Travel: ನಂದಿ ಬೆಟ್ಟಕ್ಕೆ ಹೋಗುವವರಿಗೆ ಗುಡ್ ನ್ಯೂಸ್; ಇನ್ಮುಂದೆ ವೀಕೆಂಡ್​ನಲ್ಲೂ ಪ್ರವೇಶಕ್ಕೆ ಅನುಮತಿ

ವೀಕೆಂಡ್​ನಲ್ಲಿ ನಂದಿ ಬೆಟ್ಟಕ್ಕೆ ಹೋಗಲು ಆಗ್ತಿಲ್ಲ ಅಂತ ಕೊರಗೋದು ಬೇಡ ಈಗ ಶನಿವಾರ, ಭಾನುವಾರ ಕೂಡ ನಂದಿ ಬೆಟ್ಟಕ್ಕೆ ಹೋಗ್ಬೋದು.  ಮೊದಲೇ ಆನ್ ಲೈನ್​ನಲ್ಲಿ  ಬುಕ್​ ಮಾಡಿಕೊಳ್ಳಿ

ನಂದಿ ಹಿಲ್ಸ್​

ನಂದಿ ಹಿಲ್ಸ್​

  • Share this:
ಚಿಕ್ಕಬಳ್ಳಾಪುರ: ನಂದಿ ಬೆಟ್ಟಕ್ಕೆ ಹೋಗುವವರಿಗೆ ಗುಡ್​ ನ್ಯೂಸ್​, ವಾರಾಂತ್ಯದಲ್ಲೂ ಇನ್ಮುಂದೆ ನಂದಿ ಬೆಟ್ಟಕ್ಕೆ (Nandi Hills)  ಪ್ರವಾಸ ಮುಕ್ತಗೊಳಿಸಲಾಗಿದೆ.  ಆನ್ ಲೈನ್ (On line) / ಆಫ್ ಲೈನ್ (Off line) ಮೂಲಕ  ಎಂಟ್ರಿ ಟಿಕೆಟ್ (Entry Ticket) ಪಡೆದವರಿಗೆ ಮಾತ್ರ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ (R. Latha) ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ನಂದಿ ಗಿರಿಧಾಮದ ಅಭಿವೃದ್ಧಿ ಕುರಿತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಈ ನಿರ್ಬಂಧವನ್ನು ಸಡಿಲಿಕೆ ಮಾಡಿದ್ದು  ಪ್ರವೇಶ ಪತ್ರ ಪಡೆದ ಪ್ರವಾಸಿಗರಿಗೆ ನಂದಿ ಗಿರಿಧಾಮ ಪ್ರವಾಸಕ್ಕೆ ಅನುಮತಿ ನೀಡಲಾಗಿದೆ ಎಂದರು.

ವಾರಾಂತ್ಯದಲ್ಲೂ ನಂದಿ ಹಿಲ್ಸ್​ಗೆ ಹೋಗಬಹುದು

ವಿಶ್ವವಿಖ್ಯಾತ ಪ್ರವಾಸಿತಾಣವಾದ ನಂದಿಬೆಟ್ಟಕ್ಕೆ ಕೋವಿಡ್ ಸಾಂಕ್ರಾಮಿಕ ಕಾಯಿಲೆಯಿಂದ ಈವರೆಗೆ ವಾರಾಂತ್ಯದ ದಿನಗಳಲ್ಲಿ ಕೊಠಡಿ ಕಾಯ್ದಿರಿಸಿದ ಪ್ರವಾಸಿಗರನ್ನು ಹೊರತುಪಡಿಸಿ ಉಳಿದ ಪ್ರವಾಸಿಗರಿಗೆ ನಂದಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು. ಈ ನಿರ್ಬಂಧವನ್ನು ಸಡಿಲಿಕೆ ಮಾಡಿದ್ದು, ವಾರಾಂತ್ಯದ ದಿನದಿಂದಲೇ ಪ್ರವೇಶ ಪತ್ರ ಪಡೆದ ಪ್ರವಾಸಿಗರಿಗೆ ನಂದಿ ಗಿರಿಧಾಮ ಪ್ರವಾಸಕ್ಕೆ ಅನುಮತಿ ನೀಡಲಾಗಿದೆ ಎಂದರು.

ಟಿಕೆಟ್ ಬುಕ್ಕಿಂಗ್ ಮಾಡೋದು ಹೇಗೆ?

ವಾರಾಂತ್ಯದ ದಿನಗಳಾದ ಶನಿವಾರ ಪ್ರವಾಸ ಮಾಡಲಿಚ್ಚಿಸುವ ಪ್ರವಾಸಿಗರು ಹಿಂದಿನ ದಿನವಾದ ಶುಕ್ರವಾರ ಸಂಜೆ 6:00 ಗಂಟೆಯೊಳಗೆ ಆನ್ ಲೈನ್ ನಲ್ಲಿ ಟಿಕೆಟ್ ಗಳನ್ನು ಪಡೆಯಬೇಕು, ಭಾನುವಾರ ಪ್ರವಾಸ ಮಾಡಲು ಇಚ್ಚಿಸುವವರು ಪ್ರವಾಸಿಗರು ಹಿಂದಿನ ದಿನವಾದ ಶನಿವಾರ ಸಂಜೆ 6:00 ಗಂಟೆಯೊಳಗೆ ಆನ್ ಲೈನ್ ನಲ್ಲಿ ಟಿಕೆಟ್ ಗಳನ್ನು ಪಡೆಯಬೇಕು. ಆನ್ ಲೈನ್ ನಲ್ಲಿ ಪ್ರವೇಶ ಪತ್ರ ದೊರಕದವರು ನಂದಿಬೆಟ್ಟದ ಕೆಳಗಿನ ಪ್ರವೇಶ ದ್ವಾರದ ಬಳಿ ಸಕ್ಷಮ ಪ್ರಾಧಿಕಾರ ತೆರದಿರುವ ಜಿಲ್ಲಾಡಳಿತದ ಕೌಂಟರ್ ನಲ್ಲಿ ಆಫ್ ಲೈನ್ ಟಿಕೆಟ್ ಪಡೆದು ಪ್ರವಾಸ ಕೈಗೊಳ್ಳಬಹುದು.

ಇದನ್ನೂ ಓದಿ: Waterfalls: ಎಷ್ಟು ಚೆನ್ನಾಗಿದೆ ಜಲಪಾತ ಅಂತ ಇಲ್ಲಿಗೆ ಹೋಗೋ ಮುಂಚೆ ಸ್ವಲ್ಪ ಯೋಚನೆ ಮಾಡಿ

ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವಿಳಾಸ

ಶೇ.50% ಆನ್ ಲೈನ್ ಮತ್ತು ಶೇ.50% ಆಫ್ ಲೈನ್ ಟಿಕೆಟ್ ಗಾಗಿ ನಿಗದಿಗೊಳಿಸಲಾಗಿದ್ದು, ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಮಾಡುವವರು . ವೆಬ್ ಸೈಟ್​ನಲ್ಲಿ https://www.kstdc.co/ ವಿಳಾಸವನ್ನು ಸಂಪರ್ಕಿಸಬಹುದು ಆನ್ ಲೈನ್/ಆಫ್ ಲೈನ್ ಟಿಕೆಟ್ ಸಿಗದವರಿಗೆ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಆದ್ದರಿಂದ ಪ್ರವಾಸಿಗರು ಆನ್ ಲೈನ್ ಟಿಕೆಟ್ ಖಾತರಿಪಡಿಸಿಕೊಂಡು ಪ್ರವಾಸ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ನಿಲುಗಡೆಯನುಸಾರ ವಾಹನಗಳ ಪ್ರವೇಶಕ್ಕೆ ಅವಕಾಶ!

ನಂದಿ ಗಿರಿಧಾಮದ ಮೇಲ್ಭಾಗದಲ್ಲಿ 1000 ದ್ವಿಚಕ್ರ ವಾಹನಗಳು ಹಾಗೂ ಕಾರು, ಮಿನಿ ಬಸ್ಸು ಸೇರಿದಂತೆ 300 ಲಘು (ಪೋರ್ ವೀಲರ್) ವಾಹನಗಳಿಗೆ ವಾಹನ ನಿಲುಗಡೆ ಮಾಡಲು ಸ್ಥಳಾವಕಾಶವಿದ್ದು, ಅಷ್ಟು ವಾಹನಗಳಿಗೆ ಮಾತ್ರ ಗಿರಿಧಾಮದ ಮೇಲ್ಭಾಗಕ್ಕೆ ಅನುಮತಿ ನೀಡಲಾಗುವುದು.

ಮೇಲ್ಭಾಗಕ್ಕೆ ಚಲಿಸಿದ ವಾಹನಗಳು ನಿರ್ಗಮಿಸಿದಂತೆ ಇತರ ಪ್ರವಾಸಿಗರ ವಾಹನಗಳಿಗೆ ಟಿಕೆಟ್ ಗಳನ್ನು ವಿತರಿಸಿ, ನಂದಿಗಿರಿಧಾಮ ಪ್ರವಾಸಕ್ಕೆ ಅವಕಾಶ ಮಾಡಿಕೊಡಲಾಗಿರುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ.

ಇದನ್ನೂ ಓದಿ: Holiday Plan: ಬಿಸಿಲ ಧಗೆಯ ನಡುವೆಯೂ ಗೋ ಗೋಕರ್ಣ ಎನ್ನುತ್ತಿದ್ದಾರೆ ಬೆಂಗಳೂರಿಗರು - ಏನಿದೆ ಅಲ್ಲಿ ಅಂಥಹದ್ದು?

ದ್ವಿಚಕ್ರ ವಾಹನದಲ್ಲಿ ಬರುವ ಒಬ್ಬ ಸವಾರನಿಗೆ 50 ರೂ. ಇಬ್ಬರು ಸವಾರರ ವಾಹನಕ್ಕೆ 70 ರೂ, ನಾಲ್ಕು ಚಕ್ರದ ಎಲ್.ಎಂ.ವಿ ಲಘು ವಾಹನಗಳಿಗೆ 125 ರೂ.ಗಳು, ನಾಲ್ಕು ಚಕ್ರದ ಎಚ್.ಜಿ.ವಿ ವಾಹನಗಳಿಗೆ 150 ರೂ.ಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ವೀಕೆಂಡ್​ನಲ್ಲಿ ನಂದಿ ಬೆಟ್ಟಕ್ಕೆ ಹೋಗಲು ಆಗ್ತಿಲ್ಲ ಅಂತ ಕೊರಗೋದು ಬೇಡ ಈಗ ಶನಿವಾರ, ಭಾನುವಾರ ಕೂಡ ನಂದಿ ಬೆಟ್ಟಕ್ಕೆ ಹೋಗ್ಬೋದು.  ಮೊದಲೇ ಆನ್ ಲೈನ್​ನಲ್ಲಿ  ಬುಕ್​ ಮಾಡಿಕೊಂಡು ಹೋಗಿ ಬನ್ನಿ
Published by:Pavana HS
First published: