  ಹಾಗೂ ಮ್ಯೂಸಿಯಂ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ  ಹೆಚ್​.ಡಿ. ಕುಮಾರಸ್ವಾಮಿ ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ನಾರಾಯಣಗುರು ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ದಲಿತ ಸಮುದಾಯಗಳು ಕಷ್ಟದಲ್ಲಿದ್ದ ದಿನಗಳಲ್ಲಿ ಅನಿಷ್ಟ ಪದ್ಧತಿಗಳ ವಿರುದ್ಧ ಸಿಡಿದೆದ್ದವರು ಬ್ರಹ್ಮಶ್ರೀ ನಾರಾಯಣಗುರು. ಕೆಳವರ್ಗದ ಸಮುದಾಯಗಳ ಧ್ವನಿಯಾಗಿ  ಬದುಕಿದರು. ನಾರಾಯಣಗುರು ಅವರ ಸಾಮಾಜಿಕ ಕೊಡುಗೆಯನ್ನು ಗೌರವಿಸುವುದು ನಮ್ಮ ಕರ್ತವ್ಯ ವಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಕನ್ನಡ ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲಾ ಮಾತನಾಡಿ, ನಾನು ಈ ಇಲಾಖೆ ಸಚಿವೆಯಾಗಿದ್ದು, ನನ್ನ ಪೂರ್ವ ಜನ್ಮದ ಪುಣ್ಯ ಅನಿಸುತ್ತದೆ.  ನಾರಾಯಣ ಗುರು ಅವರ ಕತೆ ಧರ್ಮ ಯುದ್ಧದ ಕತೆ. ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ರಲ್ಲ, ಅವರಿಗೂ ಗುರುಗಳಾಗಿದ್ದವರು ಈ ನಾರಾಯಣಗುರು. ನಾರಾಯಣ ಗುರು ಮಾಡಿದ ಕೆಲಸವನ್ನು ಒಬ್ಬ ದೇವರು ಸಹ ಮಾಡೋಕೆ ಸಾಧ್ಯವಿಲ್ಲ ಎಂದು ಸಚಿವೆ ಡಾ. ಜಯಮಾಲಾ ತಿಳಿಸಿದರು.

ಬಸವಣ್ಣ, ಕನಕದಾಸ ಎಲ್ಲರನ್ನೂ ಒಂದೊಂದು ಜಾತಿಗೆ ಅಂಟಿಸಿ ಹಾಕಿಬಿಡುತ್ತಾರೆ. ಆದ್ರೆ ನನ್ನದೊಂದು ಕಳಕಳಿ ಅವರು ಈ ಜಾತಿ, ಧರ್ಮ ಎಲ್ಲವನ್ನೂ ಮೀರದವರು ನಾರಾಯಣಗುರು. ಹಾಗಾಗೀ ಅವರಾರನ್ನು ಜಾತಿ, ಧರ್ಮದೊಂದಿಗೆ ತಳುಕು ಹಾಕಬೇಡಿ ಎಂದು ಸಚಿವೆ ಜಯಮಾಲಾ ಮನವಿ ಮಾಡಿದರು.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ