ಬಿಎಸ್​ವೈ ಬೆನ್ನಿಗೆ ನಿಂತ ಮತ್ತೊಬ್ಬ ಜೆಡಿಎಸ್​ ಶಾಸಕ; ಬಿಜೆಪಿ ಸರ್ಕಾರವನ್ನು ಬೀಳೋಕೆ ಬಿಡಲ್ಲ ಎಂದ ಸುರೇಶ್ ಗೌಡ

ಯಾವುದೇ ಕಾರಣಕ್ಕೂ ನಾವು ಬಿಎಸ್​ವೈ ನೇತೃತ್ವದ ಬಿಜೆಪಿ ಸರ್ಕಾರವನ್ನು ಬೀಳುವುದಕ್ಕೆ ಬಿಡುವುದಿಲ್ಲ. ಯಡಿಯೂರಪ್ಪ ಇನ್ನೂ ಮೂರು ವರ್ಷ ನಿಸ್ಸಂದೇಹವಾಗಿ ಸರ್ಕಾರ ನಡೆಸಬಹುದು. ಹೀಗಾಗಿ ಧೈರ್ಯವಾಗಿ ಯಾರಿಗೂ ಎದೆಗುಂದದೆ ಅವರು ಸಂಪುಟ ವಿಸ್ತರಣೆ ಮಾಡಲಿ ಎಂದು ನಾಗಮಂಗಲದ ಜೆಡಿಎಸ್​ ಶಾಸಕ ಸುರೇಶ್​ ಗೌಡ ಹೇಳಿಕೆ ನೀಡಿದ್ದಾರೆ.

ಜೆಡಿಎಸ್ ಶಾಸಕ ಸುರೇಶ್ ಗೌಡ.

ಜೆಡಿಎಸ್ ಶಾಸಕ ಸುರೇಶ್ ಗೌಡ.

  • Share this:
ಮಂಡ್ಯ (ಫೆಬ್ರವರಿ 01); ಒಂದೆಡೆ ಆಪರೇಷನ್ ಕಮಲದಿಂದಾಗಿ ಕುಗ್ಗಿರುವ ಜೆಡಿಎಸ್ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಪಕ್ಷದ ವರಿಷ್ಠರು ಜೆಡಿಯು ಉಚ್ಛಾಟಿತ ನಾಯಕ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಸುತ್ತಿದ್ದರೆ, ಮತ್ತೊಂದೆಡೆ ಸ್ವತಃ ಜೆಡಿಎಸ್ ಶಾಸಕರು ಬಹಿರಂಗವಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸುವ ಮೂಲಕ ಮುಂದಿನ ದಿನಗಳಲ್ಲಿ ಮತ್ತಷ್ಟು ಜನ ಶಾಸಕರು ಪಕ್ಷ ತೊರೆಯುವ ಸೂಚನೆ ನೀಡುತ್ತಿದ್ದಾರೆ.

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಎಂಬುದು ಕಳೆದ ಮೂರ್ನಾಲ್ಕು ತಿಂಗಳಿಂದ ಕಗ್ಗಂಟಾಗಿದೆ. ಸಚಿವ ಸ್ಥಾನಕ್ಕೆ ಮೂಲ ಬಿಜೆಪಿಗರು ಹಾಗೂ ವಲಸಿಗರ ನಡುವೆ ತೀವ್ರ ಹಗ್ಗಾಜಗ್ಗಾಟ ಶುರುವಾಗಿದೆ. ಸಚಿವ ಸ್ಥಾನ ಹಂಚಿಕೆಯಲ್ಲಿ ಸ್ವಲ್ಪ ಎಡವಟ್ಟಾದರೂ ಸರ್ಕಾರ ಬೀಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರು ಕಾದು ಕುಳಿತಿದ್ದಾರೆ.

ಆದರೆ, ಈ ಕುರಿತು ಇಂದು ಬಹಿರಂಗ ಹೇಳಿಕೆ ನೀಡಿರುವ ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ, “ಯಾವುದೇ ಕಾರಣಕ್ಕೂ ನಾವು ಬಿಎಸ್​ವೈ ನೇತೃತ್ವದ ಬಿಜೆಪಿ ಸರ್ಕಾರವನ್ನು ಬೀಳುವುದಕ್ಕೆ ಬಿಡುವುದಿಲ್ಲ. ಯಡಿಯೂರಪ್ಪ ಇನ್ನೂ ಮೂರು ವರ್ಷ ನಿಸ್ಸಂದೇಹವಾಗಿ ಸರ್ಕಾರ ನಡೆಸಬಹುದು. ಹೀಗಾಗಿ ಧೈರ್ಯವಾಗಿ ಯಾರಿಗೂ ಎದೆಗುಂದದೆ ಅವರು ಸಂಪುಟ ವಿಸ್ತರಣೆ ಮಾಡಲಿ.

ನಾವು ಅವರಿಗೆ ಧೈರ್ಯ ತುಂಬುತ್ತೇವೆ. ಅವರ ಬೆನ್ನಿಗೆ ನಿಲ್ಲುತ್ತೇವೆ. ಪಸ್ತುತ ನಾಡಿನ ಜನತೆಗಾಗಲಿ ಅಥವಾ ಯಾವುದೇ ಸಚಿವರಿಗಾಗಲಿ ಮಧ್ಯಂತರ ಚುನಾವಣೆ ಬೇಕಾಗಿಲ್ಲ” ಎಂದು ಹೇಳಿಕೆ ನೀಡುವ ಮೂಲಕ ಪಕ್ಷದ ವರಿಷ್ಠರಲ್ಲಿ ಇರಿಸು ಮುರಿಸು ಉಂಟು ಮಾಡಿದ್ದಾರೆ.

ಇದನ್ನೂ ಓದಿ : ಅಮಿತ್ ಶಾ-ಬಿಎಸ್​ವೈ ಭೇಟಿ ಮುಕ್ತಾಯ; 11 ಶಾಸಕರ ಪೈಕಿ 10 ಮಂದಿಗೆ ಸಚಿವ ಸ್ಥಾನ
First published: