ಬೆಂಗಳೂರು: ರಾಜಧಾನಿಯಲ್ಲಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ (Namma Metro Pillar) ಕುಸಿದು ತಾಯಿ-ಮಗು ಸಾವನ್ನಪ್ಪಿದ್ದಾರೆ. ಮಂಗಳವಾದ (ಜನವರಿ 10, 2023) ಹೆಚ್ಬಿಆರ್ ಲೇಔಟ್ನಲ್ಲಿ ಈ ದುರ್ಘಟನೆ ನಡೆದಿದೆ. ಅವಘಡದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ (CCTV Footage) ಸೆರೆಯಾಗಿದೆ. ಇಬ್ಬರು ಮಕ್ಕಳ ಜೊತೆ ಲೋಹಿತ್-ತೇಜಸ್ವಿನಿ ದಂಪತಿ ಹೋಗುತ್ತಿದ್ದರು. ಈ ವೇಳೆ ಬೈಕ್ ಮೇಲೆ ಮೆಟ್ರೋ ಪಿಲ್ಲರ್ ರಾಡ್ ಬಿದ್ದು ದುರಂತ ಸಂಭವಿಸಿದೆ. ಇನ್ನು ಮೃತ ತಾಯಿ- ಮಗನ (Mother And Son) ಮರಣೋತ್ತರ ಪರೀಕ್ಷೆ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನಡೆಯಿತು. ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯ್ತು. ಅಂತ್ಯಸಂಸ್ಕಾರಕ್ಕಾಗಿ ಮೃತದೇಹವನ್ನು ಕುಟುಂಬಸ್ಥರು ಆ್ಯಂಬುಲೆನ್ಸ್ನಲ್ಲಿ ದಾವಣಗೆರೆ (Davanagere) ಸಾಗಿಸಿದ್ದಾರೆ.
ಇನ್ನು ಮೃತ ತೇಜಸ್ವಿನಿ ತಂದೆ ಮದನ್ ಹಾಗೂ ಪತಿ ಲೋಹಿತ್ ಮಾತನಾಡಿದ್ದು, ಅಷ್ಟು ದೊಡ್ಡ ಪಿಲ್ಲರ್ ಹಾಕಬೇಕು ಅಂದ್ರೆ ಯೋಚನೆ ಬೇಡವಾ? ಟೆಂಡರ್ ಕೊಟ್ಟೋನ ಮನೆಯವರು ಸತ್ತಿದ್ರೆ ಹೀಗೆ ಆಗ್ತಾ ಇತ್ತಾ? ಬೆಂಗಳೂರಿನಲ್ಲಿ ಓಡಾಡೋಕೆ ಕಷ್ಟ ಆಗ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಏನ್ ಮಾಡ್ತಿದ್ದಾರೆ ಅಂತ ಕಿಡಿಕಾರಿದರು.
ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ
ಇನ್ನು ನಿನ್ನೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೂರ್ವ ವಲಯ ಡಿಸಿಪಿ ಭೀಮಾ ಶಂಕರ್ ಗುಳೇದ್ ಮತ್ತು ಐಜಿಪಿ ಚಂದ್ರಶೇಖರ್ ಪರಿಶೀಲನೆ ನಡೆಸಿದರು. BMRCL MD ಅಂಜುಂ ಪರ್ವೇಜ್ ಮಾತನಾಡಿದ್ದು, ಮೃತರ ಕುಟುಂಬಕ್ಕೆ ₹20 ಲಕ್ಷ ಪರಿಹಾರ ಘೋಷಣೆ ಮಾಡಿದರು.
ಬೈಕ್ನಲ್ಲಿ ಹೋಗ್ತಿದ್ದ ದಂಪತಿ ಮೇಲೆ ಕಿಲ್ಲರ್ ಪಿಲ್ಲರ್ ಕುಸಿದು ಬೀಳ್ತಿರೋ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತೀವ್ರ ರಕ್ತಸ್ರಾವವಾಗಿ ತೇಜಸ್ವಿನಿ, ಮಗ ವಿಹಾನ್ ಸಾವನ್ನಪ್ಪಿದ್ದಾರೆ. ಪತಿ ಲೋಹಿತ್ ಹಾಗೂ ಮತ್ತೊಂದು ಮಗು ಬದುಕುಳಿದಿದೆ.
BMRCL ಇಂಜಿನಿಯರ್ ಅಮಾನತು
ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ BMRCLನ ಮುಖ್ಯ ಇಂಜಿನಿಯರ್ನ್ನು ಅಮಾನತು ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ (CM Bsavaraj Bommai) ಆದೇಶಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮೆಟ್ರೊ ಎಂಡಿ, ಬೆಂಗಳೂರು ನಗರ ಪೊಲಿಸ್ ಆಯುಕ್ತ ಹಾಗೂ ಡಿಸಿಪಿ ಜೊತೆ ಸಿಎಂ ಸಭೆ ನಡೆಸಿದ್ರು. ಸಭೆಯಲ್ಲಿ BMRCL ಮುಖ್ಯ ಇಂಜಿನಿಯರ್ನ್ನು ಅಮಾನತು ಮಾಡುವಂತೆ ಸಿಎಂ ಆದೇಶ ಹೊರಡಿಸಿದ್ದಾರೆ.
ಪ್ರತ್ಯಕ್ಷದರ್ಶಿ ಹೇಳಿಕೆ
ಮೆಟ್ರೋ ಪಿಲ್ಲರ್ ದುರಂತದ ಕರಾಳತೆಯನ್ನು ಪ್ರತ್ಯಕ್ಷದರ್ಶಿ ಮೊಹಮ್ಮದ್ ಕಿಜಾರ್ ಬಿಚ್ಚಿಟ್ಟಿದ್ದಾರೆ. ಬೆಳಗ್ಗೆ 10ಗಂಟೆ ಸುಮಾರಿಗೆ ನಾನು ಕೆಲಸಕ್ಕೆ ಹೋಗ್ತಿದೆ. ಮೆಟ್ರೋ ಪಿಲ್ಲರ್ ಎದುರಿನಲ್ಲಿರುವ ಕಂಪನಿಯಲ್ಲಿ ನಾನು ಕೆಲಸ ಮಾಡ್ತಿದ್ದೇನೆ. ಗಾಜಿನ ಕಿಟಕಿಯಿಂದ ನೋಡುವಾಗ ಪಿಲ್ಲರ್ ವಾಲುತ್ತಿರುವುದು ಗಮನಕ್ಕೆ ಬಂತು.
ಇದನ್ನೂ ಓದಿ: Namma Metro Tragedy: ಜಗತ್ತಿಗೆ ಜೊತೆಯಾಗಿ ಬಂದ ಮಕ್ಕಳನ್ನ ಬೇರ್ಪಡಿಸಿದ ಮೆಟ್ರೋ ಪಿಲ್ಲರ್
ಕ್ಷಣ ಮಾತ್ರದಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಕುಟುಂಬದ ಮೇಲೆ ಕಬ್ಬಿಣದ ದೊಡ್ಡ ಪಿಲ್ಲರ್ ಬಿತ್ತು. ನಾವೆಲ್ಲ ಓಡಿ ಬಂದು ನೋಡಿದಾಗ ಮಗುವಿನ ತಲೆಗೆ ಪೆಟ್ಟಾಗಿ ಬಹಳ ರಕ್ತಸ್ರಾವ ಆಗುತ್ತಿತ್ತು. ಮಹಿಳೆಗೂ ಬಹಳ ಪೆಟ್ಟಾಗಿತ್ತು. ಸ್ಥಳೀಯರೆಲ್ಲ ಸೇರಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದೀವಿ. ಆದ್ರೆ ದುರದೃಷ್ಟವಶಾತ್ ತಾಯಿ-ಮಗು ಬದುಕಿ ಉಳಿಯಲಿಲ್ಲ ಎಂದು ಮೊಹಮ್ಮದ್ ಕಿಜಾರ್ ಹೇಳುತ್ತಾರೆ. ಇದೇ ವೇಳೆ ಘಟನೆಗೆ BMRCL ನೇರ ಹೊಣೆ ಅಂತ ಹೇಳಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ