• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ಈ ಬಾರಿ ಬಿಜೆಪಿ 150 ಸ್ಥಾನ ಪಡೆದು ಅಧಿಕಾರಕ್ಕೆ ಬರುತ್ತೆ: ನಳಿನ್ ಕುಮಾರ್ ಕಟೀಲ್‌

Karnataka Election 2023: ಈ ಬಾರಿ ಬಿಜೆಪಿ 150 ಸ್ಥಾನ ಪಡೆದು ಅಧಿಕಾರಕ್ಕೆ ಬರುತ್ತೆ: ನಳಿನ್ ಕುಮಾರ್ ಕಟೀಲ್‌

ನಳಿನ್ ಕುಮಾರ್ ಕಟೀಲ್

ನಳಿನ್ ಕುಮಾರ್ ಕಟೀಲ್

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಜನರಲ್ಲಿ ಭರವಸೆ ಮೂಡಿದೆ. ದೇಶದಲ್ಲಿ ಭಯೋತ್ಪಾದನೆ, ಭ್ರಷ್ಟಾಚಾರ ನಿಂತಿದೆ. ಪಿಎಫ್ ಐ ನಿಷೇಧ, ಎನ್ಐಇ ನಿಂದ ಭಯೋತ್ಪಾದನೆಯಲ್ಲಿ‌ ತೊಡಗಿದ 400 ಜನರ ಬಂಧನವಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

  • Share this:

ಗದಗ: ಕೇಂದ್ರದ ನಾಯಕರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ (Karnataka Election 2023) ಬಿಜೆಪಿ (BJP) ಬಹುಮತದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು (Nalin Kumar Kateel) ಹೇಳಿದರು. ಗದಗದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಮರ್ಗದರ್ಶನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ ಎಂದರು.


ಇನ್ನು ಕಾಂಗ್ರೆಸ್ ಪುಷ್ಟೀಕರಣದ ರಾಜಕಾರಣದಿಂದ ಜನ ತಿರಸ್ಕಾರ ಮಾಡಿದ್ದಾರೆ ಎಂದ ನಳಿನ್ ಕುಮಾರ್ ಕಟೀಲ್, ಗರೀಬಿ ಹಟಾವೊ ಹೆಸರಲ್ಲಿ ಕಾಂಗ್ರೆಸ್ ಮತಗಳನ್ನಷ್ಟೇ ಪಡೆದಿದೆ. ಆದರೆ ನರೇಂದ್ರ ಮೋದಿ ಸರ್ಕಾರದಲ್ಲಿ ಗರಿಬಿ ಹಟಾವೋ ಯೋಜನೆಗಳನ್ನ ತರಲಾಗಿದೆ. ಮನೆಗಳಿಗೆ ಗ್ಯಾಸ್, ಶೌಚಾಲಯ, ಜನರಿಕ್ ಔಷಧಿ ನೀಡಿದ್ದು ಜನರ ಮನಸ್ಸಿನಲ್ಲಿ ಉಳಿದಿದೆ ಎಂದು ಹೇಳಿದರು.


ಇದನ್ನೂ ಓದಿ: PT Parameshwar Naik: ಹೂವಿನ ಹಡಗಲಿ ಕಾಂಗ್ರೆಸ್‍ ಅಭ್ಯರ್ಥಿ ಪಿಟಿ ಪರಮೇಶ್ವರ್ ನಾಯ್ಕ್‌ ಅವರ ರಾಜಕೀಯ ಹಾದಿ


ಕಾಂಗ್ರೆಸ್ ಪುಷ್ಟೀಕರಣ ರಾಜಕಾರಣ ಮಾಡುತ್ತದೆ


ಹಳೆ ಮೈಸೂರು ಭಾಗದಲ್ಲೂ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ರೋಡ್ ಶೋನಲ್ಲಿ ನಿರೀಕ್ಷೆಗೂ ಮೀರಿ ಜನಸಾಗರ ಸೇರುತ್ತಿದೆ ಎಂದ ನಳಿನ್ ಕುಮಾರ್ ಕಟೀಲ್, ಭಯೋತ್ಪಾದನೆಗೆ ಬೆಂಗಾವಲಾಗಿ ನಿಂತು ಕಾಂಗ್ರೆಸ್ ಪುಷ್ಟೀಕರಣ ರಾಜಕಾರಣ ಮಾಡುತ್ತದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳ ಹತ್ಯೆ ಆದಾಗ ಮೌನವಾಗಿದ್ದರು. ಪಿಎಫ್ಐ ಕಾರ್ಯಕರ್ತರನ್ನ ಬಿಡುಗಡೆ ಮಾಡಿದ್ರು. ನಿರಂತರ ಗೋಹತ್ಯೆ ನಡೆಯಿತು. ಆದರೆ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಭರವಸೆ ಮೂಡಿದೆ. ದೇಶದಲ್ಲಿ ಭಯೋತ್ಪಾದನೆ, ಭ್ರಷ್ಟಾಚಾರ ನಿಂತಿದೆ. ಪಿಎಫ್ ಐ ನಿಷೇಧ, ಎನ್ಐಎ ನಿಂದ ಭಯೋತ್ಪಾದನೆಯಲ್ಲಿ‌ ತೊಡಗಿದ 400 ಜನರ ಬಂಧನವಾಗಿದೆ ಎಂದು ಹೇಳಿದರು.


ಭಯೋತ್ಪಾದನೆ ಚಟುವಟಿಕೆಗೆ ಕಾಂಗ್ರೆಸ್ ಉತ್ತೇಜನ


ಇನ್ನು, ಕಾಂಗ್ರೆಸ್ ನಲ್ಲಿ ಶಾಸಕರಾಗಿದ್ದ ಅಖಂಡ ಶ್ರೀನಿವಾಸ ಅವರ ಮನೆಗೆ ಬೆಂಕಿ ಹಾಕಿದರೂ ಅವರ ಮನೆಗೆ ಸೌಜನ್ಯಕ್ಕೂ ಭೇಟಿ ಕೊಡಲಿಲ್ಲ ಎಂದ ನಳಿನ್ ಕುಮಾರ್ ಕಟೀಲ್, ಈ ಪ್ರಕರಣದಲ್ಲಿ ಇದ್ದ ಸಂಪತ್ ರಾಜ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿಲ್ಲ. ಇವತ್ತು ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಶಾಸಕ ಸ್ಥಾನವನ್ನೂ ಕೊಡದೇ ವಂಚನೆ ಮಾಡಿದ್ದಾರೆ. ಕುಕ್ಕರ್ ಬಾಂಬ್ ಪ್ರಕರಣದ ಹಿಂದೆ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಇದ್ದ. ಅವನನ್ನ ಕಾಂಗ್ರೆಸ್ ನೇರವಾಗಿ ಉಚ್ಛಾಟನೆ ಮಾಡಿಲ್ಲ. ಹೀಗಾಗಿ ಭಯೋತ್ಪಾದನೆ ಚಟುವಟಿಕೆಗೆ ಕಾಂಗ್ರೆಸ್ ಉತ್ತೇಜನ ಕೊಡುತ್ತೆ ಎಂದು ಹೇಳಿದರು.


ಇದನ್ನೂ ಓದಿ: Priyanka Gandhi: ಸಂಕಷ್ಟದ ಕಾಲದಲ್ಲಿ ಚಿಕ್ಕಮಗಳೂರು ಜನರು ನನ್ನ ಅಜ್ಜಿಯ ಕೈ ಹಿಡಿದಿದ್ರು: ಪ್ರಿಯಾಂಕ ಗಾಂಧಿ




140 ಸೀಟ್ ಪಡೆಯುವ ಮೂಲಕ ಬಿಜೆಪಿ‌ ಅಧಿಕಾರಕ್ಕೆ

top videos


    ಇನ್ನು ಬಿಜೆಪಿ ಸರ್ಕಾರ ಬಂದ ನಂತರ ಮೂರು ಭರವಸೆ ಮೂಡಿದೆ ಎಂದ ನಳಿನ್ ಕುಮಾರ್ ಕಟೀಲ್, ಭ್ರಷ್ಟಾಚಾರ ರಹಿತ ಆಡಳಿತ, ಅಭಿವೃದ್ಧಿ ಮತ್ತು ಭಯೋತ್ಪಾದನೆ ನಿಯಂತ್ರಣ ಬಿಜೆಪಿಯಿಂದ ಸಾಧ್ಯ ಅನ್ನೋದು ಸ್ಪಷ್ಟವಾಗಿದೆ. ಆದರೆ ಸೋಲಿನ ಭಯದಿಂದ ಕಾರ್ಯಕರ್ತರ ಹಲ್ಲೆ ಮಾಡಿಸುವ ಕೆಲಸ ಆಗಿದೆ. ರಾಜ್ಯದಲ್ಲಿ 140 ಸೀಟ್ ಪಡೆಯುವ ಮೂಲಕ ಬಿಜೆಪಿ‌ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದರು.

    First published: