Har Ghar Tiranga: ನಟ ಸುದೀಪ್​ ಮನೆಗೆ ತೆರಳಿ ತ್ರಿವರ್ಣ ಧ್ವಜ ನೀಡಿದ ನಳೀನ್ ಕುಮಾರ್ ಕಟೀಲ್​​

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ದೇಶಾದ್ಯಂತ ಬಿಜೆಪಿಯಿಂದ ಹರ್ ಫರ್ ತಿರಂಗಾ ಅಭಿಯಾನ ನಡೆಯುತ್ತಿದೆ. ಜೆಪಿ ನಗರದಲ್ಲಿರೋ ನಟ ಸುದೀಪ್ ಮನೆಗೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಅವರು, ನಟ ಸುದೀಪ್​ಗೆ ತ್ರಿವರ್ಣ ಧ್ವಜ ನೀಡಿದ್ರು.

ನಟ ಸುದೀಪ್​ಗೆ ತ್ರಿವರ್ಣ ಧ್ವಜ ನೀಡಿ ನಳೀನ್ ಕುಮಾರ್ ಕಟೀಲ್​

ನಟ ಸುದೀಪ್​ಗೆ ತ್ರಿವರ್ಣ ಧ್ವಜ ನೀಡಿ ನಳೀನ್ ಕುಮಾರ್ ಕಟೀಲ್​

  • Share this:
ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ದೇಶಾದ್ಯಂತ ಬಿಜೆಪಿಯಿಂದ ಹರ್ ಫರ್ ತಿರಂಗಾ ಅಭಿಯಾನ ನಡೆಯುತ್ತಿದೆ.  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಹರ್ ಘರ್ ತಿರಂಗಾ (Har Ghar Tiranga) ಕಾರ್ಯಕ್ರಮಕ್ಕೆ ಕರೆ ನೀಡಿದ್ದು, ಇದಕ್ಕಾಗಿ ದೇಶಾದ್ಯಂತ ಸಿದ್ಧತೆ ನಡೆದಿದೆ. ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸೋ ಹೊಣೆ ಹೊತ್ತಿರೋ ಬಿಜೆಪಿ ನಾಯಕರು ಎಲ್ಲೆಡೆ ರಾಷ್ಟ್ರಧ್ವಜಗಳ ಹಂಚಿಕೆಯಲ್ಲಿ ನಿರತರಾಗಿದ್ದಾರೆ.  ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್ (Nalin kumar Kateel)​ , ನಟ ಸುದೀಪ್​ (Sudeep) ಅವರಿಗೆ ತ್ರಿವರ್ಣ ಧ್ವಜ  ನೀಡಿದ್ದಾರೆ.

ನಟ ಸುದೀಪ್​ಗೆ ತ್ರಿವರ್ಣ ಧ್ವಜ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ

ಜೆಪಿ ನಗರದಲ್ಲಿರೋ ನಟ ಸುದೀಪ್ ಮನೆಗೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಅವರು, ನಟ ಸುದೀಪ್​ಗೆ ತ್ರಿವರ್ಣ ಧ್ವಜ ನೀಡಿದ್ರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರೊಂದಿಗೆ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ಜಿ ವಿ , ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ, ರಾಜ್ಯಸಭಾ ಸಂಸದರಾದ ಜಗ್ಗೇಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಮಂಜುನಾಥ ಸಹ ಉಪಸ್ಥಿತರಿದ್ರು.ನಟ ಸುದೀಪ್​ಗೆ ತ್ರಿವರ್ಣ ಧ್ವಜ ನೀಡಿ ನಳೀನ್ ಕುಮಾರ್ ಕಟೀಲ್​


6 ಲಕ್ಷ ಧ್ವಜಗಳ ಮಾರಾಟಕ್ಕೆ ವ್ಯವಸ್ಥೆ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮನೆ ಮನೆಗಳ ಮೇಲೆ ಧ್ವಜಾರೋಹಣ ಹಾರಿಸಲು ಅನುವಾಗುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಲಕ್ಷ ಧ್ವಜಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿದೆ. ಇದೇ 13ರಂದು ಸಾರ್ವಜನಿಕರು ತಮ್ಮ ಮನೆ, ವ್ಯಾಪಾರದ ಸ್ಥಳಗಳ ಮೇಲೆ ಧ್ವಜಾರೋಹಣ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್‌ ಮನವಿ ಮಾಡಿದರು.

ರಾಷ್ಟ್ರಧ್ವಜಗಳ ಪ್ರದರ್ಶನ, ಮಾರಾಟಕ್ಕೆ ಚಾಲನೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಂಗಳೂರು ತಾಲ್ಲೂಕು ಪಂಚಾಯಿತಿ, ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಸ್ವಚ್ಚ ಭಾರತ್ ಮಿಷನ್ ವತಿಯಿಂದ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗಾ’ ಅಭಿಯಾನದಡಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ರಾಷ್ಟ್ರಧ್ವಜ ಮಾರಾಟ ಮಳಿಗೆಗೆ ಚಾಲನೆ ನೀಡಿದ್ರುತನ್ಮಯಿ ಸಂಜೀವಿನಿ, ಗ್ರಾಮ ಪಂಚಾಯಿತಿ ಒಕ್ಕೂಟ, ರಾಯಿ ಗ್ರಾಮ‌ ಪಂಚಾಯಿತಿ ಸದಸ್ಯರು ತಯಾರಿಸಿದ ರಾಷ್ಟ್ರಧ್ವಜಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವರು ಚಾಲನೆ ನೀಡಿದರು.

ತ್ರಿವರ್ಣ ಧ್ವಜಕ್ಕೆ ಬೇಡಿಕೆ

ರಾಜಧಾನಿ ಬೆಂಗಳೂರಿನಲ್ಲೂ ಕೂಡ ತ್ರಿವರ್ಣ ಧ್ವಜಕ್ಕೆ ಬೇಡಿಕೆ ಹೆಚ್ಚಾಗಿದ್ದು, ವ್ಯಾಪಾರಿಗಳ ಮೊಗದಲ್ಲಿ ಸಂತಸ ಮೂಡಿದೆ. ಪ್ರತಿ ಮನೆ ಮೇಲೂ ತ್ರಿವರ್ಣ ಧ್ವಜ ಹಾರಿಸಲು ಜನ ಮುಂದಾಗಿರುವುದು ಖುಷಿ ತಂದಿದೆ. ಇದರಿಂದ ರಾಷ್ಟ್ರ ಧ್ವಜಗಳಿಗೆ ಬೇಡಿಕೆ ಹೆಚ್ಚಾಗಿದೆ.

ಇದನ್ನೂ ಓದಿ: Independence Day 2022: 42 ವರ್ಷಗಳಲ್ಲಿ 3 ಮಿಲಿಯನ್ ರಾಷ್ಟ್ರಧ್ವಜ ತಯಾರಿ! ಇದರ ಹಿಂದಿದ್ದಾರೆ ಅಬ್ದುಲ್ ಚಾಚಾ

ರಾಷ್ಟ್ರ ಧ್ವಜಗಳ ಕೊರತೆ ಕಾಡುತ್ತಿದೆ

ಒಂದು ಕಡೆ ರಾಷ್ಟ್ರ ಧ್ವಜಕ್ಕೆ ಬೇಡಿಕೆ ಹೆಚ್ಚಾಗಿದ್ದರೆ ಮತ್ತೊಂದು ಕಡೆ ಬೇಡಿಕೆ ಇದ್ದಷ್ಟು ಧ್ವಜ ಪೂರೈಕೆಯಾಗದೇ ಹಲವು ಕಡೆ ಸಮಸ್ಯೆ ಸೃಷ್ಟಿಯಾಗಿದೆ. ಕೇರಳದ ತಿರುವನಂತಪುರಂನ ಅಂಗಡಿಗಳಲ್ಲಿ ರಾಷ್ಟ್ರಧ್ವಜಗಳ ಕೊರತೆ ಕಾಡುತ್ತಿದೆ. ಹರ್‌ ಘರ್‌ ತಿರಂಗಾ ಅಭಿಯಾನ ಘೋಷಿಸಿದ ಬಳಿಕ ಈ ವರ್ಷ ಆಗಸ್ಟ್‌ 15ಕ್ಕಿಂತ ಮುಂಚೆಯೇ ರಾಷ್ಟ್ರ ಧ್ವಜಗಳ ಕೊರತೆ ಕಾಡುತ್ತಿದೆ ಎಂದು ತಿರುವನಂತಪುರಂನ ವ್ಯಾಪಾರಿ ಹೇಳುತ್ತಾರೆ.

ಮನೆ ಮನೆಗಳ ಮೇಲೆ ಹಾರಲಿ ರಾಷ್ಟ್ರಧ್ವಜ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಇದೇ ಆ.13 ರಿಂದ 15ರ ವರೆಗೆ ಎಲ್ಲಾ ಮನೆಗಳು, ಅಪಾರ್ಟ್‍ಮೆಂಟ್‍ಗಳು, ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳ ಮೇಲೆ ಸಂಭ್ರಮ ಹಾಗೂ ಸಡಗರದಿಂದ ದೇಶದ ತ್ರಿವರ್ಣ ಧ್ವಜ ಹಾರಾಡಲಿದೆ. ‘ಹರ್ ಘರ್ ತಿರಂಗಾ’ ಅಭಿಯಾನದಡಿ ಮನೆ ಮನೆಗೂ ರಾಷ್ಟ್ರೀಯ ಧ್ವಜ ನೀಡುವ ಕಾರ್ಯಕ್ಕೆ ಈಗಾಗಲೇ ಹಲವೆಡೆ ಚಾಲನೆ ನೀಡಲಾಗಿದೆ.
Published by:Pavana HS
First published: