ಶೀಘ್ರವೇ ಬೆಂಗಳೂರಿನ ರಸ್ತೆಗಿಳಿಯಲಿರುವ ಎಲೆಕ್ಟ್ರಾನಿಕ್ ಬಸ್​ಗಳ ವಿಶೇಷತೆಗಳೇನು?; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕಕ್ಕೆ 400 ಬಸ್​ಗಳು ಸಿಗಲಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ 50 ಹಾಗೂ ಉಳಿದ 50 ಬಸ್​ಗಳು ರಾಜ್ಯದ ವಿವಿಧ ಪ್ರಮುಖ ನಗರಗಳಿಗೆ ಸಿಗಲಿದೆ. ಸಾಮಾನ್ಯ ಬಸ್​ಗಿಂತ ಇವು ತುಂಬಾನೇ ಭಿನ್ನವಾಗಿರಲಿವೆ.

Rajesh Duggumane | news18
Updated:August 14, 2019, 2:48 PM IST
ಶೀಘ್ರವೇ ಬೆಂಗಳೂರಿನ ರಸ್ತೆಗಿಳಿಯಲಿರುವ ಎಲೆಕ್ಟ್ರಾನಿಕ್ ಬಸ್​ಗಳ ವಿಶೇಷತೆಗಳೇನು?; ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರಿನಲ್ಲಿ ಸಂಚರಿಸಲಿರುವ ಎಲೆಕ್ಟ್ರಾನಿಕ್​ ಬಸ್​ ಚಿತ್ರ ಕೃಪೆ: Wikimedia Commons
  • News18
  • Last Updated: August 14, 2019, 2:48 PM IST
  • Share this:
ದಿನ ಬೆಳಗಾದರೆ ಬೆಂಗಳೂರಿಗರಿಗೆ ಟ್ರಾಫಿಕ್​ನಷ್ಟೇ ಕಾಡುವ ಮತ್ತೊಂದು ದೊಡ್ಡ ಸಮಸ್ಯೆ ವಾಯುಮಾಲಿನ್ಯ. ಧೂಳು, ವಾಹನದ ಹೊಗೆಯಿಂದ ಕಂಗಾಲಾಗಿರುವ ಮಹಾನಗರದ ಜನತೆಗೆ ಈಗ ಚಿಕ್ಕ ರಿಲೀಫ್​ ಸಿಗಲಿದೆ. ಶೀಘ್ರದಲ್ಲೇ 300 ಎಲೆಕ್ಟ್ರಾನಿಕ್ ​ಬಸ್​ಗಳು ಬೆಂಗಳೂರಿನ ರಸ್ತೆಗೆ ಇಳಿಯಲಿವೆ!

ಬೆಂಗಳೂರಿನಲ್ಲಿ ನಿತ್ಯ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸಹಜವಾಗಿಯೇ ವಾಯುಮಾಲಿನ್ಯ ಕೂಡ ಹೆಚ್ಚುತ್ತಿದೆ. ಇದನ್ನು ತಡೆಯಲು ಕೇಂದ್ರ ಸರ್ಕಾರ 5,595 ಎಲೆಕ್ಟ್ರಿಕ್​ ಬಸ್​ಗಳನ್ನು ದೇಶಾದ್ಯಂತ 64 ನಗರಗಳಿಗೆ ಪೂರೈಸುತ್ತಿದೆ. ಇದರಲ್ಲಿ 300 ಬಸ್​ಗಳು ಬೆಂಗಳೂರಿಗೆ ಸಿಗಲಿವೆ.

ಕರ್ನಾಟಕಕ್ಕೆ 400 ಬಸ್​ಗಳು ಸಿಗಲಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ 50 ಹಾಗೂ ಉಳಿದ 50 ಬಸ್​ಗಳು ರಾಜ್ಯದ ವಿವಿಧ ಪ್ರಮುಖ ನಗರಗಳಿಗೆ ಸಿಗಲಿದೆ. ಸಾಮಾನ್ಯ ಬಸ್​ಗಿಂತ ಇವು ತುಂಬಾನೇ ಭಿನ್ನವಾಗಿರಲಿವೆ. ಎಲೆಕ್ಟ್ರಾನಿಕ್​ ಬಸ್​ಗಳು ಸಂಪೂರ್ಣವಾಗಿ ಪರಿಸರ ಸ್ನೇಹಿ ಆಗಿದೆ.

ನಿತ್ಯ ಬೆಂಗಳೂರಿನಲ್ಲಿ ಸಾವಿರಾರು ಬಿಎಂಟಿಸಿ ಬಸ್​ಗಳು ಓಡಾಡುತ್ತವೆ. ಈ ಬಸ್​ಗಳು ಹೊರ ಸೂಸುವ ಕಾರ್ಬನ್​ ಅಂಶ ಚಿಕ್ಕ ಪ್ರಮಾಣದ್ದೇನಲ್ಲ. ಈಗ 300 ಎಲೆಕ್ಟ್ರಿಕ್​ ಬಸ್​ಗಳು ಲಭ್ಯವಾಗುತ್ತಿರುವುದರಿಂದ ಕೊಂಚ ಪ್ರಮಾಣದಲ್ಲಿ ಮಾಲಿನ್ಯ ಕಡಿಮೆ ಆಗುವ ಸಾಧ್ಯತೆ ಇದೆ. ಡೀಸೆಲ್​ ವಾಹನಗಳಿಗೆ ಹೋಲಿಸಿದರೆ ಓಡಾಟದ ವೆಚ್ಚವೂ ಕಡಿಮೆ ಆಗಲಿದೆ.

ಚಿತ್ರ ಕೃಪೆ: Wikimedia Commons


ಇದನ್ನೂ ಓದಿ: ದರ್ಶನ್​ ಸೇರಿ ಹಲವು ಪ್ರಭಾವಿಗಳಿಂದ ರಾಜಕಾಲುವೆ ಒತ್ತುವರಿ; ಕೈಕಟ್ಟಿ ಕೂತ ಬಿಬಿಎಂಪಿ

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ