ಬೆಂಗಳೂರು (ಆ.14): ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಜಟಾಪಟಿ ಮುಂದುವರೆದಿದೆ. ಕಾಂಗ್ರೆಸ್ಸಿಗರು ಇಂದಿರಾ ಗಾಂಧಿ ಹೆಸರಲ್ಲಿ ಬಾರ್ ತೆರೆಯಲಿ, ಜವಾಹರ್ ಲಾಲ್ ನೆಹರೂ ಅವರ ಹೆಸರನ್ನು ಹುಕ್ಕಾ ಬಾರ್ಗೆ ಇಡಬೇಕು ಎಂಬ ಸಿಟಿ ರವಿ ಹೇಳಿಕೆಗೆ ಇಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದರು. ಅಲ್ಲದೇ ವಾಜಪೇಯಿ ಸಿಕ್ಕಾಪಟ್ಟೆ ಕುಡಿಯುತ್ತಿದ್ದರು. ಅವರಿಗೆ ಸಂಜೆ ಎರಡು ಗ್ಲಾಸ್ ವಿಸ್ಕಿ ಇರಲೇಬೇಕಿತ್ತು ಎನ್ನುವ ಮೂಲಕ ಅವರು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದರು. ಅವರು ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಯಾಂಕ್ ಖರ್ಗೆ ಗಾಂಧಿ ಕುಟುಂಬದ ನಿರೀಕ್ಷೆ ಪ್ರಕಾರ ಮಾತನಾಡಿದ್ದಾರೆ. ಅವರು ಮೊದಲು ಅವರು ಅಟಲ್ ಬಿಹಾರಿ ವಾಜಪೇಯಿಯವರ ಇತಿಹಾಸ ಓದಿಕೊಳ್ಳಲಿ ಎಂದಿದ್ದಾರೆ
ಅಟಲ್ ಬಿಹಾರಿ ವಾಜಪೇಯಿ ಅಜಾತಶತ್ರು. ಕಾಂಗ್ರೆಸ್ ನವರು ವಿಷಯಾಂತರ ಮಾಡಬಾರದು. ಸಿಟಿ ರವಿ ಹೇಳಿಕೆಗೆ ಮುಗಿಬೀಳುವ ಕೆಲಸ ಮಾಡುತ್ತಿದ್ದಾರೆ. ವಾಜಪೇಯಿ ಪ್ರಧಾನಿ ಆದಾಗ ಚತುಷ್ಪಥ ರಸ್ತೆ ಮಾಡಿದ್ದರು. ಆಗ ವಾಜಪೇಯಿ ಹೆಸರಿಟ್ಟುಕೊಂಡಿರಲಿಲ್ಲ, ಕೇವಲ ವಾಜಪೇಯಿ ಭಾವಚಿತ್ರ ಹಾಕಿದ್ದರು. ಅಧಿಕಾರಕ್ಕೆ ಬಂದ ಮರುದಿನವೇ ಯುಪಿಎ ಸರ್ಕಾರ ವಾಜಪೇಯಿ ಭಾವಚಿತ್ರ ತೆಗೆದುಹಾಕಿದ್ದರು.
ವಾಜಪೇಯಿ ಬಗ್ಗೆ ಅಪಾರ ಗೌರವ ನಂಬಿಕೆ ಆದರ್ಶ ಜೀವನದ ಬಗ್ಗೆ ಶ್ರೇಷ್ಠ ಕಲ್ಪನೆಗಳಿವೆ. ಅದೇ ರೀತಿ ನೆಹರೂ ವಿಲಾಸಿ ಜೀವನ ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದರು.
ಸಿಟಿ ರವಿ ಏನು ಹೇಳುತ್ತಿದ್ದಾರೆ ಎನ್ನುವುದು ಕೂಡ ಚರ್ಚೆಯಾಗಲಿ. ಇಂದಿರಾ ಕ್ಯಾಂಟಿನ್ ಹೆಸರು ಬದಲಾಯಿಸಿ ಎಂದು ಸಿಎಂಗೆ ಹೇಳಿದ್ದೇನೆ. ಇಂದಿರಾ ಕ್ಯಾಂಟಿನ್ ಗೆ ಕಾಂಗ್ರೆಸ್ ನವರು ಅಗೌರವದಿಂದ ನಡೆಸಿಕೊಂಡ ಅಂಬೇಡ್ಕರ್ ಹೆಸರೇ ಇಡಲಿ ಎಂದು ಸವಾಲ್ ಹಾಕಿದರು.
ಇದನ್ನು ಓದಿ: ಮತ್ತೆ ಕ್ರಿಯಾಶೀಲರಾದ ರಮೇಶ್ ಜಾರಕಿಹೊಳಿ; ಆಪ್ತ ಶಾಸಕ ಮಹೇಶ್ ಕುಮಟಳ್ಳಿ ಜೊತೆ ಸಭೆ
ತುರ್ತುಪರಿಸ್ಥಿತಿಯ ಮೂಲಕ ಪ್ರಜಾಪ್ರಭುತ್ವಕ್ಕೆ ದ್ರೋಹ ಎಸಗಿದವರ ಹೆಸರನ್ನು ಯಾವುದೇ ಸರ್ಕಾರಿ ವ್ಯವಸ್ಥೆಗೆ ಇಡುವುದೇ ಈ ದೇಶದ ಪ್ರಜೆಗಳಿಗೆ ಮಾಡುವ ದ್ರೋಹ. ಅನ್ನಪೂರ್ಣೇಶ್ವರಿ ಕ್ಯಾಂಟಿನ್ ಎಂದು ಹೆಸರಿಟ್ಟರೆ ಅಲ್ಪಸಂಖ್ಯಾತರಿಗೆ ಬೇಸರ ಆಗುತ್ತದೆ ಎಂದು ಹೆದರಿ ಕಾಂಗ್ರೆಸ್ ಇಂದಿರಾ ಗಾಂಧಿ ಮೇಲೆ ಕಪಟ ಅಭಿಮಾನ ತೋರಿಸಲು ಹೊರಟಿದ್ದಾರೆ ಎಂದು ಟ್ವೀಟ್ ಮೂಲಕವೂ ಕಿಡಿಕಾರಿದ್ದಾರೆ.
ಇದಕ್ಕೂ ಮುನ್ನ ಕಲಬುರಗಿಯಲ್ಲಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ ,ಆರೆಸ್ಸೆಸ್ನವರು ಸಸ್ಯಾಹಾರಿಗಳು, ಬಿಜೆಪಿಯವರೆಲ್ಲ ಸಾಚಾಗಳು ಎಂದು ಭಾವಿಸಿದ್ದೇವೆ. ವಾಜಪೇಯಿ ಮಾಂಸಸಾಹಾರ ಪ್ರಿಯರು. ಮಾಂಸಾಹಾರ ಸೇವನೆಯಿಂದ ಅವರ ಮುತ್ಸದ್ಧಿತನ ಕಡಿಮೆಯಾಗುತ್ತದೆಯೇ? ಕಸಾಯಿಖಾತೆಗಳಿಗೆ ವಾಜಪೇಯಿ ಹೆಸರು ಇರಿಸುತ್ತೀರಾ ಎಂದು ಪ್ರಶ್ನಿಸಿದ್ದರು. ಅಲ್ಲದೇ ಬಿಜೆಪಿಯವರು ನಮ್ಮ ನಾಯಕರನ್ನು ಅವಮಾನಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ