• Home
  • »
  • News
  • »
  • state
  • »
  • MLA Tippareddy: ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ; ಬೆತ್ತಲಾದ ಯುವತಿಯಿಂದ ವಿಡಿಯೋ ಕಾಲ್?

MLA Tippareddy: ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ; ಬೆತ್ತಲಾದ ಯುವತಿಯಿಂದ ವಿಡಿಯೋ ಕಾಲ್?

ಜಿಹೆಚ್​ ತಿಪ್ಪಾರೆಡ್ಡಿ, ಶಾಸಕ

ಜಿಹೆಚ್​ ತಿಪ್ಪಾರೆಡ್ಡಿ, ಶಾಸಕ

ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ (BJP MLA GH Tippareddy) ಅವರನ್ನು ಹನಿಟ್ರ್ಯಾಪ್ (Honeytrap) ಸುಳಿಯಲ್ಲಿ ಸಿಲುಕಿಸುವ ಯತ್ನ ನಡೆದಿರುವ ಮಾಹಿತಿ ಲಭ್ಯವಾಗಿದೆ.

  • Share this:

ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ (BJP MLA GH Tippareddy) ಅವರನ್ನು ಹನಿಟ್ರ್ಯಾಪ್ (Honeytrap) ಸುಳಿಯಲ್ಲಿ ಸಿಲುಕಿಸುವ ಯತ್ನ ನಡೆದಿರುವ ಮಾಹಿತಿ ಲಭ್ಯವಾಗಿದೆ. ವಿಡಿಯೋ ಕಾಲ್ (Video Call) ಮೂಲಕ ಶಾಸಕರನ್ನು ಸಿಲುಕಿಸುವ ಯತ್ನ ನಡೆದಿತ್ತು ಎಂದು ತಿಳಿದು ಬಂದಿದೆ. ಬೆತ್ತಲೆಯಾದ ಯುವತಿಯೋರ್ವಳು (Young Girl) ಶಾಸಕರಿಗೆ ವಿಡಿಯೋ ಕಾಲ್​ ಮಾಡಿದ್ದಾಳಂತೆ. ಈ ಸಂಬಂಧ ಶಾಸಕ ತಿಪ್ಪಾರೆಡ್ಡಿ, ಚಿತ್ರದುರ್ಗ ಸೈಬರ್ ಠಾಣೆಗೆ (Cyber Police Station ದೂರು ನೀಡಿದ್ದಾರೆ. ಅಪರಿಚಿತ ಯುವತಿ ಶಾಸಕರ ಮೊಬೈಲ್​ ಸಂಖ್ಯೆಗೆ ಮೂರು ಬಾರಿ ಕರೆ ಮಾಡಿದ್ದಾಳೆ. ಈ ಸಂಬಂಧ CEN ಪೊಲೀಸ್ ಠಾಣೆಯಲ್ಲಿ‌ FIR ದಾಖಲಾಗಿದೆ. ಐಟಿ ಆಕ್ಟ್ 66 (A) ಅಡಿಯಲ್ಲಿ‌ ಪ್ರಕರಣ ದಾಖಲಾಗಿದೆ.


ಅಕ್ಟೋಬರ್ 31ರ ಬೆಳಗ್ಗೆ ಸುಮಾರು ಎಂಟು ಗಂಟೆಗೆ ರಾಜಸ್ಥಾನ, ಒಡಿಶಾ ಭಾಗದಿಂದ ವಿಡಿಯೋ ಕಾಲ್ ಬಂದಿದೆ. ಮೊದಲಿಗೆ ಕಾಲ್ ಬಂದಾಗ ಶಾಸಕರು ರಿಸೀವ್ ಮಾಡಿದ್ದಾರೆ. ಕಾಲ್ ರಿಸೀವ್ ಆಗ್ತಿದ್ದಂತೆ ಯುವತಿ ತನ್ನ ಖಾಸಗಿ ಅಂಗಗಳನ್ನು ತೋರಿಸಲು ಪ್ರಾರಂಭಿಸಿದ್ದಾಳೆ. ತಕ್ಷಣ ಶಾಸಕರು ಫೋನ್ ಕಟ್​ ಮಾಡಿ ಪಕ್ಕಕ್ಕೆ ಇಟ್ಟಿದ್ದಾರೆ.


ಅಶ್ಲೀಲ ವಿಡಿಯೋ ಕಳುಹಿಸಿದ ಯುವತಿ


ಇದಾದ ಬಳಿಕ ಯುವತಿ ಮತ್ತೆ ಕಾಲ್ ಮಾಡಿದ್ದಾಳೆ. ಇದರಿಂದ ಶಾಸಕರು ಯುವತಿಯ ನಂಬರ್ ಬ್ಲಾಕ್ ಲಿಸ್ಟ್​​ಗೆ ಸೇರಿಸಿದ್ದಾರೆ. ಕಾಲ್​ ಕಟ್ ಮಾಡಿದ ಬಳಿಕ ವಾಟ್ಸಪ್​ ಸಂಖ್ಯೆಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದಾಳೆ ಎಂದು ಶಾಸಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Naked women in video call tried to Honey trap bjp mla tippareddy mrq
ಜಿಹೆಚ್​ ತಿಪ್ಪಾರೆಡ್ಡಿ, ಶಾಸಕ


ಪೇಪರ್ ಓದುತ್ತಿರುವಾಗ ವಿಡಿಯೋ ಕಾಲ್ ಬಂತು. ಕಾಲ್ ರಿಸೀವ್ ಮಾಡಿದ್ರೆ ಅವರ ಮಾತುಗಳು ಅರ್ಥ ಆಗಲಿಲ್ಲ. ಮೊದಲಿಗೆ ಕನ್ನಡದಲ್ಲಿ ಮಾತನಾಡಿದೆ. ನಂತರ ಹಿಂದಿಯಲ್ಲಿ ಮಾತನಾಡಿದ್ರೆ ಅವರ ಮಾತುಗಳ ಆರ್ಥ ಆಗ್ತಿರಲಿಲ್ಲ. ನಂತರ ವಿಡಿಯೋ ಕಾಲ್ ಕಟ್​ ಮಾಡಿದೆ.


ಶಾಸಕ ಜಿಹೆಚ್​ ತಿಪ್ಪಾರೆಡ್ಡಿ ಹೇಳಿದ್ದೇನು?


ನಂತರ ಎರಡನೇ ಬಾರಿ ಕಾಲ್ ಮಾಡಿದಾಗ ನಗ್ನ ಚಿತ್ರಗಳನ್ನು ತೋರಿಸಲು ಪ್ರಾರಂಭಿಸಿದರು. ನಂತರ ವಿಡಿಯೋ ಕಾಲ್ ಕಟ್ ಮಾಡಿದೆ. ಮತ್ತೆ ಅರ್ಧ ಗಂಟೆಯಲ್ಲಿಯೇ ಕಾಲ್ ಬಂದಾಗ ನಮ್ಮ ಶ್ರೀಮತಿ ಅವರಿಗೆ ತೋರಿಸಿದಾಗ ಕಾಲ್ ಕಟ್ ಮಾಡಿ, ನಂಬರ್ ಬ್ಲಾಕ್ ಮಾಡಿದರು ಎಂದು ಶಾಸಕರು ಹೇಳಿದರು.


ಇದನ್ನೂ ಓದಿ:  Praveen Nettaru: ನಾಲ್ವರು ಆರೋಪಿಗಳ ತಲೆಗೆ ಲಕ್ಷ ಲಕ್ಷ ಬಹುಮಾನ ಪ್ರಕಟಿಸಿದ ಎನ್​ಐಎ


ಪೊಲೀಸರ ಸಲಹೆ ಮೇರೆಗೆ ದೂರು ಸಲ್ಲಿಸಿದೆ


ಇದಾದ ಬಳಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತೆರಳಿದೆ. ಅಲ್ಲಿ ಪೊಲೀಸರ ಬಳಿ ವಿಡಿಯೋ ಕಾಲ್ ಬಂದಿರುವ ವಿಷಯ ತಿಳಿಸಿದಾಗ ಸೈಬರ್ ಠಾಣೆಗೆ ತೆರಳಿ ದೂರು ಸಲ್ಲಿಸುವಂತೆ ಸಲಹೆ ನೀಡಿದರು.  ಅವರ ಸಲಹೆಯ ಮೇರೆಗೆ ಸಂಜೆ 4 ಗಂಟೆಗೆ ಸೈಬರ್ ಠಾಣೆಗೆ ತೆರಳಿ ದೂರು ಸಲ್ಲಿಸಿದೆ.


Naked women in video call tried to Honey trap bjp mla tippareddy mrq
ಜಿಹೆಚ್​ ತಿಪ್ಪಾರೆಡ್ಡಿ, ಶಾಸಕ


ನಾವು ಮುದುಕರು, ಇದೆಲ್ಲ ನಮಗೆ ಗೊತ್ತಾಗಲ್ಲ


ನಾನು 1969ರಿಂದಲೂ ರಾಜಕೀಯದಲ್ಲಿ ಇದ್ದಿದ್ದೇನೆ.  ನಾವು ಮುದುಕರು, ನಮಗೆ ಈ ವಿಡಿಯೋ ಕಾಲ್ ಬಗ್ಗೆ ಗೊತ್ತಾಗಲ್ಲ.  ಅದೇನೋ ಸೈಬರ್ ಕ್ರೈಂ ಅಂತ ಹೇಳ್ತಿದ್ದರು. ದೂರು ನೀಡಲು ಹೋದಾಗ ಕಾಲ್ ಬಂದಿರೋ ಮಾಹಿತಿಯುಳ್ಳು ಸ್ಕ್ರೀನ್ ಶಾಟ್ ತೆಗೆದುಕೊಂಡರು. ಈ ಬಗ್ಗೆ ನಮಗೆ ಅಷ್ಟೆಲ್ಲಾ ಗೊತ್ತಾಗಲ್ಲ ಎಂದು ಹೇಳಿ ನಕ್ಕರು.


ಇದನ್ನೂ ಓದಿ:  Jr NTR: ಅಶ್ವಿನಿ, ಸುಧಾಮೂರ್ತಿ ಕುರ್ಚಿ ಒರೆಸಿದ ಜೂನಿಯರ್ ಎನ್​ಟಿಆರ್; ಸರಳತೆಗೆ ಫ್ಯಾನ್ಸ್​ ಫಿದಾ


ನಿನ್ನೆ ಮತ್ತೆ ಅದ್ಯಾವುದೋ ವಾಟ್ಸಪ್ ಕಾಲ್ ಬಂದಿತ್ತು. ನನ್ನ ಗನ್​ ಮ್ಯಾನ್​ ರಿಸೀವ್ ಮಾಡೋದು ಬೇಡ ಅಂತ ಹೇಳಿದ್ರು. ಸದ್ಯ ಬೆಂಗಳೂರಿನಲ್ಲಿಯೇ ಇದ್ದೇನೆ. 11 ಗಂಟೆಯ ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.

Published by:Mahmadrafik K
First published: