‘ಸಿದ್ದರಾಮಯ್ಯ ಕಂಡ್ರೆ ಡಿಕೆಶಿಗೆ ಆಗಲ್ಲ, ಡಿಕೆಶಿ ಕಂಡ್ರೆ ಸಿದ್ದರಾಮಯ್ಯಗೆ ಆಗಲ್ಲ; ಸರ್ಕಾರ ಪ್ರಶ್ನಿಸಲು ವಿಪಕ್ಷ ನಾಯಕರೇ ಇಲ್ಲ‘; ನಳಿನ್​ ಕುಮಾರ್​​ ಕಟೀಲ್​​

ಜತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ವೇಳೆ ನಡೆದ ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ಪ್ರಸ್ತಾಪಿಸಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.

ಬಿಜೆಪಿ ರಾಜ್ಯಾಧ್ಯಕ್ಷ
ನಳಿನ್​ ಕುಮಾರ್ ಕಟೀಲ್.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್.

 • Share this:
  ದಾವಣಗೆರೆ(ಫೆ.15): ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್​​ ಇಡೀ ದೇಶಕ್ಕೆ ಬೆಂಕಿ ಇಡುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್​​ ಕಟೀಲ್​ ಕಿಡಿಕಾರಿದ್ದಾರೆ. ಇಂದು ನಗರದಲ್ಲಿ ನಡೆದ ದಾವಣಗೆರೆ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಎಸ್​​.ಎಂ ವೀರೇಶ್​​​​ ಹನಗವಾಡಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ನಳಿನ್​​ ಕುಮಾರ್​​ ಕಟೀಲ್​​ ಭಾಗಿಯಾಗಿದ್ದರು. ಇಲ್ಲಿನ ವೇದಿಕೆಯನ್ನುದ್ದೇಶಿಸಿ ಮಾತಾಡುವ ವೇಳೆ ಕಟೀಲ್​​ ಹೀಗೆ ಕಾಂಗ್ರೆಸ್​​ ವಿರುದ್ಧ ಕುಟುಕಿದರು.

  ಕಾಂಗ್ರೆಸ್​ ಹಲವು ಪಕ್ಷಗಳ ರಾಜಕೀಯ ಮುಖಂಡರು ಸುಖಾಸುಮ್ಮನೇ ಪೌರತ್ವ ತಿದ್ದುಪಡಿ ಕಾಯ್ದೆಗೆ ಅಡ್ಡಿಪಡಿಸುತ್ತಿದ್ದಾರೆ. ಈ ಮೂಲಕ ದೇಶದ ಸಂವಿಧಾನವನ್ನು ವಿರೋಧಸುತ್ತಿದ್ದಾರೆ. ಇದು ದೇಶದ್ರೋಹಿಗಳು ಮಾಡುವ ಕೆಲಸ. ಸದ್ಯದ ಪರಿಸ್ಥಿತಿ ಹೀಗಿದ್ದ ಮೇಲೆ ಸಂವಿಧಾನವನ್ನು ವಿರೋಧ ಮಾಡುತ್ತಿರುವರು ಯಾರು? ದೇಶದ್ರೋಹಿಗಳು ಯಾರು? ಎಂದು ಕಟೀಲ್​​ ಪ್ರಶ್ನಿಸಿದರು.

  ಇನ್ನು ರಾಜ್ಯ ವಿಧಾನಸಭಾ ಅಧಿವೇಶನ ಫೆ.17ನೇ ತಾರೀಕಿನಿಂದ ಶುರುವಾಗಲಿದೆ. ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಪ್ರಶ್ನಿಸಲು ವಿರೋಧ ಪಕ್ಷದ ನಾಯಕರೇ ಇಲ್ಲದಂತಾಗಿದೆ. ಸಿದ್ದರಾಮಯ್ಯರನ್ನು ವಿರೋಧ ಪಕ್ಷರನ್ನಾಗಿಸಿದರೆ ಮಾಜಿ ಸಚಿವ ಡಿ.ಕೆ ಶಿವಕುಮಾರ್​​​​​​ ಮುನಿಸುಕೊಳ್ಳುತ್ತಾರೆ. ಡಿ.ಕೆ ಶಿವಕುಮಾರ್​​ರನ್ನು ಮಾಡಿದರೆ ಸಿದ್ದರಾಮಯ್ಯ ಹೊರಗೆ ಹೋಗುತ್ತಾರೆ. ಒಬ್ಬರಿಗೆ ಒಬ್ಬರನ್ನು ಕಂಡರೆ ಆಗೋದಿಲ್ಲ ಎಂದರು.

  ಇನ್ನು, ಡಿ.ಕೆ ಶಿವಕುಮಾರ್​​ ಮತ್ತು ಸಿದ್ದರಾಮಯ್ಯರಲ್ಲಿ ಯಾರನ್ನೇ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದರೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್​​ ಹೊರಗೆ ಹೋಗುತ್ತಾರೆ. ಕಾಂಗ್ರೆಸ್​ ರಾಜ್ಯಾಧ್ಯಕ್ಷರನ್ನ ಘೋಷಿಸಿದ ಕೆಲವೇ ಹೊತ್ತಲ್ಲಿ ಪಕ್ಷದಲ್ಲಿ ಬಂಡಾಯ ಶುರುವಾಗಲಿದೆ ಎಂದು ನಳಿನ್​​ ಕುಮಾರ್​ ಕಟೀಲ್​​ ವ್ಯಂಗ್ಯವಾಡಿದರು.

  ಇದನ್ನೂ ಓದಿ: ಸಿಎಂ ಮನೆಗೆ ಮುತ್ತಿಗೆ ಹಾಕುವ ಕಾಂಗ್ರೆಸ್​ ನಾಯಕರ ಪ್ರಯತ್ನ ವಿಫಲ; ಸಿದ್ದರಾಮಯ್ಯ ಸೇರಿ ಹಲವರು ಪೊಲೀಸ್​ ವಶಕ್ಕೆ

  ಮುಖ್ಯಮಂತ್ರಿ ಬಿ.ಎಸ್​​​ ಯಡಿಯೂರಪ್ಪ ನೇತೃತ್ವದ ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನವೂ ಫೆ.17ರಿಂದ ಶುರುವಾಗಲಿದೆ. ಮೊದಲ ದಿನದ ವಿಧಾನಮಂಡಲ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಭಾಷಣ ಮಾಡಲಿದ್ದಾರೆ. ನಂತರ ಫೆ.17ರಿಂದ ಫೆ.20ರವರೆಗೂ ಅಧಿವೇಶನ ನಡೆಯಲಿದೆ. ಇದಾದ ಬಳಿಕ ಮಾರ್ಚ್​​ 5ನೇ ತಾರೀಕು ರಾಜ್ಯ ಬಜೆಟ್​​ ಮಂಡನೆಯಾಗಲಿದೆ. ಈ ಅಧಿವೇಶನದಲ್ಲಿ ಹೇಗಾದರೂ ಸರಿಯೇ ಆಡಳಿತರೂಢ ಬಿಜೆಪಿಯನ್ನು ಕಟ್ಟಿ ಹಾಕಲೇಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಪಣತೊಟ್ಟಿದೆ.

  ಕಳೆದ ವರ್ಷ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಉಂಟಾದ ನೆರೆ ಹಾವಳಿ ವಿಚಾರವನ್ನು ವಿರೋಧ ಪಕ್ಷಗಳು ಪ್ರಸ್ತಾಪಿಸಲಿವೆ. ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡದಿರುವುದು; ಕೊಟ್ಟ ಪರಿಹಾರದ ಚೆಕ್‍ ಬೌನ್ಸ್ ಆಗಿರುವುದು; ಮೈತ್ರಿ ಸರ್ಕಾರದ ಅನುದಾನ ಹಿಂಪಡೆದಿರುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ವಿಚಾರಗಳನ್ನು ಮುಂದಿಟ್ಟು ಸರ್ಕಾರವನ್ನು ಹಣಿಯಲು ಪ್ರತಿಪಕ್ಷಗಳು ಹವಣಿಸುತ್ತಿವೆ.

  ಜತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ವೇಳೆ ನಡೆದ ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ಪ್ರಸ್ತಾಪಿಸಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.
  First published: