ಕೇಂದ್ರ ನಾಯಕ ಧರ್ಮೇಂದ್ರ ಪ್ರಧಾನ್​ ಕೈಯಲ್ಲಿ ಸಿಎಂ ಹೆಸರು? ಯಾರಿಗೆ ಒಲಿಯಲಿದೆ ಕರ್ನಾಟಕದ ಪಟ್ಟ

ಕೆಕೆ ಗೆಸ್ಟ್​ ಹೌಸ್‌ ನಲ್ಲಿ ಈ ಕುರಿತು ಮಹತ್ವದ ಚರ್ಚೆ ನಡೆಯುತ್ತಿದ್ದು, ಈ ಸ್ಥಳಕ್ಕೆ ಮಾಜಿ ಸಚಿವರು ಸೇರಿದಂತೆ, ವಲಸಿಗ ಸಚಿವರ ದೊಡ್ಡ ದಂಡೇ ಆಗಮನವಾಗಿದೆ. ಈ ಎಲ್ಲಾ ನಾಯಕರುಗಳು ಉಸ್ತುವಾರಿ ಹಾಗೂ ಕೇಂದ್ರ ನಾಯಕ ಧರ್ಮೇಂದ್ರ ಪ್ರಧಾನ್ ಭೇಟಿಗೆ ಹಾತೊರೆಯುತ್ತಿವೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಸಂಭ್ಯಾವರು

ಸಂಭ್ಯಾವರು

 • Share this:
  ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ ಎಸ್ ಯಡಿಯೂರಪ್ಪ ಅವರ ಉತ್ತರರಾಧಿಕಾರಿಯನ್ನಾಗಿ ಯಾರನ್ನು ನೇಮಿಸಬಹುದು ಎನ್ನುವ ಪ್ರಕ್ರಿಯೆಗೆ ಬಿಜೆಪಿ ಹೈ ಕಮಾಂಡ್​ ಚಾಲನೆ ನೀಡಿತ್ತು, ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ರಾಜ್ಯ ಘಟಕಕ್ಕೆ ನಿರ್ದೇಶನ ನೀಡಿತ್ತು.

  ಈ ಎಲ್ಲಾ ಬೆಳವಣಿಗೆಗಳ ನಂತರ ಕೇಂದ್ರ ಸಚಿವರು ಮತ್ತು ಬಿಜೆಪಿಯ ಕರ್ನಾಟಕ ರಾಜ್ಯ ವೀಕ್ಷಕರಾದ, ಜಿ ಕಿಶನ್ ರೆಡ್ಡಿ ಮತ್ತು ಧರ್ಮೇಂದ್ರ ಪ್ರಧಾನ್ ಬೆಂಗಳೂರಿಗೆ ಆಗಮಿಸಿದ್ದು, ಸಭೆಯು ಮಂಗಳವಾರ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

  ಈ ಸಭೆ ನಡೆಯುವ ಸ್ಥಳವಾದ ಕೆ.ಕೆ. ಅತಿಥಿ ಗೃಹಕ್ಕೆ ಆಗಮಿಸಿರುವ, ರಾಜ್ಯ ವೀಕ್ಷಕರುಗಳಾದ ಧರ್ಮೆಂದ್ರ ಪ್ರಧಾನ್​ ಹಾಗೂ ಕಿಶನ್​ ರೆಡ್ಡಿ ಅವರ ಜೊತೆಗೆ ರಾಜ್ಯ ಬಿಜೆಪಿ‌ ಸಹ ಉಸ್ತುವಾರಿ ಅರುಣ್​ ಸಿಂಗ್​ ಸಹ ಆಗಮಿಸಿದ್ದಾರೆ. ಈ ಇಬ್ಬರೂ ನಾಯಕರ ಜೊತೆ ಸಿ.ಟಿ ರವಿ ಕಾಣಿಸಿಕೊಂಡಿದ್ದಾರೆ.

  ಈ ಇಬ್ಬರು ನಾಯಕರ ರಾಜ್ಯ ಭೇಟಿ ಬಹಳ ಮಹತ್ವ ಪಡೆದುಕೊಂಡಿದ್ದು, ಸಿಎಂ ಅಭ್ಯರ್ಥಿ ಘೋಷಣೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಹೇಳಲಾಗಿದೆ. ಮಂಗಳವಾರದಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ನೇರವಾಗಿ ರಾಜ್ಯಕ್ಕೆ ಧರ್ಮೇಂದ್ರ ಪ್ರಧಾನ್​ ಆಗಮಿಸಿದ್ದಾರೆ. ಪ್ರಧಾನ್​ ಬರಿಗೈಯಲ್ಲಿ ಬರದೇ ಹೈಕಮಾಂಡ್ ಸಂದೇಶ ಹೊತ್ತು ತಂದಿರುವುದಾಗಿ ಹೇಳಲಾಗುತ್ತಿದೆ.

  ಹಾಗಾದರೆ ಮಂಗಳವಾರ ರಾತ್ರಿಯೇ ನೂತನ ಸಿಎಂ ಯಾರು ಎಂದು ಹೈಕಮಾಂಡ್ ಕಳಿಸಿರುವ ಸಂದೇಶವನ್ನು ಪ್ರಧಾನ್​ ಹೇಳಲಿದ್ದಾರೆಯೇ?  ಹಾಗಾದರೆ ಬಿಜೆಪಿ ಹೈಕಮಾಂಡ್​ ಚಿತ್ತ ರಾಜ್ಯದ ಯಾವ ನಾಯಕನ ಮೇಲೆ ಬಿದ್ದಿದೆ ಎನ್ನುವುದು ಸಹ ಕುತೂಹಲಕ್ಕೆ ಕಾರಣವಾಗಿದೆ.

  ಮಂಗಳವಾರ ಸಂಜೆ ನಡೆಯಲಿರುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಉಸ್ತುವಾರಿ ಅರುಣ್ ಸಿಂಗ್ , ಧರ್ಮೇಂದ್ರ ಪ್ರಧಾನ್ ,ಕಿಶನ್ ರೆಡ್ಡಿ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಕಟೀಲ್ ಅವರಿಂದ ಸಿಎಂ ಅಭ್ಯರ್ಥಿ ಹೆಸರು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  ಕೆಕೆ ಗೆಸ್ಟ್​ ಹೌಸ್‌ ನಲ್ಲಿ ಈ ಕುರಿತು ಮಹತ್ವದ ಚರ್ಚೆ ನಡೆಯುತ್ತಿದ್ದು, ಈ ಸ್ಥಳಕ್ಕೆ ಮಾಜಿ ಸಚಿವರು ಸೇರಿದಂತೆ, ವಲಸಿಗ ಸಚಿವರ ದೊಡ್ಡ ದಂಡೇ ಆಗಮನವಾಗಿದೆ. ಈ ಎಲ್ಲಾ ನಾಯಕರುಗಳು ಉಸ್ತುವಾರಿ ಹಾಗೂ ಕೇಂದ್ರ ನಾಯಕ ಧರ್ಮೇಂದ್ರ ಪ್ರಧಾನ್ ಭೇಟಿಗೆ ಹಾತೊರೆಯುತ್ತಿವೆ ಎಂದು ಬಿಜೆಪಿ ಮೂಲಗಳು ಹೇಳಿವೆ.

  ಇದನ್ನೂ ಓದಿ: Karnataka New CM: ಸಿಎಂ ಸ್ಥಾನಕ್ಕೆ ಅರವಿಂದ್ ಬೆಲ್ಲದ್ ಹೆಸರು ಫೈನಲ್? ಸುಳಿವು ನೀಡಿದ ವಿಡಿಯೋ..!

  ಬಿಜೆಪಿ ಹೈಕಮಾಂಡ್​ ಸಿಎಂ ಹುದ್ದೆಗೆ ಎಂಟು ಜನರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಂತಹ  ಲಿಂಗಾಯತ ನಾಯಕರನ್ನೇ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. . ಧಾರವಾಡ ಪಶ್ಚಿಮ ಶಾಸಕ ಅರವಿಂದ್ ಬೆಲ್ಲದ್​, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​, ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್​  ಆರ್ ನಿರಾಣಿ ಮತ್ತು ಬಸವರಾಜ್ ಬೊಮ್ಮಾಯಿ ಅವರು ಇದ್ದಾರೆ. ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರ ಬಗ್ಗೆ ಹೆಚ್ಚು ಒಲವು ಇದೆ ಎಂಬುದಾಗಿ ಬಿಜೆಪಿ ಆಪ್ತ ಮೂಲಗಳು ಅಭಿಪ್ರಾಯಪಟ್ಟಿವೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: