• Home
  • »
  • News
  • »
  • state
  • »
  • Mandya: ಕುರುಕ್ಷೇತ್ರ ನಾಟಕದ ವೇದಿಕೆ ಮೇಲೆಯೇ ಕಾದು ಕುಳಿತಿದ್ದ ಜವರಾಯ; ರಂಗಸ್ಥಳದಲ್ಲೇ ಕೊನೆಯುಸಿರೆಳೆದ ಕಲಾವಿದ!

Mandya: ಕುರುಕ್ಷೇತ್ರ ನಾಟಕದ ವೇದಿಕೆ ಮೇಲೆಯೇ ಕಾದು ಕುಳಿತಿದ್ದ ಜವರಾಯ; ರಂಗಸ್ಥಳದಲ್ಲೇ ಕೊನೆಯುಸಿರೆಳೆದ ಕಲಾವಿದ!

ರಂಗಸ್ಥಳದಲ್ಲೇ ಕಲಾವಿದ ಸಾವು

ರಂಗಸ್ಥಳದಲ್ಲೇ ಕಲಾವಿದ ಸಾವು

ಕುರುಕ್ಷೇತ್ರದ ಕೃಷ್ಣ ಸಂಧಾನ ನಾಟಕ ಪ್ರದರ್ಶನದಲ್ಲಿ ಸಾರ್ಥಕಿ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದ ನಂಜಯ್ಯ (46) ವೇದಿಕೆಯ ಮೇಲೆಯೇ ಉಸಿರು ಚೆಲ್ಲಿದ್ದಾರೆ.

  • Share this:

ಮಂಡ್ಯ: ರಂಗಸ್ಥಳದಲ್ಲೇ (Drama Theater)ಕುಸಿದುಬಿದ್ದು ಕಲಾವಿದ (Actor) ಮೃತಪಟ್ಟ ಘಟನೆ ಮಂಡ್ಯ (Mandya) ಜಿಲ್ಲೆಯ ಬಂಡೂರಿನಲ್ಲಿ ನಡೆದಿದೆ. ಕುರುಕ್ಷೇತ್ರದ (Kurukshetra) ಕೃಷ್ಣ ಸಂಧಾನ ನಾಟಕ ಪ್ರದರ್ಶನದಲ್ಲಿ ಸಾರ್ಥಕಿ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದ ನಂಜಯ್ಯ (46) ವೇದಿಕೆಯ ಮೇಲೆಯೇ ಉಸಿರು ಚೆಲ್ಲಿದ್ದಾರೆ. ಘಟನೆ ಬಳಿಕ ಸಹಕಲಾವಿದರು ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಮಳವಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಕಲಾವಿದರು ಸೇರಿಕೊಂಡು ಪೌರಾಣಿಕ ನಾಟಕ (Mythological Drama)ಆಯೋಜಿಸಿದ್ದರು.


ಡ್ರಾಮಾ‌ಸೀನ್ಸ್ ಸೆಟ್​​ನಲ್ಲಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕದಲ್ಲಿ  ಸೈಂಧವ ಮತ್ತು ಸಾರ್ಥಕಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿ ನಟನೆ ಮಾಡುವ ವೇಳೆ ವೇದಿಕೆಯಲ್ಲೇ ಹೃದಯಾಘಾತ ಸಂಭವಿಸಿ ಕಲಾವಿದ ನಂಜಯ್ಯ ಪ್ರಾಣ ಬಿಟ್ಟಿದ್ದಾರೆ.


ಎತ್ತಿನಗಾಡಿ ಓಟದ ಸ್ಪರ್ಧೆ


ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಅವಘಡ; ಓರ್ವ ಸಾವು, ಬಾಲಕನ ಸ್ಥಿತಿ ಗಂಭೀರ


ಮಂಡ್ಯ ಸಮೀಪದ ಚಿಕ್ಕಮಂಡ್ಯದಲ್ಲಿ (Chikkamandya) ಇಂದು ಆಯೋಜಿಸಿದ್ದ ಅಂತರರಾಜ್ಯ ಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆ (Bullock Cart Race) ವೇಳೆ ಎತ್ತಿನಗಾಡಿ ಹರಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೀಲಾರ ಗ್ರಾಮದ ನಾಗರಾಜು (42) ಮೃತ ದುರ್ದೈವಿಯಾಗಿದ್ದು, ಹುಲಿವಾನ ಗ್ರಾಮದ ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ: Crime News: ಪ್ರಿಯಕರನಿಗಾಗಿ ಗಂಡನ ಕೊಲೆಗೆ ಸ್ಕೆಚ್​​​; ಆದ್ರೆ ಕೊನೆಯಲ್ಲಿ ಪ್ರೇಮಿಯೇ ಮಟಾಷ್​, ಶವದೊಂದಿಗೆ ಬೈಕ್​​ನಲ್ಲಿ ಥ್ರಿಬಲ್​ ರೈಡ್


ಕಳೆದ ಎರಡು ದಿನಗಳಿಂದ ಅಂತರರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಚಿಕ್ಕಮಂಡಯದಲ್ಲಿ ನಡೆಯುತ್ತಿತ್ತು. ಇಂದಿನ ಸ್ಪರ್ಧೆ ವೇಳೆ ವೀಕ್ಷಕರತ್ತ ಎತ್ತಿನಗಾಡಿ ನುಗ್ಗಿದ ಪರಿಣಾಮ ದುರ್ಘಟನೆ ಸಂಭವಿಸಿದ್ದು, ಗಾಡಿ ಚಕ್ರಕ್ಕೆ ಸಿಲುಕಿ ನಾಗರಾಜು ಸಾವನ್ನಪ್ಪಿದ್ದಾರೆ. ಎತ್ತಿನ ಕಾಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಸ್ಥಿತಿ ಗಂಭೀರವಾಗಿದ್ದು, ಗಾಯಾಳು ಬಾಲಕನಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಎತ್ತಿನಗಾಡಿ ಓಟದ ಸ್ಪರ್ಧೆ


ಹಾಡಹಗಲೇ ಚಾಕು ಇರಿತ


ಕಲಬುರಗಿಯಲ್ಲಿ (Kalaburagi) ಭೀಕರ ಘಟನೆಯೊಂದು ನಡೆದಿದೆ. ಎರಡು ಗುಂಪುಗಳ ನಡುವೆ ಸಂಧಾನ ಮಾಡಿದ್ದಾನೆ ಅಂತ ಫಯಾಜ್ ಮತ್ತು ಆತನ ಸ್ನೇಹಿತರು ಸೇರಿ ರಿಯೆಲ್ ಎಸ್ಟೇಟ್‌ (Realestate) ಉದ್ಯಮಿ ಇಸಾಮುದ್ದೀನ್​ಗೆ ಚಾಕು ಇರಿದಿದ್ದಾರೆ.


ಇದನ್ನು ಓದಿ: Crime News: ಬೆಂಗಳೂರಿನಲ್ಲಿ ಮತ್ತೆ ಕಿಡ್ನಿ ದಂಧೆ, ಚಿಕಿತ್ಸೆ ಕೊಡಿಸೋ ನೆಪದಲ್ಲಿ ಬುದ್ದಿಮಾಂದ್ಯನ ಮೂತ್ರಪಿಂಡವೇ ಕಳ್ಳತನ!


ಗಾಯಾಳು ಇಸಾಮುದ್ದೀನ್​ನನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಇಸಾಮುದ್ದೀನ್ ಜಾಗದ ವಿಷಯವಾಗಿ ಎರಡು ಗುಂಪುಗಳನ್ನು ಕರೆಸಿ ಸಂಧಾನ ಮಾಡಿದ್ದಾನೆ. ಈ ಕುರಿತು ಅಸಮಾಧಾನ ಹೊಂದಿದ್ದ ಫಯಾಜ್ ಮತ್ತು ಆತನ ಸ್ನೇಹಿತರು ಹಾಡಹಗಲೇ ಚಾಕು ಇರಿದಿದ್ದಾರೆ.


ಸುಟ್ಟು ಕರಕಲಾದ ಬೈಕ್


ನೋಡ ನೋಡ್ತಿದ್ದಂತೆ ಧಗಧಗಿಸಿದ ಬೈಕ್


ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ನೋಡನೋಡುತ್ತಿದ್ದಂತೆಯೇ ಧಗಧಗಿಸಿದ ಘಟನೆ ಹಾಸನದಲ್ಲಿ (Hassan) ನಡೆದಿದೆ. ಕಡೂರಿನಿಂದ ಕೃಷ್ಣಾಪುರಕ್ಕೆ ತೆರಳುತ್ತಿದ್ದ ಚಿದಾನಂದ್, ಕೋರುವಂಗಲ ಗೇಟ್ ಬಳಿ ಬೈಕ್ ನಿಲ್ಲಿಸಿ ಸಿಹಿ ತಿನಿಸು ತರಲು ಬೇಕರಿಗೆ ಹೋಗಿದ್ದರು.


ಆಗ ಬೈಕ್‌ನಲ್ಲಿ (Bike) ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೈಕ್ ಹೊತ್ತಿ ಉರಿಯುವುದನ್ನು ಕಂಡು ಚಿದಾನಂದ್ ಕಣ್ಣೀರಿಟ್ಟರು. ಯಾರಾದರೂ ಆರಿಸಿ ಎಂದು ಮನವಿ ಮಾಡಿದರು. ಆದರೆ, ಬೆಂಕಿಯ ಜ್ವಾಲೆ ಅಷ್ಟು ಹೊತ್ತಿಗೆ ಎಲ್ಲ ಕಡೆ ಆವರಿಸಿತ್ತು.

Published by:Sumanth SN
First published: