Puttur: ತಾರಕಕ್ಕೇರಿದ ನಾಗನ ಕಟ್ಟೆ ವಿವಾದ; ಪುತ್ತೂರಿನ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಬಿಗ್ ಫೈಟ್

ಅಷ್ಟಮಂಗಲ ಪ್ರಶ್ನೆಯಲ್ಲಿ ಹೇಳಿದಂತೆಹ ಯಾವುದೇ ನಿಯಮಗಳನ್ನು ಪಾಲಿಸದೇ, ವ್ಯವಸ್ಥಾಪನಾ ಸಮಿತಿ ತಮ್ಮ ಇಷ್ಟದಂತೆ ನಾಗನ ಕಟ್ಟೆಯನ್ನು ನಿರ್ಮಿಸುತ್ತಿದೆ ಎನ್ನುವ ಆರೋಪವನ್ನು ಗ್ರಾಮದ ಕೆಲವರು ಇದೀಗ ಮಾಡಲಾರಂಭಿಸಿದ್ದಾರೆ.

ನಾಗನ ಕಟ್ಟೆ

ನಾಗನ ಕಟ್ಟೆ

  • Share this:
ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯೊಂದು ನಿರ್ಮಿಸಿದ ನಾಗನ ಕಟ್ಟೆಯ (Nagana Katte) ವಿಚಾರದಲ್ಲಿ ಇದೀಗ ಭಾರೀ ಗೊಂದಲ ನಿರ್ಮಾಣಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು (Puttur, Dakshina Kannada) ತಾಲೂಕಿನ ನರಿಮೊಗರು ಮೃತ್ಯುಂಜೇಶ್ವರ ದೇವಸ್ಥಾನಕ್ಕೆ (Mrutyunjaya Temple, Narimogaru) ಸಂಬಂಧಪಟ್ಟ ನಾಗನ ಕಟ್ಟೆಯನ್ನು ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ ನಿರ್ಮಿಸಲಾಗಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈ ಗೊಂದಲ ಆರಂಭಗೊಂಡಿದೆ. ನಿರ್ಮಾಣ ಹಂತದಲ್ಲಿರುವ ನಾಗನ ಕಟ್ಟೆಯನ್ನು ಮರು ನಿರ್ಮಿಸುವಂತೆ ಕೆಲವು ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಇದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಗ್ರಾಮಸ್ಥರ ನಡುವಿನ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿದೆ.

ಧಾರ್ಮಿಕ ಧತ್ತಿ ಇಲಾಖೆಯ A ಗ್ರೇಡ್ ದೇವಸ್ಥಾನಗಳಲ್ಲಿ ಒಂದಾಗಿರುವ ದಕ್ಷಿಣಕನ್ನಡ ಜಿಲ್ಲೆಯ ಮೃತ್ಯುಂಜೇಶ್ವರ ದೇವಸ್ಥಾನ ಇದೀಗ ಭಾರೀ ಚರ್ಚೆಯ ಕೇಂದ್ರಬಿಂದುವಾಗಿದೆ. ಅತ್ಯಂತ ಪುರಾತನ ಹಾಗೂ ಐತಿಹ್ಯವುಳ್ಳ ಈ ದೇವಸ್ಥಾನದಲ್ಲಿ ನಾಗನ ಕಟ್ಟೆ ಹಾಗೂ ಪುಷ್ಕರಣಿ ನಿರ್ಮಾಣದ ಕುರಿತಂತೆ ಇತ್ತೀಚೆಗಷ್ಟೇ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಷ್ಟಮಂಗಲ ಪ್ರಶ್ನೆಯನ್ನು ಕೈಗೊಂಡಿತ್ತು.

ಈ ಅಷ್ಟಮಂಗಲ ಪ್ರಶ್ನೆಯಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ತಂತ್ರಿಗಳು, ಜ್ಯೋತಿಷಿಗಳು, ವಾಸ್ತುತಜ್ಞರು ಸೇರಿದಂತೆ ಗ್ರಾಮಸ್ಥರೂ ಪಾಲ್ಗೊಂಡಿದ್ದರು. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ನಾಗನ ಕಟ್ಟೆ ನಿರ್ಮಾಣಕ್ಕೆ ಕೆಲವೊಂದು ಮಾರ್ಗದರ್ಶನಗಳನ್ನು ಜ್ಯೋತಿಷ್ಯರು ನೀಡಿದ್ದು, ನಾಗನ ಕಟ್ಟೆ ನಿರ್ಮಾಣದ ಕಾರ್ಯವೂ ದೇವಸ್ಥಾನದಲ್ಲಿ ಆರಂಭಗೊಂಡಿತ್ತು.

Nagana Katte construction row in Mrutyunjayeshwara temple at puttur akp mrq
ಗ್ರಾಮಸ್ಥರ ಸಭೆ


ಯಾವುದೇ ನಿಯಮ ಪಾಲನೆ ಆಗಿಲ್ಲ

ಆದರೆ ಅಷ್ಟಮಂಗಲ ಪ್ರಶ್ನೆಯಲ್ಲಿ ಹೇಳಿದಂತೆಹ ಯಾವುದೇ ನಿಯಮಗಳನ್ನು ಪಾಲಿಸದೇ, ವ್ಯವಸ್ಥಾಪನಾ ಸಮಿತಿ ತಮ್ಮ ಇಷ್ಟದಂತೆ ನಾಗನ ಕಟ್ಟೆಯನ್ನು ನಿರ್ಮಿಸುತ್ತಿದೆ ಎನ್ನುವ ಆರೋಪವನ್ನು ಗ್ರಾಮದ ಕೆಲವರು ಇದೀಗ ಮಾಡಲಾರಂಭಿಸಿದ್ದಾರೆ.

ನಾಗನ ಕಟ್ಟೆಯ ಕೆಲಸ ಕಾರ್ಯ ಆರಂಭಗೊಳ್ಳುವ ವಿಚಾರವನ್ನು ಗ್ರಾಮಸ್ಥರಿಂದ ಮುಚ್ಚಿಡುವ ಕಾರ್ಯ ನಡೆದಿದೆ ಎಂದು ಆರೋಪಿಸಲಾಗಿದ್ದು, ನಾಗನ ಕಟ್ಟೆ ನಿರ್ಮಿಸುವ ಜಾಗದಲ್ಲಿದ್ದ ಮರವನ್ನು ಕಡಿಯಬಾರದು ಎನ್ನುವ ಜ್ಯೋತಿಷ್ಯರ ಮಾತನ್ನೂ ವ್ಯವಸ್ಥಾಪನಾ ಸಮಿತಿ ನಿರ್ಲಕ್ಷ್ಯಿಸಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ಇದನ್ನೂ ಓದಿ:  Yellamma Devi: ಮಾಟ ಮಾಡಿದವರಿಗೆ ಶಿಕ್ಷೆ ಕೊಟ್ರೆ 50,001 ರೂಪಾಯಿ ಹುಂಡಿಗೆ ಹಾಕ್ತೀನಿ! ಯಲ್ಲಮ್ಮ ದೇವಿಗೆ ಭಕ್ತನ ಪತ್ರ

ನಿಯಮ ಪಾಲಿಸಿ ನಾಗನಕಟ್ಟೆ ನಿರ್ಮಾಣವಾಗಲಿ

ದೇವಸ್ಥಾನದ ದೇವತಾ ಕಾರ್ಯದಲ್ಲಿ ಗ್ರಾಮಸ್ಥರನ್ನು ಜೋಡಿಸಿಕೊಳ್ಳದೇ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ತಮ್ಮ ಸ್ವಂತದ ಆಸ್ತಿಯಂತೆ ದೇವಸ್ಥಾನದಲ್ಲಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಸೂಚಿಸಿದಂತೆ ನಿಯಮಗಳನ್ನು ಪಾಲಿಸಿ ಮತ್ತೆ ನಾಗನ ಕಟ್ಟೆಯನ್ನು ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಲಾರಂಭಿಸಿದ್ದಾರೆ.

ವ್ಯವಸ್ಥಾಪನಾ ಸಮಿತಿ ಹೇಳೋದೇನು?

ಗ್ರಾಮಸ್ಥರ ಆರೋಪವನ್ನು ಅಲ್ಲಗಳೆದಿರುವ ವ್ಯವಸ್ಥಾಪನಾ ಸಮಿತಿ , ಅಷ್ಟಮಂಗಳ ಪ್ರಶ್ನೆಯಲ್ಲಿ ಜ್ಯೋತಿಷ್ಯರು ಸೂಚಿಸಿದ ಎಲ್ಲಾ ನಿಯಮಗಳನ್ನು ಪಾಲಿಸಿಯೇ ನಾಗನ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ನಾಗನ ಕಟ್ಟೆ ಕಟ್ಟುವ ಸಂದರ್ಭದಲ್ಲಿ ದೇವಸ್ಥಾನದ ತಂತ್ರಿಗಳನ್ನು, ವಾಸ್ತುಶಿಲ್ಪಿಗಳನ್ನು ಸೇರಿಸಿಕೊಂಡೇ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಆದರೆ ಗ್ರಾಮದ ಕೆಲವು ಮಂದಿ ವೈಯುಕ್ತಿಕ ದ್ವೇಷದ ಹಿನ್ನಲೆಯಲ್ಲಿ ದೇವರ ಕಾರ್ಯಕ್ಕೆ ಅಡ್ಡಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎನ್ನುವುದು ವ್ಯವಸ್ಥಾಪನಾ ಸಮಿತಿಯ ವಾದವಾಗಿದೆ.

Nagana Katte construction row in Mrutyunjayeshwara temple at puttur akp mrq
ದೇವಸ್ಥಾನ


ದೇವಸ್ಥಾನವು ಧಾರ್ಮಿಕ ಧತ್ತಿ ಇಲಾಖೆಯ ಅಡಿಯಲ್ಲಿ ಬಂದ ಬಳಿಕ ಈವರೆಗೆ ದೇವಸ್ಥಾನದ ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಈ ಕಾರಣ ಈಗಿನ ವ್ಯವಸ್ಥಾಪನಾ ಸಮಿತಿ ಇದೀಗ ಲೆಕ್ಕಪತ್ರಗಳ ಪರಿಶೋಧನಾ ಕಾರ್ಯಕ್ಕೆ ಕೈ ಹಾಕಿರುವುದು ಕೆಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಅಸಮಾಧಾನವನ್ನು ಗ್ರಾಮಸ್ಥರನ್ನು ವ್ಯವಸ್ಥಾಪನಾ ಸಮಿತಿ ವಿರುದ್ಧ ಎತ್ತಿಕಟ್ಟಿ ನಾಗನ ಕಟ್ಟೆಯ ವಿಚಾರದಲ್ಲಿ ಗೊಂದಲ ಮೂಡಿಸಲಾಗುತ್ತಿದೆ ಎನ್ನುವುದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆರೋಪವಾಗಿದೆ.

ಇದನ್ನೂ ಓದಿ:  Karnataka Politics: ಈ ನಡೆಯೇ ಮುಂದೆ ಅವರಿಗೆ ಬೂಮ್ ರಂಗ ಆಗುತ್ತೆ, ಬಿಜೆಪಿ ಸಂಸದರೇ ಫೋನ್ ಮಾಡಿದ್ರು; HD Kumaraswamy

ಪ್ರಶ್ನೆ ಚಿಂತನೆಗೆ ವ್ಯವಸ್ಥೆ

ಈ ನಡುವೆ ನಾಗನ ಕಟ್ಟೆ ನಿರ್ಮಾಣದಲ್ಲಿ ಯಾವ ರೀತಿಯ ಲೋಪವಾಗಿದೆ ಎನ್ನುವ ವಿಚಾರವನ್ನು ಮನಗಾಣಲು ಮತ್ತೆ ದೇವಸ್ಥಾನದಲ್ಲಿ ಜ್ಯೋತಿಷ್ಯರನ್ನು ಕರೆದು ಪ್ರಶ್ನೆ ಚಿಂತನೆಗೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ ಈ ಪ್ರಶ್ನೆ ಚಿಂತನೆಯನ್ನು ಗ್ರಾಮಸ್ಥರು ವಿರೋಧಿಸಿದ್ದು, ನಾಗನ ಕಟ್ಟೆ ಗೊಂದಲ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ.
Published by:Mahmadrafik K
First published: