FDA ಕೆಲಸ ಕೊಡಿಸುವುದಾಗಿ ಅಭ್ಯರ್ಥಿ ಜೊತೆ ಡೀಲ್​! ಮೈಸೂರಿನ ಪಿಎಸ್‌ಐ ಅಶ್ವಿನಿ ಅಮಾನತು

ಕೆಪಿಎಸ್​ಸಿ ವತಿಯಿಂದ ನಡೆದಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಗೆ ಅಭ್ಯರ್ಥಿ ಜತೆ ಡೀಲ್ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ದಾಖಲೆಗಳ ಸಮೇತ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಶ್ವಿನಿ ಅನಂತಪುರ ಅವರನ್ನು ಅಮಾನತು ಮಾಡಲಾಗಿದೆ.

ಸರ್ಕಾರಿ ಹುದ್ದೆ ಕೊಡಿಸೋದಾಗಿ ಡೀಲ್​

ಸರ್ಕಾರಿ ಹುದ್ದೆ ಕೊಡಿಸೋದಾಗಿ ಡೀಲ್​

  • Share this:
ಮೈಸೂರು (ಸೆ. 19): ಪಿಎಸ್ಐ ನೇಮಕಾತಿ ಹಗರಣ ಹೊರಬಂದ ಬಳಿಕ ಅನೇಕ ಸರ್ಕಾರಿ ನೌಕರಿಗಳ ನೇಮಕಾತಿಯಲ್ಲಿ (Recruitment of Govt) ನಡೆದ ಅಕ್ರಮಗಳು ಕೂಡ ಒಂದೊಂದಾಗಿಯೇ ಹೊರ ಬರ್ತಿದೆ. ಪ್ರಥಮ ದರ್ಜೆ ಸಹಾಯಕರ ಹುದ್ದೆ (FDA) ಕೊಡಿಸಲು ಅವ್ಯವಹಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರಿನ ನರಸಿಂಹರಾಜ ಸಂಚಾರ ಪೊಲೀಸ್‌ ಠಾಣೆಯ ಪಿಎಸ್‌ಐ ಅಶ್ವಿನಿ (PSI Ashwini) ಅನಂತಪುರ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್‌ ಆಯುಕ್ತರು (Police Commissioner) ಇಂದು (ಸೆಪ್ಟೆಂಬರ್​ 19) ಆದೇಶ ಹೊರಡಿಸಿದ್ದಾರೆ. 
ಎಫ್‌ಡಿಎ ಕೆಲಸ ಕೊಡಿಸೋದಾಗಿ ಹಣ ಪಡೆದ ಪಿಎಸ್​ಐ


ಕೆಪಿಎಸ್‌ಸಿ ಎಫ್‌ಡಿಎ ನೇಮಕಾತಿ ಪ್ರಕ್ರಿಯೆಯಲ್ಲಿ ಬಸವರಾಜು ಎಂಬುವರಿಗೆ ಕೆಲಸ ಕೊಡಿಸಲು ಬಾಗಲಕೋಟೆ ಜಿಲ್ಲೆಯ ಸಂಗಮೇಶ ಝಳಕಿ ಎಂಬುವರ ಜೊತೆ ಆರೋಪಿ ಪಿಎಸ್‌ಐ ಮಾತನಾಡಿದ್ದಾರೆ ಎನ್ನಲಾದ ಮೊಬೈಲ್‌ ಹಾಗೂ ವಾಟ್ಸ್‌ಆ್ಯಪ್‌ ಆಡಿಯೊ ಸಂಭಾಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅಲ್ಲದೆ, ಹಣ ಅಕ್ರಮ ವರ್ಗಾವಣೆಯ ಬ್ಯಾಂಕ್‌ ಸ್ಟೇಟ್‌ಮೆಂಟ್‌ ಕೂಡ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು.

ಪಿಎಸ್ಐ ಅಶ್ವಿನಿ ಅನಂತಪುರ


ಪಿಎಸ್‌ಐ ಅಶ್ವಿನಿ  ಅಮಾನತು

ಕೆಪಿಎಸ್​ಸಿ ವತಿಯಿಂದ ನಡೆದಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಗೆ ಅಭ್ಯರ್ಥಿ ಜತೆ ಡೀಲ್ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ದಾಖಲೆಗಳ ಸಮೇತ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಶ್ವಿನಿ ಅನಂತಪುರ ಅವರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.


ಇದನ್ನೂ ಓದಿ: V Munirathna: 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ; ಕೆಂಪಣ್ಣ ಸೇರಿ 18 ಜನರಿಗೆ ಮುನಿರತ್ನ ಕೊಟ್ರು ವಾರ್ನಿಂಗ್​!

ನಗರ ಪೊಲೀಸ್‌ ಕಮಿಷನರ್‌ ಸ್ಪಷ್ಟನೆ
ಗುರುತರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದ್ದು, ನಗರ ಅಪರಾಧ ವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಡಾ.ಚಂದ್ರಗು‍ಪ್ತ ತಿಳಿಸಿದರು.


36ನೇ ಆರೋಪಿ ಸಿದ್ದರಾಜು ಅರೆಸ್ಟ್

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಒಬ್ಬರಾದ ಮೇಲೆ ಮತ್ತೊಬ್ಬರು ಬಂಧನದ ಸರಣಿ ಮುಂದುವರೆದಿದೆ. ಪಿಎಸ್‌ಐ ನೇಮಕಾತಿ ಹಗರಣದ 36ನೇ ಆರೋಪಿ ಸಿದ್ದರಾಜುವಿನನ್ನು ಬಂಧಿಸಲಾಗಿತ್ತು. ಪಿ.ಎಸ್.ಐ ಅಕ್ರಮ ನೇಮಕಾತಿ ಹಗರಣದಲ್ಲಿ ಪ್ರಕರಣದಲ್ಲಿ 36ನೇ ಆರೋಪಿ ಸಿದ್ದರಾಜು ಅರೆಸ್ಟ್ ಆಗಿದ್ದಾನೆ. ಈತ ಪಿಎಸ್ಐ ಹಗರಣದಲ್ಲಿ ಮಧ್ಯವರ್ತಿಯಾಗಿದ್ದ ಎಂದು ತಿಳಿದು ಬಂದಿದೆ. ಪಿಎಸ್ಐಯಾಗಿ ಸೆಲೆಕ್ಟ್ ಆಗಿದ್ದ ಗಜೇಂದ್ರ, ಮನೋಜ್ ಎಂಬ ಅಭ್ಯರ್ಥಿಗಳಿಗೆ ಮಧ್ಯವರ್ತಿಯಾಗಿದ್ದ ಹಣವನ್ನು ಪಡೆದು ಕೆಲವರಿಗೆ ತಲುಪಿಸಿದ್ದ ಎಂಬ ಆರೋಪ ಸಿದ್ದರಾಜುವಿನ ಮೇಲಿದೆ.

ಐದು ಪೊಲೀಸರಿಗೆ ಚಳ್ಳೆಹಣ್ಣಿ ತಿನ್ನಿಸಿದ್ದ ಸಿದ್ದರಾಜು

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಆರೋಪಿ ಸಿದ್ದರಾಜು ಕಳೆದ ಐದು ತಿಂಗಳಿನಿಂದ ಸಿಐಡಿ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಆರೋಪಿಯ ಲಗ್ಗೆರೆ ನಿವಾಸದ ಬಳಿ ಸಿಐಡಿ ಅಧಿಕಾರಿಗಳು ತಮಟೆ ಬಾರಿಸಿ ನೋಟಿಸ್ ಅಂಟಿಸಿದ್ದರು. ಕೋರ್ಟ್ ನಿಂದ ಆರೋಪಿ ಪತ್ತೆಗೆ NBW ಜಾಮೀನು ರಹಿತ ವಾರೆಂಟ್ ಜಾರಿ ಆಗಿತ್ತು.

ಇದನ್ನೂ ಓದಿ: BC Nagesh: ಶಾಲೆ-ಕಾಲೇಜುಗಳಲ್ಲಿ ಈ ವರ್ಷದಿಂದಲೇ ಭಗವದ್ಗೀತೆ ಬೋಧನೆ

ಸಿಐಡಿ ಅಧಿಕಾರಿಗಳು ಸಿದ್ದರಾಜು ವಿಚಾರಣೆ

ಸಿಐಡಿ ಅಧಿಕಾರಿಗಳು ಸಿದ್ದರಾಜು ನಿವಾಸದಲ್ಲಿನ ಚರಾಸ್ತಿಯನ್ನ ಜಫ್ತಿ ಮಾಡಿದ್ದರು. ಸಿದ್ದರಾಜು ಲಗ್ಗೆರೆ ನಿವಾಸದಲ್ಲಿ ಟಿವಿ ಫ್ರಿಜ್ ಸೋಫಾ ಕಾರು ಬೈಕ್ ಸೇರಿ ಚರಾಸ್ತಿ ಜಫ್ತಿ ಮಾಡಲಾಗಿತ್ತು. ಸಿದ್ದರಾಜು ಕೋರ್ಟ್ ಗೆ ನೇರವಾಗಿ ಶರಣಾಗಿದ್ದಾನೆ. ಸಿದ್ದರಾಜುನನ್ನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶವನ್ನು ನೀಡಿದೆ. ಸಿದ್ದರಾಜು ಮಧ್ಯವರ್ತಿಯಾಗಿ ಕೆಲಸವನ್ನು ಮಾಡಿದ್ದರಿಂದ ಈತ ಎಷ್ಟು ಅಭ್ಯರ್ಥಿಗಳಿಂದ ಹಣವನ್ನು ಪಡೆದಿದ್ದ. ಹಗರಣ ಸಂಬಂಧ ಯಾರಿಗೆ ಹಣವನ್ನು ತಲುಪಿಸಿದ್ದ ಎನ್ನುವುದು ವಿಚಾರಣೆಯ ವೇಳೆ ತಿಳಿದುಬರಲಿದೆ.
Published by:ಪಾವನ ಎಚ್ ಎಸ್
First published: