ಜೆಡಿಎಸ್ ತೊರೆದು ಬಿಜೆಪಿ ಸೇರಲಿದ್ದಾರಾ​ ಶಾಸಕ ದೇವಾನಂದ ಎಫ್​.ಚವ್ಹಾಣ?

ಉಪಚುನಾವಣೆ ಹೊಸ್ತಿಲಲ್ಲೇ ವಿಜಯಪುರ ಜಿಲ್ಲೆಯ ನಾಗಠಾಣ ಜೆಡಿಎಸ್​ ಶಾಸಕ ದೇವಾನಂದ ಎಫ್​.ಚವ್ಹಾಣ ಬಿಜೆಪಿ ಸೇರಲಿದ್ದಾರೆ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ಶಾಸಕರೇ ಸುಳಿವು ನೀಡಿದ್ದು, ಮತ್ತಷ್ಟು ಜೆಡಿಎಸ್​ ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

Latha CG | news18-kannada
Updated:November 26, 2019, 1:26 PM IST
ಜೆಡಿಎಸ್ ತೊರೆದು ಬಿಜೆಪಿ ಸೇರಲಿದ್ದಾರಾ​ ಶಾಸಕ ದೇವಾನಂದ ಎಫ್​.ಚವ್ಹಾಣ?
ಜೆಡಿಎಸ್​ ಶಾಸಕ ದೇವಾನಂದ ಎಫ್​.ಚವ್ಹಾಣ
  • Share this:
ವಿಜಯಪುರ(ನ.26): ಉಪಚುನಾವಣೆ ಹೊಸ್ತಿಲಲ್ಲೇ ವಿಜಯಪುರ ಜಿಲ್ಲೆಯ ನಾಗಠಾಣ ಜೆಡಿಎಸ್​ ಶಾಸಕ ದೇವಾನಂದ ಎಫ್​.ಚವ್ಹಾಣ ಬಿಜೆಪಿ ಸೇರಲಿದ್ದಾರೆ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ಶಾಸಕರೇ ಸುಳಿವು ನೀಡಿದ್ದು, ಮತ್ತಷ್ಟು ಜೆಡಿಎಸ್​ ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ಕ್ಷೇತ್ರದ ಅಭಿವೃದ್ಧಿ ಹಾಗೂ ಮತದಾರರ ಒತ್ತಡವಿದ್ದರೆ ಬಿಜೆಪಿ ಸೇರುವ ವಿಚಾರ ಮಾಡೋಣ ಎಂದು ಶಾಸಕ ದೇವಾನಂದ ಮಾಧ್ಯಮಗಳಿಗೆ ತಿಳಿಸಿದ್ಧಾರೆ. ಇದರೊಂದಿಗೆ ಪರೋಕ್ಷವಾಗಿ ಬಿಜೆಪಿಯತ್ತ ತನ್ನ ಚಿತ್ತ ಎಂಬ ಸುಳಿವು ನೀಡಿದ್ದಾರೆ.

ಸದ್ಯಕ್ಕೆ ನಾನು ಜೆಡಿಎಸ್​ ಬಿಡುವ ಯಾವುದೇ ನಿರ್ಧಾರ ಮಾಡಿಲ್ಲ. ಪ್ರಸ್ತುತ ನಾನು ಜೆಡಿಎಸ್ ನಾಯಕರ ಸೂಚನೆಗೆ ಬದ್ಧವಾಗಿದ್ದೇನೆ. ಸಿಎಂ ಯಡಿಯೂರಪ್ಪ ಅವರು ಎಲ್ಲ ಪಕ್ಷದ ಶಾಸಕರಿಗೂ, ಜನರಿಗೂ ಸಿಎಂ ಆಗಿರುತ್ತಾರೆ. ಈ ಹಿಂದೆ ನಾನು ಮೈಸೂರಲ್ಲಿ ಸಿಎಂ ಜತೆ ಕ್ಷೇತ್ರದ ಅಭಿವೃದ್ಧಿ ಹಾಗೂ ಅನುದಾನದ ಕುರಿತು ಚರ್ಚಿಸಿದ್ದೆ ಎಂದು ದೇವಾನಂದ್​ ಹೇಳಿದರು.

ಕಂಪನಿಗಳಿಗೆ ಲಾಭ; ನೌಕರರಿಗೆ ಆತಂಕ; ಕೇಂದ್ರದ ಹೊಸ ಕಾರ್ಮಿಕ ಕಾನೂನಿನ ಮುಖ್ಯಾಂಶಗಳು

ಮುಂದುವರೆದ ಅವರು, ನಿನ್ನೆ ಬಿಜೆಪಿ ಶಾಸಕ ಯತ್ನಾಳ ಅವರ ಜೊತೆ  ಆಶ್ರಯ ಯೋಜನೆ ಮನೆಗಳ‌ ಕೂತು ಚರ್ಚೆ ನಡೆಸಿದೆ. ಆ ಸಭೆಯಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಭೆ ಚರ್ಚೆ ಮಾಡಲಾಗಿದೆ. ಯತ್ನಾಳ ಅವರು ಈ‌ ಹಿಂದೆ ಜೆಡಿಎಸ್ ನಲ್ಲಿದ್ದರು. ಯತ್ನಾಳ ಜೊತೆ ಸ್ನೇಹವಿದೆ. ನಾನು ಕ್ಷೇತ್ರದ ಮತದಾರರನ್ನು ಬಿಟ್ಟು ಏನನ್ನೂ ಮಾಡುವುದಿಲ್ಲ. ನನಗೆ ಹಿತೈಷಿಗಳು, ಗುರುಗಳು ಇದ್ದಾರೆ. ಅವರೆಲ್ಲರ ಅಭಿಪ್ರಾಯ ಪಡೆದು ಮುಂದಿನ ನಡೆ ನಡೆಯುತ್ತೇನೆ. ಅಂತಹ ಸಂದರ್ಭ ಬಂದಾಗ ನೊಡೋಣ. ಸದ್ಯಕ್ಕೆ ಅಂತಹ ಸಂದರ್ಭ ಇಲ್ಲ. ಜನಸಾಮಾನ್ಯರ ಅಭಿಪ್ರಾಯದ ಮೇಲೆ ನಾನು ನಿರ್ಧರಿಸುತ್ತೇನೆ ಎಂದರು.

ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ. ಯಾರೂ ಮಿತ್ರರಲ್ಲ. ನೂರಾರು ಕೋಟಿ ಹಣ ನನ್ನ ಕ್ಷೇತ್ರದ ಅಭಿವೃದ್ಧಿಗೆ ಕೊಟ್ಟರೆ ಮುಂದೆ ನೊಡೋಣ. ಹಾಗೇನಾದರೂ ಹೋಗುವುದಿದ್ದರೆ ನಾನು ಕದ್ದುಮುಚ್ಚಿ ಹೊಗುವುದಿಲ್ಲ. ಮಾಧ್ಯಮದವರಿಗೆ, ಕ್ಷೇತ್ರದ ಜನತೆಗೆ ತಿಳಿಸಿ, ಡಂಗುರ ಸಾರಿಯೇ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.

ಹುಳಿಮಾವು ಕೆರೆ ಪ್ರದೇಶಕ್ಕೆ ಸಿಎಂ ಬಿಎಸ್​ವೈ ಭೇಟಿ; ಇಂದು ಸಂಜೆಯೊಳಗೆ ಸಂತ್ರಸ್ತರ ಖಾತೆಗೆ 50 ಸಾವಿರ ಜಮಾ
First published: November 26, 2019, 1:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading