• Home
 • »
 • News
 • »
 • state
 • »
 • Nanganach: ಕೈ ನಾಯಕನ ಬರ್ತಡೇ ಪಾರ್ಟಿಯಲ್ಲಿ ನಂಗಾನಾಚ್​! ಡ್ಯಾನ್ಸರ್​ ಜೊತೆ ಅಸಭ್ಯ ವರ್ತನೆ ಮಾಡಿದವನಿಗೆ ಚಾಕು ಇರಿತ

Nanganach: ಕೈ ನಾಯಕನ ಬರ್ತಡೇ ಪಾರ್ಟಿಯಲ್ಲಿ ನಂಗಾನಾಚ್​! ಡ್ಯಾನ್ಸರ್​ ಜೊತೆ ಅಸಭ್ಯ ವರ್ತನೆ ಮಾಡಿದವನಿಗೆ ಚಾಕು ಇರಿತ

ನಂಗಾನಾಚ್​ ಡ್ಯಾನ್ಸ್​

ನಂಗಾನಾಚ್​ ಡ್ಯಾನ್ಸ್​

ಬೆಂಗಳೂರಿನಿಂದ ಡ್ಯಾನ್ಸರ್ ಗಳನ್ನು ಕರೆಸಿ ಅವರಿಂದ ಅರೆಬೆತ್ತಲೆಯಾಗಿ ಡ್ಯಾನ್ಸ್ ಮಾಡಿಸಿದ್ದರು. ಅಲ್ಲದೆ ಡ್ಯಾನ್ಸರ್ ಗಳ ಮೇಲೆ ನೋಟುಗಳನ್ನು ಎಸೆಯಲಾಗಿತ್ತು.

 • News18 Kannada
 • 3-MIN READ
 • Last Updated :
 • Karnataka, India
 • Share this:

ರಾಮನಗರ (ನ.27): ಕಾಂಗ್ರೆಸ್​ ಮುಖಂಡನ (Congress Leader) ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ (Birthday Party) ನಂಗನಾಚ್​ ಆಯೋಜನೆ ಮಾಡಲಾಗಿದೆ. ಈ ವೇಳೆ ಡ್ಯಾನ್ಸರ್ ಗಳ (Dancer) ಜೊತೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ ಯುವಕನಿಗೆ ಚೂರಿ ಇರಿದಿರುವ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್ 27ರಂದು ದೌಲತ್ ಶರೀಷ್ ಹುಟ್ಟುಹಬ್ಬದ ಪ್ರಯುಕ್ತ ನಂಗಾನಾಚ್ (Nanganach) ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಡ್ಯಾನ್ಸರ್ ಗಳ ಜತೆ ರುಮಾನ್ ಎಂಬಾತ ಅಭಸ್ಯವಾಗಿ ವರ್ತಿಸಿದ್ದನು. ಇದನ್ನು ನೋಡಿದ ಮುಫಾ ಎಂಬಾತ ಆತನಿಗೆ ಸುಮ್ಮನಿರುವಂತೆ ಹೇಳಿದ್ದ ಇದ್ರಿಂದ ಕೋಪಗೊಂಡ ರುಮಾನ್​ ಚಾಕುವಿನಿಂದ ಇರಿದಿದ್ದಾನೆ. 

ಆರೋಪಿ ರುಮಾನ್​ ಬಂಧನ

ಗಾಯಗೊಂಡ ಮುಫಾನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ರಾಮನಗರ ಟೌನ್ ಪೊಲೀಸರು ಆರೋಪಿ ರುಮಾನ್ ನನ್ನು ಬಂಧಿಸಿದ್ದಾರೆ.

nanganach at congress leaders birthday party in Ramanagara pvn
ನಂಗಾನಾಚ್​ ಡ್ಯಾನ್ಸ್​

ಕಲ್ಯಾಣ ಮಂಟಪದಲ್ಲಿ ಪಾರ್ಟಿ

ಯಾರಬ್ ನಗರದಲ್ಲಿರುವ ಕಲ್ಯಾಣ ಮಂಟಪದಲ್ಲಿ ಬರ್ತಡೇ ಪಾರ್ಟಿ ಆಯೋಜಿಸಲಾಗಿತ್ತು. ಇಲ್ಲಿ ಬೆಂಗಳೂರಿನಿಂದ ಡ್ಯಾನ್ಸರ್ ಗಳನ್ನು ಕರೆಸಿ ಅವರಿಂದ ಅರೆಬೆತ್ತಲೆಯಾಗಿ ಡ್ಯಾನ್ಸ್ ಮಾಡಿಸಿದ್ದರು. ಅಲ್ಲದೆ ಡ್ಯಾನ್ಸರ್ ಗಳ ಮೇಲೆ ನೋಟುಗಳನ್ನು ಎಸೆಯಲಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಮಂಡ್ಯದಲ್ಲಿ ನಂಗಾನಾಚ್ ನೃತ್ಯ

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ನಂಗಾನಾಚ್ ನೃತ್ಯ ಸದ್ದು ಮಾಡಿತ್ತು. ಕಳೆದ ಹದಿನೈದು ದಿನಗಳ ಹಿಂದಷ್ಟೆ ನಾಗಮಂಗಲ ಕ್ಷೇತ್ರದಲ್ಲಿ ನಂಗಾನಾಚ್ ನೃತ್ಯ ನಡೆದಿತ್ತು. ಕಳೆದ ಒಂದೂವರೆ ವರ್ಷದ ಹಿಂದೆ ಕೂಡ ನಡೆದಿತ್ತು. ಈಗ ಮತ್ತೆ ನಂಗಾನಾಚ್‌ ನೃತ್ಯ ನಡೆದಿದೆ. ಇದು ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಯುವಕರ ಮತ ಸೆಳೆಯಲು ಯತ್ನ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿಗೂ ನಂಗಾನಾಚ್ ನೃತ್ಯಕ್ಕೂ ಅವಿನಾಭಾವ ಸಂಬಂಧ ಎನಿಸುತ್ತಿದೆ. ಮಾಜಿ ಸಂಸದಾಗಿರುವ ಎಲ್.ಆರ್.ಶಿವರಾಮೇಗೌಡ ತಾವು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ತಮ್ಮ ಕ್ಷೇತ್ರದಲ್ಲಿ ನಂಗಾನಾಚ್ ನೃತ್ಯ ಏರ್ಪಾಡು ಮಾಡಿ ಯುವಕರ ಮತ ಸೆಳೆಯಲು ಪ್ರಯತ್ನಿಸಿದ್ದರು. ಆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಆ ಪ್ರಕರಣದ ಬಳಿಕ ಕಳೆದ ಹದಿನೈದು ದಿನಗಳ ಹಿಂದೆ ನಾಗಮಂಗಲ ಕ್ಷೇತ್ರದಲ್ಲಿ ಗ್ರಾಮದೇವತೆ ಹಬ್ಬದ ಅಂಗವಾಗಿ ತಾಲೂಕಿನ ತೊಳಸಿ ಕೊಂಬ್ರಿ ಎನ್ನುವ ಗ್ರಾಮದಲ್ಲಿ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರು ನಂಗಾನಾಚ್ ನೃತ್ಯ ಏರ್ಪಡಿಸಿದ್ದರು.

ಇದನ್ನೂ ಓದಿ: D K Shivakumar: ಸಿಎಂ ಕುರ್ಚಿ ಮೇಲೆ ಡಿಕೆ ಶಿವಕುಮಾರ್​ ಕಣ್ಣು! ಸಭೆಯಲ್ಲಿ ಹೊರಬಂತು ಡಿಕೆ ಮನದಾಸೆ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿಗೂ ನಂಗಾನಾಚ್ ನೃತ್ಯಕ್ಕೂ ಅವಿನಾಭಾವ ಸಂಬಂಧ ಎನಿಸುತ್ತಿದೆ. ಮಾಜಿ ಸಂಸದಾಗಿರುವ ಎಲ್.ಆರ್.ಶಿವರಾಮೇಗೌಡ ತಾವು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ತಮ್ಮ ಕ್ಷೇತ್ರದಲ್ಲಿ ನಂಗಾನಾಚ್ ನೃತ್ಯ ಏರ್ಪಾಡು ಮಾಡಿ ಯುವಕರ ಮತ ಸೆಳೆಯಲು ಪ್ರಯತ್ನಿಸಿದ್ದರು. ಆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಆ ಪ್ರಕರಣದ ಬಳಿಕ ಕಳೆದ ಹದಿನೈದು ದಿನಗಳ ಹಿಂದೆ ನಾಗಮಂಗಲ ಕ್ಷೇತ್ರದಲ್ಲಿ ಗ್ರಾಮದೇವತೆ ಹಬ್ಬದ ಅಂಗವಾಗಿ ತಾಲೂಕಿನ ತೊಳಸಿ ಕೊಂಬ್ರಿ ಎನ್ನುವ ಗ್ರಾಮದಲ್ಲಿ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರು ನಂಗಾನಾಚ್ ನೃತ್ಯ ಏರ್ಪಡಿಸಿದ್ದರು.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು