‘15 ಕಾಂಗ್ರೆಸ್​ ಶಾಸಕರು ನನ್ನ ಸಂಪರ್ಕದಲ್ಲಿ‘ - ಡಿ.ಕೆ ಶಿವಕುಮಾರ್​​ಗೆ ನಳಿನ್​​ ಕುಮಾರ್​​ ಕಟೀಲ್​​ ತಿರುಗೇಟು

ಹದಿನೈದು ದಿನಗಳ ಹಿಂದೆ ಸಿ.ಪಿ ಯೋಗೇಶ್ವರ್​ ಕಾಂಗ್ರೆಸ್​​​​ ಪಕ್ಷ ಸೇರಲು ನನ್ನ ಬಳಿ ಬಂದಿದ್ದರು ಎಂಬ ಡಿ.ಕೆ ಶಿವಕುಮಾರ್​​ ಹೇಳಿಕೆಗೆ ಕಟೀಲ್​​ ಉತ್ತರಿಸಿದರು. 15 ಜನ ಕಾಂಗ್ರೆಸ್​ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ನಳಿನ್​ ಕುಮಾರ್​ ಕಟೀಲ್​​​​ ಡಿಕೆಶಿಗೆ ಟಾಂಗ್​ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ
ನಳಿನ್​ ಕುಮಾರ್ ಕಟೀಲ್.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್.

  • Share this:
ರಾಮನಗರ(ಜು.30): ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್​​​​ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬ ನೂತನ ಎಂಎಲ್​​ಸಿ ಸಿ.ಪಿ ಯೋಗೇಶ್ವರ್​​​​​ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​​ ಕುಮಾರ್​​ ಕಟೀಲ್​​​​ ಪ್ರತಿಕ್ರಿಯಿಸಿದರು. ಈ ಸಂಬಂಧ ನಗರದಲ್ಲಿ ಮಾತಾಡಿದ ನಳಿನ್​​ ಕುಮಾರ್​ ಕಟೀಲ್​​, ಸಿ.ಪಿ ಯೋಗೇಶ್ವರ್​​​​​ ಹೇಳಿಕೆ ಬಗ್ಗೆ ನಾನು ಹೆಚ್ಚು ಉಲ್ಲೇಖ ಮಾಡಲ್ಲ ಎಂದರು. ಈ ಮೂಲಕ ಸಿ.ಪಿ ಯೋಗೇಶ್ವರ್​​ ಹೇಳಿಕೆಗೆ ನನ್ನ ಬೆಂಬಲ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದ್ಧಾರೆ.

ಇಂದು ರಾಮನಗರ ಜಿಲ್ಲೆಯಲ್ಲಿ ನೂತನವಾಗಿ ಆಯ್ಕೆಯಾದ ಪಕ್ಷದ ಪದಾಧಿಕಾರಿಗಳ ಸಭೆಯನ್ನ ಇಲ್ಲಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಸಲಾಯ್ತು. ಈ ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಹಿಸಿದ್ದರು. ಈ ಸಂದರ್ಭದಲ್ಲಿ ಹದಿನೈದು ದಿನಗಳ ಹಿಂದೆ ಸಿ.ಪಿ ಯೋಗೇಶ್ವರ್​ ಕಾಂಗ್ರೆಸ್​​​​ ಪಕ್ಷ ಸೇರಲು ನನ್ನ ಬಳಿ ಬಂದಿದ್ದರು ಎಂಬ ಡಿ.ಕೆ ಶಿವಕುಮಾರ್​​ ಹೇಳಿಕೆಗೆ ಕಟೀಲ್​​ ಉತ್ತರಿಸಿದರು.

15 ಜನ ಕಾಂಗ್ರೆಸ್​ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ನಳಿನ್​ ಕುಮಾರ್​ ಕಟೀಲ್​​​​ ಡಿಕೆಶಿಗೆ ಟಾಂಗ್​ ನೀಡಿದರು. ಹಾಗೆಯೇ ರಾಮನಗರ ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಕಾರ್ಯಕರ್ತರು ಕೆಲ ಭಾವನೆಗಳನ್ನ ವ್ಯಕ್ತಪಡಿಸಿದ್ದಾರೆ. ಎಲ್ಲರ ಭಾವನೆಗಳಿಗೆ ನಾನು ಸ್ಪಂದಿಸುತ್ತೇನೆ ಎಂದರು ಕಟೀಲ್​​.

ಈ ಮುನ್ನ ಡಿ.ಕೆ ಶಿವಕುಮಾರ್ ಹಾಗೂ ಎಚ್.ಡಿ ಕುಮಾರಸ್ವಾಮಿ ಅನುಕೂಲ ರಾಜಕಾರಣಿಗಳು.ಇಷ್ಟು ದಿನ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬಂದಿದ್ದರು. ಈಗ ಇಬ್ಬರಿಗೂ ಅಸ್ತಿತ್ವದ ಪ್ರಶ್ನೆಯಾಗಿದೆ. ಹೀಗಾಗಿ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಈಗ ಅಸ್ತಿತ್ವದ ಪ್ರಶ್ನೆ ಆಗಿರುವುದರಿಂದ ಮಾತನಾಡುತ್ತಿದ್ದಾರೆ. ಅವರ ಮಾತುಗಳನ್ನು ಮೇಲ್ನೋಟಕ್ಕೆ ನೋಡಿದರೆ ಬಿಜೆಪಿಗೆ ಬೆಂಬಲ ಕೊಡುತ್ತಿದ್ದಾರೆ ಎಂಬಂತೆ ಕಾಣಿಸುತ್ತಿದೆ. ನಮ್ಮ ಸರ್ಕಾರದಲ್ಲಿ ಕುಮಾರಸ್ವಾಮಿ ಹೇಳಿರುವ ಎಲ್ಲ ಕೆಲಸಗಳು ನಡೆಯುತ್ತಿವೆ. ಅವರು ಸೂಚಿಸಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಡಲಾಗುತ್ತಿದೆ. ಹೀಗಾಗಿ ಅವರೂ ಬಿಜೆಪಿಗೆ ಸಫೋರ್ಟ್ ಮಾಡಲು ಮುಂದಾಗಿದ್ದಾರೆ ಎಂದು ನೂತನ ಬಿಜೆಪಿ ಎಂಎಲ್​​ಸಿ ಸಿಪಿ ಯೋಗೇಶ್ವರ್​​​ ಎಚ್​​​ಡಿಕೆ ಮತ್ತು ಡಿಕೆಶಿ ವಿರುದ್ಧ ಕಿಡಿಕಾರಿದ್ದರು.

ಇದನ್ನೂ ಓದಿ: ‘ನನ್ನ ಮತ್ತು ಡಿ.ಕೆ ಶಿವಕುಮಾರ್​​​​ ಮಧ್ಯೆ ಹುಳಿ ಹಿಂಡುವವರ ನಾಟಕ ಫಲಿಸದು‘ - ಎಚ್​​.ಡಿ ಕುಮಾರಸ್ವಾಮಿ

ಆದರೀಗ, ನೂತನ ಎಂಎಲ್​​ಸಿ ಸಿ.ಪಿ ಯೋಗೇಶ್ವರ್​​​​ ಹೇಳಿಕೆಯಿಂದ ಬಿಜೆಪಿ ನಾಯಕರು ಅಂತರ ಕಾಯ್ದುಕೊಳ್ಳುತ್ತಿರುವ ಪಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Published by:Ganesh Nachikethu
First published: