Namma Metro: ಇಂದು ಬೆಳಗ್ಗೆ ನಡೆದ ಮೆಟ್ರೋ ಪಿಲ್ಲರ್ (Metro Pillar) ದುರಂತ ಜಗತ್ತಿಗೆ ಜೊತೆಯಾಗಿ ಬಂದ ಅವಳಿಗಳನ್ನು ಬೇರ್ಪಡಿಸಿದೆ. ಅವಳಿ ಮಕ್ಕಳೊಂದಿಗೆ (Twin Baby) ಸಂತೋಷವಾಗಿ ಜೀವನ ನಡೆಸುತ್ತಿದ್ದ ಲೋಹಿತ್ ಕುಮಾರ್ ಕುಟುಂಬದಲ್ಲೀಗ ಸೂತಕದ ಕರಾಳ ಛಾಯೆ ಆವರಿಸಿದೆ. ಎಲ್ಲವೂ ಸರಿಯಾಗಿದ್ರೆ, ಎಂದಿನಂತೆ ಲೋಹಿತ್ ಕುಮಾರ್ ಕೆಲಸಕ್ಕೆ (Work) ಹೋಗುತ್ತಿದ್ರು. ಅವರ ಪತ್ನಿ ತೇಜಸ್ವಿನಿ ಸಹ ಕಚೇರಿಯಲ್ಲಿರುತ್ತಿದ್ದರು. ಆದ್ರೆ ವಿಧಿಯಾಟ ಬಲ್ಲವರಾರು? ಈ ಸುಂದರ ಕುಟುಂಬದ ನಗುವನ್ನೇ ನಮ್ಮ ಮೆಟ್ರೋ (Namma Metro Construction) ಕಿತ್ತುಕೊಂಡಿದೆ. ಈ ಫೋಟೋದಲ್ಲಿರುವ ನಾಲ್ವರು ಇನ್ನೊಮ್ಮೆ ಈ ರೀತಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಸಾಧ್ಯವಾಗದಂತೆ ನಮ್ಮ ಮೆಟ್ರೋ ಅಡ್ಡ ಬಂದಿದೆ. ಇಂದು ಬೆಳಗ್ಗೆ ನಡೆದ ಕಬ್ಬಿಣದ ರಾಡ್ ಪಿಲ್ಲರ್ ಕುಸಿದ ದುರಂತದಲ್ಲಿ ಲೋಹಿತ್ ಕುಮಾರ್ ಪತ್ನಿ ತೇಜಸ್ವಿನಿ ಮಗು ವಿಹಾನ್ ಮೃತರಾಗಿದ್ದಾರೆ.
ಏಕಾಏಕಿ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತಗೊಂಡ (Metro Pillar Collapse) ಕಾರಣ ಬೈಕ್ನಲ್ಲಿ ಹೋಗುತ್ತಿದ್ದ ತಾಯಿ ತೇಜಸ್ವಿನಿ ಹಾಗೂ ಮಗ ವಿಹಾನ್ಗೆ ತೀವ್ರವಾಗಿ ಗಾಯಗೊಂಡಿದ್ದರು.
ಇಬ್ಬರನ್ನು ಸ್ಥಳೀಯರು ಪೊಲೀಸರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ತೇಜಸ್ವಿನಿ ಮತ್ತು ವಿಹಾನ್ ಸಾವನ್ನಪ್ಪಿದ್ದಾರೆ.
ಲೋಹಿತ್, ಮಗಳು ಪ್ರಾಣಾಪಾಯದಿಂದ ಪಾರು
ಇನ್ನು ತೇಜಸ್ವಿನಿ ಪತಿ ಲೋಹಿತ್ ಕುಮಾರ್ ಮತ್ತು ಮಗಳು ವಿಸ್ಮಿತಾ ಗಾಯಗೊಂಡಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲೋಹಿತ್ ಕುಮಾರ್ ಸಿವಿಲ್ ಇಂಜಿನೀಯರ್ ಆಗಿದ್ದು, ನಾಗವಾರದಲ್ಲಿ ವಾಸವಾಗಿದ್ದರು. ತೇಜಸ್ವಿನಿ ಅವರು ಮಾನ್ಯತಾ ಟೆಕ್ಪಾರ್ಕ್ನಲ್ಲಿ ಕೆಲಸ ಮಾಡುತ್ತಿದ್ದರು. ಮಗುವನ್ನು ಬೇಬಿ ಸಿಟ್ಟಿಂಗ್ಗೆ ಬಿಟ್ಟು, ಪತ್ನಿಯನ್ನು ಕಚೇರಿಗೆ ಬಿಡಲು ಲೋಹಿತ್ ಕುಮಾರ್ ತೆರಳುತ್ತಿದ್ದರು. ಕಬ್ಬಿಣದ ರಾಡ್ ಪಿಲ್ಲರ್ ತೇಜಸ್ವಿನಿ ಮತ್ತು ಮಗು ತಲೆ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು.
ವೈದ್ಯರ ಪ್ರತಿಕ್ರಿಯೆ
ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಚಿಕಿತ್ಸೆ ನೀಡಿದ ವೈದ್ಯ ಡಾ.ಮಹೇಶ್, ಆಸ್ಪತ್ರೆಗೆ ಕರೆತಂದಾಗಲೇ ತಲೆಗೆ ಪೆಟ್ಟು ಬಿದ್ದಿತ್ತು. ತಲೆಯಿಂದ ರಕ್ತ ತುಂಬಾ ಬ್ಲೀಡಿಂಗ್ ಆಗಿತ್ತು. ಅಪ್ಪ ಹಾಗೂ ಮತ್ತೊಂದು ಮಗುವಿಗೆ ಏನು ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ.
ಪ್ರತ್ಯಕ್ಷದರ್ಶಿ ಹೇಳಿಕೆ
ಇನ್ನು ಘಟನೆ ಕುರಿತಂತೆ ನ್ಯೂಸ್18ಗೆ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದು, ಬೈಕ್ನಲ್ಲಿ ಹೋಗುವಾಗ ಕಬ್ಬಿಣದ ರಾಡ್ ಬಿತ್ತು. ತಾಯಿ ಮಗು ರಾಡ್ಗಳ ಅಡಿ ಸಿಲುಕಿದ್ರೂ, ಇಬ್ಬರನ್ನು ಎತ್ತಲೂ ಅಧಿಕಾರಿಗಳು ಸಹಕರಿಸಲಿಲ್ಲ. ಜನರೇ ರಾಡ್ಗಳನ್ನು ಎತ್ತಿ ಆಸ್ಪತ್ರೆಗೆ ಸಾಗಿಸಿದ್ರು ಎಂದು ಹೇಳಿದ್ದಾರೆ.
ಬಿಎಂಆರ್ಸಿಎಲ್ ಹೇಳಿದ್ದೇನು?
ಬೆಂಗಳೂರಿನ ಬಹುತೇಕ ಕಡೆ ಮೆಟ್ರೋ ಕಾಮಗಾರಿಗಳು ನಡೆಯುತ್ತಿದೆ. ಕಾಮಗಾರಿ ನಡೆಸುವ ವೇಳೆ ಬಿಎಂಆರ್ಸಿ ಎಲ್ಲಾ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಯಾರೂ ಹೋಗಿಲ್ಲ ಅನ್ನೋದು ಸುಳ್ಳು ಎಂದು ಬಿಎಂಆರ್ಸಿಎಲ್, ಪಿಆರ್ಓ ಪವನ್ ಹೇಳಿದ್ದಾರೆ.
ಪಿಲ್ಲರ್ ರಾಡ್ ಕುಸಿತಕ್ಕೆ ಏನು ಕಾರಣ?
1.ಕಳಪೆ ಕಾಮಗಾರಿ ಕಾರಣಾನಾ?
2.ಪಿಲ್ಲರ್ನ ರಾಡ್ಗಳನ್ನ ಸರಿಯಾಗಿ ನಿಲ್ಲಿಸಿರಲಿಲ್ವಾ?
3.ಬೀಳದಂತೆ ತಡೆಯಲು ಕ್ರಮ ಇರಲಿಲ್ವಾ?
4.ಇಂಜಿನಿಯರಿಂಗ್ ಲೋಪ ಆಗಿತ್ತಾ?
5.ಯಾರ ಬೇಜವಾಬ್ದಾರಿಗೆ ಪಿಲ್ಲರ್ ರಾಡ್ ಕುಸಿತ?
6.ಕಾಮಗಾರಿ ಸ್ಥಳದಲ್ಲಿ ವಾಹನ, ಜನ ಸಂಚಾರ ಬಿಟ್ಟಿದ್ಯಾಕೆ?
ಇದನ್ನೂ ಓದಿ: Karnataka Assembly Elections 2023: ಕರ್ನಾಟಕದಲ್ಲಿ ಅತೀ ಹೆಚ್ಚು ಮಹಿಳಾ ಮತದಾರರಿರುವುದು ಇದೇ ಜಿಲ್ಲೆಯಲ್ಲಿ!
ಮೆಟ್ರೋ ಅವಘಡಗಳು!
ಅಕ್ಟೋಬರ್ 24, 2021: ಮೆಟ್ರೋ ಫೇಸ್-2 ಕಾಮಗಾರಿ ವೇಳೆ ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ಕಾಮಗಾರಿ ವೇಳೆ ಕ್ರೇನ್ ತುಂಡಾಗಿ ಬಿದ್ದಿತ್ತು.
ಸೆಪ್ಟೆಂಬರ್ 30, 2021: ನಮ್ಮ ಮೆಟ್ರೋ ಕಾಮಗಾರಿ ವೇಳೆ ಗೊಟ್ಟಿಗೆರೆಯಲ್ಲಿ 30 ಅಡಿ ಮಣ್ಣು ಕುಸಿದಿತ್ತು. ಟನ್ನಲ್ ಬೋರಿಂಗ್ ಮಷಿನ್ ಸುರಂಗ ಕೊರೆಯುವ ವೇಳೆ ಅವಘಡ ಆಗಿತ್ತು.
ಡಿಸೆಂಬರ್ 19, 2020: ತಲೆಗೆ ಕೇಬಲ್ ತಂತಿ ಹೊಕ್ಕಿ ಕಾರ್ಮಿಕ ಸಾವನ್ನಪ್ಪಿದ್ದನು. ಕೇಬಲ್ ಸ್ಟ್ರೆಸ್ಸಿಂಗ್ ಮಾಡುತ್ತಿದ್ದಾಗ ಜಯನಗರ 9ನೇ ಬ್ಲಾಕ್ನ ರಿಂಗ್ ರಸ್ತೆಯಲ್ಲಿ ಘಟನೆ ನಡೆದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ