ಇಂದು ನಾರಾಯಣ ನೇತ್ರಾಲಯದ (Narayana Netralaya) ವ್ಯವಸ್ಥಾಪಕ ನಿರ್ದೇಶಕ ಡಾ.ಭುಜಂಗಶೆಟ್ಟಿ (Dr Bhajunga shetty) ಅವರು ಸುದ್ದಿಗೋಷ್ಠಿ ನಡೆಸಿ ಪಟಾಕಿ ಸಿಡಿತದಿಂದ ಆಸ್ಪತ್ರೆಗೆ ದಾಖಲಾದವರ ಮಾಹಿತಿ ನೀಡಿದರು. ಈ ಬಾರಿಯ ದೀಪಾವಳಿಯಲ್ಲಿ ಪಟಾಕಿ (Deepavali Crackers) ಸಿಡಿತದಿಂದ ಹೆಚ್ಚಿನ ಜನರಿಗೆ ಕಣ್ಣಿನ ಸಮಸ್ಯೆಯಾಗಿದೆ. ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದೀಪಾವಳಿ ವೇಳೆ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದರು. 50ಕ್ಕೂ ಹೆಚ್ಚು ಪಟಾಕಿ ಸಿಡಿತದ ಕೇಸ್ಗಳು ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿವೆ. ಇದರಲ್ಲಿ 6 ಜನರಿಗೆ ಕಣ್ಣಿನ ಗುಡ್ಡೆಗಳು ಸೀಳಿ ಹೋಗಿವೆ. ಈ 6 ಜನರು ಸಂಪೂರ್ಣ ದೃಷ್ಠಿ (Eye sight Loss) ಕಳೆದುಕೊಂಡಿದ್ದಾರೆ. ಇವರಿಗೆ ನೇತ್ರದಾನಿಗಳ ಕಣ್ಣು ಹಾಕಲು ಸಾಧ್ಯವಿಲ್ಲ ಎಂದು ತಿಳಿಸಿದರು.
50 ಜನರ ಪೈಕಿ 38 ಜನರು ಪುರುಷರು, 12 ಜನ ಮಹಿಳೆಯರ ಕಣ್ಣಿಗೆ ಹಾನಿಯುಂಟಾಗಿದೆ. ಇದರಲ್ಲಿ 26 ಜನರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 26 ಜನರು ಪಟಾಕಿ ಹಚ್ಚಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ.
ಪರಿಸರ ಮಾಲಿನ್ಯಕ್ಕೂ ಪಟಾಕಿ ಕಾರಣ
ಪಟಾಕಿ ಸಿಡಿಸದೇ 24 ಜನರ ಕಣ್ಣಿಗೆ ಹಾನಿಯಾಗಿದೆ. ಇವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಯಾರೋ ಹಚ್ಚಿದ ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. ಪಟಾಕಿಯಿಂದ ಕೇವಲ ಕಣ್ಣಿಗೆ ಮಾತ್ರವಲ್ಲ, ಮನುಷ್ಯರ ಉಸಿರಾಟಕ್ಕೂ ತೊಂದರೆಯಾಗುತ್ತಿದೆ. ಪರಿಸರ ಮಾಲಿನ್ಯಕ್ಕೂ ಈ ಪಟಾಕಿ ಕಾರಣವಾಗಿದೆ ಎಂದು ಬೇಸರ ಹೊರಹಾಕಿದರು.
ಪೋಷಕರು ಆದಷ್ಟು ಪಟಾಕಿಯಿಂದ ಮಕ್ಕಳನ್ನು ದೂರ ಇಡಬೇಕು. ಪಟಾಕಿ ಇಲ್ಲದೆ ದೀಪಾವಳಿ ಆಚರಣೆ ಮಾಡುವುದೇ ಒಳ್ಳೆಯದು ಎಂದು ಭುಜಂಗ ಶೆಟ್ಟಿ ಅಭಿಪ್ರಾಯಪಟ್ಟರು.
ಮಾಲಿನ್ಯ ಗುಣಮಟ್ಟ ಸೂಚ್ಯಂಕ
ಪ್ರದೇಶ | ಹಬ್ಬಕ್ಕೂ ಮುನ್ನ | ಹಬ್ಬದ ದಿನ |
ಮೆಜೆಸ್ಟಿಕ್ | AQI 90 | AQI 90 |
ಹೊಂಬೇಗೌಡ ನಗರ | AQI 96 | AQI 120 |
ಜಯನಗರ 5th ಬ್ಲಾಕ್ | AQI 93 | AQI 210 |
BTM ಲೇಔಟ್ | AQI 72 | AQI 102 |
ಸಿಲ್ಕ್ ಬೋರ್ಡ್ ಜಂಕ್ಷನ್ | AQI 180 | AQI 246 |
ಹೆಬ್ಬಾಳ | AQI 100 | AQI 180 |
ಪೀಣ್ಯ ಕೈಗಾರಿಕಾ ಪ್ರದೇಶ | AQI 108 | AQI 210 |
ಇದನ್ನೂ ಓದಿ: Karnataka Politics: ಜೆಡಿಎಸ್ ಹಾದಿ ಹಿಡಿಯುತ್ತಾ ಕಾಂಗ್ರೆಸ್? ಗೊಂದಲ ಹೆಚ್ಚುತ್ತಾ, ಕಡಿಮೆಯಾಗುತ್ತಾ?
ಇದನ್ನೂ ಓದಿ: HD Kumaraswamy: ನಾವು ಸಹಕಾರ ನೀಡದಿದ್ರೆ ಹೆಣ್ಣೆದೆ ಸಿಎಂ ಆಗ್ತಿದ್ರು; ಅಶೋಕ್ ಗಂಡೆದೆ ಹೇಳಿಕೆಗೆ HDK ತಿರುಗೇಟು
ಕಣ್ಣು ಕಳೆದುಕೊಂಡ 19ರ ಯುವಕ
ಮೈಸೂರು ರಸ್ತೆಯ ನಿವಾಸಿ 19 ವರ್ಷದ ಜಯಸೂರ್ಯ ಎಂಬ ಯುವಕ ಎರಡು ನೇತ್ರವನ್ನೇ ಕಳೆದುಕೊಂಡಿದ್ದಾನೆ. ನಿನ್ನೆ ರಾತ್ರಿ ಪಟಾಕಿ ಸಿಡಿದು ಎರಡೂ ಕಣ್ಣು ಡ್ಯಾಮೇಜ್ ಆಗಿ ದೃಷ್ಟಿಯೇ ಹೋಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ