• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bombay Return Days: ಆಪರೇಷನ್​ ಕಮಲಕ್ಕೆ ಒಳಗಾದ ಶಾಸಕರಿಗೆ ಟೆನ್ಶನ್ ಶುರು! ಬಿಡುಗಡೆಗೆ ಸಿದ್ಧವಾಯ್ತು ಬಾಂಬೆ ಡೇಸ್ ಸ್ಟೋರಿ

Bombay Return Days: ಆಪರೇಷನ್​ ಕಮಲಕ್ಕೆ ಒಳಗಾದ ಶಾಸಕರಿಗೆ ಟೆನ್ಶನ್ ಶುರು! ಬಿಡುಗಡೆಗೆ ಸಿದ್ಧವಾಯ್ತು ಬಾಂಬೆ ಡೇಸ್ ಸ್ಟೋರಿ

ಬಾಂಬೆ ಟೀಂಗೆ ಟೆನ್ಶನ್ ಶುರು?

ಬಾಂಬೆ ಟೀಂಗೆ ಟೆನ್ಶನ್ ಶುರು?

ಮೈಸೂರು ಮೂಲದ ಸಾಹಿತಿ ವಿ.ವೀರಭದ್ರಪ್ಪ ಬಿಸ್ಲಳ್ಳಿ ಅವರು ಪುಸ್ತಕವನ್ನು ಬಸವನಗುಡಿ ಸುಜಯ್ ಪಬ್ಲಿಕೇಷನ್ಸ್‌ನಲ್ಲಿ ಮುದ್ರಣ ಮಾಡಲಾಗಿದ್ದು, ಮೈಸೂರು ವಿಶ್ವಯ್ಯ ಬುಕ್‌ಹೌಸ್‌ಗೆ ಮಾರಾಟದ ಅನುಮತಿ ನೀಡಲಾಗಿದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಬಾಂಬೆ ಡೇಸ್ ಸ್ಟೋರಿ (Bombay Days) ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ. ವಿಶೇಷ ಎಂದರೇ ಹಳ್ಳಿ ಹಕ್ಕಿ ಹೆಚ್​​ ವಿಶ್ವನಾಥ್ (H Vishwanath)​​ ಅವರು ಬರೆದಿಲ್ಲ, ಮೈಸೂರಿನವರೇ (Mysuru) ಆದ ವೀರಭದ್ರಪ್ಪ ಬಿಸ್ಲಳ್ಳಿ ಎಂಬ ಲೇಖಕರು ಬರೆದಿದ್ದಾರೆ. ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ (Coalition Government) ಆಪರೇಷನ್​ ಕಮಲಕ್ಕೆ (Operation Kamala) ಒಳಗಾದ ಶಾಸಕರು, ಬಾಂಬೆಗೆ ತೆರಳಿ ಅಲ್ಲಿ ಹೋಟೆಲ್​​ವೊಂದರಲ್ಲಿ ಕಳೆದ ಸಮಯದ ಕುರಿತಂತೆ ಪುಸ್ತಕ ಬರೆಯುವುದಾಗಿ ಹೆಚ್​​.ವಿಶ್ವನಾಥ್​ ಅವರು ಈ ಹಿಂದೆಯೇ ತಿಳಿಸಿದ್ದರು. ಆದರೆ ಸದ್ಯ ಬಾಂಬೆ ರಿಟರ್ನ್ ಡೇಸ್​​; ಸೆನ್ಸ್​ ಲೆಸ್​ ಪಾಲಿಟಿಕ್ಸ್​ ಹೆಸರಿನಲ್ಲಿ ​ವೀರಭದ್ರಪ್ಪ ಬಿಸ್ಲಳ್ಳಿ ಅವರು ಪುಸ್ತಕವನ್ನು ಹೊರ ತಂದಿದ್ದಾರೆ. ಆಪರೇಷನ್​​ ಕಮಲಕ್ಕೆ ಒಳಗಾಗಿದ್ದ 17 ಮಂದಿ ಶಾಸಕರ ಚಲನವನವನ್ನು ಪುಸ್ತಕ (Book) ರೂಪದಲ್ಲಿ ತರುವುದಾಗಿ ಹೇಳಿದ್ದರೂ, ಆ ಬಳಿಕ ಅವರು ಪುಸ್ತಕ ಹೊರತರಲು ವಿಶ್ವನಾಥ್ ಅವರು ಹಿಂದೇಟು ಹಾಕಿದ್ದರು. ಸದ್ಯ ಹಿರಿಯ ಪತ್ರಕರ್ತ, ಸಾಹಿತಿ ಮೈಸೂರಿನವರೇ ಆಗಿರುವ ವೀರಭದ್ರಪ್ಪ ಬಿಸ್ಲಳ್ಳಿ ಅವರು ಪುಸ್ತಕವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.


ಹಲವು ಘಟನೆಗಳ ಬಗ್ಗೆ ಪುಸ್ತಕದಲ್ಲಿ ಉಲ್ಲೇಖ!


ಮೈಸೂರಿನ ವೀರಭದ್ರಪ್ಪ ಬಿಸ್ಲಳ್ಳಿ ಅವರು ಬರೆದಿರುವ 200 ಪುಟಗಳ 'ಬಾಂಬೆ ರಿಟರ್ನ್ ಡೇಸ್' ಸೆನ್ಸ್‌ಲೆಸ್ ಪಾಲಿಟ್ರಿಕ್ಸ್ ಎಂಬ ಪುಸ್ತಕದಲ್ಲಿ 17 ಮಂದಿ ಶಾಸಕರು ಆಪರೇಷನ್​ ಕಮಲಕ್ಕೆ ಒಳಗಾದ ಸನ್ನಿವೇಶಗಳು ಸೇರಿದಂತೆ ಬಾಂಬೆಯ ಖಾಸಗಿ ಹೋಟೆಲ್​​ನಲ್ಲಿ ಕಳೆದ ದಿನಗಳ ಸೇರಿದಂತೆ ರಮೇಶ್​ ಜಾರಕಿಹೊಳಿ ಅವರ ರಾಜೀನಾಮೆ ಪ್ರಕರಣ, ಆಪರೇಷನ್ ಕಮಲದ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾತ್ರ ಸೇರಿದಂತೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಪದತ್ಯಾಗ ಮಾಡಿದ ಸಂದರ್ಭ ಸೇರಿದಂತೆ ಹಲವು ಘಟನೆಗಳ ಬಗ್ಗೆ ಪುಸ್ತಕದಲ್ಲಿ ವಿವರಿಸಲಾಗಿದೆ ಎನ್ನಲಾಗಿದೆ.


ಬಾಂಬೆ ರಿಟರ್ನ್​ ಡೇಸ್​​; ಸೆನ್ಸ್​​ಲೆಸ್​ ಪಾಲಿಟ್ರಿಕ್ಸ್​


ಇದನ್ನೂ ಓದಿ: Karnataka Elections: ಕೊನೆಗೂ ಸುಮಲತಾ ಬಿಜೆಪಿ ಸೇರ್ಪಡೆ ಫಿಕ್ಸ್, ಮಂಡ್ಯ ಜವಾಬ್ದಾರಿ ಅಂಬಿ ಪತ್ನಿಗೆ?


ಬಾಂಬೆ ಮಿತ್ರಮಂಡಳಿಗೆ ಮುಳುವಾಗುತ್ತಾ ಪುಸ್ತಕ?


ಮೈಸೂರು ಮೂಲದ ಸಾಹಿತಿ ವಿ.ವೀರಭದ್ರಪ್ಪ ಬಿಸ್ಲಳ್ಳಿ ಅವರು ಪುಸ್ತಕವನ್ನು ಬಸವನಗುಡಿ ಸುಜಯ್ ಪಬ್ಲಿಕೇಷನ್ಸ್‌ನಲ್ಲಿ ಮುದ್ರಣ ಮಾಡಲಾಗಿದ್ದು, ಮೈಸೂರು ವಿಶ್ವಯ್ಯ ಬುಕ್‌ಹೌಸ್‌ಗೆ ಮಾರಾಟದ ಅನುಮತಿ ನೀಡಲಾಗಿದೆ. ಅತಿ ಶೀಘ್ರದಲ್ಲೇ ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಮುಂಬೈಗೆ ತೆರಳಿದ್ದ ಕೆಲವರಿಗೆ ಪುಸ್ತಕ ಬಿಡುಗಡೆಗೆ ಆಹ್ವಾನ ನೀಡಲಾಗುತ್ತದೆ ಎನ್ನಲಾಗಿದೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಬಾಂಬೆ ರಿಟರ್ನ್​ ಡೇಸ್​ ಪುಸ್ತಕ ಬಾಂಬೆ ಮಿತ್ರಮಂಡಳಿಗೆ ಮುಳುವಾಗುತ್ತಾ ಅಥವಾ ಅವರನ್ನು ಹೊರ ಸಂಕಷ್ಟಕ್ಕೆ ನೂಕುತ್ತ ಕಾದು ನೋಡಬೇಕಿದೆ.




ಇದನ್ನೂ ಓದಿ: Bengaluru: ಒಂದು ದಿನದ ಹಿಂದೆ ಕೈಹಿಡಿದ ಗಂಡ ಬೆಂಗಳೂರು ಟ್ರಾಫಿಕ್​ನಲ್ಲಿ 'ಮಾಯ', ಹಿಡಿಯಲು ಹೋದ ಹೆಂಡತಿಗೆ 'ನಾಮ'!


ಮುಂದಿನ ವಾರ ಪುಸ್ತಕ ಬಿಡುಗಡೆ ಸಾಧ್ಯತೆ


ಈಗಾಗಲೇ ಸಾರ್ವಜನಿಕರ ವಲಯದಲ್ಲಿ ಬಾಂಬೆ ಮಿತ್ರಮಂಡಳಿ ಬಾಂಬೆ ಖಾಸಗಿ ಹೋಟೆಲ್​​ನಲ್ಲಿ ಕಳೆದ ಸಮಯದ ಬಗ್ಗೆ ಭಾರೀ ಚರ್ಚೆ ನಡೆದಿದೆ. ಅಲ್ಲದೆ ಈ ಬಗ್ಗೆ ನಾಯಕರ ನಡುವೆ ಆರೋಪ ಮತ್ತು ಪ್ರತ್ಯಾರೋಪಗಳು ಕೂಡ ಕೇಳಿ ಬಂದಿದ್ದವು.


ಈ ನಿಟ್ಟಿನಲ್ಲಿ ಸದ್ಯ ಬಾಂಬೆ ಡೇಸ್​ ಪುಸಕ್ತ ಹೊರ ಬಂದರೆ ಎಲ್ಲಾ ಚರ್ಚೆಗಳಿಗೂ ಕೂಡ ಒಂದು ಸ್ವರೂಪ ಸಿಗುತ್ತೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವಾರದಲ್ಲಿ ಪುಸ್ತಕ ಬಿಡುಗಡೆಯಾಗುವ ಸಾಧ್ಯತೆ ಇದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು