• Home
  • »
  • News
  • »
  • state
  • »
  • Mysuru Top 5 News: ಸರ್ಕಾರದ ಎಡವಟ್ಟುಗಳು, ನಾಳೆಯಿಂದ ಗ್ರಾಮೀಣ ದಸರಾ: ಮೈಸೂರಿನ ಟಾಪ್ ನ್ಯೂಸ್​ಗಳು

Mysuru Top 5 News: ಸರ್ಕಾರದ ಎಡವಟ್ಟುಗಳು, ನಾಳೆಯಿಂದ ಗ್ರಾಮೀಣ ದಸರಾ: ಮೈಸೂರಿನ ಟಾಪ್ ನ್ಯೂಸ್​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇವತ್ತಿನ ಮೈಸೂರು ದಸರಾ ಕುರಿತ ಪ್ರಮುಖ ಸುದ್ದಿಗಳು

  • Share this:

1.ಮೈಸೂರು ದಸರಾದಲ್ಲಿ ಎಡವಟ್ಟುಗಳು


ಮೃತರಾಗಿರುವ ಕವಿಗಳನ್ನು ಮೈಸೂರು ದಸರಾ (Mysuru Dasara 2022) ಕವಿಗೋಷ್ಠಿಗೆ (Kavigoshthi) ಆಹ್ವಾನ ನೀಡಿರುವುದು ಸರ್ಕಾರದ ಎಡವಟ್ಟಿಗೆ ಮತ್ತೊಂದು ಉದಾಹರಣೆ ಎನ್ನಬಹುದು. ದಸರಾ ಉದ್ಘಾಟನೆ ಬಳಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ಗೊಂದಲ ಮಾಡಿಕೊಂಡಿದೆ. ಇಂದು ಸಂಜೆ ಉದ್ಘಾಟನೆ ಆಗಬೇಕಿದ್ದ ಯುವ ದಸರಾ ನಾಳೆಗೆ ಮುಂದೂಡಿಕೆಯಾಗಿದೆ. ಯುವ ದಸರಾ (Yuva Dasara) ಕಾರ್ಯಕ್ರಮವನ್ನು ಏಳು ದಿನ ಮಾಡಲಾಗುವುದು ಮತ್ತು ಎರಡನೇ ದಿನವನ್ನು ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರಿಗಾಗಿ ಮೀಸಲಿರಿಸಲಾಗಿತ್ತು. ಆದ್ರೆ ಇಂದಿನ ಯುವ ದಸರಾ ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ಇಂದು ಗಾಯಕರಾದ ಕುನಾಲ್ ಗಾಂಜಾವಾಲ, ವಿಜಯ ಪ್ರಕಾಶ್, ಗುರುಕಿರಣ್ ಹಾಡಬೇಕಿತ್ತು. ಆದರೆ ಇಂದಿನ ಕಾರ್ಯಕ್ರಮವೂ ರದ್ದಾಗಿದೆ ಎಂದು ತಿಳಿದು ಬಂದಿದೆ. ನಾಳೆ ಬರುತ್ತಾರೋ ಇಲ್ಲವೋ ಅನ್ನೋದು ಖಚಿತವಾಗಿಲ್ಲ.


Mysuru today news update 27 September 2022 mrq
ಸಾಂದರ್ಭಿಕ ಚಿತ್ರ


2.ನಾಳೆ ಗ್ರಾಮೀಣ ದಸರಾ ಆಚರಣೆ, ಇದೇ ಮೊದಲ ಬಾರಿಗೆ ಗಜಪಡೆ ಭಾಗಿ


ಮೈಸೂರು ದಸರಾ ಭಾಗವಾಗಿ ನಾಳೆ ಗ್ರಾಮೀಣ ದಸರಾ ಆಚರಣೆ ಮಾಡಲಾಗುತ್ತದೆ. ಶಾಸಕ ಜಿಟಿ ದೇವೇಗೌಡ ನೇತೃತ್ವದಲ್ಲಿ ಮೈಸೂರು ತಾಲ್ಲೂಕಿನ ಗ್ರಾಮಗಳಲ್ಲಿ ಗ್ರಾಮೀಣ ದಸರಾ ಆಚರಣೆ ಮಾಡಲಾಗುತ್ತಿದೆ. ಜಂಬೂ ಸವಾರಿ ಮಾದರಿಯಲ್ಲಿ ಗ್ರಾಮೀಣ ದಸರೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅರಮನೆಯ ಎರಡು ಆನೆಗಳ ಮೆರವಣಿಗೆ ನಡೆಯಲಿದೆ. ಚಾಮುಂಡೇಶ್ವರಿ ಕ್ಷೇತ್ರದ ದಾರಿಪುರದಿಂದ ಜಯಪುರದವರೆಗೆ ದಸರಾ ಮೆರವಣಿಗೆ ಇರಲಿದ್ದು, ಸಾಂಸ್ಕೃತಿಕ ಕಲಾ ತಂಡಗಳು,  ವಾದ್ಯಗೋಷ್ಠಿಗಳ ಜೊತೆ ಅಶ್ವಪಡೆ ಸಹ ಭಾಗಿಯಾಗಲಿವೆ.


Mysuru today news update 27 September 2022 mrq
ಮೈಸೂರು ದಸರಾ


3.ಹಲವು ಕಾರ್ಯಕ್ರಮಗಳು ರದ್ದು


ದಸರಾ ಅಂಗವಾಗಿ ನಡೆಯಬೇಕಿದ್ದ ಹಲವು ಕಾರ್ಯಕ್ರಮಗಳು ರದ್ದುಗೊಂಡಿವೆ. ಜಿಲ್ಲಾಡಳಿತದ ಈ ನಡೆಯನ್ನು ಶಾಸಕ ಜಿ.ಟಿ.ದೇವೇಗೌಡ ಸಮರ್ಥಿಸಿಕೊಂಡಿದ್ದಾರೆ. ಸಚಿವರಿಗೆ ದಸರಾ ಕಾರ್ಯಕ್ರಮಗಳನ್ನ ಮತ್ತಷ್ಟು ಚುರುಕುಗೊಳಿಸಲು ಸಲಹೆ ನೀಡುತ್ತೇನೆ. ಈಗಾಗಲೇ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರವಾಸಿಗರ ಸಂಖ್ಯೆ ವಿರಳವಿದ್ದರೂ ಮುಂದಿನ ದಿನಗಳಲ್ಲಿ  ಹೆಚ್ಚಾಗಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಈ ಬಾರಿಯೂ ದಸರಾ ಯಶಸ್ವಿಯಾಗಿ ನಡೆಸಲು ನಮ್ಮೆಲ್ಲರ ಸಹಕಾರವಿದೆ ಎಂದು ಹೇಳಿದರು.


Mysuru today news update 27 September 2022 mrq
ಮೈಸೂರು ಆಹಾರ ಮೇಳ


4.ದಸರಾ ಆಹಾರ ಮೇಳದಲ್ಲಿದೆ ಈ ರುಚಿಯಾದ ತಿಂಡಿಗಳು!


ದಸರಾ ಆಹಾರ ಮೇಳ-2022 ಮತ್ತೆ ಬಂದಿದೆ. ಅಕ್ಟೋಬರ್ 4 ರವರೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಮತ್ತು ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಬಳಿಯ ಮುಡಾ ಮೈದಾನದಲ್ಲಿ ಆಹಾರ ಮೇಳ ಆರಂಭವಾಗಿದ್ದು, ಈ ವರ್ಷದ ಆಹಾರ ಮೇಳದಲ್ಲಿ ಕರಾವಳಿ ಕರ್ನಾಟಕ, ಮಲೆನಾಡು, ದಕ್ಷಿಣ ಮತ್ತು ಉತ್ತರ ಕನ್ನಡ ಮತ್ತು ಕೊಡಗಿನ ರುಚಿಕರ ಆಹಾರಗಳನ್ನು ಸವಿಯಬಹುದು.


ಇದನ್ನೂ ಓದಿ:  Vittala Temple: ವಿಠ್ಠಲನಿಗೆ ಲಕ್ಷ ಜಾಜಿಹೂಗಳ ಅಲಂಕಾರ! ಫೋಟೋ ನೋಡಿ


ಆಹಾರ ಮೇಳವು ಆಹಾರ ಪ್ರಿಯರನ್ನು ರೋಮಾಂಚನಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಂಪ್ರದಾಯಿಕ ಬುಡಕಟ್ಟು ಆಹಾರ ಸೇರಿದಂತೆ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ವಿವಿಧ ಅತ್ಯಾಕರ್ಷಕ ಆಹಾರವನ್ನು ಒದಗಿಸುತ್ತದೆ. ಎಂಟು ದಿನಗಳ ಕಾಲ ಆಹಾರ ಮೇಳ ನಡೆಯಲಿದ್ದು, ಈ ಬಾರಿ. ಆಹಾರ ಮೇಳದಲ್ಲಿ ಧಾನ್ಯಗಳು, ಹಣ್ಣು-ಹಂಪಲು, ತರಕಾರಿ ಹಾಗೂ ಸಿರಿಧಾನ್ಯಗಳಿಂದ ತಯಾರಿಸಿದ  ಪದಾರ್ಥಗಳಿಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಲಾಗಿದೆ.


Mysuru today news update 27 September 2022 mrq
ಮೈಸೂರು ಅರಮನೆ


5.ದಸರೆಯಲ್ಲೊಂದು ದುಬಾರಿ ಸೇವೆ


ಈ ಬಾರಿ ದಸರಾ ಸಮಿತಿ ಹಲಿಕಾಪ್ಟರ್ ರೈಡ್ ಆಯೋಜನೆ ಮಾಡಲಾಗಿದೆ. ಚಿಪ್ಸನ್ ಏವಿಷನ್ ಖಾಸಗಿ ಸಂಸ್ಥೆ ಎಂಟು ನಿಮಿಷಗಳ ಹೆಲಿಕಾಪ್ಟರ್ ಪ್ರದರ್ಶನಕ್ಕೆ ಒಬ್ಬರಿಗೆ ತಲಾ 4,000 ರೂ. ನಿಗಧಿ ಮಾಡಿದೆ.


ಇದನ್ನೂ ಓದಿ:  Health Department: ಬೈಕ್ ಆ್ಯಂಬುಲೆನ್ಸ್​ಗೆ ಬ್ರೇಕ್​ ಹಾಕಿದ ಸರ್ಕಾರ!; ಸೇವೆ ಸ್ಥಗಿತ ಎಂದ ಆರೋಗ್ಯ ಇಲಾಖೆ


ಶ್ರೀ ಜಯಚಾಮರಾಜೇಂದ್ರ ಒಡೆಯರ್ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ರೈಡ್ ಸೇವೆ ಕಲ್ಪಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದ ಹೆಲಿಕಾಪ್ಟರ್ ಹಾಗೂ ಏರ್ ಶೋ ಸೇವೆಗಳು ಸ್ಥಗಿತಗೊಳಿಸಲಾಗಿತ್ತು.

Published by:Mahmadrafik K
First published: