ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಲು ನಮಸ್ತೆ ಟ್ರಂಪ್ ಕಾರ್ಯಕ್ರಮವೇ ಕಾರಣ: ಶಿವಸೇನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರನ್ನು ಸ್ವಾಗತ ಮಾಡಲು ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸಲಾಗಿತ್ತು. ಟ್ರಂಪ್ ಪ್ರತಿನಿಧಿಗಳು ಮುಂಬೈ, ದೆಹಲಿಗೆ ಕೂಡ ಭೇಟಿ ನೀಡಿದ್ದರು. ಇದು ಕೊರೋನಾ ವೈರಸ್​ ಹರಡಲು ಪ್ರಮುಖ ಕಾರಣ ಎಂದು ಶಿವಸೇನೆ ಹೇಳಿದೆ.

news18-kannada
Updated:May 31, 2020, 3:31 PM IST
ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಲು ನಮಸ್ತೆ ಟ್ರಂಪ್ ಕಾರ್ಯಕ್ರಮವೇ ಕಾರಣ: ಶಿವಸೇನೆ
ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ
  • Share this:
ಮುಂಬೈ (ಮೇ 31): ಗುಜರಾತ್​, ಮುಂಬೈ ಹಾಗೂ ದೆಹಲಿಯಲ್ಲಿ ಕೊರೋನಾ ವೈರಸ್​ ಹೆಚ್ಚಲು ಫೆಬ್ರವರಿಯಲ್ಲಿ ನಡೆದ ನಮಸ್ತೆ ಟ್ರಂಪ್​ ಕಾರ್ಯಕ್ರಮವೇ ಕಾರಣ ಎಂದು ಶಿವಸೇನೆ ತನ್ನ ಮುಖವಾಣಿ ಸಾಮನಾ ಪತ್ರಿಕೆಯಲ್ಲಿ ಹೇಳಿದೆ. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.

ಶಿವಸೇನೆ ಸಂಸದ ಸಂಜಯ್​ ರಾವತ್​ ಕೂಡ ಇದೇ ರೀತಿಯ ಆರೋಪ ಮಾಡಿದ್ದಾರೆ. “ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರನ್ನು ಸ್ವಾಗತ ಮಾಡಲು ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸಲಾಗಿತ್ತು. ಟ್ರಂಪ್ ಪ್ರತಿನಿಧಿಗಳು ಮುಂಬೈ, ದೆಹಲಿಗೆ ಕೂಡ ಭೇಟಿ ನೀಡಿದ್ದರು. ಇದು ಕೊರೋನಾ ವೈರಸ್​ ಹರಡಲು ಪ್ರಮುಖ ಕಾರಣ,” ಎಂದು ಸಂಜಯ್​ ರಾವತ್​ ದೂರಿದ್ದಾರೆ.

ಕೊರೋನಾ ವೈರಸ್​ ನಿಯಂತ್ರಂಕ್ಕೆ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದಿರುವ ಸಂಜಯ್​ ರಾವತ್​, “ಸೋಂಕು ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಯಾವುದೇ ಸಿದ್ಧತೆ ಇಲ್ಲದೆ ಲಾಕ್​ಡೌನ್​ ಘೋಷಣೆ ಮಾಡಲಾಗಿತ್ತು. ಈಗ ಲಾಕ್​ಡೌನ್​ ತೆಗೆಯುವುದು ಅಥವಾ ಬಿಡುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಹೇಳುತ್ತಿದೆ,” ಎಂದಿದ್ದಾರೆ.

ಇದನ್ನೂ ಓದಿ: ಸಿಎಂ ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ; ಬುಧವಾರ ಮತ್ತೆ ಬಿಜೆಪಿ ಬಂಡಾಯ ಶಾಸಕರ ಸಭೆ

ಕೊರೋನಾ ವೈರಸ್​ ನಿಯಂತ್ರಣ ಸಾಧ್ಯವಾಗಿಲ್ಲ ಎನ್ನುವ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಕೇಂದ್ರ ಸರ್ಕಾರ ಮುಂದಾದರೆ ದೇಶದ 17 ರಾಜ್ಯಗಳಲ್ಲಿ ಇದೇ ರೀತಿ ಮಾಡಬೇಕಾಗುತ್ತದೆ ಎಂದರು.
First published: May 31, 2020, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading