ಇಂದು ನಳಿನ್ ಕುಮಾರ್ ಕಟೀಲ್​- ಬಿಎಲ್​ ಸಂತೋಷ್​ ಸಭೆ; ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ಸಾಧ್ಯತೆ

ಪದಾಧಿಕಾರಿಗಳ  ಸಭೆಗೂ ಮುನ್ನ ಸಂತೋಷ್ ಮತ್ತು ಕಟೀಲ್ ಪ್ರತ್ಯೇಕ ಸಭೆ ಮಾಡಿ ರಾಜ್ಯ ಬಿಜೆಪಿ ಸ್ಥಿತಿಗತಿಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಈ ಸಭೆಯಲ್ಲಿ ಸಾಕಷ್ಟು ಮಹತ್ವದ ವಿಚಾರಗಳು ಚರ್ಚೆ ಆಗಲಿವೆ ಎನ್ನಲಾಗಿದೆ.

ಬಿಎಲ್​ ಸಂತೋಷ್​

ಬಿಎಲ್​ ಸಂತೋಷ್​

  • Share this:
ಬೆಂಗಳೂರು (ಆಗಸ್ಟ್​ 23): ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ರಾಜ್ಯಕ್ಕೆ  ಆಗಮಿಸಿದ್ದಾರೆ. ಅವರು ಬಂದ ದಿನಗಳಿಂದ ರಾಜ್ಯ ಬಿಜೆಪಿ ಪಾಳಯದಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆ ಗರಿಗೆದರಿವೆ. ಇಂದು ಸಂಜೆ ಸಂತೋಷ್​ ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ. ರಾಜ್ಯ ರಾಜಕೀಯ ದೃಷ್ಟಿಯಿಂದ ಈ ಸಭೆ ಬಹಳ ಮಹತ್ವದ್ದು ಎನ್ನಲಾಗುತ್ತಿದೆ.

‌ಇತ್ತೀಚಿನ ಬೆಂಗಳೂರಿನ ಕಾವಲಭೈರಸಂದ್ರ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಹಿನ್ನೆಲೆಯನ್ನು  ಬಿಜೆಪಿ ಪಕ್ಷ ಸಂಘಟನೆಗೆ ಹೇಗೆ ಅಸ್ತ್ರವಾಗಿ ಹೇಗೆ ಬಳಸಿಕೊಳ್ಳುಬೇಕು ಎಂಬುದರ ಬಗ್ಗೆ ಸಂತೋಷ್ ಚರ್ಚೆ ನಡೆಸಲಿದ್ದಾರೆ . ಇದೇ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಸಹ ಭಾಗಿಯಾಗುತ್ತಿದ್ದಾರೆ

ಈ ವೇಳೆ ರಾಜ್ಯ ಬಿಜೆಪಿಯ ನಾನಾ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಬಾಕಿ ವಿಚಾರ‌, ಪಕ್ಷದ ಕಾರ್ಯಕರ್ತರಿಗೆ ನಿಗಮಮಂಡಳಿಯಲ್ಲಿ ಸ್ಥಾನಮಾನ ಕೊಡುವ ವಿಚಾರದ ಬಗ್ಗೆಯೂ ಸಂತೋಷ್​ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಪದಾಧಿಕಾರಿಗಳ  ಸಭೆಗೂ ಮುನ್ನ ಸಂತೋಷ್ ಮತ್ತು ಕಟೀಲ್ ಪ್ರತ್ಯೇಕ ಸಭೆ ಮಾಡಿ ರಾಜ್ಯ ಬಿಜೆಪಿ ಸ್ಥಿತಿಗತಿಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಇಲ್ಲಿ ಮುಖ್ಯವಾಗಿ  ಮುಂದಿನ ದಿನಗಳಲ್ಲಿ ಬಿಎಸ್ವೈ  ನಾಯಕತ್ವ ಬದಲಾವಣೆ ವಿಚಾರ ಸಂಬಂಧಿಸಿದಂತೆ ಈ ಇಬ್ಬರೂ ಗಂಭೀರವಾದ ಚರ್ಚೆ ನಡೆಸಲಿದ್ದಾರೆ ಎಂಬುದು ಮೂಲಗಳ ಮಾಹಿತಿ.

ಈಗ ಚರ್ಚೆಯಾಗುತ್ತಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ  ಕುರಿತ ವಿಚಾರವೂ ಕಟೀಲ್ ಜೊತೆ ಚರ್ಚೆಗೆ ಬರಲಿದೆ. ಸಂಪುಟದಲ್ಲಿ ಹೊಸದಾಗಿ ಯಾರಿಗೆ ಅವಕಾಶ ಕೊಡಬೇಕು? ಈಗಿರುವರಲ್ಲಿ ಯಾರನ್ನು ತೆಗೆಯಬೇಕು? ಎನ್ನುವ ಬಗ್ಗೆ ಅಂತಿಮ ತೀರ್ಮಾನ ಆಗಲಿದೆ. ಈ ಮೂಲಕ ಈ ಬಾರಿಯ ಸಂಪುಟ ಪುನರ್ ರಚನೆಯಲ್ಲಿ ಸಂತೋಷ್ ತೀರ್ಮಾನವೇ ಪೈನಲ್​ ಆಗಬಹುದು ಎನ್ನಲಾಗಿದೆ.
Published by:Rajesh Duggumane
First published: