Nandini Milk Price: ರಾಜ್ಯದ ಜನರಿಗೆ ಕಾದಿದೆ ಮತ್ತೊಂದು ಶಾಕ್! ನಂದಿನಿ ಹಾಲಿನ ದರ ಲೀಟರ್ ಗೆ 3ರೂ. ಹೆಚ್ಚಳ ಸಾಧ್ಯತೆ

Nandini Milk Price Hike: ರಾಜ್ಯದ 14 ಹಾಲು ಒಕ್ಕೂಟಗಳು ನಷ್ಟದ ಹಾದಿಯಲ್ಲಿ ಸಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಹಾಲಿನ ದರ ಹೇರಿಕೆಗೆ ಅನುಮತಿ ನೀಡಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಆಗ್ರಹಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿತ್ಯೋಪಯೋಗಿ ಸಾಮಾಗ್ರಿಗಳ ಬೆಲೆ ಏರಿಕೆ (Hike In Price) ಜೊತೆಗೆ ಹಾಲಿನ ದರವೂ ಹೆಚ್ಚಾದ್ರೆ ಗಾಯದ ಮೇಲೆ ಬರೆ ಬಿದ್ದಂತಾಗುತ್ತೆ. ಇದೀಗ  ಹಾಲಿನ ಬೆಲೆ ಏರಿಕೆ ಬಗ್ಗೆ ಕೆಎಂಎಫ್ (KMF) ಅಧ್ಯಕ್ಷ ಜಾರಳಿಹೊಳಿಯೇ ಸುಳಿವು ನೀಡಿದ್ದಾರೆ. ನಂದಿನ ಹಾಲಿನ ದರ (Nandini Milk Price) ಹೆಚ್ಚಾದ್ರೆ ಮತ್ತೆ ರಾಜ್ಯದ ಜನರ ಜೇಬಿಗೆ ಕತ್ತರಿ ಬೀಳೋದು ಗ್ಯಾರೆಂಟಿ. ನಂದಿನಿ ಹಾಲಿನ ದರ ಹೆಚ್ಚಳ ಮಾಡುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು (President of District Milk Unions) ಮನವಿ ಮಾಡಿದ್ದಾರೆ. 1 ಲೀಟರ್ ನಂದಿನಿ ಹಾಲಿನ ಪ್ರಸ್ತುತ ಬೆಲೆ 37 ರೂ ಇದೆ. ಜಿಲ್ಲಾ ಹಾಲು ಒಕ್ಕೂಟಗಳ ಬೇಡಿಕೆಗೆ ಸರ್ಕಾರ ಮಣಿದರೆ 1 ಲೀಟರ್ ನಂದಿನಿ ಹಾಲಿನ ಬೆಲೆ 40 ರೂ ಆಗಲಿದೆ. ಅಂದ್ರೆ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಲಿದೆ. ಜೊತೆಗೆ ಮೊಸರು (Curds) ಹಾಗೂ ಹಾಲಿನಿಂದ ತಯಾರಾಗೋ ಉತ್ಪನ್ನಗಳ ಬೆಲೆಯು ಹೆಚ್ಚಾಗೋ ಸಾಧ್ಯತೆ ಇದೆ.

ಹಾಲಿನ ದರ ಹೆಚ್ಚಳಕ್ಕೆ KMF ಮನವಿ!?
ಕರ್ನಾಟಕ ಹಾಲು ಮಹಾಮಂಡಳಿ (Karnataka Milk Fedaration) ನಡೆಸಿದ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದೆ. ಕೊರೊನಾ ಸಾಂಕ್ರಾಮಿಕ ರೋಗ ಸಮಯದಲ್ಲಿ ಮಾರಾಟದ ಕುಸಿತದಿಂದ ಕೆಎಂಎಫ್ ಹಾಗೂ ಇತರೆ ಹಾಲು ಒಕ್ಕೂಟಗಳು ನಷ್ಟ ಅನುಭವಿಸಿದೆ. ಹೀಗಾಗಿ ಕಳೆದ 6 ತಿಂಗಳಿಂದ ಬೆಲೆ ಪರಿಷ್ಕರಣೆಗೆ ಯತ್ನಿಸುತ್ತಿದೆ.

14 ಹಾಲು ಒಕ್ಕೂಟಗಳ ವಾದ
ರಾಜ್ಯದ 14 ಹಾಲು ಒಕ್ಕೂಟಗಳು ನಷ್ಟದ ಹಾದಿಯಲ್ಲಿ ಸಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಹಾಲಿನ ದರ ಹೇರಿಕೆಗೆ ಅನುಮತಿ ನೀಡಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಆಗ್ರಹಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬೆಲೆ ಏರಿಕೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳೊದಾಗಿ ಹೇಳಿದ್ದಾರೆ.

ಇದನ್ನೂ ಓದಿ: Vaccination ಬಳಿಕ ಮೂವರು ಮಕ್ಕಳ ನಿಗೂಢ ಸಾವು: ಬೆಳಗಾವಿ ಪ್ರಕರಣದಿಂದ ಹೆಚ್ಚಿದ ಆತಂಕ!

ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ನಂದಿನಿ ಹಾಲಿನ ದರ ಕಡಿಮೆ ಇದೆ. ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ 37 ರೂಪಾಯಿಯಂತೆ ಮಾರಾಟ ಮಾಡಲಾಗ್ತಿದೆ. ಹಾಲಿನ ದರದಲ್ಲಿ ಪ್ರತಿ ಲೀಟರ್ ಹಾಲಿಗೆ 3ರೂ ಹೆಚ್ಚಳಕ್ಕೆ ಒಕ್ಕೂಟಗಳು ಮನವಿ ಮಾಡಿದೆ. ಹೀಗಾಗಿ ಪ್ರತಿ ಲೀಟರ್ ಹಾಲಿಗೆ 4ರೂ ದರ ನಿಗದಿಪಡಿಸಲಾಗುತ್ತೆ ಎಂದು ಜಾರಕಿಹೊಳಿ ಹೇಳಿದ್ದಾರೆ.

ಹಾಲಿನ ಬೆಲೆ ಹೆಚ್ಚಾದ್ರೆ ರೈತರಿಗೆ ಸಿಗೋದೆಷ್ಟು ಗೊತ್ತಾ?
ರಾಜ್ಯದ ಹಾಲು ಒಕ್ಕೂಟಗಳ ಮನವಿಗೆ ಸರ್ಕಾರ ಮಣಿದು ಹಾಲಿನ ಬೆಲೆ ಹೆಚ್ಚಾದ್ರೆ 2.5 ರೂಪಾಯಿ ಸಿಗಲಿದೆ. ಪ್ರತಿ ಲೀಟರ್ ಹಾಲಿಗೆ 3 ರೂಪಾಯಿ ಹೆಚ್ಚಳವಾದ್ರೆ ಅದರಲ್ಲಿ ರೈತರಿಗೆ 2.5 ರೂಪಾಯಿ ಸಿಗಲಿದ್ದು, 50 ಪೈಸೆಯನ್ನು ಸಂಘಗಳು ಉಳಿಸಿಕೊಳ್ಳಲಿವೆ.

ಕಳೆದ ತಿಂಗಳು ಬೆಳಗಾವಿಯಲ್ಲಿ ಅಧಿವೇಶನ ನಡೆದ ವೇಳೆ ನಿಯೋಗವು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅವರನ್ನು ಭೇಟಿ ಮಾಡಿತ್ತು. ಸರ್ಕಾರವು ಹಾಲು ಒಕ್ಕೂಟಗಳ ಬೇಡಿಕೆಯನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: Corona ವಿಚಾರದಲ್ಲಿ ಸೇಫ್ ಜೋನ್ ನಲ್ಲಿದ್ಯಾ ಕರ್ನಾಟಕ? ಟಫ್ ರೂಲ್ಸ್‌ನಿಂದ ಮುಕ್ತಿ ಸಿಗುತ್ತಾ?

ಹಾಲಿನ ದರವನ್ನು ಪ್ರತಿ ಲೀಟರ್ 3 ರೂಪಾಯಿಗಳ ಹೆಚ್ಚಳದ ಬದಲಾಗಿ 1ರಿಂದ 2 ರೂಪಾಯಿ ಹೆಚ್ಚಳ ಮಾಡೋ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ ಪದೇ ಪದೇ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಜನ ಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.
Published by:Sandhya M
First published: