ವಿವಾದಕ್ಕೀಡಾಗಿರುವ ಯಲಹಂಕ ಮೇಲ್ಸೇತುವೆ ದೇವೇಗೌಡರ ಹೆಸರಿಡಿ; ಕಾಂಗ್ರೆಸ್‌ನಿಂದ ಹೊಸ ಕೂಗು

ಈಗಾಗಲೇ ಯಲಹಂಕ ಮೇತ್ಸೇತುವೆ ಬಿಜೆಪಿ ಮತ್ತು ವಿರೋಧ ಪಕ್ಷದ ನಾಯಕರ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಬದಲಾಗಿದ್ದು, ರಾಜ್ಯ ಸರ್ಕಾರ ಈ ಪತ್ರಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ? ಎಂಬುದನ್ನು ಕಾದು ನೋಡಬೇಕಿದೆ.

ಹೆಚ್‌.ಡಿ. ದೇವೇಗೌಡ.

ಹೆಚ್‌.ಡಿ. ದೇವೇಗೌಡ.

  • Share this:
ಬೆಂಗಳೂರು (ಜೂನ್‌ 01); ಇತ್ತೀಚೆಗೆ ವಿವಾದದ ಕೇಂದ್ರವಾಗಿರುವ ನಗರದ ಯಲಹಂಕ ಮದರ್ ಡೈರಿ ವೃತ್ತದಲ್ಲಿ ನಿರ್ಮಾಣವಾಗಿರುವ ನೂತನ ಮೇಲ್ಸೇತುವೆಗೆ ಸಾವರ್ಕರ್‌ ಹೆಸರಿಗಿಂತ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರ ಹೆಸರಿಡುವುದೇ ಸೂಕ್ತ ಎಂಬ ಹೊಸದೊಂದು ಕೂಗು ಇದೀಗ ಕೇಳಿ ಬರುತ್ತಿದೆ.

ಯಲಹಂಕದ ಬಳಿಯ ಮೇತ್ಸೇತುವೆಗೆ ಸಾವರ್ಕರ್‌ ಹೆಸರಿಟ್ಟು ಉದ್ಘಾಟಿಸಬೇಕು ಎಂದು ರಾಜ್ಯ ಬಿಜೆಪಿ ಸರ್ಕಾರ ನಿರ್ಧಾರ ಮಾಡಿತ್ತು. ಆದರೆ, ಸರ್ಕಾರದ ಈ ನಡೆಗೆ ಹಲವಾರು ಕಡೆಯಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೇಲ್ಸೇತುವೆ ಉದ್ಘಾಟನೆಯನ್ನೇ ಮುಂದೂಡಲಾಗಿತ್ತು. ಅಲ್ಲದೆ, ಈಗಲೂ ಸಾಮಾಜಿಕ ಜಾಲತಾಣಗಳ ಹಾಗೂ ಮಾಧ್ಯಮಗಳಲ್ಲಿ ಈ ಕುರಿತು ಬಿಸಿಬಿಸಿ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಇದರ ಬೆನ್ನಿಗೆ ಇದೀಗ ಮತ್ತೊಂದು ಕೂಗು ಸದ್ದು ಮಾಡುತ್ತಿದೆ.

ಅದೇನೆಂದರೆ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಪಕ್ಷದ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥರಾಗಿರುವ ಧನಂಜಯ್‌, " ದೇವೇಗೌಡರು ಕರ್ನಾಟಕದ ಹೆಮ್ಮೆಯ ನಾಯಕರು. ದೇಶದ ಉನ್ನತ ಹುದ್ದೆಗೆ ಏರಿದ ಏಕೈಕ ಕನ್ನಡಿಗ. ಅಲ್ಲದೇ  ಇದೇ ಜೂನ್ ಗೆ ದೇವೇಗೌಡರು ಭಾರತದ ಪ್ರಧಾನಿ ಹುದ್ದೆ ಸ್ವೀಕರಿಸಿ 25  ವಸಂತಗಳ ಪೂರೈಸಿದೆ. ರಾಜ್ಯಕ್ಕೆ ಅವರ ಕೊಡುಗೆಯನ್ನು ಪರಿಗಣಿಸಿ ಯಲಹಂಕ ಮೇಲ್ಸೇತುವೆಗೆ ದೇವೇಗೌಡರ ಹೆಸರು ಇಡುವುದು ಸೂಕ್ತ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಈಗಾಗಲೇ ಯಲಹಂಕ ಮೇತ್ಸೇತುವೆ ಬಿಜೆಪಿ ಮತ್ತು ವಿರೋಧ ಪಕ್ಷದ ನಾಯಕರ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಬದಲಾಗಿದ್ದು, ರಾಜ್ಯ ಸರ್ಕಾರ ಈ ಪತ್ರಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ? ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : Amit Shah Interview: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ; ಮಮತಾಗೆ ಶಾ ಚಾಲೆಂಜ್​
First published: