HOME » NEWS » State » NAMOTHSAVA CELEBRATE IN UTTARA KANNADA FOR THE FIRSTTIME DKK SESR

ಭಟ್ಕಳದಲ್ಲಿ ನೇಮೋತ್ಸವ; ತುಳು ನಾಡಿನ ಹಬ್ಬ ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ

ತುಳುನಾಡಿನಲ್ಲಿ ನಡೆಯುವ ನಾಗಾರಾಧನೆ ಹೊರತುಪಡಿಸಿ ಉತ್ತರಕನ್ನಡದಲ್ಲಿ ನೇಮೋತ್ಸವ, ದೈವಕೋಲಗಳಂತ ಸಂಪ್ರದಾಯ  ನಡೆದಿರಲಿಲ್ಲ. 

news18-kannada
Updated:April 17, 2021, 5:03 PM IST
ಭಟ್ಕಳದಲ್ಲಿ ನೇಮೋತ್ಸವ; ತುಳು ನಾಡಿನ ಹಬ್ಬ ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ
ಸಾಂದರ್ಭಿಕ ಚಿತ್ರ
  • Share this:
ಕಾರವಾರ (ಏ. 17): ತುಳುನಾಡಿನಲ್ಲಿ ದೇವರಿಗೆ ನೇಮೋತ್ಸವ ನಡೆಯುವುದು ಸಾಮಾನ್ಯ. ರಾಜ್ಯದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೊರಗಜ್ಜ ಕಲ್ಲೂರ್ಟಿ, ಪಂಜುರ್ಲಿ ಸೇರಿದಂತೆ ಇತರ  ಕಾರ್ಣಿಕ  ದೈವಗಳ ಆರಾಧನೆ ಮಾಮೂಲಿಯಾಗಿ ನಡೆಯುತ್ತಿರುತ್ತದೆ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಸಿರಿಸಿಂಗಾರ ನೇಮೋತ್ಸವ ನಡೆಯಿತು.  ಭಕ್ತರ ಮುಂದೆ ಅಗ್ನಿಯ ಹಿಡಿದು ನರ್ತಿಸುತ್ತಿರುವ ದೈವ ರೂಪ. ಭಕ್ತಿಯಿಂದ ದೇವರ ಉತ್ಸವದಲ್ಲಿ ಪಾಲ್ಗೊಂಡ ಭಕ್ತರು. ರಾಜ್ಯದ ಕರಾವಳಿ ಜಿಲ್ಲೆಯ ಉತ್ತರಕನ್ನಡದಲ್ಲೂ  ಈಗ ತುಳುನಾಡಿನ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಭಟ್ಕಳ ತಾಲೂಕಿನ ಬೆಳ್ಕೆ ಗ್ರಾಮದ  ಕೆಕ್ಕೊಡ್‌  ನೂಜಿನಲ್ಲಿ ತುಳುನಾಡಿನಲ್ಲಿ ಪ್ರಸಿದ್ದವಾಗಿರುವ ಸಿರಿಸಿಂಗಾರ ನೇಮೋತ್ಸವ ನಡೆಯಿತು. ಸುಮಾರು 457 ವರ್ಷಗಳ ಇತಿಹಾಸವುಳ್ಳ ದಕ್ಷಿಣ ಕನ್ನಡದ ದೈವ ಕಲ್ಲೂರ್ಟಿ ದೈವಕ್ಕೆ ಸಿರಿ ಸಿಂಗಾರ ನೇಮೋತ್ಸವವನ್ನು ಉತ್ತರಕನ್ನಡದ ಪ್ರಪ್ರಥಮ ಬಾರಿಗೆ ನಡೆದಿದೆ.

ಸಾಮಾನ್ಯವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೊರಗಜ್ಜ ಕಲ್ಲೂರ್ಟಿ, ಪಂಜುರ್ಲಿ ಸೇರಿದಂತೆ ಅನೇಕ ಕಾರ್ಣಿಕ  ದೈವಗಳ ಆರಾಧನೆ ಮಾಮೂಲಾಗಿ ನಡೆಯುತ್ತಿರುತ್ತದೆ. ತುಳುನಾಡಿನಲ್ಲಿ ನಡೆಯುವ ನಾಗಾರಾಧನೆ ಹೊರತುಪಡಿಸಿ ಉತ್ತರಕನ್ನಡದಲ್ಲಿ ನೇಮೋತ್ಸವ, ದೈವಕೋಲಗಳಂತ ಸಂಪ್ರದಾಯ  ನಡೆದಿರಲಿಲ್ಲ.  ಇಲ್ಲಿನ ಬ್ಯಾಂಕ್ ಉದ್ಯೋಗಿ ಶರಣ್ ಎಂಬುವವರ ಈ ನೇಮೋತ್ಸವವನ್ನ ದೇವರ ಅಪ್ಪಣೆಯಂತೆ ನಡೆಸಿದ್ದಾರೆ. ಇದಕ್ಕೆ ಕಾರಣವನ್ನ ಅವರು ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ನೇಮೋತ್ಸವ ಆಚರಣೆಗೆ ಬಂದಿದ್ದು ಹೇಗೆ?

ಶರಣ್ ಅವರು ಕೆಲ ವರ್ಷಗಳ ಹಿಂದೆ ಕೆಕ್ಕೋಡ್ ನೂಜಿನಲ್ಲಿ  ಜಮೀನು ಖರೀದಿಸಿದ್ದರು. ಆದರೆ ಒಂದೊಂದೇ ಕಷ್ಟಗಳ ಬರತೊಡಗಿದಾಗ ಅಷ್ಟಮಂಗಲ ಪ್ರಶ್ನೆಯನ್ನಿಟ್ಟಿದ್ದರು. ಆಗ  ಈ ಕ್ಷೇತ್ರದಲ್ಲಿ ದುರ್ಗಾಪರಮೇಶ್ವರಿ, ನಾಗಸ್ಥಾನ ಹಾಗೂ ಕಲ್ಲೂರ್ಟಿ  ದೇವರಿದ್ದು, ಅವುಗಳು ಭೂಕಂಪ ಸಂಭವಿಸಿದಾಗ ಭೂಗರ್ಭದಲ್ಲಿ ಸೇರಿ ಹೋದ ಮಾಹಿತಿಯನ್ನ ಸಿಕ್ಕಿದೆ. ಆಗ ಕೆರೆಯಲ್ಲಿರುವ ದೇವರ ಮೂರ್ತಿಯನ್ನ ಪತ್ತೆ ಹಚ್ಚಿ ಪ್ರತಿಷ್ಠಾಪಿಸಿದ್ದರು. ಸುಮಾರು 457 ವರ್ಷಗಳ ಪುರಾತನ ಇತಿಹಾಸವನ್ನೇ ಹೊಂದಿರುವ ದೈವವಾಗಿರುವುದು ಗೊತ್ತಾಯಿತು.

ಇದನ್ನು ಓದಿ: ಮದುವೆಯ ಮೊದಲ ವಾರ್ಷಿಕೋತ್ಸವದಂತೆ ಕೋವಿಡ್​ ಸೋಂಕಿಗೆ ತುತ್ತಾದ ನಟ ನಿಖಿಲ್​ ಕುಮಾರಸ್ವಾಮಿ

ಹೀಗಾಗಿ  ಉತ್ತರಕನ್ನಡದ ಕೆಲವು ಭಾಗ  ತುಳುನಾಡಿನ ಒಂದು ಭಾಗವಾಗಿರಬಹುದು.   ಆದರೆ ಕಾಲ ಕಳೆದಂತೆ ಇಲ್ಲಿ ನಡೆಯುತ್ತಿದ್ದ ತುಳುನಾಡಿನ  ದೈವರಾಧನೆಯು ಕೂಡಾ ಸಂಪೂರ್ಣ ನಿಂತು ಹೋಗಿರಬಹುದೆಂದು ಊಹಿಸಲಾಗಿದೆ. ಆದರೆ ಈಗ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ತುಳುನಾಡ ದೈವ ತಲೆ ಎತ್ತಿ ನಿಂತಿದ್ದು ನಂಬಿದವರ ಕೈಬಿಡದೆ ಕಾಪಾಡುತ್ತಿದೆ. ಈ ದೇವಾಲಯ ನಿರ್ಮಿಸಿದ ಮೇಲೆ ಕುಟುಂಬದವರಿಗೂ ಕೂಡ ಒಳ್ಳೆಯದಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಕಲ್ಲೂರ್ಟಿ  ತುಳುನಾಡಿನ ಅತ್ಯಂತ ಪುರಾತನ ಹಾಗೂ ಶಕ್ತಿಶಾಲಿಯಾದ ದೈವವಾಗಿದ್ದು  ತನ್ನನ್ನು ನಂಬಿದೆ ಭಕ್ತರನ್ನು ಕೈ ಬಿಟ್ಟಿಲ್ಲ.  ಸುಮಾರು ನಾಲ್ಕುವರೆ ಶತಮಾನಗಳ ಬಳಿಕ  ಕರಾವಳಿಯ ಮತ್ತೊಂದು ಜಿಲ್ಲೆಯಲ್ಲೂ ದೈವ ತನ್ನ ಇರುವಿಕೆ ತೋರಿಸಿರೋದು ಮಾತ್ರ ಬಲು ರೋಚಕವಾಗಿದೆ.
Published by: Seema R
First published: April 17, 2021, 5:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories