ಈ ಬಾರಿಯ ಯೋಗ ದಿನಾಚರಣೆಯಂದು (Yoga Day) ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ (PM Narendra Modi) ಅವರು ಮೈಸೂರು ನಗರಕ್ಕೆ ಆಗಮಿಸಲಿದ್ದಾರೆ. ಅಂದು ಮೈಸೂರು ಅರಮನೆ ಅಂಗಳದಲ್ಲಿ (Mysusu Palace Ground) ಯೋಗಾಭ್ಯಾಸ ನಡೆಯಲಿದೆ. ಈ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಸಿದ್ಧತೆಗಳು ನಡೆಯುತ್ತಿವೆ. ಇಡೀ ವಿಶ್ವವೇ ಭಾರತದಲ್ಲಿಯ ಯೋಗ ದಿನಾಚರಣೆಯನ್ನು (Yoda Day Celebration) ನೋಡಲಿದೆ. ಈ ಹಿನ್ನೆಲೆ ಮೈಸೂರು ಜಿಲ್ಲಾಡಳಿತ ಯಾವುದೇ ಸಮಸ್ಯೆ ಆಗದಂತೆ ಯೋಗಭ್ಯಾಸ (Yoga Practise) ನಡೆಸಲು ಪ್ಲಾನ್ ಮಾಡಿಕೊಂಡಿದೆ. ಪ್ರಧಾನಿಗಳು ಮೈಸೂರಿಗೆ ಬರುವ ವಿಷಯ ಅಧಿಕೃತವಾಗುತ್ತಿದ್ದಂತೆ ಸಂಸದ ಪ್ರತಾಪ್ ಸಿಂಹ (MP Pratap Simha) ಸೇರಿದಂತೆ ಎಲ್ಲಾ ಸ್ಥಳೀಯ ಜನಪ್ರತಿನಿಧಿಗಳು ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ.
ಆದರೆ ಮೈಸೂರು ರಾಜಕಾರಣ (Mysuru Politics) ಸಮೀಪದಿಂದ ನೋಡಿದವರಿಗೆ ಇಲ್ಲಿ ಬಿಜೆಪಿ ವರ್ಸಸ್ ಬಿಜೆಪಿ (BJP Vs BJP) ಎಂಬ ವಿಚಾರ ಗೊತ್ತಿರುತ್ತದೆ. ಇಂದು ಆಂತರಿಕ ಒಳ ಆಟ ಮಾಧ್ಯಮಗಳ ಮುಂದೆ ನಡೆದಿದೆ. ಮಾಧ್ಯಮ ಕ್ಯಾಮೆರಾಗಳ ಮುಂದೆಯೇ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಎಸ್ ಎ ರಾಮದಾಸ್ (MLA SA Ramdas) ನಡುವಿನ ಮನಸ್ತಾಪ ಜಗಜ್ಜಾಹೀರು ಆಗಿದೆ. ಆನಂತರ ಶಾಸಕ ರಾಮದಾಸ್ ಇದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದರು.
ಇನ್ನೂ ಯೋಗ ಆಯೋಜನೆಯ ಕ್ರೆಡಿಟ್ ತೆಗೆದುಕೊಳ್ಳುವ ಕುರಿತು ಬಿಜೆಪಿ ಪಾಳಯದಲ್ಲಿಯೇ ಶುರುವಾಗಿದೆ. ಪ್ರತಾಪ್ ಸಿಂಹ ಮತ್ತು ರಾಮದಾಸ್ ಅವರ ನಡುವಿನ ಆ ಕ್ರೆಡಿಟ್ ಪೈಪೋಟಿ ಕ್ಯಾಮೆರಾಗಳ ಮುಂದೆ ಬಹಿರಂಗವಾಯ್ತ.
ಇದನ್ನೂ ಓದಿ: Congressಗೆ ದಿಕ್ಕು ದೆಸೆ ಇಲ್ಲದಂತಾಗಿದೆ, ಬೇರೆ ಬೇರೆ ಪಕ್ಷದ ನಾಯಕರು BJP ಸೇರುತ್ತಿದ್ದಾರೆ ಎಂದ ಸಚಿವ ರಾಮುಲು
ಯೋಗದಲ್ಲೂ ರಾಜಕಾರಣ
ಯೋಗ ತಾಲೀಮು ಬಳಿಕ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು. ಯೋಗ ದಿನದಂದು ಸುಮಾರು 7 ರಿಂದ 8 ಸಾವಿರ ಯೋಗಪಟುಗಳು ಭಾಗಿಯಾಲಿದ್ದಾರೆ ಎಂದು ಹೇಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ರಾಮದಾಸ್, ಏಳು ಅಲ್ಲ 13 ಸಾವಿರ ಅಂತ ಅಂದ್ರು ಹೀಗೆ ಹೇಳುತ್ತಿದ್ದಂತೆ ಸಿಡಿಮಿಡಿಗೊಂಡ ಪ್ರತಾಪ್ ಸಿಂಹ, "ನಾನು ಮಾತನಾಡುತ್ತಿದ್ದೇನೆ, ರಾಮದಾಸ್ ಜೀ ಸುಮ್ಮನಿರಬೇಕು" ಎಂದರು.
ವಿಶ್ವ ಯೋಗ ದಿನಕ್ಕೆ ಸಿದ್ಧತೆ... pic.twitter.com/NMxbCB1w0n
— Pratap Simha (@mepratap) June 12, 2022
ರಾಮದಾಸ್ ವರ್ಸಸ್ ಪ್ರತಾಪ್ ಸಿಂಹ
ಇನ್ನು ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಮದಾಸ್, ಯೋಗ ದಿನದಂದು ಲಕ್ಷಕ್ಕೂ ಅಧಿಕ ಜನರು ಏಕಕಾಲದಲ್ಲಿ ಅಭ್ಯಾಸ ಮಾಡುವ ಮೂಲಕ ದಾಖಲೆ ಬರೆಯೋಣ ಎಂದು ಹೇಳಿದ್ದರು. ರಾಮದಾಸ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದ ಪ್ರತಾಪ್ ಸಿಂಹ, ಮೋದಿ ಅವರೇ ಬರುತ್ತಿರೋದು ಒಂದು ದಾಖಲೆ. ಏಳರಿಂದ ಎಂಟು ಸಾವಿರ ಜನ ಸೇರಿ ಅಚ್ಚುಕಟ್ಟಾಗಿ ಯೋಗಾಭ್ಯಾಸ ಮಾಡೋಣ ಅಂತ ಹೇಳಿದ್ದರು.
ಮೈಸೂರಿನ ಅರಮನೆ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ-2022ರ ಅಂಗವಾಗಿ ಏರ್ಪಡಿಸಲಾಗಿದ್ದ ಯೋಗ ಪ್ರಾಯೋಗಿಕ ಅಭ್ಯಾಸ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಲಾಯಿತು.
ಪರಮಪೂಜ್ಯ ಸುತ್ತೂರು ಶ್ರೀಗಳು,
ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು,ಶಾಸಕರಾದ ಸನ್ಮಾನ್ಯ ಶ್ರೀ ರಾಮದಾಸ್ ರವರು ಉಪಸ್ಥಿತರಿದ್ದರು pic.twitter.com/Sszbwii4wA
— Pratap Simha (@mepratap) June 12, 2022
10 ಸಾವಿರಕ್ಕೂ ಹೆಚ್ಚು ಯೋಗಾಪಟುಗಳಿಂದ ಅಭ್ಯಾಸ
ಇಂದು ಮೈಸೂರು ಅರಮನೆ ಅಂಗಳದಲ್ಲಿ 10 ಸಾವಿರಕ್ಕೂ ಹೆಚ್ಚು ಯೋಗಪಟುಗಳಿಂದ ಪೂರ್ವಾಭ್ಯಾಸ ನಡೆಸಲಾಯ್ತು. ಚಲನ ಕ್ರಿಯೆ, ಯೋಗ, ಪ್ರಾಣಾಯಾಮಗಳ ಅಭ್ಯಾಸ ಮಾಡಲಾಯ್ತು. ಸಭಾ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್ ಪ್ರಮುಖರು ಭಾಗಿಯಾಗಿದ್ದರು. ಪ್ರಧಾನಿಗಳೊಂದಿಗೆ ಯೋಗಾಭ್ಯಾಸ ಮಾಡಲು ಯೋಗಪಟುಗಳು ಉತ್ಸುಕರಾಗಿ ಅಭ್ಯಾಸ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ