ಬೆಂಗಳೂರು: ನಮ್ಮ ಮೆಟ್ರೋ ಪಿಲ್ಲರ್ ದುರಂತ ಸ್ಥಳಕ್ಕೆ IISC ತಜ್ಞರ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. BMRCL ಅಧಿಕಾರಿಗಳಿಂದ IISC ತಜ್ಞ ಚಂದ್ರ ಕಿಶನ್ ಮಾಹಿತಿ ಪಡೆದರು. ಬಳಿಕ ಮಾತನಾಡಿದ IISC ಪ್ರೊಫೆಸರ್ ಚಂದ್ರ ಕಿಶನ್, ಪ್ರಾಥಮಿಕ ತನಿಖೆಯಲ್ಲಿ ದುರಂತಕ್ಕೆ ಕೆಲ ತಪ್ಪುಗಳೇ ಕಾರಣ ಅಂತ ಗೊತ್ತಾಗಿದೆ. ಕಾಮಗಾರಿಗೆ ಬಳಸಿದ ಕಟ್ಟಡ ಸಾಮಾಗ್ರಿಗಳ ಬಗ್ಗೆ ರಿಪೋರ್ಟ್ ಕೇಳಿದ್ದೇನೆ. ಕಬ್ಬಿಣ ತೂಕ ಜಾಸ್ತಿ ಆಗಿ ನಿರ್ಮಾಣ ಹಂತದ ಪಿಲ್ಲರ್ ಬಿದ್ದಿದೆ. ಪಿಲ್ಲರ್ಗೆ ಸಪೋರ್ಟಿಂಗ್ ಕೊಡಬೇಕು ಅಂತ ಹೇಳಿದರು. ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಬಿದ್ದು ತಾಯಿ-ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಪೊಲೀಸರು 9 ಆರೋಪಿಗಳಿಗೆ ನೋಟಿಸ್ ನೀಡಿದ್ದಾರೆ. ಇಂದು ಎಲ್ಲರೂ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ.
ಯಾರಿಗೆಲ್ಲಾ ನೋಟಿಸ್?
A1 ನಾಗಾರ್ಜುನ ಕನ್ಸಟ್ರಕ್ಷನ್ ಕಂಪನಿ (NCC) company
A2 ಪ್ರಭಾಕರ್, JE (junior engineer) NCC
A3 ಚೈತನ್ಯ, Director, NCC
A4 ಮತಾಯಿ, SPM (Senior project manager),NCC
A5 ವಿಕಾಸ್ ಸಿಂಗ್, PM (Project manager), NCC
A6 ಲಕ್ಷ್ಮಿಪತಿ, Superwiser, NCC
A7 ವೆಂಕಟೇಶ್ ಶೆಟ್ಟಿ, (DCE) ಡೆಪ್ಯುಟಿ ಚೀಫ್ ಎಂಜಿನಿಯರ್, BMRCL
A8 ಮಹೇಶ್ ಬಂಡೇಕರಿ , EE(Executive Engineer)BMRCL
A9 ಜಾಪರ್ ಸಿದ್ದಿಕಿ, JE (BMRCL)
ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗನ ಸಾವು ಪ್ರಕರಣದ ತನಿಖೆಯ ಆಯಾಮವನ್ನು ಪೊಲೀಸರು ಬದಲಿಸಿದ್ದಾರೆ. ಪಿಲ್ಲರ್ ಕುಸಿತ ಸಂಬಂಧ ತಜ್ಞ ಇಂಜಿನಿಯರ್ ಮೊರೆ ಹೋಗಿದ್ದಾರೆ.
ಬೇರೆ ಇಲಾಖೆಯ ಸರ್ಕಾರ ಇಂಜಿನಿಯರ್ ಬಳಿ ಪಿಲ್ಲರ್ ನಿರ್ಮಾಣ ಪ್ರಕ್ರಿಯೆಯ ಮಾಹಿತಿ ತಿಳಿದುಕೊಳ್ಳುತ್ತಿದ್ದಾರೆ. ತನಿಖೆಯ ಆರಂಭದಲ್ಲಿ ತಮಗೆ ಎದುರಾಗಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಿದ್ದಾರೆ.
ಪೊಲೀಸರ ಮುಂದಿರುವ ಪ್ರಶ್ನೆಗಳು ಏನು?
1.ಮೆಟ್ರೋ ಪಿಲ್ಲರ್ ನಿರ್ಮಾಣ ಹೇಗೆ ನಡೆಯುತ್ತದೆ?
2.ಅದಕ್ಕೆ ಬಳಸಬೇಕಾದ ವಸ್ತುಗಳ ಗುಟಮಟ್ಟ ಎಂತದ್ದು?
3.ಪಿಲ್ಲರ್ ದಪ್ಪ, ಅದಕ್ಕೆ ಬಳಸು ಕಬ್ಬಿಣವೆಷ್ಟು?
4.ಪಿಲ್ಲರ್ ನಿರ್ಮಾಣಕ್ಕೆ ಬಳಸುವ ಕಾಂಕ್ರೀಟ್ ಪ್ರಮಾಣವೆಷ್ಟು?
6.ಒಂದು ಪಿಲ್ಲರ್ ನಿರ್ಮಾಣಕ್ಕೆ ತೆಗೆದುಕೊಳ್ಳುವ ಸಮಯವೆಷ್ಟು?
7.ಇದೆಲ್ಲವನ್ನು ಕೆಲಸ ಮಾಡಿಸುವುದು ಯಾರ ಹೊಣೆ?
8.ಇದರಲ್ಲಿ ಲೋಪ ಕಂಡು ಬಂದರೆ ಅದಕ್ಕೆ ಯಾರು ಕಾರಣ?
ಇಬ್ಬರ ಸಾವು
ಮಂಗಳವಾರ 10:30ರ ವೇಳೆಗೆ ಗದಗ ಮೂಲದ ಸಿವಿಲ್ ಇಂಜಿನಿಯರ್ ಲೋಹಿತ್ , ಪತ್ನಿ ಹಾಗೂ ಅವಳಿ ಮಕ್ಕಳೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಬೆಂಗಳೂರಿನ ಹೆಚ್ಬಿಆರ್ ಲೇಔಟ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಬೈಕ್ ಮೇಲೆ ಕುಸಿದು ಬಿದ್ದಿತ್ತು. ಘಟನೆಯಲ್ಲಿ 35 ವರ್ಷದ ತೇಜಶ್ವಿನಿ ಹಾಗೂ ಮಗ ಸಾವನ್ನಪ್ಪಿದರೆ, ಲೋಹಿತ್ ಹಾಗೂ ಮಗಳು ಬದುಕುಳಿದಿದ್ದರು.
ಮೂವರು ಅಧಿಕಾರಿಗಳು ವಜಾ
ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಟ್ರೋ ಡೆಪ್ಯುಟಿ ಚೀಫ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಸೆಕ್ಷನ್ ಇಂಜಿನಿಯರ್ಗಳನ್ನ ಬಿಎಂಆರ್ಸಿಎಲ್ ಅಮಾನತು ಮಾಡಲಾಗಿದೆ. ಜೊತೆಗೆ ಘಟನೆಗೆ ಕಾರಣ ಎನು ಎಂಬುದರ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಮೂಲಕ ತನಿಖೆ ನಡೆಸಿ ವರದಿ ಸಲ್ಲಿಸಲು ಬಿಎಂ ಆಎಂಆರ್ಸಿಎಲ್ ಮನವಿ ಮಾಡಿದ್ದು, ಇದಕ್ಕೆ ಐಐಎಸ್ಸಿ ಒಪ್ಪಿಗೆ ಸೂಚಿಸಿದೆ ಎಂದು ಫರ್ವೇಜ್ ತಿಳಿಸಿದ್ದಾರೆ.
ಇನ್ನೂ ಬೆಂಗಳೂರು ಮೆಟ್ರೋ ನಿಗಮವು ಎನ್ಸಿಸಿ ಕಂಪನಿಗೆ ನೋಟಿಸ್ ನೀಡಿದ್ದು ಮೂರು ದಿನಗಳೊಳಗಾಗಿ ಘಟನೆಯ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ