ಅನಾರೋಗ್ಯಕ್ಕೆ ಒಳಗಾದ ನಾಡೋಜ ಪಾಟೀಲ್​ ಪುಟ್ಟಪ್ಪ ; ಕಿಮ್ಸ್​ ಆಸ್ಪತ್ರೆಗೆ ದಾಖಲು

ಬೆಂಗಳೂರು ಕಾರ್ಯಕ್ರಮಕ್ಕೆ ಹೋಗಿದ್ದ ಪಾಪು ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹವಾಮಾನ ಬದಲಾದ ಹಿನ್ನೆಲೆ ಅವರ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆ ಅವರನ್ನು ಕಿಮ್ಸ್​ಗೆ ದಾಖಲಿಸಲಾಗಿದೆ ಎಂದು ಪಾಟೀಲ ಪುಟ್ಟಪ್ಪ ಮಗ ಅಶೋಕ ತಿಳಿಸಿದ್ದಾರೆ.

news18-kannada
Updated:February 14, 2020, 6:38 PM IST
ಅನಾರೋಗ್ಯಕ್ಕೆ ಒಳಗಾದ ನಾಡೋಜ ಪಾಟೀಲ್​ ಪುಟ್ಟಪ್ಪ ; ಕಿಮ್ಸ್​ ಆಸ್ಪತ್ರೆಗೆ ದಾಖಲು
ಪಾಟೀಲ ಪುಟ್ಟಪ್ಪ
  • Share this:
ಹುಬ್ಬಳ್ಳಿ (ಫೆ.14): ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ ಹಿರಿಯ ಪತ್ರಕತ್ರ, ಹೋರಾಟಗಾರ, ನಾಡೋಜ  ಪಾಟೀಲ್​ ಪುಟ್ಟಪ್ಪ ಅನಾರೋಗ್ಯಕ್ಕೆ ಒಳಗಾಗಿದ್ದು, ಇಲ್ಲಿನ ಕಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ಕಾರ್ಯಕ್ರಮಕ್ಕೆ ಹೋಗಿದ್ದ ಪಾಪು ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹವಾಮಾನ ಬದಲಾದ ಹಿನ್ನೆಲೆ ಅವರ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆ ಅವರನ್ನು ಕಿಮ್ಸ್​ಗೆ ದಾಖಲಿಸಲಾಗಿದೆ ಎಂದು ಪಾಟೀಲ ಪುಟ್ಟಪ್ಪ ಮಗ ಅಶೋಕ ತಿಳಿಸಿದ್ದಾರೆ.

ಇದನ್ನು ಓದಿ: ಇನ್ವೆಸ್ಟ್​ ಕರ್ನಾಟಕ ಯಶಸ್ವಿ; ಒಂದು ಲಕ್ಷ ಕೋಟಿಗೂ ಅಧಿಕ ಒಡಂಬಡಿಕೆ: ಸಿಎಂ ಬಿಎಸ್​ ಯಡಿಯೂರಪ್ಪ

ಕಿಮ್ಸ್ ಗೆ ದಾಖಲಾದ ಹಿನ್ನೆಲೆ ಸಿಎಂ ಅವರ ಭೇಟಿ ಮಾಡುವುದಾಗಿ ಹೇಳಿದ್ದರು. ಆದರೆ ಕೊನೆಕ್ಷಣದಲ್ಲಿ ಸಿಎಂ ಬರಲಿಲ್ಲ. ಅವರಿಗೆ ಹಲವು ಕಾರ್ಯಕ್ರಮಗಳು ಇರುತ್ತವೆ. ಆದರೆ, ಅವರು ವಿವಿಧ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವುದರಿಂದ ಅವರು ಬರಲು ಆಗಿಲ್ಲ‌ ಎಂದರು.
First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ