• Home
  • »
  • News
  • »
  • state
  • »
  • Nalin Kumar Kateel: ಸತೀಶ್ ಜಾರಕಿಹೊಳಿ ಮತ್ತು ನಮ್ಮ ಗುರಿ ಒಂದೇ; ನಳಿನ್ ಕುಮಾರ್ ಕಟೀಲ್ ಎಡವಟ್ಟು

Nalin Kumar Kateel: ಸತೀಶ್ ಜಾರಕಿಹೊಳಿ ಮತ್ತು ನಮ್ಮ ಗುರಿ ಒಂದೇ; ನಳಿನ್ ಕುಮಾರ್ ಕಟೀಲ್ ಎಡವಟ್ಟು

ನಳಿನ್ ಕುಮಾರ್ ಕಟೀಲ್

ನಳಿನ್ ಕುಮಾರ್ ಕಟೀಲ್

ಮುಂದಿನ ಚುನಾವಣೆಯಲ್ಲಿ  150 ಸ್ಥಾನ ಗೆಲ್ಲುವ ಗುರಿ ಇದೆ. ಬೆಳಗಾವಿ ಜಿಲ್ಲೆಯಲ್ಲಿ 18 ಸ್ಥಾನ ಗೆಲ್ಲುವ ಗುರಿ ನಮ್ಮದು. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನ ರಾಜಕೀಯ ಸನ್ಯಾಸತ್ವ ಕೊಡಿಸುವ ಸವಾಲನ್ನ  ರಮೇಶ್ ಜಾರಕಿಹೊಳಿ ಅವರು ತೆಗೆದುಕೊಂಡಿದ್ದಾರೆ ಎಂದಿದ್ದಾರೆ.

  • Share this:

ಕಾಂಗ್ರೆಸ್ ನಾಯಕರ (Congress Leaders) ಆರ್​ಎಸ್ಎಸ್ (RSS) ಬ್ಯಾನ್ ಮಾಡಬೇಕು ಎಂಬ ಹೇಳಿಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (BJP State President Nalin Kumar Kateel) ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ದೇಶದಲ್ಲಿ ಮೊದಲಿಗೆ ಕಾಂಗ್ರೆಸ್ ಪಕ್ಷವನ್ನು (Congress Party)‌ ನಿಷೇಧ ಮಾಡಬೇಕಿದೆ. ಈ ದೇಶದಲ್ಲಿ ಇವತ್ತು ಪಿಎಫ್ಐ (PFI), ಎಸ್​​ಡಿಪಿಐ (SDPI) ಅಂತಹ ಸಂಘಟನೆಗಳಿಗೆ ಆಂತರಿಕ, ಭಯೋತ್ಪಾದನೆ ಅಂತಹ ಚಟುವಟಿಕೆ ನಡೆಸಲು ಶಕ್ತಿ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಆಡಳಿತ ಮಾಡಿದ್ರೆ ದೇಶವನ್ನು ಹಾಳು ಮಾಡುತ್ತೆ ಅಂತ ಮಹಾತ್ಮ ಗಾಂಧಿಯವರಿಗೆ (Mahatma Gandhiji) ಮೊದಲೇ ಗೊತ್ತಿತ್ತು. ಸ್ವಾತಂತ್ರ್ಯ ನಂತರ ಕಾಂಗ್ರೆಸ್​​ ವಿಸರ್ಜನೆ ಮಾಡಲಿ ಅಂತಾ ಹೇಳಿದರೂ ಮಾಡಲಿಲ್ಲ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಒಮ್ಮೆ ಅಧ್ಯಯನ ಮಾಡಲಿ. ಅವರ ಕಾಲಘಟ್ಟದಲ್ಲಿ ಎಷ್ಟು ಜನರ ಪಿಎಫ್ಐ ಕಾರ್ಯಕರ್ತರನ್ನ ರಕ್ಷಣೆ ಮಾಡಲಾಗಿತ್ತು. ಗೋ ಹಂತಕರನ್ನ ರಕ್ಷಣೆ ಮಾಡಿರುವ ಬಗ್ಗೆ ಅಧ್ಯಯನ ಮಾಡಲಿ‌ ಎಂದು ಸಿದ್ದರಾಮಯ್ಯರ ಹೇಳಿಕೆಗೆ ತಿರುಗೇಟು ನೀಡಿದರು.


ಕೆಪಿಸಿಸಿ ಅಧ್ಯಕ್ಷಡಿಕೆ ಶಿವಕುಮಾರ್ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಟೀಲ್, ಸಿಬಿಐ ಮತ್ತು ಐಟಿ ಎಲ್ಲರ ತನಿಖೆಯನ್ನ ಮಾಡುತ್ತದೆ. ಇವರು ಸರಿಯಾಗಿ ಇದ್ದರೆ ಭಯಪಡುವ ಅವಶ್ಯಕತೆ ಇಲ್ಲ. ಇವರು ಕದ್ದಿದ್ದರೆ ಭಯಪಡಬೇಕು. ಕದ್ದಿಲ್ಲ ಅಂದ್ರೆ ಭಯಪಡುವ ಅವಶ್ಯಕತೆ ಇಲ್ಲ ಧೈರ್ಯವಾಗಿ ಹೋಗಿ ಉತ್ತರ ನೀಡಿ.ಇವರ ಕಾಲಘಟ್ಟದಲ್ಲಿ ಎಲ್ಲರ ಮೇಲೆ ತನಿಖೆ ಆಗಿದೆ. ಹಾಗಂತ ಎಲ್ಲರೂ ಹೆದರಿದ್ರಾ? ನರೇಂದ್ರ ಮೋದಿ ಅವರನ್ನ 9 ಗಂಟೆಗಳ ಕಾಲ ತನಿಖೆ ಮಾಡಿದ್ದರು. ಅಮಿಶ್ ಶಾ ಅವರನ್ನ ಜೈಲಿಗೆ ಹಾಕಿದ್ರು ಎಂದು ಹೇಳಿದರು.


ಇವರು ಕಾನೂನಿಗೆ ಗೌರವ ಕೊಡ್ತಾರಾ?


ಕಾನೂನು ಪ್ರಕಾರ ಇವರು ಮೆರವಣಿಗೆ ತಗೆಯುತ್ತಾರೆ. ಜೈಲಿಗೆ ಹೋಗುವಾಗ, ಬರುವಾಗ ಮೆರವಣಿಗೆ ಮಾಡೋದು ಹೊಸ ಪ್ರಯೋಗ. ಇವರು ಕಾನೂನಿಗೆ ಗೌರವ ಕೊಡ್ತಾರಾ ಎಂದು ನಳಿನ್ ಕುಮಾರ್ ಕಟೀಲ್ ಪ್ರಶ್ನೆ ಮಾಡಿದರು.


ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಬರಲ್ಲ. ನಮ್ಮ ಸರ್ಕಾರದ ಪೂರ್ಣ ಅವಧಿ ಪೂರೈಸುತ್ತದೆ. ನಮಗೆ ಯಾವುದೇ ಚುನಾವಣೆ ಧಾವಂತ ಇಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​​ಗೆ ಚುನಾವಣೆಯ ಧಾವಂತ ಇರೋದು ಎಂದರು. ಇದೇ ವೇಳೆ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ಎದುರಿಸೋದು ಎಂಬ ಸುಳಿವು ನೀಡಿದರು.


ಇದನ್ನೂ ಓದಿ:  Chamarajanagara: ಚಾಮರಾಜನಗರ ಜಿಲ್ಲೆಯಾದ್ಯಂತ ಮೂರು ದಿನ ಮದ್ಯ ಮಾರಾಟ ನಿಷೇಧ


ಮಾತಿನ ಭರಾಟೆಯಲ್ಲಿ ಎಡವಟ್ಟು


ಮಾತಾಡುವ ಭರಾಟೆಯಲ್ಲಿ ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗೆ ಹೋಗುತ್ತೇವೆ. ನಮ್ಮ ಗುರಿ, ಸತೀಶ್ ಜಾರಕಿಹೊಳಿ‌ ಎಂದು ಹೇಳಿದರು. ಕೂಡಲೇ ಎಡವಟ್ಟು ಸರಿ ಮಾಡಿಕೊಂಡ ನಳಿನ್ ಕುಮಾರ್ ಕಟೀಲ್, ಸತೀಶ್ ಜಾರಕಿಹೊಳಿ ಬೈದು ಬೈದು ಅವರ ಹೆಸರು ಬಂತು. ನಮ್ಮದು ಮತ್ತು ಬಾಲಚಂದ್ರ ಜಾರಕಿಹೊಳಿ , ರಮೇಶ್ ಜಾರಕಿಹೊಳಿ ಗುರಿ ಒಂದೇ ಇದೆ ಎಂದರು.


ಮುಂದಿನ ಚುನಾವಣೆಯಲ್ಲಿ  150 ಸ್ಥಾನ ಗೆಲ್ಲುವ ಗುರಿ ಇದೆ. ಬೆಳಗಾವಿ ಜಿಲ್ಲೆಯಲ್ಲಿ 18 ಸ್ಥಾನ ಗೆಲ್ಲುವ ಗುರಿ ನಮ್ಮದು. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನ ರಾಜಕೀಯ ಸನ್ಯಾಸತ್ವ ಕೊಡಿಸುವ ಸವಾಲನ್ನ  ರಮೇಶ್ ಜಾರಕಿಹೊಳಿ ಅವರು ತೆಗೆದುಕೊಂಡಿದ್ದಾರೆ ಎಂದಿದ್ದಾರೆ.


ಇದನ್ನೂ ಓದಿ:  Moral Policing: ಹಿಂದೂ ಹುಡುಗ‌ನ‌ ಜೊತೆ ಮುಸ್ಲಿಂ ಹುಡುಗಿ ಹೋಗ್ತಿದ್ದಕ್ಕೆ ಕಿರಿಕ್!


ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರೆ


ರಮೇಶ್ ಜಾರಕಿಹೊಳಿ ಖಂಡಿತವಾಗಿ ಮಂತ್ರಿ ಆಗ್ತಾರೆ. ಯಾವಾಗ ಆಗ್ತಾರೆ ಅನ್ನೋದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಹಾಲಿ ಬಿಜೆಪಿ ಶಾಸಕರ‌‌ ಮತಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಕಟೀಲ್, ಹಾಲಿ ಶಾಸಕರನ್ನ ಬದಲಾಯಿಸುವ ಪ್ರಶ್ನೆ ಇಲ್ಲ. ಆಕಾಂಕ್ಷಿಗಳು ಹೆಚ್ಚಾಗಿದ್ದರೆ ಅದು ಪಕ್ಷದ ಶಕ್ತಿ. ಹಾಲಿ ಶಾಸಕರನ್ನ ಬದಲಾಯಿಸುವ ಬಗ್ಗೆ ಯಾವುದೇ ಯೋಚನೆ, ಚರ್ಚೆ ನಮ್ಮ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದರು.

Published by:Mahmadrafik K
First published: