ಡಿಸಿಎಂ ಹುದ್ದೆಯನ್ನೇ ಕಿತ್ತುಹಾಕಿ ಎಂದಿದ್ದ ರೇಣುಕಾಚಾರ್ಯರಿಂದ ವಿವರಣೆ ಪಡೆದ ಕಟೀಲ್

ನೀವು ಇನ್ಮುಂದೆ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ಹೇಳಿಕೆ ಕೊಡಬೇಡಿ. ನಿಮ್ಮ ವೈಯಕ್ತಿಕ ಅಭಿಪ್ರಾಯ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಎಂದು ರೇಣುಕಾಚಾರ್ಯರಿಗೆ ನಳಿನ್ ಕುಮಾರ್ ಕಟೀಲ್ ಸೂಚಿಸಿದ್ದಾರೆ.

news18
Updated:December 18, 2019, 2:19 PM IST
ಡಿಸಿಎಂ ಹುದ್ದೆಯನ್ನೇ ಕಿತ್ತುಹಾಕಿ ಎಂದಿದ್ದ ರೇಣುಕಾಚಾರ್ಯರಿಂದ ವಿವರಣೆ ಪಡೆದ ಕಟೀಲ್
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ
  • News18
  • Last Updated: December 18, 2019, 2:19 PM IST
  • Share this:
ಬೆಂಗಳೂರು(ಡಿ. 18): ಬಿಎಸ್​ವೈ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ಅಗತ್ಯವೇ ಇಲ್ಲ. ಈಗಿರುವ ಡಿಸಿಎಂ ಹುದ್ದೆಗಳನ್ನು ತೆಗೆದುಹಾಕಬೇಕು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆಗೆ ಅವರು ರೇಣುಕಾಚಾರ್ಯರಿಂದ ವಿವರಣೆ ಪಡೆದಿದ್ದಾರೆ.

ತಮ್ಮ ಹೇಳಿಕೆಯಿಂದ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರವಾಗಿದೆ. ಕೂಡಲೇ ಬಂದು ವಿವರಣೆ ಕೊಡುವಂತೆ ರಾಜ್ಯಾಧ್ಯಕ್ಷರ ಕಟೀಲ್ ಅವರು ರೇಣುಕಾರ್ಯರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಕಚೇರಿಗೆ ತೆರಳಿದ ರೇಣುಕಾಚಾರ್ಯ ಅವರು ರಾಜ್ಯಾಧ್ಯಕ್ಷರಿಗೆ ತಮ್ಮ ಹೇಳಿಕೆಗೆ ಸಮಜಾಯಿಷಿ ಕೊಟ್ಟಿದ್ಧಾರೆ.

ಡಿಸಿಎಂ ಸ್ಥಾನದ ಬಗ್ಗೆ ತಾನು ಉದ್ದೇಶಪೂರ್ವಕವಾಗಿ ಏನನ್ನೂ ಹೇಳಿಲ್ಲ. ಮಾಧ್ಯಮದವರ ಗೊಂದಲಮಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದೆ. ವೈಯಕ್ತಿಕ ಅಭಿಪ್ರಾಯವನ್ನಷ್ಟೇ ವ್ಯಕ್ತಪಡಿಸಿದ್ಧೇನೆ. ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಧಕ್ಕೆ ತರುವಂತಹ ಹೇಳಿಕೆ ಕೊಟ್ಟಿಲ್ಲ ಎಂದು ರೇಣುಕಾರ್ಯ ಅವರು ಸ್ಪಷ್ಟನೆ ನೀಡಿದ್ಧಾರೆ.

ಇದನ್ನೂ ಓದಿ: ನಾನೂ ಸಚಿವ ಸ್ಥಾನದ ಆಕಾಂಕ್ಷಿ, ಅಶ್ವಥ್ ನಾರಾಯಣ ಮಂತ್ರಿ ಸ್ಥಾನ ತ್ಯಾಗ ಮಾಡಲಿ; ಶಾಸಕ ರೇಣುಕಾಚಾರ್ಯ ಸವಾಲು

ನೀವು ಇನ್ಮುಂದೆ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ಹೇಳಿಕೆ ಕೊಡಬೇಡಿ. ನಿಮ್ಮ ವೈಯಕ್ತಿಕ ಅಭಿಪ್ರಾಯ ಏನೇ ಇದ್ದರೂ  ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಎಂದು ನಳಿನ್ ಕುಮಾರ್ ಕಟೀಲ್ ಸೂಚಿಸಿದ್ದಾರೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಎಂ.ಪಿ. ರೇಣುಕಾಚಾರ್ಯ ಅವರು ಕೆಲ ದಿನಗಳ ಹಿಂದೆ ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಮುಖ್ಯಮಂತ್ರಿ ದುರ್ಬಲವಾಗಿದ್ದರೆ ಮಾತ್ರ ಡಿಸಿಎಂ ಹುದ್ದೆಗಳ ಅಗತ್ಯ ಬೀಳುತ್ತದೆ. ಇಲ್ಲಿ ಯಡಿಯೂರಪ್ಪ ಪ್ರಬಲ ಸಿಎಂ ಆಗಿದ್ದಾರೆ. ಅವರಿಗೆ ಉಪ ಮುಖ್ಯಮಂತ್ರಿಗಳ ಅಗತ್ಯವಿಲ್ಲ. ಹೊಸದಾಗಿ ಡಿಸಿಎಂ ಹುದ್ದೆ ರಚಿಸುವುದಿರಲಿ, ಈಗ ಇರುವ ಡಿಸಿಎಂ ಹುದ್ದೆಗಳನ್ನೇ ಕೈಬಿಡಬೇಕು ಎಂದು ಹೇಳಿಕೆ ನೀಡಿದ್ದರು. ಜೊತೆಗೆ, ಪರೋಕ್ಷವಾಗಿ ಡಿಸಿಎಂ ಅಶ್ವಥ ನಾರಾಯಣ ಅವರನ್ನೂ ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: December 18, 2019, 2:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading